ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 4.6ರಷ್ಟು ತೀವ್ರತೆ ದಾಖಲಾಗಿದೆ. ದೆಹಲಿ ಹಾಗೂ ರಾಜಧಾನಿ ವ್ಯಾಪ್ತಿಯ ಬಹುತೇಕ ಪ್ರದೇಶದಲ್ಲಿ ಭೂಮಿ ಕಂಪಿಸಿದೆ.
ನವದೆಹಲಿ(ಅ.03) ನೇಪಾಳದಲ್ಲಿ 6.2ರ ತೀವ್ರತೆಯ ಭೂಕಂಪನ ದಾಖಲಾದ ಬೆನ್ನಲ್ಲೇ ಇದೀಗ ದೆಹಲಿಯಲ್ಲಿ 4.6ರ ತೀವ್ರತೆಯ ಭೂಕಂಪನವಾಗಿದೆ. ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪನ ಅನುಭವವಾಗುತ್ತಿದ್ದಂತೆ ಮನೆ, ಕಚೇರಿ, ಕಟ್ಟದಲ್ಲಿದ್ದ ಜನರು ಹೊರಗೆ ಓಡಿದ್ದಾರೆ. ಇಂದು ಮಧ್ಯಹ್ನಾ 2.25ಕ್ಕೆ ದೆಹಲಿಯಲ್ಲಿ ಭೂಕಂಪನವಾಗಿದೆ.
ಭೂಕಂಪದ ಕೇಂದ್ರ ಬಿಂದು ನೇಪಾಳ. ಲುಂಬಿನಿ ಪ್ರಾಂತ್ಯ, ಗುಲಾರಿಯಾ ಸೇರಿದಂತೆ ನೇಪಾಳದ ಹೆಲವೆಡೆ 6.2ರ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಇದರ ತೀವ್ರತೆ ರಾಷ್ಟ್ರರಾಧಾನಿ ವ್ಯಾಪ್ತಿಯಲ್ಲಿ ಗೋಚರಿಸಿದೆ. ದೆಹಲಿಯಲ್ಲಿ ಎರಡು ಭಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ದೆಹಲಿಯಲ್ಲಿ ಸಂಭವಿಸಿದ ಲಘು ಭೂಕಂಪನದಲ್ಲಿ ಅನಾಹುತಗಳ ಕುರಿತು ವರದಿಯಾಗಿಲ್ಲ.
ನಿರಂತರ ಜಿಟಿ ಜಿಟಿ ಮಳೆಯ ಮಧ್ಯೆ ವಿಜಯಪುರದಲ್ಲಿ ಭೂಕಂಪನ: ಆತಂಕದಲ್ಲಿ ಜನತೆ..!
ಭೂಕಂಪನ ಬೆನ್ನಲ್ಲೇ ದೆಹಲಿ ಪೊಲೀಸರು ಸಹಾಯವಾಣಿ ತರೆದಿದ್ದಾರೆ. ಸಾರ್ವಜನಿಕರಿಗೆ ಯಾವುದೇ ನೆರವು ಬೇಕಿದ್ದಲ್ಲಿ ತಕ್ಷಣವೇ 112ಕ್ಕೆ ಕರೆ ಮಾಡಲು ಕೋರಿದ್ದಾರೆ. ಇದೇ ವೇಳೆ ಯಾರು ಆತಂಕಪಡುವ ಅಗತ್ಯವಿಲ್ಲ. ಕಟ್ಟಡ, ಕಚೇರಿ, ಮನೆಯೊಳಗಿದ್ದರೆ ಹೊರಬಂದು ಸುರಕ್ಷಿತ ತಾಣದಲ್ಲಿ ಸೇರಿ. ಹೊರಬರುವಾಗ ಲಿಫ್ಟ್ ಬಳಕೆ ಮಾಡಬೇಡಿ ಎಂದು ದೆಹಲಿ ಪೊಲೀಸರು ಮನವಿ ಮಾಡಿದ್ದಾರೆ.
