ಮಹಿಳಾ ದಿನಾಚರಣೆ ಪ್ರಯುಕ್ತ ಕೆಜಿಎಫ್‌ 2 ಚಿತ್ರದ ಪ್ರಮುಖ ಪೋಸ್ಟರ್‌ ಬಿಡುಗಡೆ ಆಗಿದೆ. ಯಶ್‌ ನಟನೆಯ, ಪ್ರಶಾಂತ್‌ ನೀಲ್‌ ನಿರ್ದೇಶನದ ಈ ಚಿತ್ರದ ಪ್ರಮುಖ ಮಹಿಳಾ ಪಾತ್ರಧಾರಿಗಳನ್ನು ಒಟ್ಟು ಸೇರಿಸಿ ಈ ವಿಶೇಷ ಪೋಸ್ಟರ್‌ ವಿನ್ಯಾಸ ಮಾಡಲಾಗಿದೆ.

ಮಹಿಳಾ ದಿನಾಚರಣೆ ಪ್ರಯುಕ್ತ (International Womens Day) 'ಕೆಜಿಎಫ್‌ 2' (KGF 2) ಚಿತ್ರದ ಪ್ರಮುಖ ಪೋಸ್ಟರ್‌ ಬಿಡುಗಡೆ ಆಗಿದೆ. ಯಶ್‌ ನಟನೆಯ, ಪ್ರಶಾಂತ್‌ ನೀಲ್‌ (Prashanth Neel) ನಿರ್ದೇಶನದ ಈ ಚಿತ್ರದ ಪ್ರಮುಖ ಮಹಿಳಾ ಪಾತ್ರಧಾರಿಗಳನ್ನು ಒಟ್ಟು ಸೇರಿಸಿ ಈ ವಿಶೇಷ ಪೋಸ್ಟರ್‌ (Special Poster) ವಿನ್ಯಾಸ ಮಾಡಲಾಗಿದೆ. ಈ ಪೋಸ್ಟರ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಬಿಡುಗಡೆ ಮಾಡಿರುವ ನಿರ್ದೇಶಕ ಪ್ರಶಾಂತ್‌ ನೀಲ್‌, ‘ನೀವೆಲ್ಲರೂ ಶಕ್ತಿಶಾಲಿಗಳು, ಮಹಿಳಾ ದಿನದ ಶುಭಾಶಯಗಳು’ ಎಂದು ಬರೆದಿದ್ದಾರೆ. ಈ ಪೋಸ್ಟರ್‌ನಲ್ಲಿ ರವೀನಾ ಟಂಡನ್‌, ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಸ್‌, ಮಾಳವಿಕಾ ಅವಿನಾಶ್‌ ಇದ್ದಾರೆ. ವಿಜಯ್‌ ಕಿರಗಂದೂರು ನಿರ್ಮಾಣದ ಈ ಸಿನಿಮಾ ಏಪ್ರಿಲ್‌ 14ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

