ಕರ್ನಾಟಕದಲ್ಲಿ ಮಾತ್ರವಲ್ಲ ವರ್ಲ್ಡ್‌ ವೈಡ್‌ ಸಿಕ್ತು ಪವರ್ ಸ್ಟಾರ್ ಚಿತ್ರಕ್ಕೆ ಸಾಥ್. ಟ್ರೈಲರ್‌ ನೋಡಿ ಫಿದಾ ಆದ ಅಭಿಮಾನಿಗಳು....

ಕನ್ನಡ ಚಿತ್ರರಂಗದ ಯುವರತ್ನ, ಮಾಣಿಕ್ಯ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯಿಸಿರುವ ಗಂಧದ ಗುಡಿ ಸಿನಿಮಾದ ಟ್ರೈಲರ್ ಇಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಅಶ್ವಿನಿ ಪುನೀತ್, ರಾಘವೇಂದ್ರ ರಾಜ್‌ಕುಮಾರ್, ಮಂಗಳಮ್ಮ, ಯುವ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್ ಮತ್ತು ಧಿರೇನ್‌ ರಾಮ್‌ಕುಮಾರ್ ಬಿಡುಗಡೆ ಮಾಡಿದ್ದರು. ಆನಂತರ ಪಿಆರ್‌ಕೆ ಯೂಟ್ಯೂಬ್‌ ಚಾನೆಲ್‌ನಲ್ಲಿ ಟ್ರೈಲರ್ ರಿಲೀಸ್ ಮಾಡಿದ್ದಾರೆ. ಅಮೋಘವರ್ಷ ನಿರ್ದೇಶಕದಲ್ಲಿ ಮೂಡಿ ಬಂದಿರುವ ಟ್ರೈಲರ್ ಸೂಪರ್ ಹಿಟ್ ಎನ್ನಬಹುದು. 

ಅಪ್ಪು ಕೊನೆ ಸಿನಿಮಾ ಗಂಧದ ಗುಡಿ ಆಗಿರುವುದರಿಂದ ಕರ್ನಾಟಕದಲ್ಲಿ ಮಾತ್ರವಲ್ಲ ಭಾರತಾದ್ಯಂತ ಸಾಥ್‌ ಸಿಕ್ಕಿದೆ ಹಾಗೂ ಟ್ರೈಲರ್‌ಗೆ ಮೆಚ್ಚಗೆ ವ್ಯಕ್ತವಾಗುತ್ತಿದೆ. ಸಿನಿಮಾ ಸ್ಟಾರ್‌ಗಳು ಮಾತ್ರವಲ್ಲದೆ ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವೀಟ್ ಮಾಡಿದ್ದರು. ಸೆಲೆಬ್ರಿಟಿಗಳು ಟ್ವೀಟ್ ಇಲ್ಲಿದೆ....

ಸುದೀಪ್ ಟ್ವೀಟ್: 

'ಅಪ್ಪುನ ತೆರೆ ಮೇಲೆ ನೋಡುವುದಕ್ಕೆ ಸದಾ ಖುಷಿಯಾಗುತ್ತದೆ. ಗಂಧದ ಗುಡಿಯನ್ನು ಅದ್ಭುತವಾಗಿ ಚಿತ್ರೀಕರಣ ಮಾಡಲಾಗಿದೆ. ಅಶ್ವಿನಿ ಮತ್ತು ಪಿಆರ್‌ಕೆ ತಂಡಕ್ಕೆ ನನ್ನ ಬೆಸ್ಟ್‌ ವಿಶ್'

Gandhada Gudi ಪವರ್‌ಸ್ಟಾರ್ ಟೈಟಲ್‌ ಇಲ್ಲದೆ ಅಪ್ಪು ಆಗಿ ಕಾಣಿಸಿಕೊಂಡಿರುವ ಸಿನಿಮಾ ಇದು:ನಿರ್ದೇಶಕ ಚೇತನ ಕುಮಾರ್‌

ಯಶ್ ಟ್ವೀಟ್:

Scroll to load tweet…

ರಮ್ಯಾ: 

