Wow! ಎಲ್ಲೂ ನೋಡಿರದ ಐರಾ- ಯಥರ್ವ್ ತುಂಟಾಟದ ಫೋಟೋಗಳು ವೈರಲ್
ಕನ್ನಡ ಚಿತ್ರರಂಗದ ಸ್ಟಾರ್ ಕಿಡ್ಸ್ ಐರಾ ಮತ್ತು ಯಥರ್ವ್ ತುಂಟಾಟ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಮತ್ತು ಸಿಂಡ್ರೆಲಾ ರಾಧಿಕಾ ಪಂಡಿತ್ ಮುದ್ದು ಮಕ್ಕಳು ಐರಾ ಹಾಗೂ ಯಥರ್ವ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕೆಲವು ದಿನಗಳ ಹಿಂದೆ ನಾಲ್ಕು ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡು ಐರಾ ಮೊದಲು ಸ್ಟಾರ್ ಕಿಡ್ ಸೇರಿದ ಪುಟಾಣಿ. ಅನಂತರ ಮೂರು ವರ್ಷದ ಯಥರ್ವ್ ಎಂಟ್ರಿ ಕೊಟ್ಟಿದ್ದು.
ಐರಾ ಮತ್ತು ಯಥರ್ವ್ ಫೋಟೋ ಮತ್ತು ವಿಡಿಯೋ ನೋಡಿಲ್ಲ ಅಂದ್ರೆ ಅಭಿಮಾನಿಗಳು ರಾಧಿಕಾ ಪಂಡಿತ್‌ಗೆ ಮೆಸೇಜ್ ಮಾಡಿ ಮಕ್ಕಳ ಬಗ್ಗೆ ಅಪ್ಡೇಟ್ ಡಿಮ್ಯಾಂಡ್ ಮಾಡುತ್ತಾರೆ.
ಐರಾ ಮತ್ತು ಯಥರ್ವ್ ತೊದಲು ಮಾತುಗಳು ನೆಟ್ಟಿಗರ ಗಮನ ಸೆಳೆದಿದೆ. ಹಬ್ಬ ಅಥವಾ ಸ್ಪೆಷಲ್ ದಿನಗಳಲ್ಲಿ ರಾಧಿಕಾನೇ ವಿಡಿಯೋ ಹಂಚಿಕೊಳ್ಳುತ್ತಾರೆ. ಬಿಡುವಿದಾಗ ಪ್ರವಾಸ ಮಾಡುತ್ತಾರೆ.
ಯಶ್ ಫ್ಯಾಮಿಲಿ ಅತಿ ಹೆಚ್ಚಾಗಿ ಪ್ರಯಾಣ ಮಾಡುವುದು ಗೋವಾಗಿ. ಕೆಲವು ತಿಂಗಳುಗಳ ಹಿಂದೆ ಮಕ್ಕಳನ್ನು ಕರೆದುಕೊಂಡು ಮಾಲ್ಡೀವ್ಸ್‌ಗೆ ಟ್ರಿಪ್ ಮಾಡಿದ್ದರು. ಈ ವೇಳೆ ರಾಧಿಕಾ ಸಹೋದರನ ಮಕ್ಕಳು ಭಾಗಿಯಾಗಿದ್ದರು.
ಐರಾ ಮತ್ತು ಯಥರ್ವ್ ಸಿನಿಮಾದಲ್ಲಿ ನಟಿಸಬೇಕು ಚಿಕ್ಕವಯಸ್ಸಿಗೆ ಸಿನಿಮಾ ರಂಗ ಪರಿಚಯವಾಗವಬೇಕು ಎಂದು ಅಭಿಮಾನಿಗಳು ಆಶಿಸುತ್ತಾರೆ. ಹೀಗಾಗಿ ಅವರ ಫೋಟೋಗಳಿಗೆ ಕಾಮೆಂಟ್ ಮಾಡುತ್ತಾರೆ.
ಧಾರಾವಾಹಿಯಿಂದ ರಾಧಿಕಾ ಮತ್ತು ಯಶ್ ಜರ್ನಿ ಆರಂಭಿಸಿ ದೊಡ್ಡ ಮಟ್ಟದಲ್ಲಿ ಹೆಸರು ಸಂಪಾದನೆ ಮಾಡಿದ್ದರು ತಮ್ಮ ಹಳೆ ಸ್ನೇಹವನ್ನು ಮರೆತಿಲ್ಲ ಆಗಾಗ ಸ್ನೇಹಿತರ ಜೊತೆ ಹ್ಯಾಂಗ್‌ಔಟ್ ಮಾಡುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.