ಕನ್ನಡ ಚಿತ್ರರಂಗದ ಎವರ್‌ ಗ್ರೀನ್‌ ನಟ, ಸಕಲಕಲಾ ವಲ್ಲಭ ಡಾ.ರಾಜ್‌ ಕುಮಾರ್‌ ಅವರ ಕುಟುಂಬದ ಕುಡಿಗಳು ಒಬ್ಬೊಬ್ಬರಾಗಿ ಸ್ಯಾಂಡಲ್‌ವುಡ್‌ಗೆ  ಪಾದಾರ್ಪಣೆ ಮಾಡುತ್ತಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್‌ ಅವರ ಇಬ್ಬರು ಮಕ್ಕಳು - ಯುವ ರಾಜ್‌ಕುಮಾರ್ ಹಾಗೂ ವಿನಯ್ ರಾಜ್‌ಕುಮಾರ್ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ  ತೊಡಗಿಸಿಕೊಂಡಿದ್ದಾರೆ. 

ರಾಜ್ ಕುಮಾರ್ ಮೊಮ್ಮಗ ಯುವರಾಜ್ - ಶ್ರೀದೇವಿ ಮ್ಯಾರೆಜ್ ಫೋಟೋಸ್!

ಇನ್ನು 2020 ವರ್ಷವನ್ನು ದುಬೈನಲ್ಲಿ ಆಚರಿಸುವ ಮೂಲಕ ಅದ್ಧೂರಿಯಾಗಿ ಬರ ಮಾಡಿಕೊಂಡಿದ್ದಾರೆ.  ಫ್ಲೈ ಬೋರ್ಡಿಂಗ್ ವಿಡಿಯೋವನ್ನು ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಚಿಕ್ಕಪ್ಪ ಪುನೀತ್ ರಾಜ್‌ಕುಮಾರ್  'ಜಾಕಿ' ಚಿತ್ರದ ಹಾಡಿಗೆ ಟಿಕ್‌ಟಾಕ್‌ ಮಾಡಿದ್ದಾರೆ. 

 

ಕೆಜಿಎಫ್ ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಪುನೀತ್ ಅವರು ಯುವ ರಾಜ್‌ಕುಮಾರ್ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಚಿತ್ರದಲ್ಲಿ ಭರ್ಜರಿಯಾಗಿ ಕಾಣಿಸಲು ಯುವ ಜಿಮ್‌ನಲ್ಲಿ ಹೆಚ್ಚಿನ ಕಾಲಕಳೆಯುತ್ತಿದ್ದಾರೆ.