'ಗಂಧದ ಗುಡಿ ಟ್ರೈಲರ್ ಸಖತ್ ಇಷ್ಟ ಆಗಿದೆ' 

Scroll to load tweet…

ವಿಜಯ್ ಕಿರಗಂದೂರು:

ಹೊಂಬಾಳೆ ಫಿಲ್ಮ್ಸ್‌ ನಿರ್ಮಾಪಕರಾದ ವಿಜಯ್ ಕಿರಗಂದೂರು ಅವರು 'ಗಂಧದ ಗುಡಿ ಟ್ರೈಲರ್ ರಿಲೀಸ್ ಸಮಯದಲ್ಲಿ ಪವರ್‌ ಸ್ಟಾರ್ ಅವರನ್ನು ನೆನಪಿಸಿಕೊಳ್ಳುತ್ತೀವಿ. ಅವರ ಕೊನೆ ಸಿನಿಮಾ ನೋಡಿ ನಾವು mesmerise ಆಗುತ್ತೀವಿ'

ಹೇಮಂತ್ ರಾವ್:

'ಈ ಧ್ವನಿಗಳನ್ನು ಕೇಳಿದ ಮೇಲೆ ನನಗೆ ಟ್ರೈಲರ್ ಹೇಗಿದೆ ಎಂದು ವರ್ಣಿಸಲು ಪದಗಳು ಸಾಲುತ್ತಿಲ್ಲ. ಪುನೀತ್ ಸರ್‌ಗೆ ಈ ಸಿನಿಮಾ ಪ್ರಪಂಚವಾಗಿತ್ತು. ಈಗ ದೊಡ್ಡ ಪರದೆ ಮೇಲೆ ಬರುವ ಸಮಯ ಬಂದಿದೆ ನಾವು ಈಗ ಇದನ್ನು ಅಚರಣೆ ಮಾಡಬೇಕು.

ಕಾರ್ತಿಕ್ ಗೌಡ:

'ಪುನೀತ್ ರಾಜ್‌ಕುಮಾರ್‌ ಅವರನ್ನು ಪುನೀತ್ ರಾಜ್‌ಕುಮಾರ್ ಆಗಿ ನೋಡಿ ಅಷ್ಟೆ. A rare occasion in which you can see your star play himself on screen.'

ಡ್ಯಾನಿಶ್ ಸೇಠ್:

'ಗಂಧದ ಗುಡಿ ಟ್ರೈಲರ್ ಅದ್ಭುತವಾಗಿದೆ. ನಿಮಗೆ ಇದಕ್ಕಿಂತ ದೊಡ್ಡ ನಮನ ಮತ್ತೊಂದಿಲ್ಲ ಪುನೀತ್ ಅಣ್ಣ. ಮಣ್ಣಿನ ಮಗ, ಕ್ಯಾಮೆರಾ ಮುಂದೆ ಅವನ ಕೊನೆಯ ಜರ್ನಿ. ಇದು ಅವರ ಮನೆ ಇದು ಅವರ ಕರ್ನಾಟಕ'

ಸಂಯುಕ್ತ ಹೊರನಾಡ್:

'ವಾವ್ ಎಂಥಾ ಟ್ರೈಲರ್, ಅಪ್ಪು ಸರ್ ಮತ್ತು ಪ್ರಕೃತಿ ನಡುವೆ ಇರುವ ಒಂದೊಳ್ಳೆ ಸಂಬಂಧವನ್ನು ತೋರಿಸಲಾಗಿದೆ. ಅಪ್ಪು ಸರ್ ನಿಜವಾದ ಎಲಿಮೆಂಟ್, ಅವರು ಅವರಾಗಿ ನ್ಯಾಚುರಲ್ ಅಗಿ ಅಭಿನಯಿಸಿರುವ ಸಿನಿಮಾ. ಅಕ್ಟೋಬರ್ 28ರಂದು ಇದೊಂದು ಎಪಿಕ್ ಸೃಷ್ಟಿ ಮಾಡಲಿದೆ'

Scroll to load tweet…