ಮತ್ತೆ ಮೋಡಿ ಮಾಡಲು ರೆಡಿಯಾದ ಯೋಗರಾಜ್ ಭಟ್; ಗರಡಿ ಕಮಾಲ್‌ಗೆ ಮುಹೂರ್ತ ಫಿಕ್ಸ್

ನಿರ್ದೇಶಕ ಯೋಗರಾಜ್ ಭಟ್ ತಮ್ಮ ಗರಡಿ ಚಿತ್ರದ ಕಂಟೆಂಟ್ ರಹಸ್ಯಗಳನ್ನು ರಿವೀಲ್ ಮಾಡಿದ್ದಾರೆ. 'ಹಲವು ದಶಕಗಳ ಮೊದಲು ಊರು ಕಾಯುವ ಪೈಲ್ವಾನರು ಒಂದು ಮನೆಯಲ್ಲಿ ತಮ್ಮ ದೇಹವನ್ನು ಹುರಿಗಟ್ಟಿಸಿ ಫಿಟ್ ಆಗಿ ಇಟ್ಟುಕೊಂಡಿರುತ್ತಿದ್ದರು. ವ್ಯಾಯಮ ಮಾಡುವ ಈ ಜಾಗವನ್ನೇ 'ಗರಡಿ ಮನೆ' ಎಂದು ಕರೆಯುತ್ತಿದ್ದರು. ಚಿತ್ರವು ಇಂಥ ಮನೆಯೊಂದರ ಕಥಾಹಂದರ ಹೊಂದಿದೆ' ಎಂದಿದ್ದಾರೆ ಭಟ್ಟರು.

yogaraj bhat upcoming movie garadi release date announces on 10th nov 2023 srb

ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ನವೆಂಬರ್ 10ರಂದು (10 ನವೆಂಬರ್ 2023) ಕರ್ನಾಟಕದಾದ್ಯಂತ ತೆರೆಯಲ್ಲಿ ಗರಡಿ ಚಿತ್ರ ಅಬ್ಬರಸಲಿದೆ. ಈ ಸಿನಿಮಾದಲ್ಲಿ ಸೂರ್ಯ ನಾಯಕನಟರಾಗಿ ನಟಿಸಿದ್ದು 'ಪೈಲ್ವಾನ್' ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಸಾಕಷ್ಟು ಹೊಸ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಫಿಟ್‌ನೆಸ್ ಹಾಗೂ ಪೈಲ್ವಾನ್ ಪಾತ್ರದ 'ವಿಶೇಷ ಲುಕ್‌'ಗಾಗಿ ನಟ ಸೂರ್ಯ ಜಿಮ್‌ನಲ್ಲಿ ಬೆವರಿಸಿಳಿಸುವ ಜತೆಗೆ ಸೂಕ್ತ ಡಯಟ್ ಪ್ಲಾನ್ ಕೂಡ ಮಾಡಿಕೊಂಡಿದ್ದಾರಂತೆ.

ಬಿಸಿ ಪಾಟೀಲ್ ಪತ್ನಿ ವನಜಾ ಪಾಟೀಲ್ ಹಾಗೂ ಪುತ್ರಿ ಸೃಷ್ಟಿ ಪಾಟೀಲ್ ನಿರ್ಮಾಣದ 'ಗರಡಿ' ಚಿತ್ರದಲ್ಲಿ ನಟ ಹಾಗೂ ಮಾಜಿ ಸಚಿವ ಬಿಸಿ ಪಾಟೀಲ್ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಬಹಳ ವರ್ಷಗಳ ಬಳಿಕ ಬಿಸಿ ಪಾಟೀಲ್ ಚಿತ್ರವೊಂದರಲ್ಲಿ ನಟಿಸಿದ್ದು ಸಹಜವಾಗಿಯೇ ಅವರ ಪಾತ್ರದ ಬಗ್ಗೆ ಕುತೂಹಲ ಮೂಡಿದೆ. ಚಿತ್ರದಲ್ಲಿ ನಾಯಕನ 'ಗುರು'ವಿನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.

