Asianet Suvarna News Asianet Suvarna News

ಚಂದ್ರಯಾನ ಬೆನ್ನಲ್ಲೇ ಇಸ್ರೋಗೆ ಮತ್ತೊಂದು ಸಕ್ಸಸ್, ಸೂರ್ಯನ ಶಕ್ತಿ ಸ್ಫೋಟ ಸೆರೆ ಹಿಡಿದ ಆದಿತ್ಯ L1!

ಚಂದ್ರಯಾನ3 ಯಶಸ್ಸಿನ ಬಳಿಕ ಇಸ್ರೋಗೆ ಮತ್ತೊಂದು ಭರ್ಜರಿ ಯಶಸ್ಸು ಸಿಕ್ಕಿದೆ. ಸೂರ್ಯನ ಅಧ್ಯಯನಕ್ಕೆ ಹಾರಿಬಿಟ್ಟಿರುವ ಅದಿತ್ಯL1 ನೌಕೆ ಇದೀಗ ಸೂರ್ಯನಿಂದ ಮೊದಲ ಶಕ್ತಿ ಸ್ಫೋಟವನ್ನು ಸೆರೆಹಿಡಿದಿದೆ.

ISRO Aditya L1 capture first High Energy X ray glimpse of Solar Flares ckm
Author
First Published Nov 7, 2023, 7:49 PM IST

ಬೆಂಗಳೂರು(ನ.07) ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದು ಅಧ್ಯಯನ ನಡೆಸಿದ ಇಸ್ರೋ ಈಗಾಗಲೇ ಸೂರ್ಯನ ಅಧ್ಯಯನಕ್ಕೆ ಆದಿತ್ಯ  L1 ನೌಕೆಯನ್ನು ಕಳುಹಿಸಲಾಗಿದೆ. ಇದೀಗ ಈ ಆದಿತ್ಯ  L1 ಸೂರ್ಯನಿಂದ ಮೊದಲ ಶಕ್ತಿ ಸ್ಫೋಟವನ್ನು ಸೆರೆ ಹಿಡಿದಿದೆ.  ಆದಿತ್ಯ L1 ನೌಕೆಯಲ್ಲಿ 7 ಪ್ಲೇಲೋಡ್‌ಗಳಿವೆ. ಇದರಲ್ಲಿ ಹೈ ಎನರ್ಜಿ L1 ಆರ್ಬಿಟಿಂಗ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (HEL1OS) ಪ್ಲೇಲೋಡ್ ಸೂರ್ಯ ಮೇಲ್ಮೈನಲ್ಲಿ ನಡೆಯುವ ಸೌರ ಜ್ವಾಲೆಗಳ ಹಠಾತ್ ಸ್ಫೋಟವನ್ನು ಸೆರೆ ಹಿಡಿದಿದೆ. ಅಕ್ಟೋಬರ್ 29 ರಂದು ಈ ಸ್ಫೋಟವನ್ನು ದಾಖಲಿಸಿದೆ.

ಸೂರ್ಯ ಮೇಲ್ಮೈನಲ್ಲಿ ಎಕ್ಸ್ ಕಿರಣಗಳ ಬೆಳಕಿನ ರೂಪದಲ್ಲಿ ಶಕ್ತಿ ಮತ್ತು ವಿಕರಣವನ್ನು ಹೊರಸೂಸುತ್ತದೆ. ಈ ವೇಳೆ ಹಠಾತ್ ಸ್ಫೋಟ ಸಂಭವಿಸಿದೆ. ಈ ಸ್ಫೋಟದ ತೀವ್ರತೆಗಳನ್ನು ಆದಿತ್ಯ ಎಲ್1 ದಾಖಲಿಸಿದೆ. ಸೂರ್ಯನ ಸುತ್ತಲಿನ ವಾತಾವರಣವರದಲ್ಲಿ ಸಂಗ್ರವಾಗಿರುವ ಕಾಂತೀಯ ಶಕ್ತಿ ಬಿಡುಗಡೆ ವೇಳೆ  ಈ ರೀತಿ ಸ್ಫೋಟಗಳು ಸಂಭವಿಸುತ್ತದೆ. ಈ ಪೈಕೆ ಕೆಲವು ತೀವ್ರ ಸ್ಫೋಟವಾಗಿದ್ದರೆ, ಕೆಲವು ಸಾಮಾನ್ಯವಾಗಿರುತ್ತದೆ. ಈ ಸ್ಫೋಟದ ತೀವ್ರತೆಯನ್ನೂ ಇಸ್ರೋ ಉಪಗ್ರಹ ದಾಖಲಿಸಿದೆ.

