Asianet Suvarna News Asianet Suvarna News

ತಿಂಗಳಲ್ಲಿ 3 ಭೂಕಂಪ ಭಾರತಕ್ಕೆ ಎಚ್ಚರಿಕೆ; ಮುಂದೈತೆ ಮಾರಿ ಹಬ್ಬ: ಭೂಕಂಪಶಾಸ್ತ್ರಜ್ಞರ ವಾರ್ನಿಂಗ್

ನೇಪಾಳದ ಕೇಂದ್ರ ಬೆಲ್ಟ್ ಅನ್ನು "ಸಕ್ರಿಯವಾಗಿ ಶಕ್ತಿ ಬಿಡುಗಡೆ ಮಾಡುವ ವಲಯ" ಎಂದು ಗುರುತಿಸಿರುವುದರಿಂದ ದೇಶದ ಜನರು ಜಾಗರೂಕರಾಗಿರಬೇಕು ಮತ್ತು ಸಿದ್ಧರಾಗಿರಬೇಕು ಎಂದು ಭೂಕಂಪಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.

be prepared expert warns of active seismic belt as nepal quake jolts delhi ncr ash
Author
First Published Nov 4, 2023, 11:50 AM IST | Last Updated Nov 4, 2023, 11:50 AM IST

ದೆಹಲಿ (ನವೆಂಬರ್ 4, 2023): ನೇಪಾಳದಲ್ಲಿ ಶುಕ್ರವಾರ ತಡರಾತ್ರಿ ಮತ್ತೆ ಪ್ರಬಲ ಭೂಕಂಪವಾಗಿದ್ದು, ನೂರಾರು ಜನ ಮೃತಪಟ್ಟಿದ್ದಾರೆ. ಒಂದು ತಿಂಗಳೊಳಗೆ ಮೂರನೇ ಬಾರಿಗೆ, ಭಾರಿ ಭೂಕಂಪವಾಗಿದೆ. ದೆಹಲಿ-ಎನ್‌ಸಿಆರ್, ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ಉತ್ತರ ಭಾರತದಾದ್ಯಂತ ಬಲವಾದ ಕಂಪನಗಳು ಸಂಭವಿಸಿವೆ. ಆದರೆ, ಇದೆಲ್ಲ ಕೇವಲ ಎಚ್ಚರಿಕೆ, ಮುಂದೆ ಇನ್ನೂ ದೊಡ್ಡ ಪ್ರಮಾಣದಲ್ಲಿ ಭೂಕಂಪ ಸಂಭವಿಸಬಹುದು ಎಂದು ಭೂಕಂಪಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.

ನೇಪಾಳದಲ್ಲಿ ಸಂಭವಿಸಿದ ಭೂಕಂಪದಿಂದ ದೆಹಲಿ - ಎನ್‌ಸಿಆರ್‌, ಉತ್ತರ ಪ್ರದೇಶ, ಮಧ್ಯ ಪ್ರದೇಶ ಹಾಗೂ ಬಿಹಾರದಲ್ಲೂ ಕಂಪನ ಆಗಿದೆ. ಈ ಹಿಂದೆ ಅಕ್ಟೋಬರ್ 3 ಹಾಗೂ 15 ರಂದೂ ಕಂಪನ ಆಗಿತ್ತು. ಇನ್ನು, ನೇಪಾಳದ ಕೇಂದ್ರ ಬೆಲ್ಟ್ ಅನ್ನು "ಸಕ್ರಿಯವಾಗಿ ಶಕ್ತಿ ಬಿಡುಗಡೆ ಮಾಡುವ ವಲಯ" ಎಂದು ಗುರುತಿಸಿರುವುದರಿಂದ ದೇಶದ ಜನರು ಜಾಗರೂಕರಾಗಿರಬೇಕು ಮತ್ತು ಸಿದ್ಧರಾಗಿರಬೇಕು ಎಂದು ಭೂಕಂಪಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.

ಇದನ್ನು ಓದಿ: ನೇಪಾಳದಲ್ಲಿ ಪ್ರಬಲ ಭೂಕಂಪ: ಕನಿಷ್ಠ 129 ಜನ ಸಾವು, ನೂರಾರು ಜನರಿಗೆ ಗಾಯ; ದೆಹಲಿಯಲ್ಲೂ ಕಂಪಿಸಿದ ಭೂಮಿ

