ಇವತ್ತೇ ತೆರೆಗೆ ಬಂದಿರೋ ‘ಲ್ಯಾಂಡ್ ಲಾರ್ಡ್’ನಲ್ಲು ರಚಿತಾ ರಾಮ್ ಅವರೇ ನಾಯಕಿ . ಲ್ಯಾಂಡ್ ಲಾರ್ಡ್‌ನಲ್ಲಿ ವಯಸ್ಸಿಗೆ ಮೀರಿದ ಪ್ರಬುದ್ಧ ಪಾತ್ರದಲ್ಲಿ ಮಿಂಚಿರೋ ರಚ್ಚು, ಕಲ್ಟ್​ನಲ್ಲಿ ಸಿಗರೇಟ್​ ಸೇಯುತ್ತಾ ಜೆನ್ ​​ಝಿ ಹುಡುಗಿಯರ ಹಾಗೆ ಗ್ಲಾಮರ್ ಗೊಂಬೆ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಬನಾರಸ್ ಹುಡುಗನ ಭಗ್ನ ಪ್ರೇಮ್ ಕಹಾನಿ!

'ಬನಾರಸ್'ನಲ್ಲಿ ಚಾಕಲೇಟ್ ಹೀರೋ ಆಗಿ ಗಮನ ಸೆಳೆದಿದ್ದ ಜೈದ್ ಖಾನ್, ಈಗ ಭಗ್ನಪ್ರೇಮಿ ಅವತಾರದಲ್ಲಿ ಮತ್ತೊಮ್ಮೆ ಸಿನಿ ಪ್ರಿಯರ ಮುಂದೆ ಬರ್ತಾ ಇದ್ದಾರೆ. ಅದು ಇಬ್ಬರು ಹುಡುಗಿಯ ಮುದ್ದಿನ ಪ್ರಿಯಕರನಾಗಿ. ಹಾಗಾದ್ರೆ ಈ ಭಗ್ನಪ್ರೇಮಿಯ ಕಲ್ಟ್​​​​ ಕಥೆ ಹೇಗಿರುತ್ತೆ..? ಲ್ಯಾಂಡ್​ ಲಾರ್ಡ್​​ ಜೊತೆ ಪೈಪೋಟಿಗೆ ಇಳಿದಿರೋ ಝೈದ್ ಖಾನ್​ ಪ್ರೇಕ್ಷಕರ ಮನ ಗೆಲ್ಲೋಕೆ ಏನೆಲ್ಲಾ ಪ್ಲ್ಯಾನ್ ಮಾಡಿದ್ದಾರೆ.? ನೋಡೋಣ ಬನ್ನಿ.

ಹೌದು, ಇವತ್ತು ಲ್ಯಾಂಡ್ ಲಾರ್ಡ್ ಜೊತೆ ಮತ್ತೊಂದು ನೀರಿಕ್ಷೆಯ ಸಿನಿಮಾ ರಿಲಿಸ್ ಆಗ್ತಾ ಇದೆ. ಅದುವೇ ಜೈದ್ ಖಾನ್, ರಚಿತಾ ರಾಮ್, ಮಲೈಕಾ ವಸುಪಾಲ್ ನಟನೆಯ ಕಲ್ಟ್ ಮೂವಿ. ಈ ಹಿಂದೆ ಬನಾರಸ್ ನಲ್ಲಿ ಚಾಕಲೇಟ್ ಹೀರೋ ಆಗಿ ಮಿಂಚಿದ್ದ ಜೈದ್ ಖಾನ್ ಇಲ್ಲಿ ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದೊಮ್ಮೆ ಲವರ್ ಬಾಯ್ ಆಗಿ ಮತ್ತೊಮ್ಮೆ ವೈಲೆಂಟ್ ಭಗ್ನಪ್ರೇಮಿ ಯಾಗಿ ಮಾಸ್ ಅವತಾರದಲ್ಲಿ ಮಿಂಚಿದ್ದಾರೆ.

‘ಲ್ಯಾಂಡ್ ಲಾರ್ಡ್’ನಲ್ಲೂ ರಚಿತಾ ರಾಮ್ ನಾಯಕಿ!

ಇವತ್ತೇ ತೆರೆಗೆ ಬಂದಿರೋ ಲ್ಯಾಂಡ್ ಲಾರ್ಡ್ ನಲ್ಲು ರಚಿತಾನೆ ನಾಯಕಿ . ಲ್ಯಾಂಡ್ ಲಾರ್ಡ್ ನಲ್ಲಿ ವಯಸ್ಸಿಗೆ ಮೀರಿದ ಪ್ರಬುದ್ಧ ಪಾತ್ರದಲ್ಲಿ ಮಿಂಚಿರೋ ರಚ್ಚು. ಕಲ್ಟ್​ನಲ್ಲಿ ಸಿಗರೇಟ್​ ಸೇಯುತ್ತಾ ಝನ್​​ಝಿ ಹುಡುಗಿಯರ ಹಾಗೆ ಗ್ಲಾಮರ್ ಗೊಂಬೆ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಅರ್ಜುನ್ ಜನ್ಯ ಮ್ಯೂಸಿಕ್

ಉಪಾಧ್ಯಕ್ಷ ಸಿನಿಮಾ ಖ್ಯಾತಿಯ ಅನಿಲ್ ಕುಮಾರ್ ಕಲ್ಟ್ ಗೆ ನಿರ್ದೇಶನ ಮಾಡಿದ್ದು, ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಜೈದ್ - ಮಲೈಕಾ ಜೋಡಿಯ ಅಯ್ಯೋ ಶಿವನೇ ಸಾಂಗ್ ಈಗಾಗ್ಲೇ ಸೂಪರ್ ಹಿಟ್ ಆಗಿದೆ. ಪ್ರೀತಿ, ಆ್ಯಕ್ಷನ್‌, ಭಾವನಾತ್ಮಕ ಟ್ವಿಸ್ಟ್ ಗಳಿರೋ ಕಲ್ಟ್ ಸಿನಿಪ್ರಿಯರ ಮನಸು ಗೆಲ್ಲೋ ದಕ್ಕೆ ಇಂದಿನಿಂದ ಚಿತ್ರಮಂದಿರದ ಅಂಗಳಕ್ಕೆ ಬರ್ತಾ ಇದೆ. ಈ ಕಲ್ಟ್ ಪ್ರೇಮ್ ಕಹಾನಿ ಸಿನಿಪ್ರಿಯರ ಹಾರ್ಟ್ ಮೆಲ್ಟ್ ಮಾಡಿ ಗೆಲ್ಲುತ್ತಾ ಕಾದುನೋಡಬೇಕು.