'ನಾನು ನಂದಿನಿ, ಬೆಂಗ್ಳೂರು ಬಂದೀನಿ' ಸಾಂಗ್ ಹಾಡಿದ ಸಿಹಿ, ಮುದ್ದು ಪುಟಾಣಿ ವಿಡಿಯೋ ಸಖತ್ ಕ್ಯೂಟು!

ನಾನು ನಂದಿನಿ ಬೆಂಗ್ಳೂರು ಬಂದೀನಿ...' ಹಾಡು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಸದ್ಯ ಸೀತಾರಾಮ ಧಾರಾವಾಹಿಯ ಎಲ್ಲರ ನೆಚ್ಚಿನ ಸಿಹಿ ಈ ಹಾಡನ್ನು ಮುದ್ದಾಗಿ ಹಾಡಿದ್ದು, ವಿಡಿಯೋ ವೈರಲ್ ಆಗಿದೆ.

Seetharama serial child actor Sihi sings viral song Nanu Nandini, Rithu singh Cute video viral Vin

ನಾನು ನಂದಿನಿ ಬೆಂಗ್ಳೂರು ಬಂದೀನಿ...' ಹಾಡು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಎಲ್ಲಿ ನೋಡಿದ್ರಲ್ಲಿ ಇದೇ ಹಾಡಿನ ಗುಂಗು. ಜನರು ಇದೇ ಸಾಂಗ್ ಬಳಿಸಿ ವಿಡಿಯೋವನ್ನು ಸಹ ಪೋಸ್ಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಹೋದಲ್ಲಿ ಬಂದಲ್ಲಿ ಇದೇ ಹಾಡನ್ನು ಗುನುಗುತ್ತಿದ್ದಾರೆ. ಸದ್ಯ ಸೀತಾರಾಮ ಧಾರಾವಾಹಿಯ ಎಲ್ಲರ ನೆಚ್ಚಿನ ಸಿಹಿ ಈ ಹಾಡನ್ನು ಮುದ್ದಾಗಿ ಹಾಡಿದ್ದು, ವಿಡಿಯೋ ವೈರಲ್ ಆಗಿದೆ.

ಬೆಂಗಳೂರಿಗೆ ದೂರದ ಹಳ್ಳಿಯಿಂದ ಬಂದು ಪಿಜಿಯಲ್ಲಿ ಉಳಿಯುವ ಹೆಣ್ಣು  ಮಕ್ಕಳು ವಾಸ್ತವ ಚಿತ್ರಣ ಹೇಗಿರುತ್ತೆ? ಪಿಜಿಯಲ್ಲಿ ಆಹಾರ ಸರಿ ಇಲ್ಲದೆ, ಕನ್ನಡ ಮೀಡಿಯಂನಲ್ಲಿ ಓದಿದ ಕಾರಣಕ್ಕೆ ಇಂಗ್ಲೀಷ್ ಬಾರದೇ ಏನೆಲ್ಲಾ ಹೇಗೆಲ್ಲಾ ಗೋಳಾಡುತ್ತಾರೆ ಎಂಬುದನ್ನು ಹಾಡೊಂದು ತೆರೆದಿಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ಸಖತ್ ವೈರಲ್ ಆಗಿದೆ. ಅದುವೇ 'ನಾನು ನಂದಿನಿ ಬೆಂಗ್ಳೂರು ಬಂದೀನಿ...' ಹಾಡು. 'ನಾನು ನಂದಿನಿ ಬೆಂಗ್ಳೂರು ಬಂದೀನಿ...' ಹಾಡು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಎಲ್ಲಿ ನೋಡಿದ್ರಲ್ಲಿ ಇದೇ ಹಾಡಿನ ಗುಂಗು. ಜನರು ಇದೇ ಸಾಂಗ್ ಬಳಿಸಿ ವಿಡಿಯೋವನ್ನು ಸಹ ಪೋಸ್ಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಹೋದಲ್ಲಿ ಬಂದಲ್ಲಿ ಇದೇ ಹಾಡನ್ನು ಗುನುಗುತ್ತಿದ್ದಾರೆ. ಸದ್ಯ ಸೀತಾರಾಮ ಧಾರಾವಾಹಿಯ ಎಲ್ಲರ ನೆಚ್ಚಿನ ಸಿಹಿ ಈ ಹಾಡನ್ನು ಮುದ್ದಾಗಿ ಹಾಡಿದ್ದು, ವಿಡಿಯೋ ವೈರಲ್ ಆಗಿದೆ.

ಅಮೃತಧಾರೆ-ಸೀತಾರಾಮ ಸಮ್ಮಿಲನ: ಗೌತಮ್‌, ಭೂಮಿಕಾ ಮದ್ವೆಗೆ ಎಂಟ್ರಿ ಕೊಟ್ಟ ಸೀತಾ, ಸಿಹಿ!

