ಬಿಡುಗಡೆಗೂ ಒಂದು ದಿನ ಮುನ್ನವೇ ಮೂರನೇ ಹಾಡು ರಿಲೀಸ್ ಮಾಡಿದ ಕೆಜಿಎಫ್ ತಂಡ. ಹೇಗಿದೆ ನೋಡಿ ಸುಲ್ತಾನ ಹಾಡು.....

ಕೆಜಿಎಫ್‌ 2 ಚಿತ್ರದ ‘ಸುಲ್ತಾನ’ ಲಿರಿಕಲ್‌ ಸಾಂಗ್‌ ಇಂದು ಬೆಳಗ್ಗೆ 11.07ಕ್ಕೆ ಲಹರಿ ಮ್ಯೂಸಿಕ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆಯಾಗಿದೆ. ಈ ಹಿಂದೆ ಚಿತ್ರತಂಡ ತೂಫಾನ್‌ ಹಾಡು ರಿಲೀಸ್‌ ಮಾಡಿದ್ದು ಜನ ಮೆಚ್ಚುಗೆ ಗಳಿಸಿತ್ತು. ಇದೀಗ ಸುಲ್ತಾನ್‌ ಹಾಡಿನ ಬಗ್ಗೆ ಜನರ ನಿರೀಕ್ಷೆ ಹೆಚ್ಚಿದೆ.

ರಾಕಿಂಗ್ ಸ್ಟಾರ್ ಯಶ್ ರಾಖಿ ಭಾಯ್ ಆಗಿ ಕಾಣಿಸಿಕೊಂಡಿರುವ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಹೊಂಬಾಳೆ ಫಿಲ್ಮಸ್ ವಿಜಯ್ ಕಿರಗಂದೂರು ನಿರ್ಮಾಣ ಮತ್ತು ಪ್ರಶಾಂತ್ ನೀಲ್ ನಿರ್ದೇಶನವಿದೆ. ಕೆಜಿಎಫ್ ಚಿತ್ರದ ಪ್ರತಿಯೊಂದು ಹಾಡಿಗೂ ರವಿ ಬಸೂರ್ ಸಂಗೀತ ನಿರ್ದೇಶನವಿದೆ. ನಾಳೆ ದೇಶಾದ್ಯಂತ ಕೆಜಿಎಫ್ ಸಿನಿಮಾ ರಿಲೀಸ್ ಆಗುತ್ತಿದ್ದು ಇಂದು ಹಾಡು ರಿಲೀಸ್ ಮಾಡಿರುವುದು ಅಭಿಮಾನಿಗಳಿ ಕೊಟ್ಟಿರುವ ಬಿಗ್ ಟ್ರೀಟ್. 

'ರರ್‌ರ್‌ ರಣಧೀರ ರುದಿರೆಬ್ಬಿ ನಿಂತ ರಣಧೀರ ನರ ಕಸುತಿ ನಿಂತವೋ ಈಗ ಒಬ್ಬಂಟಿ ನಿಂತ ರಣಧೀರ ಎದೆಗಟ್ಟಿ ನಿಂತವೋ ಈಗ' ಎಂದು ಶುರುವಾಗುವ ಲಿರಿಕಲ್ ಹಾಡು ಪಕ್ಕಾ ಬಾಲಿವುಡ್ ಸ್ಟೈಲ್‌ನಲ್ಲಿದೆ. ಹಾಡಿನ ಪ್ರತಿಯೊಂದು ಸಾಲುಗಳು ತುಂಬಾನೇ ಪವರ್ ಫುಲ್ ಆಗಿದ್ದು ಚಿತ್ರಕ್ಕಿರುವ ಪವರ್‌ಫುಲ್ ಇಂಪ್ಯಾಕ್ಟ್‌ ಬಗ್ಗೆ ಹೇಳುತ್ತದೆ. ಚಾಪ್ಟರ್ 1ರ ಲುಕ್ ಕ್ಯಾರಿ ಮಾಡಿರುವ ಯಶ್ ಚಾಪ್ಟರ್ 2ರಲ್ಲಿ ಕೊಂಚ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಔಟ್‌ಫಿಟ್‌ ಮತ್ತು ಹೇರ್‌ಸ್ಟೈಲ್‌ ಮೇಲೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದು ಎದ್ದು ಕಾಣುತ್ತದೆ. 

