Asianet Suvarna News Asianet Suvarna News

ರಾಜಮೌಳಿ ಹೊಸ ಸಿನಿಮಾ ಘೋಷಣೆ; ಇದು ಅಂತಿಂಥ ಸಿನಿಮಾ ಅಲ್ಲ!

'ಕಥೆ ಕೇಳಿ ನಾನು ತುಂಬಾ ಎಮೋಶನಲ್ ಆದೆ. ಇಂತಹ ಕಂಟೆಂಟ್ ಹೊಂದಿರುವ ಚಿತ್ರವನ್ನು ಮಾಡುವುದು ತುಂಬಾ ಚಾಲೆಂಜಿಂಗ್ ಆಗಿದೆ. ಇದು ಸಾಧ್ಯವೇ ಎಂದು ನಾನು ಯೋಚಿಸುತ್ತಿದ್ದೆ. ಆದರೆ ಇದಕ್ಕೆ ನಮ್ಮ ಹುಡುಗರು ಸಿದ್ಧರಾಗಿ ನಿಂತಿದ್ದಾರೆ.' ಎಂದಿದ್ದಾರೆ ರಾಜಮೌಳಿ. 

Rrr director ss rajamouli announces new project made in India srb
Author
First Published Sep 20, 2023, 11:31 AM IST

ಭಾರತೀಯ ಚಿತ್ರರಂಗದ ಜಗತ್ಪ್ರಸಿದ್ಧ ನಿರ್ದೇಶಕ ಎಸ್ಎಸ್ ರಾಜಮೌಳಿ ಹೊಸ ಚಿತ್ರವೊಂದನ್ನು ಘೋಷಿಸಿದ್ದಾರೆ. ಅದು ಅಂತಿಂಥ ಚಿತ್ರವಲ್ಲ.  ಇನ್ನೂ ಯಾರೂ ಕೂಡ ಮಾಡಿರದಂಥ ಚಿತ್ರ ಮಾಡಲು ಹೊರಟಿದ್ದಾರೆ 'ಜಕ್ಕಣ್ಣ' ಖ್ಯಾತಿಯ ರಾಜಮೌಳಿ. 'ಆರ್‌ಆರ್‌ಆರ್ (RRR)'ಸಿನಿಮಾ ಸಕ್ಸಸ್ ಬಳಿಕ ರಾಜಮೌಳಿ ತೆಲುಗು ಪ್ರಿನ್ಸ್ ಮಹೇಶ್ ಬಾಬು ಸಿನಿಮಾ ಕೈಗೆತ್ತಿಕೊಳ್ಳಬೇಕಿತ್ತು. ಆದರೆ ಅದು ತಕ್ಷಣಕ್ಕೆ ಸಾಧ್ಯವಿಲ್ಲ. 

ಸೂಪರ್ ಸ್ಟಾರ್ ಮಹೇಶ್ ಬಾಬು ತಮ್ಮ 'ಗುಂಟೂರು ಖಾರಂ' ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ಈ ಕಾರಣಕ್ಕೆ ಮಹೇಶ್ ಬಾಬು ಸಿನಿಮಾ ಕೆಲಸ ಶುರುವಾಗುವ ಮೊದಲು ರಾಜಮೌಳಿಯವರಿಗೆ ಸ್ವಲ್ಪ ಗ್ಯಾಪ್ ಸಿಗಲಿದೆ. ಈ ಸಮಯದಲ್ಲಿ ಹೊಸ ಸಿನಿಮಾ ನಿರ್ಮಾಣ ಮಾಡುವ ಯೋಜನೆ ಹಾಕಿಕೊಂಡಿರುವ ರಾಜಮೌಳಿ, ಈ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಸಹಜವಾಗಿಯೇ ಜಗತ್ತಿನಾದ್ಯಂತ ಸಿನಿಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. 

ಭಾರತದ ಈ ನಿರ್ದೇಶಕ ಮುಟ್ಟಿದ್ದೆಲ್ಲಾ ಚಿನ್ನ; ನಂ.1 ಸ್ಥಾನದಲ್ಲಿರೋ ಆ ಯಂಗ್ ಡೈರೆಕ್ಟರ್‌ ಯಾರು?