'ಕೆಜಿಎಫ್​ 2' (KGF 2) ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಏಪ್ರಿಲ್​ 14ರಂದು ಸಿನಿಮಾ ತೆರೆಗೆ ಬರುತ್ತಿದ್ದು, ಮಾರ್ಚ್​ 27ರಂದು ಸಿನಿಮಾದ ಟ್ರೇಲರ್ (Trailer) ರಿಲೀಸ್​ ಮಾಡುವ ಬಗ್ಗೆ ಇತ್ತೀಚೆಗೆ ಚಿತ್ರತಂಡ ಘೋಷಣೆ ಮಾಡಿತ್ತು. ಸದ್ಯ 'ಕೆಜಿಎಫ್' ಚಿತ್ರದ ಮೂಲಕ ನಿರ್ದೇಶಕ ಪ್ರಶಾಂತ್​ ನೀಲ್​ ತಮ್ಮ ಕೆಲಸ ಹೇಗಿರುತ್ತದೆ ಎನ್ನುವುದನ್ನು ಇಡೀ ಜಗತ್ತಿಗೆ ತೋರಿಸಿದ್ದರು. ಮುಖ್ಯವಾಗಿ 'ಕೆಜಿಎಫ್' ಚಿತ್ರದಲ್ಲಿ ಶೂಟಿಂಗ್ ಲೋಕೆಶನ್ (Shooting Spot) ನೋಡಿ ಅಭಿಮಾನಿಗಳು ದಂಗಾಗಿದ್ದರು. ಯಾವುದಾದರೂ ಸಿನಿಮಾ ಇಷ್ಟವಾದರೆ, ಆ ಜಾಗಕ್ಕೆ ನಾವು ಹೋಗಬೇಕು ಎಂದು ಅನಿಸುವುದು ಸಾಮಾನ್ಯ. ಅದರಂತೆ 'ಕೆಜಿಎಫ್' ಚಿತ್ರವನ್ನು ವೀಕ್ಷಿಸಿದವರು ಶೂಟಿಂಗ್ ಲೋಕೆಶನ್​ ನೋಡಿ ಸಖತ್ ಇಂಪ್ರೆಸ್ ಆಗಿದ್ದರು. ಇದೀಗ ಆ ಲೋಕೆಶನ್‍ನನ್ನು ಗೂಗಲ್ ಮ್ಯಾಪ್ (Google Map) ತೋರಿಸುತ್ತಿದೆ.

KGF Chapter 2: ಯಶ್ ಅಭಿಮಾನಿಗಳಿಗೆ ಗುಡ್‌ನ್ಯೂಸ್: 'ಕೆಜಿಎಫ್ 2' ಟ್ರೇಲರ್ ರಿಲೀಸ್ ಡೇಟ್ ಅನೌನ್ಸ್!

ಹೌದು! 'ಕೆಜಿಎಫ್' ಸಿನಿಮಾ​ ಸೃಷ್ಟಿ ಮಾಡಿರುವ ಹೊಸ ದಾಖಲೆಗಳನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಪ್ರಶಾಂತ್​ ನೀಲ್​ ಆ ರೀತಿಯ ಸಿನಿಮಾವನ್ನು ತೆರೆಯ ಮೇಲೆ ಕಟ್ಟಿಕೊಟ್ಟಿದ್ದರು. ಇದೀಗ ಈ ದಾಖಲೆಗೆ ಮತ್ತೊಂದು ಹೊಸ ದಾಖಲೆ ಸೇರಿಕೊಂಡಿದ್ದು, ಅಚ್ಚರಿ ಮೂಡಿಸಿದೆ. ಸಿನಿಮಾದಲ್ಲಿ ಯಾವುದೇ ಸೆಟ್‍ಗಳನ್ನು ಹಾಕಿದರೂ ಅದು ತಾತ್ಕಾಲಿಕವಾಗಿರುತ್ತದೆ. ಸೆಟ್ ಹಾಕಿದ ಮೇಲೆ ಅದನ್ನು ನಿಗದಿತ ಸಮಯದ ಬಳಿಕ ತೆರವು ಮಾಡಲಾಗುತ್ತದೆ. ಆದರೆ 'ಕೆಜಿಎಫ್' ಸೆಟ್ ತೆರವಾದರೂ, ಆ ಜಾಗ ಮಾತ್ರ 'ಕೆಜಿಎಫ್' ಖ್ಯಾತಿಯಿಂದಲೇ ಪ್ರಸಿದ್ಧಿ ಹೊಂದಿದ್ದು, ಗೂಗಲ್​ ಮ್ಯಾಪ್​ನಲ್ಲಿ 'ಕೆಜಿಎಫ್ ಫಿಲ್ಮ್ ಸೆಟ್'​ (KGF Film Set) ಎಂದು ಮರುನಾಮಕರಣಗೊಂಡಿದೆ. 