ಆದಿತ್ಯ ನೌಕೆಯ ಪಥ ಸರಿಪಡಿಸಿದ ಇಸ್ರೋ: ಸೂರ್ಯನತ್ತ ಯಶಸ್ವಿಯಾಗಿ ಸಾಗುತ್ತಿರುವ ನೌಕೆ

ಸೆಪ್ಟೆಂಬರ್ 9 ರಂದು ಆದಿತ್ಯ ಎಲ್ 1 ನೌಕೆಯನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದ ನೆಲೆಯಿಂದ ಉಡಾವಣೆ ಮಾಡಲಾಗಿತ್ತು. ಪಿಎಸ್‌ಎಲ್‌ವಿ-ಸಿ57 ರಾಕೆಟ್‌ ಮೂಲಕ ಆದಿತ್ಯ ಎಲ್ 1 ನೌಕೆ ಹಾರಿಸಲಾಗಿತ್ತು. 15 ಲಕ್ಷ ಕಿಲೋಮೀಟರ್ ದೂರಕ್ಕೆ ಸಾಗಿ ಸೂರ್ಯನ ಎಲ್ 1 ಪಾಯಿಂಟ್‌ನಲ್ಲಿ ಈ ಅದಿತ್ಯ ಎಲ್ 1 ಅಧ್ಯಯನ ನಡೆಸಲಿದೆ. ಈ ದೂರ ಕ್ರಮಿಸಲು 125 ದಿನಗಳ ಅವಶ್ಯಕತೆ ಇದೆ. ಸೂರ್ಯನ ದೂರ ಭೂಮಿಯಿಂದ 15 ಕೋಟಿ ಕಿಲೋಮೀಟರ್.

 

 

ಲ್ಯಾಗ್ರೇಂಜಿಯನ್‌ ಪಾಯಿಂಟ್‌’ ಅಥವಾ ಎಲ್‌1 ಎನ್ನುವುದು ಸೂರ್ಯ-ಭೂಮಿಯ ಗುರುತ್ವ ಬಲ ಸಮಾನವಾಗಿರುವ ಸ್ಥಳ. ಇಲ್ಲಿ ನೌಕೆ ನಿಯೋಜಿಸಿದರೆ ಸೂರ್ಯನನ್ನು ಗ್ರಹಣದಂಥ ಯಾವುದೇ ಅಡ್ಡಿ ಆತಂಕಗಳು ಇಲ್ಲದೇ ಸತತವಾಗಿ ನೇರವಾಗಿ ವೀಕ್ಷಣೆ ಮಾಡಲು ಸಾಧ್ಯ. ಇದು ಹೆಚ್ಚಿನ ಇಂಧನ ವ್ಯರ್ಥಮಾಡದೇ ಸುದೀರ್ಘ ಕಾಲ ನೌಕೆ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ಚಂದ್ರಯಾನ-3ಕ್ಕಿಂತ ಮೂರು ಪಟ್ಟು ದೂರ ಕ್ರಮಿಸಿದ ಆದಿತ್ಯ ಎಲ್‌-1, ಇಸ್ರೋ ಮಾಹಿತಿ!

ನೌಕೆಯಲ್ಲಿನ 4 ಉಪಕರಣಗಳು ಸತತವಾಗಿ ಸೂರ್ಯನನ್ನು ವೀಕ್ಷಿಸುತ್ತಾ ಮಾಹಿತಿ ಸಂಗ್ರಹಿಸಲಿದ್ದರೆ, ಉಳಿದ ಮೂರು ಉಪಕರಣಗಳು ಸ್ಥಳದಲ್ಲಿನ ಪಾರ್ಟಿಕಲ್‌ (ಕಣಗಳು) ಮತ್ತು ಪ್ರದೇಶಗಳ ಅಧ್ಯಯನ ನಡೆಸಿ ಅದರ ಮಾಹಿತಿಯನ್ನು ಭೂಮಿಗೆ ರವಾನಿಸಲಿವೆ.
 

Follow Us:
Download App:
  • android
  • ios