Asianet Suvarna News Asianet Suvarna News

ಸಣ್ಣ ಸಿನಿಮಾಗಳಿಗೆ ಇಲ್ಲಿ ಜಾಗ ಇಲ್ಲ ಯಾಕೆ?; ಸಾಧುಕೋಕಿಲ, ಲಿಂಗದೇವರು ಸ್ಪಷ್ಟನೆ

 ಕನ್ನಡ ಚಿತ್ರರಂಗದಲ್ಲಿ ಒಳ್ಳೆ ಕಂಟೆಂಟ್‌ ಸಿನಿಮಾಗಳು ಬಂದರೂ ಚಿತ್ರಮಂದಿರಗಳಲ್ಲಿ ಹೆಚ್ಚಿಗೆ ದಿನ ಉಳಿಯುತ್ತಿಲ್ಲ. ಅದೇ ಓಟಿಟಿಯಲ್ಲಿ ರಿಲೀಸ್ ಕಂಡರೆ ಸೂಪರ್ ಡೂಪರ್ ಹಿಟ್ ಆಗುತ್ತದೆ. ಜನವರಿ ತಿಂಗಳಲ್ಲಿ ಬಿಡುಗಡೆಯಾದ ಸ್ಮಾಲ್ ಬಜೆಟ್‌ 9 ಸಿನಿಮಾಗಳು ಸೋಲಲು ಕಾರಣವೇನು? 

Why small budget films fail in kannada film industry vcs
Author
First Published Jan 13, 2023, 9:23 AM IST

ಆರ್‌. ಕೇಶವಮೂರ್ತಿ

ಪ್ರತಿ ವರ್ಷ 200ರಿಂದ 250 ಸಿನಿಮಾಗಳು ತೆರೆಕಾಣುತ್ತಿವೆ. ಈ ಪೈಕಿ ಸ್ಟಾರ್‌ ನಟರ ಚಿತ್ರ ಐದಾರು. ಉಳಿದವು ಸಣ್ಣ ಬಜೆಟ್‌ನ ಚಿತ್ರಗಳು. ಚಿತ್ರರಂಗವನ್ನು ಸಾಕುವುದು ಇವೇ. ಆದರೂ ಈ ಚಿತ್ರಗಳಿಗೆ ಎಲ್ಲ ರೀತಿಯ ಸಮಸ್ಯೆಗಳು...ಎಂದಿದ್ದು ನಿರ್ದೇಶಕ ಪುರಿ ಜಗನ್ನಾಥ್‌. ಸಾಧುಕೋಕಿಲ ಕೂಡ ‘ದೊಡ್ಡ ಬಜೆಟ್‌ನ ಸ್ಟಾರ್‌ ನಟರ ಚಿತ್ರಗಳ ಮೋಹದಲ್ಲಿ ಸಣ್ಣ ಚಿತ್ರಗಳನ್ನು ನೋಡುವುದು ಮರೆಯಬೇಡಿ’ ಎಂದಿದ್ದರು.

ಕಳೆದ ವರ್ಷ ತೆರೆಗೆ ಬಂದ ಪ್ಯಾನ್‌ ಇಂಡಿಯಾ ಹಾಗೂ ಅದ್ದೂರಿ ಬಜೆಟ್‌ ಸಿನಿಮಾಗಳ ಹೊರತಾಗಿ ಸಣ್ಣ ಬಜೆಟ್‌ನ ಚಿತ್ರಗಳು ಬಂದ ಪುಟ್ಟಹೋದ ಪುಟ್ಟಎನ್ನುವಂತಾಗಿದೆ. ಬಹಳಷ್ಟುಚಿತ್ರಗಳು ಚೆನ್ನಾಗಿದ್ದರೂ ಪ್ರೇಕ್ಷಕರು ಆ ಚಿತ್ರಗಳನ್ನು ನೋಡಿಲ್ಲ. ಅಥವಾ ಪ್ರೇಕ್ಷಕರು ನೋಡುವ ಮುನ್ನವೇ ಅವು ಥಿಯೇಟರ್‌ಗಳಿಂದ ಮಾಯ ಆಗಿವೆ. ಜನವರಿ ಮೊದಲ ವಾರದಲ್ಲಿ ತೆರೆಗೆ ಬಂದ 9 ಚಿತ್ರಗಳು ಅನಾಥ ಭಾವನೆ ಎದುರಿಸುತ್ತಿವೆ. ಈ ನೋವಲ್ಲಿರುವ ನಿರ್ದೇಶಕರ ಮಾತುಗಳು ಇಲ್ಲಿವೆ.

