ಯುಐ ಚಿತ್ರದಲ್ಲಿ ಸನ್ನಿ ಲಿಯೋನ್​ ಮಿಸ್ಸಿಂಗ್​ ಯಾಕೆ? ಉಪೇಂದ್ರ ಕೊಟ್ಟ ಕಾರಣಕ್ಕೆ ಫ್ಯಾನ್ಸ್​ ಸುಸ್ತೋ ಸುಸ್ತು!

ಬಾಲಿವುಡ್​ ಬೆಡಗಿ ಸನ್ನಿ ಲಿಯೋನ್​ ಉಪೇಂದ್ರ ಅವರ ಯುಐ ಚಿತ್ರದಿಂದ ಮಿಸ್​ ಆಗಿದ್ದು ಯಾಕೆ? ಇದಕ್ಕೆ ಉಪೇಂದ್ರ ಕೊಟ್ಟ ಉತ್ತರ  ಏನು?
 

Why did Bollywood star Sunny Leone miss out on Upendras film UI see actors response to this suc

ಸದ್ಯ ನಟ ಉಪೇಂದ್ರ ಅವರ ಯುಐ ಚಿತ್ರ ಭಾರಿ ಸದ್ದು ಮಾಡುತ್ತಿದೆ. ಸೂಪರ್​ ಚಿತ್ರ, ಸಕತ್​ ಚಿತ್ರ ಆದ್ರೆ ಸ್ವಲ್ಪವೂ ಅರ್ಥ ಆಗಿಲ್ಲ ಎನ್ನುತ್ತಿರುವ ದೊಡ್ಡ ಪ್ರೇಕ್ಷಕ ವರ್ಗವೇ ಇದೆ.  ನನಗಂತೂ ಅರ್ಥ ಆಯ್ತಪ್ಪ ಆದ್ರೆ  ಕಥೆ ಹೇಳಲು ಆಗಲ್ಲ ಅಂತ ಒಂದಿಷ್ಟು ಜನ ಹೇಳಿದ್ರೆ, ಉಪ್ಪಿ ಸರ್​ ಪ್ರತಿಸಲದಂತೆ ಬುದ್ಧಿವಂತರಿಗೆ ಮಾತ್ರ ಈ ಚಿತ್ರ ಮಾಡಿದ್ದಾರೆ ಅಂತಿದ್ದಾರೆ ಮತ್ತಷ್ಟು ಮಂದಿ. ಉಪೇಂದ್ರ ಅವರು ತಲೆಗೆ ಹುಳ ಬಿಟ್ಟಿದ್ದಾರೆ ಎಂದು ಒಂದಿಷ್ಟು ಮಂದಿ ಹೇಳಿದ್ರೆ, ತಲೆಯಲ್ಲಿ ಇರೋ ಹುಳ ತೆಗೆದಿದ್ದಾರೆ ಅಂತಿದ್ದಾರೆ ಮತ್ತಷ್ಟು ಮಂದಿ. ಒಟ್ಟಿನಲ್ಲಿ, ಉಪೇಂದ್ರ ಅವರು ಸದ್ಯ ಸ್ಯಾಂಡಲ್​ವುಡ್​ನ ಹಾಟ್​  ಟಾಪಿಕ್​ ಆಗಿದ್ದು, ಇವರ ಯುಐ ಚಿತ್ರದ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಲೇ ಇದೆ.

