ತಂದೆಯ ಪುಟ್ಟ ರಾಜಕುಮಾರಿ; ವಿಶೇಷ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್
ತಂದೆ ಹುಟ್ಟುಹಬ್ಬ ಆಚರಿಸಿದ ರಾಧಿಕಾ ಪಂಡಿತ್. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಕ್ಯೂಟ್ ಫೋಟೋ....

ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ತಂದೆ ಕೃಷ್ಣ ಪ್ರಸಾದ್ ಹುಟ್ಟುಹಬ್ಬದ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಅಪರೋಪದ ಫೋಟೋ ಹಂಚಿಕೊಂಡು ವಿಶೇಷದ ಸಾಲುಗಳನ್ನು ಬರೆದುಕೊಂಡಿದ್ದಾರೆ. ಫೋಟೋ ನೋಡಿದರೆ ಇದು ಇತ್ತೀಚಿನ ಪ್ರವಾಸದ್ದು ಎನ್ನಬಹುದು. ರಾಧು ಮತ್ತು ಡ್ಯಾಡಿ ತುಂಬಾ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ....
ರಾಧಿಕಾ ಪೋಸ್ಟ್:
'ಸದಾ ತಂದೆಯ ರಾಜಕುಮಾರ್. ಪಪ್ಪ'ಸ್ ಪುಟ್ಟ ಹುಡುಗಿ ಫಾರೆವರ್. ಹ್ಯಾಪಿ ಬರ್ತಡೇ ಪಪ್ಪಾ..' ಎಂದು ರಾಧಿಕಾ ಬರೆದುಕೊಂಡಿದ್ದಾರೆ. ಬ್ರೌನ್ ಬಣ್ಣದ ಮಾಡ್ರನ್ ಔಟ್‌ಫಿಟ್‌ನಲ್ಲಿ ರಾಧಿಕಾ ಹಾಗೂ ಬ್ಲ್ಯಾಕ್ ಆಂಡ್ ಬ್ಲ್ಯಾಕ್ ಔಟ್‌ಫಿಟ್‌ನಲ್ಲಿ ಕೃಷ್ಣ ಪ್ರಸಾದ್ ಮಿಂಚಿದ್ದಾರೆ. 'ರಾಧಿಕಾ ನೀವು ತಂದೆ ಲಿಟಲ್ ರಾಜಕುಮಾರಿ ಅಲ್ಲ ತಂದೆ ಅವರು ಪುಟ್ಟ ಲಕ್ಷ್ಮಿ, ಭಗವಂತ ಶಿವ (ಯಶ್) ಅವರ ಪ್ರೀತಿಯ ಪಾರ್ವತಿ' ಎಂದು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ರಾಧಿಕಾ ಪಂಡಿತ್ ವೃತ್ತಿ ಜೀವನ ಆರಂಭಿಸಿದ ಕ್ಷಣದಿಂದಲೂ ಜೊತೆಗೆ ನಿಂತು ಸಿನಿಮಾ ರಂಗದಲ್ಲಿ ಪ್ರೋತ್ಸಾಹ ನೀಡಿದ್ದು ಅವರ ತಂದೆ ಕೃಷ್ಣ ಪ್ರಸಾದ್. ಸಿನಿಮಾ ಪ್ರಮೋಷನ್, ಖಾಸಗಿ ಕಾರ್ಯಕ್ರಮ ಹಾಗೂ ಶುಭಾ ಸಮಾರಂಭಗಳಲ್ಲಿ ರಾಧಿಕಾ ಸದಾ ತಂದೆ-ತಾಯಿ ಜೊತೆಗಿರುವುದನ್ನು ನೋಡಬಹುದು. ಕೆಲವು ದಿನಗಳ ಹಿಂದೆ ತಂದೆ ಜೊತೆ ಕಾಲೇಜ್‌ಗೆ ಹೋಗುತ್ತಿದ್ದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
