ಯುವ ರಾಜ್‌ಕುಮಾರ್ ನಟನೆಯ ಹೊಸ ಸಿನಿಮಾವನ್ನು ಸಂತೋಷ್ ಆನಂದ್‌ರಾಮ್ ನಿರ್ದೇಶನ ಮಾಲಿದ್ದಾರೆ. ಸದ್ಯದಲ್ಲೇ ಚಿತ್ರದ ಫೋಟೋಶೂಟ್ ಕೂಡ ನಡೆಯಲಿದೆ.
ಯುವ ರಾಜ್‌ಕುಮಾರ್ (Yuva Rajkumar) ನಟನೆಯ ಹೊಸ ಸಿನಿಮಾವನ್ನು ಸಂತೋಷ್ ಆನಂದ್‌ರಾಮ್ (Santhosh Ananddram) ನಿರ್ದೇಶನ ಮಾಲಿದ್ದಾರೆ. ಸದ್ಯದಲ್ಲೇ ಚಿತ್ರದ ಫೋಟೋಶೂಟ್ (Photoshoot) ಕೂಡ ನಡೆಯಲಿದೆ. ವಿಶೇಷ ಎಂದರೆ ಯುವರಾಜ್‌ಕುಮಾರ್ ಜತೆ ವಿಜಯ್ ಕಿರಗಂದೂರು (Vijay Kiragandur) ನೇತೃತ್ವದ ಹೊಂಬಾಳೆ ಫಿಲಮ್ಸ್ (Hombale Films) 3 ಚಿತ್ರಗಳನ್ನು ಮಾಡುವುದಕ್ಕೆ ಮುಂದಾಗಿದ್ದು, ಆ ಪೈಕಿ ಸಂತೋಷ್ ಆನಂದ್‌ರಾಮ್ ನಿರ್ದೇಶನದ ಚಿತ್ರ ಕೂಡ ಒಂದು.
ಸದ್ಯದ ಮಾಹಿತಿ ಪ್ರಕಾರ ಯುವರಾಜ್‌ಕುಮಾರ್ ಅವರ ಮೊದಲ ಚಿತ್ರ ‘ಯುವ ರಣಧೀರ ಕಂಠೀರವ’ (Yuva Ranadheera Kanteerava) ಸದ್ಯಕ್ಕೆ ಸೆಟ್ಟೇರುವುದಿಲ್ಲ ಎನ್ನಲಾಗುತ್ತಿದೆ. ಈಗ ಸಂತೋಷ್ ಆನಂದ್‌ರಾಮ್ ಜತೆ ಸಿನಿಮಾ ಮಾಡಲಿದ್ದು, ಮುಂದೆ ಬೇರೆ ಬೇರೆ ನಿರ್ದೇಶಕರ ಚಿತ್ರ ಉಳಿದ ಎರಡು ಚಿತ್ರಗಳನ್ನು ಮಾಡಲಿದ್ದಾರೆ. ಈಗಾಗಲೇ ಹೊಂಬಾಳೆ ಫಿಲಮ್ಸ್ ಮೂರು ಚಿತ್ರಗಳನ್ನು ನಿರ್ಮಿಸುವ ಕುರಿತು ಮಾತುಕತೆ ಆಗಿದೆ. ಅಧಿಕೃತ ಮಾಹಿತಿ ಶೀಘ್ರದಲ್ಲೇ ಬರಲಿದೆ.
Yuva Rajkumar Film:ಪುನೀತ್‌ರಾಜ್‌ಕುಮಾರ್ ಅವರಿಗಾಗಿಯೇ ಬರೆದುಕೊಂಡಿದ್ದ ಕಥೆಗೆ ಯುವ ನಾಯಕ!
ಖಡ್ಗ ಹಿಡಿದು ಬಂದ ಅಣ್ಣಾವ್ರ ಮೊಮ್ಮಗ: ಅಣ್ಣಾವ್ರಿಗೆ ತುಂಬಾ ಪ್ರಿಯವಾಗಿದ್ದ ಐತಿಹಾಸಿಕ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಲಗಾಲಿಟ್ಟು ಬರುತ್ತಿದ್ದರೆ ರಾಘಣ್ಣ ಅವರ ಎರಡನೇ ಪುತ್ರ ವೈಆರ್‌ಕೆ ಅಲಿಯಾಸ್ ಯುವ ರಾಜಕುಮಾರ್. ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಬೆಂಗಳೂರು, ಮುಂಬೈಗಳಲ್ಲಿ ಡ್ಯಾನ್ಸ್, ಫೈಟ್, ಆಕ್ಟಿಂಗ್ ತರಬೇತಿ ಪಡೆದುಕೊಂಡು ಸಮರ್ಥವಾಗಿ ನಟನೆ ಮಾಡಬಲ್ಲೆ ಎನ್ನುವ ನಂಬಿಕೆ ಬಂದ ಮೇಲೆಯೇ ಹಿಸ್ಟಾರಿಕಲ್ ಸಿನಿಮಾ ಮೂಲಕ ಬಲಗಾಲಿಟ್ಟು ಇಂಡಸ್ಟ್ರಿಗೆ ಬಂದಿದ್ದಾರೆ ಯುವ ರಾಜಕುಮಾರ್. ಕನ್ನಡ ರಾಜ್ಯೋತ್ಸವದ ದಿನದಂದೇ ಲಾಂಚಿಂಗ್ ವಿಡಿಯೋ ಬಿಡುಗಡೆ ಮಾಡುವ ಮೂಲಕ ಇಡೀ ಅಣ್ಣಾವ್ರ ಫ್ಯಾಮಿಲಿ ಯುವ ರಾಜಕುಮಾರ್‌ಗೆ ಭವ್ಯ ಸ್ವಾಗತ ಕೋರಿತು.
