Asianet Suvarna News Asianet Suvarna News

ಸಂಜು ವೆಡ್ಸ್ ಗೀತಾ-2 ಚಿತ್ರದಿಂದ ರಮ್ಯಾ ಔಟ್; ರಚಿತಾ ರಾಮ್ ನಾಯಕಿ?

ಹಿಸ್ಟರ್ ಕ್ರಿಯೇಟ್ ಮಾಡಿದ ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿ. ರಮ್ಯಾನೇ ಬೇಕು ಎಂದು ಡಿಮ್ಯಾಂಡ್ ಮಾಡಿದ ಫ್ಯಾನ್ಸ್... 

Will Rachita Ram sign Sanju weds Geetha 2 film fans demand Ramya vcs
Author
First Published Jul 20, 2023, 9:20 AM IST | Last Updated Jul 21, 2023, 4:03 PM IST

ಶ್ರೀನಗರ ಕಿಟ್ಟಿ ಮತ್ತು ಮೋಹಕ ತಾರೆ ರಮ್ಯಾ ಅಭಿನಯಿಸಿರುವ ಸಂಜು ವೆಡ್ಸ್‌ ಗೀತಾ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ರೊಮ್ಯಾಂಟಿಕ್ ಮ್ಯೂಸಿಕಲ್ ಜರ್ನಿ ಕ್ರಿಯೇಟ್ ಮಾಡಿತ್ತು. ಎಲ್ಲಿ ನೋಡಿದರೂ ಸಂಜು ಐ ಲವ್ ಯು ಗೀತಾ ಐ ಲವ್ ಯು ಡೈಲಾಗ್ ಕೇಳಿ ಬರುತ್ತಿತ್ತು. ಹಿಸ್ಟರ್ ಕ್ರಿಯೇಟ್ ಮಾಡಿರುವ ಈ ಚಿತ್ರದ ಎರಡನೇ ಭಾಗ ಮಾಡಲು ನಿರ್ದೇಶಕ ನಾಗಶೇಖರ್ ನಿರ್ಧರಿಸಿದ್ದಾರೆ ಎನ್ನುವುದು ಗಾಂಧಿ ನಗರದಲ್ಲಿ ಹೊಸ ವಿಚಾರ. 

ಹೌದು! ಶ್ರೀನಗರ ಕಿಟ್ಟ ನಟನೆ ಹಾಗೂ ನಾಗಶೇಖರ್‌ ನಿರ್ದೇಶನದ ‘ಸಂಜು ವೆಡ್ಸ್‌ ಗೀತಾ-2’ ಚಿತ್ರಕ್ಕೆ ರಚಿತಾ ರಾಮ್‌ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.ಇತ್ತೀಚೆಗಷ್ಟೆ ಚಿತ್ರದ ಫೋಸ್ಟರ್‌ ಬಿಡುಗಡೆ ಮಾಡುವ ಮೂಲಕ ‘ಸಂಜು ವೆಡ್ಸ್‌ ಗೀತಾ’ ಚಿತ್ರದ ಮುಂದುವರಿದ ಭಾಗ ಮಾಡುತ್ತಿರುವ ಸುದ್ದಿ ಬಿಟ್ಟು ಕೊಟ್ಟಿದ್ದರು ನಿರ್ದೇಶಕ ನಾಗಶೇಖರ್. ಈ ಕುರಿತು ಚಿತ್ರದ ನಿರ್ದೇಶಕರು ಇನ್ನಷ್ಟೇ ಅಧಿಕೃತವಾಗಿ ಹೇಳಬೇಕಿದೆ.

ತೆರೆಮೇಲೆ ಬ್ಲಾಕ್‌ಬಸ್ಟರ್ ಹಿಟ್ ಸಂಜು ವೆಡ್ಸ್ ಗೀತಾ ಪಾರ್ಟ್ 2: ನಾಯಕಿ ಯಾರು ಗೊತ್ತಾ..?

