ರಾಜ್‌ಕುಮಾರ್‌ರ ತಂದೆ ಪುಟ್ಟಸ್ವಾಮಿ ನಾಟಕ ಕಲಾವಿದರಾಗಿದ್ದು, ಅಲ್ಸರ್ ಮತ್ತು ಅಸ್ತಮಾದಿಂದ ೪೬ನೇ ವಯಸ್ಸಿನಲ್ಲಿ ನಿಧನರಾದರು. ಆರ್ಥಿಕ ಸಂಕಷ್ಟದಿಂದ ರಾಜ್‌ಕುಮಾರ್ ಮೈಸೂರಿನಲ್ಲೇ ಅಂತ್ಯಕ್ರಿಯೆ ನೆರವೇರಿಸಿದರು. ನಂತರ ಮೈಸೂರಿಗೆ ಭೇಟಿ ನೀಡಿದಾಗಲೆಲ್ಲಾ ಆ ಸ್ಥಳಕ್ಕೆ ತೆರಳಿ ತಂದೆಯನ್ನು ಸ್ಮರಿಸುತ್ತಿದ್ದರು. ರಾಜ್ ಕುಟುಂಬದಲ್ಲಿ ಅನಾರೋಗ್ಯದ ವಂಶವಾಹಿನಿ ಇರುವ ಬಗ್ಗೆ ಚರ್ಚೆಗಳಿವೆ.
ಡಾ ರಾಜ್‌ಕುಮಾರ್ (Dr Rajkumar) ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಿ (Singanalluru Puttaswamy) ಹಾಗು ತಾಯಿ ಲಕ್ಷ್ಮಮ್ಮ (Lakshmamma) ಅವರಿಬ್ಬರೂ ಪಕ್ಕಾ ಹಳ್ಳಿಯಲ್ಲಿ ಬೆಳೆದು ದಂಪತಿಗಳು ಆದವರು. ಸಿಂಗಾನಲ್ಲೂರು ಪುಟ್ಟ ಸ್ವಾಮಿಯವರು ಕಟ್ಟುಮಸ್ತಾದ ಆಳು ಆಗಿದ್ದರು. ಆದ್ದರಿಂದಲೇ ಅವರಿಗೆ ನಾಟಕಗಳಲ್ಲಿ ರೋಷಪೂರಿತ ಹಾಗು ಹೆಚ್ಚಾಗಿ ವಿಲನ್ ಪಾತ್ರಗಳನ್ನೇ ನೀಡುತ್ತಿದ್ದರು. ಆದರೆ, ಅವರು ತಮ್ಮ ಮಧ್ಯ ವಯಸ್ಸಿನಲ್ಲಿಯೇ ಕಾಯಿಲೆಗೆ ತುತ್ತಾಗಿದ್ದರು. ಅವರಿಗೆ ಅಲ್ಸರ್ ಹಾಗೂ ಅಸ್ತಮಾ ಖಾಯಿಲೆ ಇತ್ತು. ಅದರಿಂದ ಅವರು ಬಹಳಷ್ಟು ನರಳಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ತಮ್ಮ 46ನೇ ವಯಸ್ಸಿನಲ್ಲಿಯೇ ತೀರಿಕೊಂಡರು.
ಮೈಸೂರಿನಲ್ಲಿ ಮುತ್ತುರಾಜ್ ಡಾ ರಾಜ್‌ಕುಮಾರ್ ಅಪ್ಪ ತೀರಿಕೊಂಡಾಗ, ಅವರ ಪಾರ್ಥೀವ ಶರೀರವನ್ನು ಹುಟ್ಟೂರು ಸಿಂಗಾನಲ್ಲೂರಿಗೆ ತರಲು ಮಗ ಮುತ್ತುರಾಜ್ ಬಳಿ ಹಣವಿರಲಿಲ್ಲ. ಆಗ ಮೈಸೂರಿನ ಒಬ್ಬ ಶ್ರೀಮಂತರ ಬಳಿ ತಮ್ಮ ಪರಿಸ್ಥಿತಿ ಹೇಳಿಕೊಂಡು ಮುತ್ತುರಾಜ್ ಅವರು ಹಣದ ಸಾಲ ಕೇಳಿದಾದ ಅವರಿಗೆ ಸಹಾಯ ಸಿಗಲಿಲ್ಲ. ಹೀಗಾಗಿ ಅವರು ಅಲ್ಲಿಯೇ ಜೋಡಿ ತೆಂಗಿನಮರದ ಬಳಿ ತಮ್ಮ ತಂದೆಯ ಪಾರ್ಥೀವ ಶರೀರಕ್ಕೆ ಬೆಂಕಿಯಿಟ್ಟು ಅಲ್ಲೇ ಅಂತ್ಯಕ್ರಿಯೆ ನೆರವೇರಿಸಿದರು. ಆಸ್ಪತ್ರೆಯಲ್ಲಿ ತಮ್ಮ ತಂದೆಯನ್ನು ಸಿನಿಮಾದಲ್ಲಿ ನೋಡಿಕೊಂಡಂತೆ ಮುತ್ತುರಾಜ್ ಅವರು ಭಕ್ತಿ ಹಾಗೂ ಪ್ರೀತಿಯಿಂದ ನೋಡಿಕೊಂಡಿದ್ದರು.