ನಿರ್ದೇಶಕ ಯೋಗರಾಜ್ ಭಟ್ ತಮ್ಮ ಗರಡಿ ಚಿತ್ರದ ಕಂಟೆಂಟ್ ರಹಸ್ಯಗಳನ್ನು ರಿವೀಲ್ ಮಾಡಿದ್ದಾರೆ.  'ಈಗಿನ ಕಾಲದವರಿಗೆ ಜಿಮ್ ಗೊತ್ತು. ಆದರೆ ಹಲವು ದಶಕಗಳ ಮೊದಲು ಪ್ರತಿ ಊರಿನಲ್ಲಿ ಗರಡಿ ಮನೆ ಅಂತ ಇರುತ್ತಿತ್ತು. ಅಲ್ಲಿ ಊರು ಕಾಯುವ ಪೈಲ್ವಾನರು ಒಂದು ಮನೆಯಲ್ಲಿ ತಮ್ಮ ದೇಹವನ್ನು ಹುರಿಗಟ್ಟಿಸಿ ಫಿಟ್ ಆಗಿ ಇಟ್ಟುಕೊಂಡಿರುತ್ತಿದ್ದರು. ವ್ಯಾಯಮ ಮಾಡುವ ಈ ಜಾಗವನ್ನೇ 'ಗರಡಿ ಮನೆ' ಎಂದು ಕರೆಯುತ್ತಿದ್ದರು. ಪರರಿಂದ ದಾಳಿಗಳಾದ ಸಂದರ್ಭಗಳಲ್ಲಿ ಊರಿನ ನಾಗರೀಕರನ್ನು ಗರಡಿಯಲ್ಲಿ ತಾಲೀಮು ಮಾಡಿರುವ ಇಂಥ ಕೆಲವೇ ಮಂದಿ ಕಾಪಾಡುತ್ತಿದ್ದರು. 

ಏಕಲವ್ಯ-ದ್ರೋಣಾಚಾರ್ಯರ ಕಥೆಯಂತೆ ಇರುವ 'ಗರಡಿ'ಯಲ್ಲಿ, ನಾಯಕ ಹೇಗೆ ಗುರುಮುಖೇನ ಕಲಿಯುವದರಿಂದ ವಂಚಿತನಾಗುತ್ತಾನೆ; ಗುರುವಿನ ವೈರತ್ವ ಕಟ್ಟಿಕೊಂಡಿರುವ ನಾಯಕನ ಕತೆ ಏನಾಗುತ್ತದೆ; ವಿಲನ್ ನಾಯಕನನ್ನು ಎಷ್ಟು ಮತ್ತು ಹೇಗೆಲ್ಲ ಗೋಳುಹುಯ್ದುಕೊಳ್ಳುತ್ತಾನೆ; ನಾಯಕನ ಅಣ್ಣ ತಮ್ಮನನ್ನು ಕಾಪಾಡಿಕೊಳ್ಳುವುದಕ್ಕೆ ಸಾಧ್ಯವಾಗುವುದೇ? ಮಂತಾದ ಪ್ರಶ್ನೆ-ಉತ್ತರಗಳನ್ನು ಒಳಗೊಂಡ ಕಥೆಯೇ ಗರಡಿ' ಎಂಬ ರಹಸ್ಯವನ್ನು ಯೋಗರಾಜ್ ಭಟ್ಟರು ಈಗಾಗಲೇ ಬಿಟ್ಟುಕೊಟ್ಟಿದ್ದಾರೆ. 

ರಾಜಮೌಳಿ ಹೊಸ ಸಿನಿಮಾ ಘೋಷಣೆ; ಇದು ಅಂತಿಂಥ ಸಿನಿಮಾ ಅಲ್ಲ!

ಗರಡಿ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನ ಅಣ್ಣನ ಪಾತ್ರದಲ್ಲಿ ಮಿಂಚಿದ್ದಾರೆ. ಭಾರೀ ಹೈಟು-ಪರ್ಸನಾಲಿಟಿ ಹೊಂದಿರುವ ದರ್ಶನ್,  ಈ ಚಿತ್ರದಲ್ಲಿ ಖದರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಗರಡಿ ಚಿತ್ರಕ್ಕೆ ಕಿರೀಟ ಮೂಡಿದೆ. ದರ್ಶನ್ ತೆರೆಯ ಮೇಲೆ ಸ್ವಲ್ಪ ಟೈಮ್ ಕಾಣಿಸಿಕೊಂಡರೂ ಅಭಿಮಾನಿಗಳಿಗೆ ಸಖತ್ ಥ್ರಿಲ್ ಕೊಡಲಿದ್ದಾರೆ ಎನ್ನಲಾಗುತ್ತಿದೆ. ನಿರೀಕ್ಷೆ ನಿಜವಾಗಲಿ ಎಂಬುದು ಫ್ಯಾನ್ಸ್ ಹರಕೆ.