ಈ ಹಿಂದೆ ವಾಡಿಯಾ ಇನ್‌ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿಯಲ್ಲಿ ಕೆಲಸ ಮಾಡುತ್ತಿದ್ದ ಭೂಕಂಪಶಾಸ್ತ್ರಜ್ಞ ಅಜಯ್ ಪಾಲ್, ಶುಕ್ರವಾರದಂದು ಭೂಕಂಪದ ಕೇಂದ್ರಬಿಂದುವು ನೇಪಾಳದ ದೋಟಿ ಜಿಲ್ಲೆಗೆ ಸಮೀಪದಲ್ಲಿದೆ ಎಂದು ಹೇಳಿದರು. ನವೆಂಬರ್ 2022 ರಲ್ಲೂ ಇದೇ ಜಿಲ್ಲೆಯಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಆರು ಜನರನ್ನು ಬಲಿ ತೆಗೆದುಕೊಂಡಿತ್ತು. ಅಕ್ಟೋಬರ್ 3 ರಂದು ನೇಪಾಳದಲ್ಲಿ ಸಂಭವಿಸಿದ ಭೂಕಂಪಗಳ ಸರಣಿಯು ಅದೇ ಪ್ರದೇಶದ ಸುತ್ತ ಸಂಭವಿಸಿದೆ ಎಂದೂ ಅವರು ಹೇಳಿದರು. ಈ ಭೂಕಂಪದ ಕೇಂದ್ರಬಿಂದು ಸ್ವಲ್ಪ ಪಶ್ಚಿಮಕ್ಕೆ ಇದ್ದರೂ ನೇಪಾಳದ ಕೇಂದ್ರ ಬೆಲ್ಟ್‌ನಲ್ಲಿದೆ. ಈ ಹಿನ್ನೆಲೆ ಜನರು ಜಾಗರೂಕರಾಗಿರಬೇಕು ಎಂದು ಅಜಯ್ ಪಾಲ್ ಎಚ್ಚರಿಕೆ ನೀಡಿದ್ದಾರೆ. 

ಭಾರತದ ಟೆಕ್ಟೋನಿಕ್ ಪ್ಲೇಟ್ ಉತ್ತರಕ್ಕೆ ಚಲಿಸುವಾಗ ಯುರೇಷಿಯನ್ ಪ್ಲೇಟ್‌ನೊಂದಿಗೆ ಸಂಘರ್ಷದಲ್ಲಿರುವುದರಿಂದ ಹಿಮಾಲಯದ ಪ್ರದೇಶದಲ್ಲಿ 'ಯಾವುದೇ ಸಮಯದಲ್ಲಿ' ದೊಡ್ಡ ಭೂಕಂಪ ಸಂಭವಿಸಬಹುದು ಎಂದು ಹಲವಾರು ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ. ಸರಿಸುಮಾರು 40 - 50 ಮಿಲಿಯನ್ ವರ್ಷಗಳ ಹಿಂದೆ ಯುರೇಷಿಯನ್ ಪ್ಲೇಟ್‌ನೊಂದಿಗೆ ಭಾರತೀಯ ಪ್ಲೇಟ್ ಹಿಂದೂ ಮಹಾಸಾಗರದಿಂದ ಉತ್ತರಕ್ಕೆ ಚಲಿಸಿದಾಗ ಹಿಮಾಲಯವು ರೂಪುಗೊಂಡಿತು.

ಇದನ್ನೂ ಓದಿ: ಮೊರಾಕ್ಕೋದಲ್ಲಿ ಭೀಕರ ಭೂಕಂಪಕ್ಕೆ 600 ಕ್ಕೂ ಹೆಚ್ಚು ಬಲಿ: ಪ್ರಧಾನಿ ಮೋದಿ ಸಂತಾಪ

ಹಿಮಾಲಯದ ಒಡಲಲ್ಲಿ ಒತ್ತಡವು ಹೆಚ್ಚುತ್ತಿದೆ, ಏಕೆಂದರೆ ಭಾರತೀಯ ಫಲಕವು ಉತ್ತರದ ಕಡೆಗೆ ತನ್ನ ನಡಿಗೆಯನ್ನು ಮುಂದುವರೆಸಿದೆ ಮತ್ತು ಯುರೇಷಿಯನ್ ಪ್ಲೇಟ್‌ನೊಂದಿಗೆ  ಸಂಘರ್ಷವನ್ನು ಉಂಟುಮಾಡುತ್ತದೆ ಎಂದೂ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಹಿಮಾಲಯದ ಮೇಲಿನ ಒತ್ತಡವು ಒಂದು ಅಥವಾ ದೊಡ್ಡ ಭೂಕಂಪಗಳ ಸರಣಿಯ ಮೂಲಕ ಬಿಡುಗಡೆಯಾಗಬಹುದು, ಇದು ರಿಕ್ಟರ್ ಮಾಪಕದಲ್ಲಿ 8 ಕ್ಕಿಂತ ಹೆಚ್ಚು ದೊಡ್ಡದಾಗಿರುತ್ತದೆ ಎಂದೂ ತಜ್ಞರು ಹೇಳುತ್ತಾರೆ.

ಆದರೂ ಅಂತಹ ದೊಡ್ಡ ಭೂಕಂಪ ಯಾವಾಗ ಸಂಭವಿಸುತ್ತದೆ ಎಂಬುದನ್ನು ನಿಖರವಾಗಿ ಊಹಿಸಲು ಯಾವುದೇ ಮಾರ್ಗವಿಲ್ಲ ಎಂದೂ ಹೇಳಲಾಗ್ತಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೂಕಂಪನ, 4.6ರ ತೀವ್ರತೆ ದಾಖಲು!

Latest Videos
Follow Us:
Download App:
  • android
  • ios