ಯೋಗರಾಜ್‌ ಭಟ್‌ ನಿರ್ದೇಶನ, ಗಣೇಶ್‌ ನಟನೆಯ ‘ಗಾಳಿಪಟ 2’ ಸಿನಿಮಾ ಆ.12ರಂದು ರಾಜ್ಯ, ಹೊರರಾಜ್ಯ, ಹೊರದೇಶಗಳಲ್ಲೂ ಪ್ರದರ್ಶನ ಕಾಣಲಿದೆ. ರಮೇಶ್‌ ರೆಡ್ಡಿ ಚಿತ್ರದ ನಿರ್ಮಾಪಕರು.

ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಮತ್ತು ನಿರ್ದೇಶಕ ಯೋಗರಾಜ್‌ ಭಟ್‌ (Yograj Bhat) ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ 'ಗಾಳಿಪಟ 2' (Gaalipata 2) ಚಿತ್ರ 2022ರ ಆಗಸ್ಟ್ 12ರಂದು ರಾಜ್ಯ, ಹೊರರಾಜ್ಯ, ಹೊರದೇಶಗಳಲ್ಲೂ ಪ್ರದರ್ಶನ ಕಾಣಲಿದೆ. ಈ ಕುರಿತು ಯೋಗರಾಜ್‌ ಭಟ್‌ ತಮ್ಮ ಫೇಸ್‌ಬುಕ್‌ (Facebook) ಖಾತೆಯಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದು, ‘ಒಂದಿಷ್ಟು ಮೊಹಬ್ಬತ್ ಜೊತೆಗೆ ಮತ್ತೊಂದಷ್ಟು ಸ್ನೇಹವನ್ನು ಹೊತ್ತು ಇದೇ ಆಗಸ್ಟ್ 12ರಂದು ನಿಮ್ಮ ಮುಂದೆ ಬರ್ತಿದ್ದೀವಿ. 

ಅದೇ ಹಳೆಯ ಅಕ್ಕರೆ ಮತ್ತು ಪ್ರೀತಿಯನ್ನು ಬಯಸುವ ಗಾಳಿಪಟ 2 ಚಿತ್ರತಂಡ‘ ಎಂದು ಬರೆದುಕೊಂಡಿದ್ದಾರೆ. ಇನ್ನು, ನಟ ಗಣೇಶ್ ಸಹ ಸೋಶಿಯಲ್ ಮೀಡಿಯಾದಲ್ಲಿ (Social Media) ಈ ಕುರಿತು ಟ್ವೀಟ್ (Tweet) ಮಾಡಿದ್ದು, ಗೆಟ್ ರೆಡಿ ಟು ಫ್ಲೈ ಆನ್ ಆಗಸ್ಟ್ 12. ಮಾರ್ಕ್ ದ ಡೇಟ್ ಎಂದು ಹೇಳಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್‌ ಹಾಗೂ ಗಣೇಶ್‌ ಕಾಂಬಿನೇಶನ್‌ನಲ್ಲಿ ಮೂಡಿಬಂದಿದ್ದ ‘ಗಾಳಿಪಟ’ ಚಿತ್ರ ಸೂಪರ್ ಹಿಟ್‌ ಆಗಿತ್ತು. ಈಗ ಮತ್ತದೇ ಜೋಡಿ ಮತ್ತೂಮ್ಮೆ 'ಗಾಳಿಪಟ-2' ಚಿತ್ರವನ್ನು ಸಿದ್ಧಗೊಳಿಸಿದ್ದಾರೆ. ಹೀಗಾಗಿ ಇವರಿಬ್ಬರ ಮೇಲೆ ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆಯಿದೆ. 