'ನಾನು ನಂದಿನಿ, ಬೆಂಗ್ಳೂರು ಬಂದೀನಿ' ಸಾಂಗ್ ಹಾಡಿದ ಸಿಹಿ, ಮುದ್ದು ಪುಟಾಣಿ ವಿಡಿಯೋ ಸಖತ್ ಕ್ಯೂಟು!

ವಿ ಹರಿಕೃಷ್ಣ ಸಂಗೀತ ಹಾಗೂ ಮೇಘನಾ ಹಳಿಯಾಳ್ ಧ್ವನಿಯಲ್ಲಿ ಮೂಡಿಬಂದಿರುವ 'ಹೊಡಿರಲೆ ಹಲಗಿ' ಹಾಡು ಈಗಾಗಲೇ ಧೂಳೆಬ್ಬಿಸಿದೆ. ನಟಿ ನಿಶ್ವಿಕಾ ನಾಯ್ಡು ಈ ಹಾಡಿಗೆ ಮತ್ತು ಹುಡುಗರ ಬಾಡಿಗೆ ಕಿಕ್ಕೇರುವಂತೆ ಕುಣಿದಿದ್ದು ಥಿಯೇಟರ್‌ನಲ್ಲಿ ಮತ್ತೆ ಮತ್ತೆ ನೋಡಿವಂತಿದೆ ಎಂಬಷ್ಟು ಮೋಡಿ ಮಾಡಿದ್ದಾರೆ. ನಾಯಕಿಯಾಗಿ ಸೋನಲ್ ಮಂಥೆರೋ ಚಿತ್ರದ ಗ್ಲಾಮರ್ ವಿಭಾಗಕ್ಕೆ ಸ್ವಲ್ಪವೂ ಅಭಾವ ಉಂಟಾಗದಂತೆ ಪಾತ್ರ ನಿರ್ವಹಿಸಿದ್ದಾರಂತೆ. ವಿಲನ್ ಪಾತ್ರದಲ್ಲಿ ನಟ ರವಿಶಂಕರ್ ಗರಡಿ ಮನೆಯ ಮೈದಾನದಲ್ಲಿ ಭಾರೀ ಧೂಳೆಬ್ಬಿಸಿರುವ ಗುಟ್ಟು ಸಹ ರಟ್ಟಾಗಿದೆ. 

ಒಟ್ಟಿನಲ್ಲಿ 'ಗಾಳಿಪಟ-2' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಭಾರೀ ಕಮಾಲ್ ಮಾಡಿದ್ದ ಯೋಗರಾಜ್ ಭಟ್ಟರು ಇದೀಗ ಮತ್ತೆ 'ಗರಡಿ' ಮೂಲಕ ಪ್ರೇಕ್ಷಕರಿಗೆ ಮೋಡಿ ಮಾಡಲಿದ್ದಾರೆ. ನಾಯಕನಟ ಸೂರ್ಯ ಈ ಚಿತ್ರದ ಗೆಲುವಿನ ಬಗ್ಗೆ  ಭಾರೀ ಆತ್ಮವಿಶ್ವಾಸ ಹೊಂದಿದ್ದು ಸದ್ಯ ಗರಡಿ ಟೀಮ್ ಜತೆ ಪ್ರಚಾರಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್ ಅವರು ತಮ್ಮ ಈ ಚಿತ್ರವು ಹೊಸತನದಿಂದ ಕೂಡಿದ್ದು ಸಿನಿಪ್ರೇಕ್ಷಕರು ಈ ಚಿತ್ರವನ್ನು ಮೆಚ್ಚಿ ಕೊಂಡಾಡಲಿದ್ದಾರೆ ಎಂದಿದ್ದಾರೆ. ನವೆಂಬರ್ 10ರ 'ಗರಡಿ ಕಮಾಲ್‌'ಗೆ ಕಾಯಲಾಗುತ್ತಿದೆ.  

Latest Videos
Follow Us:
Download App:
  • android
  • ios