ಹೌದು, ಹೊಚ್ಚ ಹೊಸ ಬಗೆಯ ಸಿನಿಮಾ ನಿರ್ಮಾಣ ಮಾಡಲು ಸಂಕಲ್ಪ ತೊಟ್ಟಿದ್ದಾರೆ ರಾಜಮೌಳಿ. 'ಸಿನಿಮಾ' ಬಗ್ಗೆಯೇ ಸಿನಿಮಾ ಮಾಡಲಿದ್ದಾರೆ ರಾಜಮೌಳಿ. ಭಾರತೀಯ ಚಿತ್ರರಂಗ ಬೆಳೆದು ಬಂದ ದಾರಿಯ ಬಗ್ಗೆ ಸಿನಿಮಾ ಮಾಡಲು ಹೊರಟಿರುವ ಅವರು, ವಾಸ್ತವಿಕ ವಿಷಯ ಕೈಗೆತ್ತಿಕೊಂಡಿದ್ದಾರೆ. ಭಾರತೀಯ ಸಿನಿಮಾ ಇತಿಹಾಸ ಮತ್ತು ಬೆಳವಣಿಗೆ, ಏಳು-ಬೀಳುಗಳ ಚಿತ್ರಣ ಈ ಚಿತ್ರದಲ್ಲಿ ಇರಲಾಗಿದೆ ಎನ್ನಲಾಗುತ್ತಿದೆ. ಆದರೆ, ರಾಜಮೌಳಿ ಈ ಹಂತದಲ್ಲಿ ತಮ್ಮ ಸಿನಿಮಾದ ಎಲ್ಲ ಸೀಕ್ರೆಟ್‌ ರಿವೀಲ್ ಮಾಡಲು ಅಸಾಧ್ಯ. 

ಹೊರಬಂದಿರುವ ಮಾಹಿತಿ ಹೊರತಾಗಿಯೂ ಬಹಳಷ್ಟು ಸಂಗತಿಗಳು  ಅವರ ಚಿತ್ರದಲ್ಲಿ ಇರಲಿವೆ. ಸಿನಿಪಂಡಿತರು ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಅವರು ತಮ್ಮ ಮುಂಬರುವ ಚಿತ್ರವನ್ನು ಖಂಡಿತವಾಗಿಯೂ ಕಟ್ಟಿಕೊಡಲಿದ್ದಾರೆ ಎನ್ನಬಹುದು. ರಾಜಮೌಳಿ ಸಿನಿಮಾ ಜರ್ನಿಯನ್ನು ಬಲ್ಲವರಿಗೆ ಈ ಬಗ್ಗೆ ಯಾವ ಸಾಕ್ಷಿಯ ಅಗತ್ಯವೂ ಇಲ್ಲ. 

ವರುಣ್ ಗುಪ್ತ ಜತೆ ಸೇರಿ ರಾಜಮೌಳಿ ಮಗ ಕಾರ್ತಿಕೇಯ ಈ ಚಿತ್ರದ ನಿರ್ಮಾಣಕ್ಕೆ ಕೈಹಾಕಿದ್ದಾರೆ.  'ಮೇಡ್ ಇನ್ ಇಂಡಿಯಾ' ಸ್ಲೋಗನ್ ಮೂಲಕ ಟೀಸರ್ ರಿಲೀಸ್ ಮಾಡಿದೆ ರಾಜಮೌಳಿ ಟೀಮ್. ಚಿತ್ರಕ್ಕೆ 'ಬರ್ತ್ ಅಂಡ್ ರೈಸ್ ಆಫ್ ಇಂಡಿಯನ್ ಸಿನಿಮಾ' ಹೆಸರನ್ನು ಫೈನಲ್ ಮಾಡಲಾಗಿದೆ. 

ಪ್ರಭಾಸ್ ಸಿನಿಮಾಗೆ ‘ಕಲ್ಕಿ 2898-ಎಡಿ’ ಟೈಟಲ್ ಫಿಕ್ಸ್: ಟೀಸರ್ ನೋಡಿ ಪ್ರಶ್ನೆ ಕೇಳಿದ ರಾಜಮೌಳಿ

ನಿತಿನ್ ಕಕ್ಕರ್ ಮುಂಬರುವ ಈ ಚಿತ್ರವನ್ನು ನಿರ್ದೇಶಿಸಲಿದ್ದು, ಪಾತ್ರವರ್ಗ ಹಾಗೂ ತಂತ್ರಜ್ಞಾರು ಯಾರೆಲ್ಲ ಇರಲಿದ್ದಾರೆ ಎಂಬ ಕುತೂಹಲ ಮನೆಮಾಡಿದೆ. 'ಕಥೆ ಕೇಳಿ ನಾನು ತುಂಬಾ ಎಮೋಶನಲ್ ಆದೆ. ಇಂತಹ ಕಂಟೆಂಟ್ ಹೊಂದಿರುವ ಚಿತ್ರವನ್ನು ಮಾಡುವುದು ತುಂಬಾ ಚಾಲೆಂಜಿಂಗ್ ಆಗಿದೆ. ಇದು ಸಾಧ್ಯವೇ ಎಂದು ನಾನು ಯೋಚಿಸುತ್ತಿದ್ದೆ. ಆದರೆ ಇದಕ್ಕೆ ನಮ್ಮ ಹುಡುಗರು ಸಿದ್ಧರಾಗಿ ನಿಂತಿದ್ದಾರೆ. ಆದ್ದರಿಂದ ಘೋಷಣೆ ಹೊರಬಿದ್ದಿದೆ' ಎಂದಿದ್ದಾರೆ ರಾಜಮೌಳಿ. 

Follow Us:
Download App:
  • android
  • ios