ಅಣ್ಣಾವ್ರು ಪೂಜಿಸಿದ್ದ 'ಶ್ರೀನಿವಾಸ ಮೂರ್ತಿ'ಗೆ ಹುಬ್ಬಳ್ಳಿಯಲ್ಲಿ ಈಗಲೂ ಪೂಜೆ, ಅದು ಹೇಗೆ?!
ಬಳಿಕ, ಮೈಸೂರಿಗೆ ಯಾವತ್ತೇ ಶೂಟಿಂಗ್‌ಗೆ ಹೋದಾಗಲೂ ಡಾ ರಾಜ್‌ಕುಮಾರ್ ಅವರು ತಾವು ತಮ್ಮ ತಂದೆಯನ್ನು ಮಣ್ಣು ಮಾಡಿದ್ದ ಜಾಗಕ್ಕೆ, ಅಂದರೆ ಆ ಜೋಡಿ ತೆಂಗಿನಮರದ ಬಳಿ ಹೋಗುತ್ತಿದ್ದರಂತೆ. ಮೈಸೂರಿನಲ್ಲಿ ಇದ್ದಾಗ ಬೆಳಿಗ್ಗೆ 4 ಗಂಟೆಗೆ ಡಾ ರಾಜ್‌ಕುಮಾರ್ ಅವರು ಆ ಜೋಡಿ ತೆಂಗಿನಮರದ ಬಳಿ ಹೋಗಿ, ಕುಳಿತು ಕಣ್ಣೀರು ಸುರಿಸಿ ಎಷ್ಟೋ ಹೊತ್ತು ಇದ್ದು ಬರುತ್ತಿದ್ದರಂತೆ.
ಸತ್ತ ಮೇಲೆ ಕೂಡ ತಮ್ಮ ತಂದೆಯನ್ನು ತಮ್ಮದೇ ಆದ ರೀತಿಯಲ್ಲಿ ಸ್ಮರಿಸಿಕೊಳ್ಳುತ್ತಲೇ ಇರುತ್ತಿದ್ದರು ಡಾ ರಾಜ್‌ಕುಮಾರ್. ತಮ್ಮ ತಂದೆಯ ಬಗ್ಗೆ ಆಗಾಗ ತುಂಬ ಹೆಮ್ಮೆಯಿಂದ ಹೇಳಿಕೊಳ್ಳುತ್ತಲೇ ಇದ್ದರು. ಅಂದಹಾಗೆ, ಡಾ ರಾಜ್‌ಕುಮಾರ್ ಕುಟುಂಬದಲ್ಲಿ ಅನಾರೋಗ್ಯ ವಂಶಪಾರಂಪರ್ಯವಾಗಿ ಬಂದಿದೆ ಎನ್ನುವ ಮಾತು ಇದೀಗ ಕೇಳಿ ಬರುತ್ತಿದೆ. ಅದಕ್ಕೆ ಡಾ ರಾಜ್ ತಂದೆ ಪುಟ್ಟಸ್ವಾಮಿಯವರೂ ಕೂಡ ಉದಾಹರಣೆ ಎನ್ನಬಹುದೇ?
ಅಣ್ಣಾವ್ರ ಬಗ್ಗೆ ಸುದೀಪ್ ಅಂದು ಹೇಳಿದ್ದ ಮಾತು ಇಂದು ವೈರಲ್, ಕಾಮೆಂಟ್ಸ್ ಸುರಿಮಳೆ!
ಆದರೆ, ಅವರಿಗೆ ಇದ್ದ ಕಾಯಿಲೆ ಅಲ್ಸರ್ ಹಾಗೂ ಅಸ್ತಮಾ ಎನ್ನಲಾಗಿದೆ. ಸದ್ಯ ಶಿವಣ್ಣ ಅವರು ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ಹೊತ್ತಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಹೀಗಾಗಿ ಈ ಬಗ್ಗೆ ಒಂದು ಬೆಳಕು ಚೆಲ್ಲಲಾಗಿತ್ತದೆ ಅಷ್ಟೇ. ಹೆಚ್ಚು ಕಡಿಮೆ ಎಲ್ಲರೂ ಒಂದಲ್ಲ ಇನ್ನೊಂದು ಕಾಯಿಲೆಯಿಂದ ನರಳುತ್ತಾರೆ. ಆದರೆ, ಕೆಲವರದ್ದು ಸುದ್ದಿ, ಚರ್ಚೆ ಆಗುತ್ತದೆ ಅಷ್ಟೇ ಎನ್ನಬಹುದು!