'KGF 2' ಮೊದಲ ವಿಮರ್ಶೆ ಔಟ್; ಭಾರತೀಯ ಚಿತ್ರರಂಗದ ಕಿರೀಟ ಎಂದ ಸೆನ್ಸಾರ್ ಸದಸ್ಯ

ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಇಂಗ್ಲಿಷನ್‌ನಲ್ಲಿ ಹಾಡು ಬಿಡುಗಡೆಯಾಗಿದ್ದು ಚಿತ್ರದ ಸಣ್ಣ ಪುಟ್ಟ ದೃಶ್ಯಗಳನ್ನು ಈ ಹಾಡಿನಲ್ಲಿ ತೋರಿಸಲಾಗಿದೆ. ಹಾಡು ಬಿಡುಗಡೆಯಾದ ಕೆಲವೇ ಹೊತ್ತಿದೆ ಲಕ್ಷಗಟ್ಟಲೆ ವೀಕ್ಷಣೆ ಪಡೆದುಕೊಂಡಿದೆ, ಒಂದು ಗಂಟೆಯಲ್ಲಿ ಕೋಟಿಗಟ್ಟಲೆ ವೀಕ್ಷಣೆ ಪಡೆಯುವುದರಲ್ಲಿ ಅನುಮಾವಿಲ್ಲ.

YouTube video player

ಸಿನಿಮಾ ನಿರೀಕ್ಷೆ:

ನಾಳೆ ಅಂಬೇಡ್ಕರ್‌ ಜಯಂತಿ, ನಾಡಿದ್ದು ಗುಡ್‌ಫ್ರೈ ಡೇ, ಶನಿವಾರ ಭಾನುವಾರ ವೀಕೆಂಡ್‌ ರಜೆಗಳು ಚಿತ್ರಕ್ಕೆ ವರದಾನವಾಗಲಿದೆ. ಇದರಿಂದ ಅತ್ಯುತ್ತಮ ಕಲೆಕ್ಷನ್‌ ಆಗುವ ಸಾಧ್ಯತೆ ಇದೆ ಎಂದು ತಜ್ಞರು ಲೆಕ್ಕಾಚಾರ ಹಾಕುತ್ತಿದ್ದಾರೆ. ಉತ್ತರ ಭಾರತದಲ್ಲಿ ಏ.14ರಂದು ಬೈಸಾಕಿ ಹಬ್ಬದ ಆಚರಣೆ ನಡೆಯಲಿದೆ. ಹೀಗಾಗಿ ಅಲ್ಲೂ ಆರಂಭದ ದಿನವೇ ಅತ್ಯುತ್ತಮ ಕಲೆಕ್ಷನ್‌ನ ನಿರೀಕ್ಷೆ ಇದೆ.