1. ನಿರ್ದೇಶಕ ಲಿಂಗದೇವರು, ವಿರಾಟಪುರ ವಿರಾಗಿ ನಿರ್ದೇಶಕ; ‘ನಾವು ಪ್ರೇಕ್ಷಕರ ಅಭಿರುಚಿಯನ್ನು ಕರಪ್‌್ಟಮಾಡಿದ್ದೇವೆ. ಹೊಡಿ ಬಡಿ ಚಿತ್ರಗಳನ್ನೇ ಅವರ ಮುಂದಿಟ್ಟು, ಇದೇ ಸಿನಿಮಾ ಎಂದಿದ್ದೇವೆ. ಪ್ರೇಕ್ಷಕರು ಅಂಥ ದೊಡ್ಡ ಸಿನಿಮಾಗಳ ಗುಂಗಿನಲ್ಲಿ ಇದ್ದಾರೆ. 160 ಶೋಗಳ ಟಿಕೆಟ್‌ಗಳು ಮುಂಗಡವಾಗಿ ಸೇಲ್‌ ಆಗಿದ್ದರೂ ‘ವಿರಾಟಪುರ ವಿರಾಗಿ’ ಚಿತ್ರಕ್ಕೆ ಥಿಯೇಟರ್‌ಗಳು ಸಿಗುತ್ತಿಲ್ಲ . ಈ ಕರಪ್‌್ಟವಾತಾವರಣ ಸಂಪೂರ್ಣವಾಗಿ ಬದಲಾಗಬೇಕು. ಆಗ ದೊಡ್ಡ ಸಿನಿಮಾ, ಚಿಕ್ಕ ಸಿನಿಮಾ ಎನ್ನುವ ಭಾವನೆ ದೂರವಾಗುತ್ತದೆ.’

ಹಾನಗಲ್‌ನ ಶಿವಯೋಗಿ ಕುಮಾರ ಸ್ವಾಮಿಗಳ ಕಥೆ;ವಿರಾಟಪುರ ವಿರಾಗಿ ಎಲ್ಲರ ಸಿನಿಮಾ ಎಂದ ಬಿ ಎಸ್‌ ಲಿಂಗದೇವರು

2. ಶಿವಪ್ಪ ಶ್ರೀರಾಮ್‌, ಕಾಕ್‌ಟೈಲ್‌’ ಚಿತ್ರದ ನಿರ್ದೇಶಕ

‘ತೆರೆಗೆ ಬಂದ ಚಿತ್ರವನ್ನು ಪ್ರೇಕ್ಷಕ ಬಂದು ನೋಡುವ ತನಕ ಅದು ಚಿತ್ರಮಂದಿರದಲ್ಲಿ ಉಳಿಯಬೇಕು. ಹಾಗೆ ಉಳಿಸಿಕೊಳ್ಳುವ ಆರ್ಥಿಕ ಶಕ್ತಿ ಸಣ್ಣ ಅಥವಾ ಹೊಸ ಚಿತ್ರಗಳ ನಿರ್ದೇಶಕ, ನಿರ್ಮಾಪಕರಿಗೆ ಇರಲ್ಲ. ಹೀಗಾಗಿ ದೊಡ್ಡ ಸಿನಿಮಾಗಳ ಅಬ್ಬರದಲ್ಲಿ ನಾವು ಬಂದಿದ್ದು ಗೊತ್ತಾಗಲ್ಲ, ಹೋಗಿದ್ದು ಗೊತ್ತಾಗಲ್ಲ. ವಾರಕ್ಕೆ ಐದಾರು ಚಿತ್ರಗಳನ್ನು ಒಟ್ಟಿಗೆ ಬಿಡುಗಡೆ ಮಾಡುವುದನ್ನು ಮೊದಲು ನಿಲ್ಲಿಸಬೇಕು.

Shri Balaji Photo Studio Review ಫೋಟೋ ತೆಗೆಯುವವನ ವ್ಯಥೆಗಳು

3. ರಾಜೇಶ್‌ ಧ್ರುವ, ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ನಿರ್ದೇಶಕ

ನಮ್ಮ ಚಿತ್ರಗಳಲ್ಲಿ ಸ್ಟಾರ್‌ ಹೀರೋಗಳು ಇರಲ್ಲ. ಅದ್ದೂರಿ ಮೇಕಿಂಗ್‌ ಇರಲ್ಲ. ಆದರೆ, ಆಪ್ತವಾದ ಕತೆ ಇರುತ್ತದೆ. ಇಂಥ ಚಿತ್ರಗಳು ಜನರನ್ನು ಸೆಳೆಯುವುದು ನಿಧಾನ. ಹುಟ್ಟಿದ ಕೂಡಲೇ ನಡೆಯಕ್ಕೆ ಆಗದ ಮಗುವಿನಂತೆ ನಮ್ಮ ಹೊಸಬರ ಹಾಗೂ ಸಣ್ಣ ಬಜೆಟ್‌ನ ಚಿತ್ರಗಳ ಸ್ಥಿತಿ. ನಡೆಯೋತನಕ ಕಾಯಬೇಕು. ಫಲಿತಾಂಶ ಬಂದೇ ಬರುತ್ತದೆ. ಆದರೆ, ಇಲ್ಲಿ ಚಿತ್ರವನ್ನು ನಿಲ್ಲಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ.

Follow Us:
Download App:
  • android
  • ios