ಇಂದು ನೇಪಾಳದಲ್ಲಿ 6.2ರ ತೀವ್ರತೆಯಲ್ಲಿ ಭೂಕಂಪನ ಸಂಭವಿಸಿತ್ತು. ಇದಾದ ಬಳಿಕ ಭಾರತದ ಹಲವು ಭಾಗದಲ್ಲಿ ಭೂಮಿ ಕಂಪಿಸಿದೆ. ದೆಹಲಿ ಭೂಕಂಪನಕ್ಕೂ ಒಂದು ಗಂಟೆ ಮೊದಲು ಅಸ್ಸಾಂ ಹಾಗೂ ಹರ್ಯಾಣದ ಸೋನಿಪತ್‌ನಲ್ಲಿ ಭೂಕಂಪನ ಸಂಭವಿಸಿತ್ತು.
ಕಳೆದ ತಿಂಗಳು ಅಟ್ಲಾಂಟಿಕ್ ಸಮುದ್ರ ತೀರದಲ್ಲಿರುವ ಮೊರಾಕ್ಕೊ ದೇಶದಲ್ಲಿ ಶಕ್ತಿಶಾಲಿ ಭೂಕಂಪ ಸಂಭವಿಸಿತ್ತು. ಈ ಭೀಕರ ಭೂಕಂಪದಲ್ಲಿ 2 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಭೂಕಂಪದ ತೀವ್ರತೆಗೆ ಹಲವು ಹಳ್ಳಿಗಳು ಸಂಪೂರ್ಣ ನಾಮವಶೇಷವಾಗಿದೆ. ಮೊರಾಕ್ಕೊದಲ್ಲಿ ಸಂಭವಿಸಿದ 6.8 ರಿಕ್ಟರ್ ತೀವ್ರತೆಯ ಭೂಕಂಪದಿಂದಾಗಿ 2,012 ಮಂದಿ ಸಾವಿಗೀಡಾಗಿದ್ದು, 2,059 ಮಂದಿ ಗಾಯಗೊಂಡಿದ್ದರು. ಶಕ್ತಿಶಾಲಿ ಭೂಕಂಪದಿಂದಾಗಿ ಐತಿಹಾಸಿಕ ನಗರ ಮ್ಯಾರಕೇಶ್‌ವರೆಗೆ ಇರುವ ಅನೇಕ ಹಳ್ಳಿಗಳು ಸಂಪೂರ್ಣವಾಗಿ ನಾಶವಾಗಿತ್ತು.
ಹಿಂಸಾಚಾರದಲ್ಲಿ ಬೆಂದಿರುವ ಮಣಿಪುರ ಜನತೆಗೆ ಮತ್ತೊಂದು ಆಘಾತ, ಹಲೆವೆಡೆ ಭೂಕಂಪನ!
ಸೆಪ್ಟೆಂಬರ್ ತಿಂಗಳಲ್ಲಿ ಕರ್ನಾಟಕದ ಬೀದರ್‌ನಲ್ಲೂ ಭೂಕಂಪ ಸಂಭವಿಸಿತ್ತು. ಬೀದರ್ನ ಹುಮನಾಬಾದ್ ತಾಲೂಕಿನ ಡಾಕುಳಗಿ ಗ್ರಾಮದ ಬಳಿ ಭೂಕಂಪನದ ಅನುಭವ ಆಗಿತ್ತು. ರಿಕ್ಟರ್ ಮಾಪಕದಲ್ಲಿ 2.6 ತೀವ್ರತೆಯ ಕಂಪನ ದಾಖಲಾಗಿತ್ತು. ಕಂಪನದ ಹಿನ್ನೆಲೆಯಲ್ಲಿ ಕೆಲಕಾಲ ಜನ ಭಯಭೀತರಾಗಿದ್ದರು. ಆದರೆ ಲಘು ಭೂಕಂಪನದಿಂದ ಯಾವುದೇ ಅನಾಹುತ ಸಂಭವಿಸರಲಿಲ್ಲ.
