Asianet Suvarna News Asianet Suvarna News

ಮೊರಾಕ್ಕೋದಲ್ಲಿ ಭೀಕರ ಭೂಕಂಪಕ್ಕೆ 600 ಕ್ಕೂ ಹೆಚ್ಚು ಬಲಿ: ಪ್ರಧಾನಿ ಮೋದಿ ಸಂತಾಪ

ಮೊರಾಕ್ಕೋದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ 632 ಜನರು ಬಲಿಯಾಗಿದ್ದಾರೆ ಎಂದು ದೇಶದ ಆಂತರಿಕ ಸಚಿವಾಲಯ ತಿಳಿಸಿದೆ. ಪ್ರಧಾನಿ ಮೋದಿ ಈ ಬಗ್ಗೆ ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದಾರೆ. 

morocco earthquake 296 killed as buildings damaged pm modi tweets condolence message ash
Author
First Published Sep 9, 2023, 9:14 AM IST

ರಬಾಟ್‌ (ಸೆಪ್ಟೆಂಬರ್ 9, 2023): ಮಧ್ಯ ಮೊರಾಕ್ಕೋದಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 632 ಜನರು ಬಲಿಯಾಗಿದ್ದಾರೆ ಎಂದು ದೇಶದ ಆಂತರಿಕ ಸಚಿವಾಲಯ ತಿಳಿಸಿದೆ. ಪ್ರಬಲ ಭೂಕಂಪ ಹಿನ್ನೆಲೆ ಹಲವು ಗಣ್ಯರು ಸಂತಾಪ ಸೂಚಿಸುತ್ತಿದ್ದು, ಪ್ರಧಾನಿ ಮೋದಿ ಸಹ ಈ ಬಗ್ಗೆ ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದಾರೆ. 

ಮೊರಾಕ್ಕೋದಲ್ಲಿ ಸಂಭವಿಸಿದ ಪ್ರಬಲ ಭೂಕಂಪದ ಕೇಂದ್ರಬಿಂದುವು ಹೈ ಅಟ್ಲಾಸ್ ಪರ್ವತಗಳಲ್ಲಿ, 71 ಕಿಮೀ (44 ಮೈಲುಗಳು) ನೈಋತ್ಯ ಮರ್ರಾಕೇಶ್‌ನಲ್ಲಿ, 18.5 ಕಿಮೀ ಆಳದಲ್ಲಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಸ್ಥಳೀಯ ಕಾಲಮಾನ 23:11ಕ್ಕೆ (22:11 GMT) ಭೂಕಂಪ ಸಂಭವಿಸಿದ್ದು, 19 ನಿಮಿಷಗಳ ನಂತರ ರಿಕ್ಟರ್ ಮಾಪಕದಲ್ಲಿ 4.9 ತೀವ್ರತೆಯ ಮತ್ತೊಂದು ಭೂ ಕಂಪನ ಸಂಭವಿಸಿದೆ. ಮರಾಕೇಶ್ ಮತ್ತು ದಕ್ಷಿಣದ ಹಲವಾರು ಪ್ರದೇಶಗಳಲ್ಲಿ ಅನೇಕ ಜನರು ಮೃತಪಟ್ಟಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನು ಓದಿ: 45 ಮಹಿಳೆಯರ ರೇಪ್; ಶಿಕ್ಷಕಿ ಜತೆ ರಾಸಲೀಲೆ: ಕಾಮುಕ ಪ್ರಿನ್ಸಿಪಾಲ್ ವಿಡಿಯೋ ವೈರಲ್‌

ತಾತ್ಕಾಲಿಕ ವರದಿಯ ಪ್ರಕಾರ, ಭೂಕಂಪವು ಪ್ರಾಂತ್ಯಗಳು ಮತ್ತು ಅಲ್-ಹೌಜ್, ಮರ್ರಾಕೇಶ್, ಔರ್ಜಾಜೆಟ್, ಅಜಿಲಾಲ್, ಚಿಚೌವಾ ಮತ್ತು ತಾರೌಡಾಂಟ್ ಪುರಸಭೆಗಳಲ್ಲಿ ಆಗಿದ್ದು, ಈ ವೇಳೆ 296 ಜನರನ್ನು ಬಲಿ ಪಡೆದಿದೆ, 153 ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಎಕ್ಸ್‌ (ಈ ಇಂದಿನ ಟ್ವಿಟ್ಟರ್‌) ನಲ್ಲಿ ಪರಿಶೀಲಿಸದ ವಿಡಿಯೋ ಕ್ಲಿಪ್‌ಗಳು ಹಾನಿಗೊಳಗಾದ ಕಟ್ಟಡಗಳು, ಇತರ ಕಟ್ಟಡಗಳು ಅಲುಗಾಡುವಿಕೆ ಮತ್ತು ಕಲ್ಲುಮಣ್ಣುಗಳಿಂದ ಕೂಡಿದ ಬೀದಿಗಳನ್ನು ತೋರಿಸುತ್ತವೆ. ಜನರು ಗಾಬರಿಯಿಂದ ಪಲಾಯನ ಮಾಡುವುದನ್ನು ಮತ್ತು ಕೆಲವರು ಧೂಳಿನ ಮೋಡಗಳ ಮೂಲಕ ನಡೆಯುತ್ತಿರುವುದು ಕಂಡುಬರುತ್ತದೆ.

