ಅಣ್ಣಾವ್ರು ಪೂಜಿಸಿದ್ದ 'ಶ್ರೀನಿವಾಸ ಮೂರ್ತಿ'ಗೆ ಹುಬ್ಬಳ್ಳಿಯಲ್ಲಿ ಈಗಲೂ ಪೂಜೆ, ಅದು ಹೇಗೆ?!

1974ರಲ್ಲಿ ಶ್ರೀನಿವಾಸನ ಲೀಲೆಗಳುಳ್ಳ ಈ 'ಶ್ರೀನಿವಾಸ ಕಲ್ಯಾಣ' ಸಿನಿಮಾ ತೆರೆಗೆ ಬಂದಿತ್ತು. ವೆಂಕಟೇಶ್ವರನಾಗಿ ರಾಜಕುಮಾರ್ ನಟಿಸಿದ್ರೆ ಲಕ್ಷ್ಮೀ ಮಾತೆಯಾಗಿ ಬಿ.ಸರೋಜಾದೇವಿ ನಟಿಸಿದ್ರು. ಈ ಸಿನಿಮಾದಲ್ಲಿ ಶ್ರೀನಿವಾಸನ ಸನ್ನಿವೇಶಗಳು ಬಂದಾಗ ಜನರು ಥಿಯೇಟರ್​ ನಲ್ಲೇ ಎದ್ದು ಕೈಮುಗೀತಾ ಇದ್ದರಂತೆ...

Dr Rajkumar acted Srinivasa Kalyana movie idol having pooja now also in Hubballi

ವೈಕುಂಠ ಏಕಾದಶಿ ದಿವಸ ಶ್ರೀನಿವಾಸ ಸ್ವಾಮಿಯ ದರ್ಶನ ಮಾಡಿದ್ರೆ ಮುಕ್ತಿ ಸಿಗುತ್ತೆ ಅನ್ನೋದು ಭಕ್ತರ ನಂಬಿಕೆ. ನಮ್ಮ ಕನ್ನಡಿಗರ ಪಾಲಿಗೆ ಶ್ರೀನಿವಾಸ ಅಂದ್ರೆ ಕಣ್ಮುಂದೆ ಬರೋದು ಬಾಲಾಜಿಯ ಪಾತ್ರ ಮಾಡಿದ್ದ ಡಾ.ರಾಜ್​ಕುಮಾರ್. ಅಣ್ಣಾವ್ರ ನಟನೆಯ ಶ್ರೀನಿವಾಸ ಕಲ್ಯಾಣ ಸಿನಿಮಾ ತಿಮ್ಮಪ್ಪನ ಭಕ್ತರ ಪಾಲಿಗೆ ನೆಚ್ಚಿನ ಸಿನಿಮಾ. ಈ ಸಿನಿಮಾ ಕುರಿತ ಒಂದಿಷ್ಟು ಇನ್​ಟ್ರೆಸ್ಟಿಂಗ್ ಸಂಗತಿಗಳು ಇಲ್ಲಿವೆ ನೋಡಿ.

'ಪವಡಿಸು ಪರಮಾತ್ಮ ಶ್ರೀ ವೆಂಕಟೇಶ..' ಎಲ್ಲಾ ಬಾಲಾಜಿ ಭಕ್ತರು ಅನುದಿನವೂ ಸ್ಮರಿಸುವ ಹಾಡಿದು. ಇದರಲ್ಲಿ ಪರಮಾತ್ಮನಾಗಿ ನಟಿಸಿರೋ ಅಣ್ಣಾವ್ರನ್ನ ನೋಡ್ತಾ ಇದ್ರೆ, ಆ ಶ್ರೀನಿವಾಸ ಹೀಗೆ ಇದ್ದನ್ನೇನೋ ಅನ್ನಿಸುತ್ತೆ. ಭಕ್ತಿಭಾವ ತಾನಾಗೇ ಉಕ್ಕಿ ಬರುತ್ತೆ.

ಟ್ಯೂನ್ ಕದ್ದ ಆರೋಪಕ್ಕೆ ಚಂದನ್ ಶೆಟ್ಟಿ ಕಿಡಿ, ಮಾನನಷ್ಟ ಮೊಕದ್ದಮೆಗೆ ಮೊರೆ?