ಪ್ರಸ್ತುತ ಕಾಲಕ್ಕೆ ಬೇಕಾದ ಉತ್ತಮ ಸಿನಿಮಾ ಗಾಳಿಪಟ 2: ಅನಂತನಾಗ್‌

ಅಲ್ಲದೇ ಈಗಾಗಲೇ ಬಿಡುಗಡೆಯಾಗಿರುವ ಎಕ್ಸಾಂ ಲಿರಿಕಲ್ ವಿಡಿಯೋ ಸಾಂಗ್ ಸಖತ್ ಸದ್ದು ಮಾಡುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. 'ಗಾಳಿಪಟ 2' ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕನ್ನು ಜೀ ಕನ್ನಡ (Zee Kannada) ಮತ್ತು ಜೀ5 (Zee5) ಭಾರೀ ಮೊತ್ತಕ್ಕೆ ಖರೀದಿಸಿವೆ. ಮಾತ್ರವಲ್ಲದೇ ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋ ಸಂಸ್ಥೆ (Anand Audio) ಪಡೆದುಕೊಂಡಿದೆ. ಈ ವಿಷಯವನ್ನು 'ಗಾಳಿಪಟ 2' ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ ಅವರೇ ಖಚಿತಪಡಿಸಿದ್ದಾರೆ. 

ಇದೆಲ್ಲದಿರಿಂದ ಬರೋಬ್ಬರಿ 8 ಕೋಟಿ ರೂಪಾಯಿಗೂ ಹೆಚ್ಚು ಹಣ ನಿರ್ಮಾಪಕರ ಖಾತೆ ಸೇರಿದ್ದು, ಸಖತ್ ಖುಷಿಯಾಗಿದ್ದಾರೆ. 'ಗಾಳಿಪಟ 2' ಚಿತ್ರದಲ್ಲಿ ಗೋಲ್ಡನ್‌ ಸ್ಟಾರ್ ಗಣೇಶ್, ದೂದ್ ಪೇಡ ದಿಗಂತ್ (Diganth) ಹಾಗೂ ನಿರ್ದೇಶಕ ಪವನ್ ಕುಮಾರ್ (Pavan Kumar) ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು 'ಗಾಳಿಪಟ' ಚಿತ್ರದಲ್ಲಿ ನಟಿಸಿದ್ದ ರಾಜೇಶ್ ಕೃಷ್ಣನ್ ಬದಲು 'ಲೂಸಿಯ' ನಿರ್ದೇಶಕ ಪವನ್ ಕುಮಾರ್ ಅಭಿನಯಿಸುತ್ತಿದ್ದಾರೆ. ನಿರ್ದೇಶಕ ಪವನ್ ಕುಮಾರ್ ಈ ಹಿಂದೆ ಯೋಗರಾಜ್ ಭಟ್ಟರ 'ಮನಸಾರೆ' ಮತ್ತು 'ಪಂಚರಂಗಿ' ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಶೆಡ್ಯೂಲ್‌ ಇಲ್ಲದೆ 2008ರಲ್ಲಿ ಗಾಳಿಪಟ ಒಪ್ಪಿರಲಿಲ್ಲ, ಈಗ ಭಾಗ 2 ಮಾಡುವುದಕ್ಕೆ ಖುಷಿ ಇದೆ: ಶರ್ಮಿಳಾ ಮಾಂಡ್ರೆ

ಚಿತ್ರದ ನಾಯಕಿಯರಾಗಿ ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ ಕಾಣಿಸಿಕೊಂಡಿದ್ದಾರೆ. ಇನ್ನು 'ಗಾಳಿಪಟ 2' ಚಿತ್ರದಲ್ಲಿ ಗಣೇಶ್‌ ಅವರ ಪುತ್ರ ವಿಹಾನ್‌ (Vihaan) ಸಹ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಈ ಸಿನಿಮಾದಲ್ಲಿ ಹಿರಿಯ ನಟ ಅನಂತ್ ನಾಗ್ (Anant Nag) ಅವರು ಕನ್ನಡ ಮೇಷ್ಟ್ರು ಪಾತ್ರದಲ್ಲಿ ನಟಿಸಿದ್ದಾರೆ. ಸಂತೋಷ್‌ ರೈ ಪಾತಾಜೆ ಸಿನಿಮಾಟೋಗ್ರಫಿಯಿರುವ ಈ ಚಿತ್ರದಲ್ಲಿ ಪದ್ಮಜಾ ರಾವ್‌, ಸುಧಾ​ ಬೆ​ಳ​ವಾಡಿ, ರಂಗಾ​ಯಣ ರಘು ಸೇರಿದಂತೆ ಮುಂತಾದವರು ನಟಿಸುತ್ತಿದ್ದಾರೆ. ರಮೇಶ್‌ ರೆಡ್ಡಿ ಚಿತ್ರದ ನಿರ್ಮಾಪಕರು.