ಇದನ್ನು ಕಂಡು ಅಭಿಮಾನಿಗಳು (Fans) ಸಖತ್​ ಥ್ರಿಲ್​ ಆಗಿದ್ದಾರೆ. ಇದು ನಮ್ಮ ಕನ್ನಡ ಸಿನಿಮಾಗಳಿಗೆ ಇರುವ ತಾಕತ್ತು ಎಂದು ಫ್ಯಾನ್ಸ್ ಕಮೆಂಟ್​ ಮಾಡುತ್ತಿದ್ದು, ಯಾರೂ ಮಾಡಿರದಂತಹ ಹೊಸ ದಾಖಲೆಯನ್ನು 'ಕೆಜಿಎಫ್'​ ಸಿನಿಮಾ ಮಾಡಿದೆ ಎಂಬುದಕ್ಕೆ ಇದೂ ಕೂಡ ಸಾಕ್ಷಿ ಎಂದು ಫ್ಯಾನ್ಸ್​ ಮಾತನಾಡಿಕೊಳ್ಳುತ್ತಿದ್ದಾರೆ. ಗೂಗಲ್‌ನಲ್ಲಿ (Google) 'ಕೆಜಿಎಫ್' ಸೆಟ್ ಎಂದು ಟೈಪ್ ಮಾಡಿದಾಗ 'ಕೆಜಿಎಫ್ ಫಿಲ್ಮ್ ಸೆಟ್' ಬರುತ್ತೆ. ಈ ಸಿನಿಮಾವನ್ನು ಕರ್ನಾಟಕದ (Karnataka) ಕೆಜಿಎಫ್ ಸೇರಿದಂತೆ ಸುತ್ತಮುತ್ತ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಮಾತ್ರವಲ್ಲದೇ 'ಕೆಜಿಎಫ್'ನಿಂದ ಸ್ವಲ್ಪ ದೂರದಲ್ಲಿ ಚಿತ್ರದ ಸೆಟ್ಟನ್ನು ನಿರ್ಮಾಣ ಮಾಡಲಾಗಿತ್ತು. 

KGF Chapter 2 ವೀಕ್ಷಿಸಿ ರಿವ್ಯೂವ್ ನೀಡಿದ ಮಾಲಿವುಡ್ ನಟ ಪೃಥ್ವಿರಾಜ್ ಸುಕುಮಾರನ್!

ಆ ಸೆಟ್‍ನಲ್ಲಿ 'ಕೆಜಿಎಫ್' ಭಾಗ ಒಂದು ಮತ್ತು ಎರಡರ ಚಿತ್ರೀಕರಣ ಮಾಡಲಾಗಿದೆ. ಅಲ್ಲದೆ ಸಿನಿಮಾ ಸೆಟ್‌ಗಳನ್ನು ಹಲವು ವರ್ಷಗಳ ಕಾಲ ಚಿತ್ರತಂಡ ಅಲ್ಲೇ ಉಳಿಸಿಕೊಂಡಿತು. ಇದೀಗ ಆ ಜಾಗ 'ಕೆಜಿಎಫ್ ಫಿಲ್ಮ್ ಸೆಟ್' ಎಂದು ಗೂಗಲ್ ಮ್ಯಾಪ್‍ನಲ್ಲಿ ರಿಜಿಸ್ಟರ್ ಆಗಿದೆ. ಇನ್ನು 'ಚಂಡಮಾರುತದ ಮೊದಲು ಯಾವಾಗಲೂ ಗುಡುಗು ಬರುತ್ತದೆ! 'ಕೆಜಿಎಫ್​ ಚಾಪ್ಟರ್ 2' ಟ್ರೇಲರ್ ಮಾರ್ಚ್ 27 ರಂದು ಸಂಜೆ 6:40ಕ್ಕೆ ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಪ್ರಶಾಂತ್ ನೀಲ್ ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ಬರೆದುಕೊಂಡು ಯಶ್ (Yash) ರಾ ಲುಕ್‌ನಲ್ಲಿರುವ ಫೋಟೊವೊಂದನ್ನು ಶೇರ್ ಮಾಡಿಕೊಂಡಿದ್ದರು.

View post on Instagram