ತೋಟದ ಮನೆಯಲ್ಲಿ ಯಶ್ ಸಂಕ್ರಾಂತಿ; ಟ್ರ್ಯಾಕ್ಟರ್ ರೈಡ್ ಎಂಜಾಯ್ ಮಾಡಿದ ರಾಧಿಕಾ ಪಂಡಿತ್
ಮಕ್ಕಳಾದ ಐರಾ ಮತ್ತು ಅಥರ್ವ್ ಜೊತೆ ತಂದೆಯ ದ್ವಿಚಕ್ರ ವಾಹನದಲ್ಲಿ ಕುಳಿತುಕೊಂಡು ಹಳೆ ನೆನಪುಗಳನ್ನು ಹಂಚಿಕೊಂಡಿದ್ದರು. 'Lets Vrooooommm...ವೀಕೆಂಡ್ ಆರಂಭಿಸೋಣ. ಒಂದು ಸ್ಕೂಟರ್ ಮೇಲೆ ನಾವು ಫುಲ್ ಹೌಸ್ ಇದ್ದೀವಿ. ನಾವು ಫೋಟೋಗೆ ಮಾತ್ರ ಪೋಸ್ ಕೊಡುತ್ತಿರುವುದು ಹೀಗಾಗಿ ಹೆಲ್ಮೆಟ್ ಧರಿಸಿಲ್ಲ. ದ್ವಿಚಕ್ರವಾಹನ ಓಡಿಸುವವರು ತಪ್ಪದೆ ಹೆಲ್ಮೆಟ್ ಧರಿಸಿ. ಈ ಪ್ರಪಂಚದಲ್ಲಿರುವ ಸೇಫೆಸ್ಟ್ ಡ್ರೈವರ್ ಅಂದ್ರೆ ನನ್ನ ತಂದೆ. ಅವರು ಗಾಡಿ ಓಡಿಸುವಾಗ ನಾನು ನಂಬಿಕೆ ಇಟ್ಟು ನೆಮ್ಮದಿಯಾಗಿ ನಿದ್ರೆ ಮಾಡಬಹುದು ಅಷ್ಟು ಸೇಫ್. ಸ್ಕೂಲ್‌ಯಿಂದ ಹಿಡಿದು ಕಾಲೇಜ್‌ವರೆಗೂ ಅಷ್ಟೇ ಅಲ್ಲ ನನ್ನ ಇಡೀ ಜೀವನ ನನ್ನ ತಂದೆ ನನ್ನನ್ನು ಪಿಕ್ ಆಂಡ್ ಡ್ರಾಪ್ ಮಾಡಿದ್ದಾರೆ. ಕ್ಲಾಸ್‌ನ ಬಂಕ್ ಮಾಡಿದಾಗಲೂ ನನ್ನನ್ನು ಕರೆದುಕೊಂಡು ಹೋಗಿದ್ದಾರೆ' ಎಂದು ರಾಧಿಕಾ ಬರೆದುಕೊಂಡಿದ್ದಾರೆ.
ಫೋಟೋದಲ್ಲಿ ಬಿಳಿ ಬಣ್ಣದ ಆಕ್ಟಿವಾ ಮೇಲೆ ನಾಲ್ಕು ಮಂದಿ ಕುಳಿತಿದ್ದಾರೆ. ಗಾಡಿಯನ್ನು ರಾಧಿಕಾ ಪಂಡಿತ್ ತಂದೆ ಓಡಿಸುತ್ತಿದ್ದಾರೆ, ಹಿಂದೆ ರಾಧಿಕಾ ಕುಳಿತುಕೊಂಡಿದ್ದಾರೆ. ಗ್ಯಾಡಿ ಹ್ಯಾಂಡಲ್ ಹಿಡಿದುಕೊಂಡು ಐರಾ ನಿಂತಿದ್ದಾಳೆ, ಅಮ್ಮನ ಮಡಿಲಿನಲ್ಲಿ ಯಥರ್ವ್ ಕುಳಿತಿದ್ದಾನೆ. 'ತಂದೆ ಜೊತೆ ಗಾಡಿಯಲ್ಲಿ ಕುಳಿತುಕೊಳ್ಳುವ ಮಜಾನೇ ಬೇರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ ಮತ್ತೊಬ್ಬರು ಈ ಗಾಡಿ ಗೌರವ್ ಹೆಸರಿನಲ್ಲಿದೆ ಅಂದ್ರೆ ರಾಧಿಕಾ ಅಣ್ಣ' ಎಂದಿದ್ದಾರೆ.