ಮರಕೇಶ್‌ನ ಹಳೆಯ ನಗರದಲ್ಲಿ ಕೆಲವು ಕಟ್ಟಡಗಳು ಕುಸಿದಿವೆ ಎಂದು ನಿವಾಸಿಯೊಬ್ಬರು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. X ನಲ್ಲಿನ ಹಲವಾರು ಕ್ಲಿಪ್‌ಗಳು ಕಟ್ಟಡಗಳು ಕುಸಿಯುತ್ತಿರುವುದನ್ನು ತೋರಿಸುತ್ತವೆ. ಇನ್ನು, ಮತ್ತೆ ಭೂಕಂಪ ಸಂಭವಿಸುತ್ತಿರುವುದರಿಂದ ಜನರು ಮನೆಯಿಂದ ಹೊರಗೆ ಇರಲು ನಿರ್ಧರಿಸಿದ್ದಾರೆ. ಐತಿಹಾಸಿಕ ನಗರದಲ್ಲಿ ಇನ್ನೊಬ್ಬ ವ್ಯಕ್ತಿ "ಹಿಂಸಾತ್ಮಕ ನಡುಕ" ಮತ್ತು "ಕಟ್ಟಡಗಳು ಚಲಿಸುವ" ಅನುಭವವನ್ನು ವಿವರಿಸಿದ್ದಾನೆ. ವಿದ್ಯುತ್ ಮತ್ತು ದೂರವಾಣಿ ಸಂಪರ್ಕ ಕಡಿತಗೊಂಡಿದೆ ಎಂದೂ ಅವರು ಹೇಳಿದರು.

ಇದನ್ನೂ ಓದಿ: ಲವ್ ಜಿಹಾದ್‌: ಮದ್ವೆಯಾಗಿದ್ರೂ ಹಿಂದೂ ಹುಡುಗಿ ಜತೆ ಲವ್ ನಾಟಕವಾಡ್ದ ಶಕೀಬ್; ಆತ್ಮಹತ್ಯೆ ಮಾಡ್ಕೊಂಡ ಪಿಂಕಿ ಗುಪ್ತಾ

ಭೂಕಂಪನದ ಸಮೀಪವಿರುವ ಪರ್ವತ ಹಳ್ಳಿಗಳಲ್ಲಿನ ಚಿಕ್ಕಪುಟ್ಟ ಮನೆಗಳು ಉಳಿದುಕೊಂಡಿಲ್ಲ ಮತ್ತು ಅಲ್ಲಿ ಸಾವುನೋವುಗಳನ್ನು ನಿರ್ಧರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಈ ಹಿನ್ನೆಲೆ ಸಾವು ನೋವು ಮತ್ತಷ್ಟು ಹೆಚ್ಚಾಗಬಹುದು ಎಂದು ತಿಳಿದುಬಂದಿದೆ.

ಮೋದಿ ಸಂತಾಪ
ಮೊರಾಕ್ಕೋ ಭೀಕರ ಭೂಕಂಪದ ಬಗ್ಗೆ ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ. "ಮೊರಾಕ್ಕೋದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಪ್ರಾಣಹಾನಿಯಿಂದ ತೀವ್ರ ನೋವಾಗಿದೆ. ಈ ದುರಂತದ ಸಮಯದಲ್ಲಿ, ನನ್ನ ಆಲೋಚನೆಗಳು ಮೊರಾಕೊದ ಜನರೊಂದಿಗೆ ಇವೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪಗಳು. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಭಾರತ ಸಿದ್ಧವಾಗಿದೆ. ಈ ಕಷ್ಟದ ಸಮಯದಲ್ಲಿ ಮೊರಾಕೊಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಸಿದ್ಧವಿದ್ದೇವೆ," ಎಂದು ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಗಗನಸಖಿ ಶವ ಪತ್ತೆ ಕೇಸ್‌ಗೆ ಟ್ವಿಸ್ಟ್‌: ಲೈಂಗಿಕ ದೌರ್ಜನ್ಯ ಎಸಗಿ ಕತ್ತು ಸೀಳಿ ಬರ್ಬರ ಹತ್ಯೆ!

Follow Us:
Download App:
  • android
  • ios