ಏಪ್ರಿಲ್ 1, 2011ರಲ್ಲಿ ರಿಲೀಸ್ ಆದ ಸಂಜು ವೆಡ್ಸ್ ಗೀತಾ ಚಿತ್ರಕ್ಕೆ ಜೆಸ್ಸಿ ಗಿಫ್ಟ್‌ ಮತ್ತು ಸಾಧು ಕೋಕಿಲ ಸಂಗೀತ ನಿರ್ದೇಶನ ಮಾಡಿದ್ದಾರೆ.  ಸಿನಿಮಾ ಬಜೆಟ್‌ ಎಷ್ಟು ಎಂದು ರಿವೀಲ್ ಆಗಿಲ್ಲ ಆದರೆ ವಿಕಿಪೀಡಿಯ ಮಾಹಿತಿ ಪ್ರಕಾರ 3.5 ಕೋಟಿ ಕಲೆಕ್ಷನ್ ಮಾಡಿದೆ. ಶ್ರೇಯಾ ಘೋಷಾಲ್ ಹಾಡಿರುವ ಓಮ್ಮೆ ಬಾರೋ, ಸಂಜು ಮತ್ತು ಗೀತಾ, ಗಗನವೇ ಭಾಗಿ ಹಾಡುಗಳು ಸೂಪರ್ ಹಿಟ್ ಆಗಿತ್ತು ಜೊತೆಗೆ ಸೋನು ನಿಗಮ್ ಮೇಲ್ ವರ್ಷನ್ ಆಫ್ ಸಂಜು ಮತ್ತು ಗೀತಾ ಹಾಡಿದ್ದಾರೆ. 

ಸಂಜು ವೆಡ್ಸ್‌ ಗೀತಾ ಚಿತ್ರದಲ್ಲಿ ರಮ್ಯಾ ಮತ್ತು ಕಿಟ್ಟು ಹೊರತು ಪಡಿಸಿದರೆ ಬುಲೆಟ್ ಪ್ರಕಾಶ್, ಸುಹಾಸಿನಿ ಮಣಿರತ್ನಂ, ಶರಣ್, ರಂಗಾಯಣ ರಘು ಮತ್ತು ಸುರೇಶ್ ಹೆಬ್ಳಿಕರ್ ನಟಿಸಿದ್ದಾರೆ. ಸಂಜು ಮತ್ತು ಗೀತಾ ಪ್ರೀತಿಸಿ ಮದುವೆಯಾಗಲು ನಿರ್ಧರಿಸುತ್ತಾರೆ ಆದರೆ ಮದುವೆ ದಿನವೇ ಗೀತಾ ಕಿಡ್ನ್ಯಾಪ್ ಆಗುತ್ತಾಳೆ. ಗೀತಾಳ ಬಾಳು ಹಾಳು ಮಾಡಿದ ಸೋದರ ಮಾವನನ್ನು ಸಂಜು ಕೊಲೆ ಮಾಡಿ ಜೈಲಿಗೆ ಹೋಗುತ್ತಾನೆ. 

ಆ ಒಂದು ದೃಶ್ಯ ಬಳಸಿದ್ದಕ್ಕೆ ನಟಿ ರಮ್ಯಾ ಗರಂ; ಹಾಸ್ಟಲ್ ಹುಡುಗರು ಬೇಕಾಗಿದ್ದಾರೆ ಚಿತ್ರಕ್ಕೆ ನೋಟೀಸ್!

ಈಗ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಸಂಜು ವೆಡ್ಸ್ ಗೀತಾ ಭಾಗ 2ರಲ್ಲಿ ರಮ್ಯಾ ನಟಿಸುವುದಿಲ್ಲ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು. ಈ ವಿಚಾರದ ಬಗ್ಗೆ ನಿರ್ದೇಶಕರು ಯಾವ ಮಾಹಿತಿನೂ ರಿವೀಲ್ ಮಾಡಿಲ್ಲ ಆದರೆ ಅಭಿಮಾನಿಗಳು ರಮ್ಯಾ ಬೇಕು ಎಂದು ಡಿಮ್ಯಾಂಡ್‌ ಮಾಡುತ್ತಿದ್ದರು, ಸೋಷಿಯಲ್ ಮೀಡಿಯಾದಲ್ಲಿ 'ಇಬ್ಬರು ನಟಿಸಲು ಇಬ್ಬರು ನಮ್ಮ ನಟಿಯರು ಇಬ್ಬರು ನಮ್ಮ ನೆಚ್ಚಿನವರು' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಒಂದು ಕಡೆ ರಮ್ಯಾ ಫಿಟ್ನೆಸ್‌ ಬ್ಯುಟಿ ಕೇರ್ ಮಾಡಿಕೊಂಡು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಮತ್ತೊಂದು ಕಡೆ ಕೈ ತುಂಬಾ ಆಫರ್‌ಗಳ ಇನ್ನು 2-3 ವರ್ಷ ಬ್ಯುಸಿಯಾಗಿದ್ದಾರೆ ರಚಿತಾ ರಾಮ್.

Latest Videos
Follow Us:
Download App:
  • android
  • ios