Wow! ಎಲ್ಲೂ ನೋಡಿರದ ಐರಾ- ಯಥರ್ವ್ ತುಂಟಾಟದ ಫೋಟೋಗಳು ವೈರಲ್
ಸಿನಿಮಾ:
ರಾಧಿಕಾ ತಂದೆ ಕೃಷ್ಣ ಪ್ರಸಾದ್ ಕೂಡ ಸಿನಿಮಾದಲ್ಲಿ ನಟಿಸಿದ್ದಾರೆ. ಜಯಣ್ಣ ನಿರ್ಮಾಣದ ಮಿಸ್ಟರ್ ಆಂಡ್ ಮಿಸಸ್ ರಾಮಚಾರಿ ಸಿನಿಮಾದಲ್ಲಿ ಯಶ್ ಮತ್ತು ರಾಧಿಕಾ ಅಭಿನಯಿಸಿದ್ದಾರೆ. ರಾಧಿಕಾ ಸ್ನೇಹಿತೆ ಗೋವಾದಲ್ಲಿ ವಿವಾಹವಾಗುತ್ತಿರುತ್ತಾರೆ ಆ ಸ್ನೇಹಿತೆ ತಂದೆ ಪಾತ್ರದಲ್ಲಿ ಕೃಷ್ಣ ಪ್ರಸಾದ್ ಕಾಣಿಸಿಕೊಂಡಿದ್ದಾರೆ. ಮಗಳನ್ನು ಮುದ್ದಾಗಿ ಸಾಕಿರುವೆ ಏನೇ ತಪ್ಪು ಮಾಡಿದ್ದರು ಕ್ಷಮೆ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಲು ಮನವಿ ಮಾಡುವ ಸಾಲುಗಳನ್ನು ಹೇಳುತ್ತಾರೆ. ಪಾತ್ರ ಚಿಕ್ಕದ್ದಾದರೂ ಹೆಣ್ಣು ಮಕ್ಕಳಿಗೆ ತುಂಬಾನೇ ಇಷ್ಟವಾಗಿದೆ.
ಕೃಷ್ಣ ಪ್ರಸಾದ್ ಅವರು ಮನೆಯಲ್ಲಿ ಸದಾ ಸಂಗೀತ ಕೇಳುತ್ತಾರೆ ಅದರಲ್ಲೂ ಬೀಮ್ ಸೇನ್ ಜೋಶಿ ಅವರ ಫೆವರೆಟ್. ಮನೆಯಲ್ಲಿ ಮೊಮ್ಮಕ್ಕಳನ್ನು ಆಟ ಅಡಿಸುವಾಗ ಹಾಡು ಹೇಳುತ್ತಾರೆ. ತಾತ ಹಾಡನ್ನು ಚೆನ್ನಾಗಿ ಗಮನಿಸಿರುವ ಐರಾ ಪುಟ್ಟ ಮಗುವಿದ್ದಾಗ ತಮ್ಮ ಯಥರ್ವ್‌ನ ಮಲಗಿಸುವಾಗ ತಾತನ ರೀತಿ ಹಾಡುತ್ತಾಳೆ. ಈ ವಿಡಿಯೋವನ್ನು ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ತಾತನನ್ನು ಅನುಕರಿಸುತ್ತಿದ್ದಾಳೆ ಮೊಮ್ಮಗಳು ಎಂದಿದ್ದಾರೆ.