1974ರಲ್ಲಿ ಶ್ರೀನಿವಾಸನ ಲೀಲೆಗಳುಳ್ಳ ಈ 'ಶ್ರೀನಿವಾಸ ಕಲ್ಯಾಣ' ಸಿನಿಮಾ ತೆರೆಗೆ ಬಂದಿತ್ತು. ವೆಂಕಟೇಶ್ವರನಾಗಿ ರಾಜಕುಮಾರ್ ನಟಿಸಿದ್ರೆ ಲಕ್ಷ್ಮೀ ಮಾತೆಯಾಗಿ ಬಿ.ಸರೋಜಾದೇವಿ ನಟಿಸಿದ್ರು. ಈ ಸಿನಿಮಾದಲ್ಲಿ ಶ್ರೀನಿವಾಸನ ಸನ್ನಿವೇಶಗಳು ಬಂದಾಗ ಜನರು ಥಿಯೇಟರ್​ ನಲ್ಲೇ ಎದ್ದು ಕೈಮುಗೀತಾ ಇದ್ದರಂತೆ.

ಇನ್ನೂ ಈ ಸಿನಿಮಾದಲ್ಲಿ ತಿರುಪತಿ ದೇಗುಲದ ಸೆಟ್ ಹಾಕಲಾಗಿತ್ತು. ವೆಂಕಟೇಶ್ವರನ ಮೂರ್ತಿಯನ್ನ ಹೋಲುವ ಪ್ರತಿಕೃತಿ ತಯಾರಿಸಲಾಗಿತ್ತು. ಇದೆಷ್ಟು ನ್ಯಾಚುರಲ್ ಆಗಿತ್ತು ಅಂದ್ರೆ ಜನ ಇದು ನಿಜವಾದ ತಿರುಪತಿ ಅಂತ ನಂಬಿಕೊಂಡಿದ್ರು.

ಶ್ರೀನಿವಾಸ ಕಲ್ಯಾಣ ತೆರೆಗೆ ಬಂದ ವೇಳೆ ಈ ಮೂರ್ತಿಯನ್ನ ಚಿತ್ರಮಂದಿರ ಮುಂದೆ ಪ್ರತಿಷ್ಠಾಪನೆ ಮಾಡಲಾಗಿತ್ತು. ಜನರು ಮೂರ್ತಿಗೆ ಪೂಜೆ ಸಲ್ಲಿಸಿ ಒಳಗೆ ಸಿನಿಮಾ ನೋಡ್ಲಿಕ್ಕೆ ಹೋಗ್ತಾ ಇದ್ರಂತೆ.

ಚಂದನ್ ಶೆಟ್ಟಿ ಮೇಲೆ ಟ್ಯೂನ್ ಕದ್ದ ಆರೋಪ, 'ಕಾಟನ್ ಕ್ಯಾಂಡಿ' ಪಾರ್ಟಿ ಸಾಂಗ್‌ ಇನ್ ಟ್ರಬಲ್!

ಈ ಮೂರ್ತಿ ಈಗಲೂ ಹುಬ್ಬಳ್ಳಿಯಲ್ಲಿದೆ. ಆಗ ಹುಬ್ಬಳ್ಳಿ ಭಾಗದಲ್ಲಿ ಈ ಚಿತ್ರವನ್ನ ವಿತರಣೆ ಮಾಡಿದ್ದ ಬಾಬ್ಜಿಯವರ ಮನೆಯಲ್ಲಿ ಈ ವಿಗ್ರಹ ಇದೆ. . 50 ವರ್ಷಗಳಿಂದಲೂ ಈ ಕುಟುಂಬದರು ಈ ಶ್ರೀನಿವಾಸನ ಮೂರ್ತಿಗೆ ಪೂಜೆ, ಪುನಸ್ಕಾರ ಸಲ್ಲಿಸ್ತಾ ಬಂದಿದ್ದಾರೆ.

ಒಟ್ಟಾರೆ ವೈಕುಂಠ ಏಕಾದಶಿ ಬಂದಾಗಲೊಮ್ಮೆ ಭಕ್ತರಿಗೆ ಅಣ್ಣಾವ್ರ ಶ್ರೀನಿವಾಸ ಕಲ್ಯಾಣ ತಪ್ಪದೇ ನೆನಪಾಗುತ್ತೆ. ಈ ಸಿನಿಮಾದ ಹಾಡುಗಳು, ಸನ್ನಿವೇಶಗಳು ಜನರಲ್ಲಿ ಭಕ್ತಿರಸವನ್ನ ಉಕ್ಕಿಸುತ್ವೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...

Latest Videos
Follow Us:
Download App:
  • android
  • ios