ತೆರೆಮೇಲೆ ಬ್ಲಾಕ್‌ಬಸ್ಟರ್ ಹಿಟ್ ಸಂಜು ವೆಡ್ಸ್ ಗೀತಾ ಪಾರ್ಟ್ 2: ನಾಯಕಿ ಯಾರು ಗೊತ್ತಾ..?
ತೆರೆಮೇಲೆ ಬರ್ತಿದೆ ಬ್ಲಾಕ್‌ಬಸ್ಟರ್ ಹಿಟ್ ಸಂಜು ವೆಡ್ಸ್ ಗೀತಾ ಪಾರ್ಟ್ 2. ನಾಗಶೇಖರ್ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಸ್ಯಾಂಡಲ್‌ವುಡ್‌ನ ಕ್ರಿಯೇಟಿವ್ ಡೈರೆಕ್ಟರ್ ನಿರ್ದೇಶಕ ನಾಗಶೇಖರ್ ಭರ್ಜರಿ ಸುದ್ದಿ ಮೂಲಕ ಸಿನಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ನಾಗಶೇಖರ್ ನಿರ್ದೇಶನದ ಸಂಜು ವೆಡ್ಸ್ ಗೀತಾ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಂಡಿತು. ನೈಜ ಕಥೆಯ ಚಿತ್ರವನ್ನು ಅದ್ಭುತವಾಗಿ ಪ್ರೇಕ್ಷಕರ ಮುಂದೆ ತರೋದ್ರಲ್ಲಿ ನಾಗಶೇಖರ್ ಫೇಮಸ್. ಸಂಜು ವೆಡ್ಸ್ ಗೀತಾ ಹೆಸರಿನಲ್ಲಿ ಟ್ರ್ಯಾಜಿಡಿ ಲವ್ ಸ್ಟೋರಿಯನ್ನು ಸುಂದರವಾಗಿ ತೆರೆಮೇಲೆ ಕಟ್ಟಿಕೊಟ್ಟಿದ್ದರು ನಿರ್ದೇಶಕ ನಾಗಶೇಖರ್. ಸಿನಿಮಾದ ಹಾಡುಗಳು, ಕಥೆ, ಚಿತ್ರಕಥೆ ಎಲ್ಲವೂ ಕೂಡ ಪ್ರೇಕ್ಷಕರ ಹೃದಯ ಗೆದ್ದಿತ್ತು.
ಅದರಲ್ಲಿಯೂ ಶ್ರೀನಗರ ಕಿಟ್ಟಿ ಹಾಗೂ ನಟಿ ರಮ್ಯಾ ಕಾಂಬಿನೇಷನ್ ಮೊದಲ ಬಾರಿಗೆ ತೆರೆಯ ಮೇಲೆ ಅದ್ಭುತವಾಗಿ ವರ್ಕೌಟ್ ಆಗಿತ್ತು. ನಾಗಶೇಖರ್ ನಿರ್ದೇಶನ, ಸತ್ಯ ಹೆಗಡೆ ಕ್ಯಾಮೆರಾ ವರ್ಕ್, ಜಸ್ಸಿ ಗಿಫ್ಟ್ ಮ್ಯೂಸಿಕ್ ಎಲ್ಲವೂ ಕೂಡ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿತ್ತು.
ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್‌ವಡ್ ನಲ್ಲಿ ಪಾರ್ಟ್ 1 ಪಾರ್ಟ್ 2 ,ಚಾಪ್ಟರ್ 1 ಚಾಪ್ಟರ್ 2 ಅನ್ನೋ ಟ್ರೆಂಡ್ ಶುರುವಾಗಿದೆ. ಇದರ ಬೆನ್ನಲ್ಲೇ ನಿರ್ದೇಶಕ ನಾಗಶೇಖರ್, ಶ್ರೀನಗರ ಕಿಟ್ಟಿ ಹುಟ್ಟುಹಬ್ಬದ ವಿಶೇಷವಾಗಿ ಸಂಜು ವೆಡ್ಸ್ ಗೀತಾ ಪಾರ್ಟ್ 2 ಸಿನಿಮಾ ಅನೌನ್ಸ್ ಮಾಡಿದ್ದಾರೆ. ನಾಗಶೇಖರ್ ಅವರೇ ನಿರ್ದೇಶನ ಹಾಗೂ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಈ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ಯಾವ ರೀತಿಯ ಲೂಕ್ನಲ್ಲಿ ಇರ್ತಾರೆ ಅನ್ನೋದನ್ನೂ ಫಸ್ಟ್ ಲುಕ್ ಪೋಸ್ಟರ್ ಮೂಲಕ ರಿವಿಲ್ ಮಾಡಿದ್ದಾರೆ. ಪೋಸ್ಟರ್ ನಲ್ಲಿ ನಾಗಶೇಖರ್ ಮೂವೀಸ್ ಪ್ರೆಸೆಂಟ್ ಜೊತೆಗೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಪ್ರೆಸೆಂಟ್ ಅನ್ನೋ ಹೆಸರನ್ನು ಕೂಡ ಆಡ್ ಮಾಡಿದ್ದಾರೆ. ಹಾಗಾಗಿ ಈ ಸಿನಿಮಾದಲ್ಲಿ ರಮ್ಯಾ ಕೂಡ ಇರ್ತಾರ ಅನ್ನೋ ಕುತೂಹಲ ಅಭಿಮಾನಿಗಳಿಗೆ ಹೆಚ್ಚಾಗಿದೆ.
ಶಾರ್ಟ್ಸ್ ಇಲ್ಲದ ಫೋಟೋದಲ್ಲಿ ರಮ್ಯಾ ಹಾಟ್, ತಮ್ಮೆದೆಯಲ್ಲಿ ಕಿಚ್ಚು ಹತ್ತಿಸಿದ್ದಾರೆಂದ ಫ್ಯಾನ್ಸ್
ಎಲ್ಲಿಯೂ ಕೂಡ ನಾಗಶೇಖರ್ ಚಿತ್ರದಲ್ಲಿ ನಾಯಕಿಯಾಗಿ ಯಾರು? ಅನ್ನೋ ಸುಳಿವನ್ನ ಬಿಟ್ಟು ಕೊಟ್ಟಿಲ್ಲ. ಆದರೆ ರಮ್ಯಾ ಅವರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲೂ ರಮ್ಯಾ ಅವರ ಜೊತೆ ಮತ್ತೊಂದು ಸಿನಿಮಾ ಮಾಡು ಆಸೆಯನ್ನು ವ್ಯಕ್ತಪಡಿಸಿದ್ದರು ನಾಗಶೇಖರ್. ಹಾಗಾಗಿ ರಮ್ಯಾ ಅವರೇ ನಾಯಕಿಯಾಗುವುದು ಸಾಧ್ಯತೆಗಳಿಗೆ.
ಚಡ್ಡಿ ಹಾಕ್ಕೊಂಡಿದ್ಯಾ, ಅಕ್ಕ ಪ್ಯಾಂಟ್ ಎಲ್ಲಿ, ಸಿನಿಮಾ ಮಾಡ್ತಿಲ್ವಾ? ರಮ್ಯಾ ಬೋಲ್ಡ್ ಫೋಟೋ ಸಖತ್ ಟ್ರೋಲ್
ಅಂದಹಾಗೆ ಸದ್ಯ ರಿಲೀಸ್ ಆಗಿರುವ ಸಂಜು ವೆಡ್ಸ್ ಗೀತಾ ಪಾರ್ಟ್-2 ಈ ಬಾರಿಯ ಚಳಿಗಾಲದಲ್ಲಿ ಪ್ರಾರಂಭವಾಗಲಿದೆ ಎನ್ನುವ ಸೂಚನೆಯನ್ನು ಕೊಟ್ಟಿದ್ದಾರೆ. ನಾಗಶೇಖರ್ ಲವ್ ಸ್ಟೋರಿಗಳನ್ನ ಅದ್ಭುತವಾಗಿ ತೆರೆ ಮೇಲೆ ಪ್ರೆಸೆಂಟ್ ಮಾಡ್ತಾರೆ. ಈ ಬಾರಿ ಯಾವ ರೀತಿಯ ಪ್ರೇಮಕಥೆಯನ್ನು ಪ್ರೇಕ್ಷಕರ ಮುಂದೆ ಬರಲಿದ್ದಾರೆ ಅನ್ನೋ ನಿರೀಕ್ಷೆ ಹುಟ್ಟುಹಾಕಿದೆ ಈ ಪೋಸ್ಟರ್.