ಕಾರೊಂದರಲ್ಲಿ ಸೀತಾರಾಮ ಸೀರಿಯಲ್ ಟೀ ಜೊತೆ ಪ್ರಯಾಣಿಸುತ್ತಿರುವ ಸಿಹಿಗೆ, ಸೀತಾ ಪಾತ್ರದಲ್ಲಿ ಅಭಿನಯಿಸುವ ವೈಷ್ಣವಿ ಗೌಡ, ನಂದಿನಿ ಹಾಡನ್ನು ಹಾಡುವಂತೆ ಹೇಳುತ್ತಾರೆ. ಈ ಸಂದರ್ಭದಲ್ಲಿ ಸಿಹಿ ಮುದ್ದು ಮುದ್ದಾಗಿ 'ನಾನು ನಂದಿನಿ, ಬೆಂಗಳೂರು ಬಂದೀನಿ' ಹಾಡನ್ನು ಹಾಡುತ್ತಾಳೆ. ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ನೆಟ್ಟಿಗರು ಸಹ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕ್ಯೂಟ್ ಸಿಹಿ, ಮುದ್ದು, ಸೂಪರ್ ಎಂದೆಲ್ಲಾ ಕಾಮೆಂಟ್ ಮಾಡಿ ಹಾರ್ಟ್ ಎಮೋಜಿಗಳನ್ನು ಕಳುಹಿಸಿ ಕೊಟ್ಟಿದ್ದಾರೆ.

ಕೆಲ ದಿನಗಳ ಹಿಂದೆ ಕನ್ನಡತಿ ಧಾರಾವಾಹಿಯಲ್ಲಿ ವರೂಧಿನಿಯಾಗಿ ಮಿಂಚಿದ್ದ ಸಾರಾ ಅಣ್ಣಯ್ಯ ನಾನು ನಂದಿನಿ ಹಾಡಿಗೆ ತಮ್ಮ ಅಮೃತಧಾರೆ ಸೀರಿಯಲ್‌ ಟೀಮ್ ಜೊತೆ ಸ್ಟೆಪ್ಸ್ ಹಾಕಿದ್ದರು. ಸಾರಾ ಅಣ್ಣಯ್ಯ, ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ದಿವಾನ್ ತಂಗಿ ಮಹಿಮಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದೇ ಸೀರಿಯಲ್ ಟೀಮ್ ಜೊತೆ ನಾನು ನಂದಿನಿ ರೀಲ್ಸ್ ಮಾಡಿದ್ದಾರೆ. ಜೊತೆಯಲ್ಲಿ ಸೀರಿಯನ್‌ನಲ್ಲಿ ಅಭನಯಿಸುತ್ತಿರುವ ಶಶಿ ಹೆಗ್ಡೆ ಹಾಗೂ ಕರಣ್ ಕೆ.ಆರ್ ಕೂಡಾ ಕಾಣಿಸಿಕೊಂಡಿದ್ದಾರೆ.

Seetharama: ಲೈಫಲ್ಲಿ ಏನೂ ಇಲ್ಲದಿದ್ದಾಗ ಬದುಕೋದನ್ನ ಕಲೀಬೇಕು! : ಬದುಕಿದ ಪಾಠ ಕಲಿಸಿದ ಸೀತಾ

ನಂದಿನಿ ಹಾಡು ಟ್ರೋಲರ್ಸ್ ಹಾಗೂ ಮೀಮ್ಸ್ ಮಾಡುವವರಿಗೆ ಸಕ್ಕತ್ ಮಜಾ ಕೊಟ್ಟಿವೆ. 'ನಾನು ನಂದಿನಿ' ಹಾಡಿನ ನಾಗವಲ್ಲಿ ವರ್ಷನ್ ಸಹ ಇತ್ತೀಚಿಗೆ ಸಖತ್ ವೈರಲ್ ಆಗಿತ್ತು. ನೋಡು ನೋಡು ನಂದಿನಿ ನಾಗವಲ್ಲಿಯಾಗಿ ಹೇಗೆ ಬದಲಾಗುತ್ತಿದ್ದಾಳೆ ಎಂದು ಟ್ರೋಲ್ ಮೀಮ್ಸ್‌ಗಳನ್ನು ಮಾಡಿದ್ದರು. ಅವಿನಾಶ್ ಯಾರು ನೀನು ಎಂದು ಕೇಳುವ ಡೈಲಾಂಗ್‌ನೊಂದಿಗೆ 'ನಾನು ನಂದಿನಿ' ಹಾಡನ್ನು ಸಿಂಕ್ ಮಾಡಲಾಗಿತ್ತು. 

'ನಾನು ನಂದಿನಿ' ಹಾಡು ಬೆಂಗಳೂರಿಗೆ ದೂರದ ಹಳ್ಳಿಯಿಂದ ಬಂದು ಪಿಜಿಯಲ್ಲಿ (Paying guest) ಉಳಿಯುವ ಹೆಣ್ಣು  ಮಕ್ಕಳು ವಾಸ್ತವ ಚಿತ್ರಣ ಹೇಗಿರುತ್ತೆ? ಪಿಜಿಯಲ್ಲಿ ಆಹಾರ ಸರಿ ಇಲ್ಲದೆ, ಕನ್ನಡ ಮೀಡಿಯಂನಲ್ಲಿ ಓದಿದ ಕಾರಣಕ್ಕೆ ಇಂಗ್ಲೀಷ್ ಬಾರದೇ ಏನೆಲ್ಲಾ ಹೇಗೆಲ್ಲಾ ಗೋಳಾಡುತ್ತಾರೆ ಎಂಬುದನ್ನು ತಿಳಿಸುತ್ತದೆ. ಈ ಹಾಡನ್ನು ಕ್ರಿಯೇಟ್ ಮಾಡಿದವರು ವಿಕಿಪಿಡಿಯಾ ಖ್ಯಾತಿಯ ವಿಕ್ಕಿ (vicky)ಎಂಬವವರು. 

Latest Videos
Follow Us:
Download App:
  • android
  • ios