ಈಗಾಗಲೇ ಸಿನಿಮಾದ ಮೊದಲ ವಿಮರ್ಶೆ ಹೊರಬಿದ್ದಿದೆ. ಓವರ್ ಸೀಸ್ ಸೆನ್ಸಾರ್ ಸದಸ್ಯ ಉಮೈರ್ ಸಂಧು ಸಿನಿಮಾ ನೋಡಿ ವಿಮರ್ಶೆ ಮಾಡಿದ್ದಾರೆ. ಕೆಜಿಎಫ್-2 ಸಿನಿಮಾವನ್ನು ಭಾರತೀಯ ಸಿನಿಮಾರಂಗದ ಕಿರೀಟ ಎಂದು ಬಣ್ಣಿಸಿದ್ದಾರೆ. ಅಷ್ಟೆಯಲ್ಲ ಯಶ್ ಮತ್ತು ಸಂಜಯ್ ದತ್ ನಟನೆ, ಪ್ರಶಾಂತ್ ನೀಲ್ ನಿರ್ದೇಶನವನ್ನು ಹಾಡಿಹೊಗಳಿದ್ದಾರೆ. ಉಮೈರ್ ಸಂಧು ಹೇಳಿದ ಬಳಿಕ ಅಭಿಮಾನಿಗಳಲ್ಲಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಈಗಾಗಲೇ ಮುಂಗಡ ಬುಕ್ಕಿಂಗ್ ವಿಚಾರದಲ್ಲಿ ದಾಕಲೆ ನಿರ್ಮಿಸಿದೆ. ಹಿಂದಿ ವಿಭಾಗದಲ್ಲಿ ದಾಖಲೆಯ ಟಕೆಟ್ ಮಾರಾಟವಾಗಿದೆ. ಹಾಗಾಗಿ ಬಿಡುಗಡೆಗೂ ಮೊದಲೇ ಅನೇಕ ದಾಕಳೆ ಮಾಡಿರುವ ಕೆಜಿಎಫ್2 ಇನ್ನು ಬಿಡುಗಡೆ ನಂತರ ಯಾವೆಲ್ಲ ದಾಖಲೆ ಮಾಡಲಿದೆ ಎಂದು ಕಾಯುತ್ತಿದ್ದಾರೆ.

ತೂಫಾನ್‌ನಂತೆ ಅಪ್ಪಳಿಸುತ್ತಿವೆ KGF 2 ದಾಖಲೆಗಳು

ಕೆಜಿಎಫ್-2 ಬಿಡುಗಡೆಗೂ ಮೊದಲೇ ಸಾಕಷ್ಟು ದಾಖಲೆಯನ್ನು ನಿರ್ಮಿಸಿದೆ. ಇದೀಗ ಅಡ್ವಾನ್ಸ್ ಬುಕ್ಕಿಂಗ್ ವಿಚಾರದಲ್ಲೂ ರೆಕಾರ್ಡ್ ಕ್ರಿಯೇಟ್ ಮಾಡಿದೆ. ಅಂದಹಾಗೆ ಹಿಂದಿ ವಿಭಾಗದಲ್ಲಿ ಕೆಜಿಎಫ್-2 20 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ. ಇದು ರಾಜಮೌಳಿ ಅವರ ಆರ್ ಆರ್ ಆರ್ ಸಿನಿಮಾದ ದಾಖಲೆಯನ್ನು ಧೂಳಿಪಟ ಮಾಡಿದೆೆ. ಹಿಂದಿಯಲ್ಲಿ ಈಗಾಗಲೇ 11 ಕೋಟಿ ಮೌಲ್ಯದ ಟಿಕೆಟ್ ಮಾರಾಟವಾಗಿದೆ. ಆರ್ ಆರ್ ಆರ್ ಹಿಂದಿ ಆವೃತ್ತಿ ಕೇವಲ 5 ಕೋಟಿ ಗಳಿಸುವಲ್ಲಿ ಯಶಸ್ವಿಯಾಗತ್ತು. ಆದರೆ ಕೆಜಿಎಫ್-2 ಅದಕ್ಕಿಂತ ಹೆಚ್ಚು ಪಟ್ಟು ಗಳಿಕೆ ಮಾಡಿದ. ಉತ್ತರದ ಭಾರತದಲ್ಲಿ ಎಲ್ಲಾ ಭಾಷೆಯಲ್ಲಿ ಇದುವರೆಗೂ 20 ಕೋಟಿ ರೂಪಾಯಿ ಗಳಿಕೆ ಮಾಡಿದೆ.

"