‘ಯುವ ರಣಧೀರ ಕಂಠೀರವ’ ಟೈಟಲ್‌ನೊಂದಿಗೆ ಲಾಂಚ್ ಆಗುತ್ತಿರುವ ಯುವ ರಾಜಕುಮಾರ್‌ಗೆ ದೊಡ್ಡಪ್ಪ ಶಿವ ರಾಜಕುಮಾರ್, ಚಿಕ್ಕಪ್ಪ ಪುನೀತ್ ರಾಜಕುಮಾರ್, ತಂದೆ ರಾಘವೇಂದ್ರ ರಾಜಕುಮಾರ್ ಆದಿಯಾಗಿ ಎಲ್ಲರೂ ಹರಸಿದ್ದಾರೆ. ‘ನಮ್ಮ ಮನೆ ಮಗನ ಬಗ್ಗೆ ನಾವು ಏನೇ ಮಾತಾಡಿದರೂ ಅದು ಹೆಚ್ಚಾಗುತ್ತದೆ. ಕಷ್ಟಪಟ್ಟಿದ್ದಾನೆ. ಚೆನ್ನಾಗಿ ಕೆಲಸ ಮಾಡಲಿ ಎಂದು ಆಶಿಸುತ್ತೇನೆ. ಅವನ ಡೈಲಾಗ್‌ಗಳನ್ನು ಕೇಳುತ್ತಿದ್ದರೆ ತಂದೆ ನೆನಪಾಗುತ್ತಾರೆ. ಇವನಿಗೆ ಜನರ ಆಶೀರ್ವಾದ ಇರಲಿ’ ಎಂದು ಪುನೀತ್ ರಾಜಕುಮಾರ್ ಹೇಳಿದರೆ, ತಂದೆ ರಾಘಣ್ಣ ‘ನನ್ನ ಮಗ ಹೇಗಿರಬೇಕು ಎಂದು ಪ್ರೇಕ್ಷಕ ಹೇಳಬೇಕು. ಅವನು ಶ್ರಮ ಹಾಕಿದ್ದಾನೆ.
Shiva Rajkumar: 'ರಣರಂಗ' ಚಿತ್ರಕ್ಕೆ ಸಂತೋಷ್ ಆನಂದ್‌ರಾಮ್ ಆಕ್ಷನ್ ಕಟ್
ಅದಕ್ಕೆ ಫಲ ಸಿಕ್ಕಬೇಕು. ಅಭಿಮಾನಿ ದೇವರು ಮೆಚ್ಚಿಕೊಂಡರೆ ಅಷ್ಟೇ ಸಾಕು’ ಎಂದು ಬೆನ್ನುತಟ್ಟಿದರು. ಇವರ ಜೊತೆಗೆ ದೊಡ್ಡಪ್ಪ ಶಿವರಾಜಕುಮಾರ್, ಶ್ರೀಮುರಳಿ, ವಿಜಯ ರಾಘವೇಂದ್ರ, ವಿನಯ್ ರಾಜಕುಮಾರ್ ಸೇರಿ ಹಲವು ಮಂದಿ ಯುವನ ಶ್ರಮಕ್ಕೆ ಮೆಚ್ಚುಗೆ ಸೂಚಿಸಿದರು.‘ಯುವ ರಣಧೀರ ಕಂಠೀರವ’ ಚಿತ್ರದ ನಿರ್ದೇಶನ ಮಾಡುತ್ತಿರುವುದು ಹೊಸ ಪ್ರತಿಭೆ ಪುನೀತ್ ರುದ್ರಾಂಗ್. ‘ನನಗೆ ನನ್ನ ಮೇಲೆ ಇದ್ದದ್ದಕ್ಕಿಂತ ಹೆಚ್ಚು ನಂಬಿಕೆ ಯುವ ರಾಜಕುಮಾರ್ ಮೇಲಿತ್ತು. ಮೊದಲ ಬಾರಿಗೆ ಹಿಸ್ಟಾರಿಕಲ್ ಸಿನಿಮಾ ಮಾಡುವಾಗ ಭಯ ಇತ್ತು. ಈಗ ಕಡಿಮೆ ಆಗಿದೆ. ಇಡೀ ತಂಡ ಉತ್ತಮ ವಾಗಿ ಕೆಲಸ ಮಾಡಿದೆ. ನನ್ನ ಕನಸಿಗೆ ಯುವ ಜೀವ ತುಂಬಿದ್ದಾರೆ’ ಎಂದು ತಮ್ಮ ಮೊದಲ ಚಿತ್ರದ ಬಗ್ಗೆ ಹೇಳಿಕೊಳ್ಳುತ್ತಾರೆ.