ಆದರೆ ಇದರ ಮಧ್ಯೆಯೇ, ಈ ಚಿತ್ರ ನೋಡಿ ಬಂದವರಿಗೆ ಕಥೆ ಅರ್ಥ ಆಯ್ತೋ, ಬಿಡ್ತೋ ಗೊತ್ತಿಲ್ಲ. ಬಾಲಿವುಡ್​ ಹಾಟ್​  ನಟಿ, ಮಾಜಿ ನೀಲಿ ತಾರೆ ಸನ್ನಿ ಲಿಯೋನ್​ ಮಾತ್ರ ಕಾಣಿಸ್ಲೇ ಇಲ್ಲ ಎನ್ನುವ ಚಿಂತೆ ಉಂಟಾಗಿದೆ. ಏಕೆಂದ್ರೆ ಚಿತ್ರದಲ್ಲಿ ಸನ್ನಿ ಲಿಯೋನ್​ ನಟಿಸ್ತಾ ಇದ್ದಾರೆ ಎನ್ನಲಾಗಿತ್ತು. ಸನ್ನಿ ಲಿಯೋನ್ ಜೊತೆಗೆ ಉಪೇಂದ್ರ ಇರೋ ಈ ಒಂದು ಫೋಟೋ ಕೂಡ ವೈರಲ್​ ಆಗಿತ್ತು. ಸನ್ನಿ ಚಿತ್ರದಲ್ಲಿ ಇದ್ದಾರೆ ಎಂದು  ಉಪೇಂದ್ರ ಅವರೇ ಹೇಳಿದ್ದರು ಎನ್ನುವುದು ಕೆಲವು ಅಭಿಮಾನಿಗಳ ಮಾತು. ಅಷ್ಟೇ ಅಲ್ಲದೇ ಶೂಟಿಂಗ್​ ಸೆಟ್​ನಲ್ಲಿ ನಟಿ ಕಾಣಿಸಿಕೊಂಡಿದ್ದರು ಎನ್ನಲಾದ ವಿಡಿಯೋಗಳು ಕೂಡ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡಿತ್ತು. ಸನ್ನಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಐಟಂ ಸಾಂಗ್​ನಲ್ಲಿ ಸೊಂಟ ಬಳುಕಿಸಲಿದ್ದಾರೆ ಎಂದೆಲ್ಲಾ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಊಹಿಸಿಕೊಂಡು ಅದನ್ನೇ ನಿಜ ಎಂದು ಬಿಂಬಿಸುತ್ತಾ ಬರಲಾಗಿತ್ತು. 

ಹುಡುಗಿಯರ ಇಂಪ್ರೆಸ್‌ ಮಾಡಲು ಭಾಗ್ಯಲಕ್ಷ್ಮಿ ತಾಂಡವ್‌ ಕೊಟ್ಟ ಟಿಪ್ಸ್‌ ಕೇಳಿ ಯುವತಿಯರು ಕಿಡಿಕಿಡಿ!

ಆದರೆ ಚಿತ್ರದಲ್ಲಿ ನಾಯಕಿ ರೀಷ್ಮಾ ಆಗೀಗ ಕಾಣಿಸಿಕೊಂಡದ್ದು ಬಿಟ್ಟರೆ, ಆರ್ಮುಗ ರವಿಶಂಕರ್, ಅಚ್ಯುತ್‌ ಕುಮಾರ್  ಸಾಧುಕೋಕಿಲ ಸೇರಿದಂತೆ ಕೆಲವು ನಟ ನಟಿಯರು ಕಾಣಿಸಿಕೊಂಡಿದ್ದಾರೆಯೇ ಬಿಟ್ಟರೆ ಸನ್ನಿ ಲಿಯೋನ್​ ಸುದ್ದಿಯೇ ಇಲ್ಲ.  ಅದನ್ನೇ ಉಪೇಂದ್ರೆ ಅವರಿಗೆ ಪ್ರೆಸ್​ಮೀಟ್​ನಲ್ಲಿ ಕೇಳಲಾಯಿತು. ಅದಕ್ಕೆ ಉಪೇಂದ್ರ ಅವರು, ಸನ್ನಿ ಲಿಯೋನ್ ಅನ್ನೋದೆ ಭ್ರಮೆ ಎಂದರು. ಆಗ ಅವರಿಗೆ ಸನ್ನಿ ಲಿಯೋನ್​ ಪಾತ್ರ ಶೂಟ್​ ಮಾಡಿಲ್ವಾ ಅಥ್ವಾ ಅವರೇ ಇಲ್ವಾ ಅಥ್ವಾ ಕತ್ತರಿ ಹಾಕಲಾಗಿದ್ಯಾ ಎಂದೆಲ್ಲಾ ಪ್ರಶ್ನಿಸಲಾಯಿತು. ಅದಕ್ಕೆ ಉಪೇಂದ್ರ ಅವರು, ದೃಶ್ಯ ಬಂದಿಲ್ಲಾ ಅಂದ್ರೆ ಅವ್ರು ಇಲ್ಲಾ ಎಂದೇ ಅರ್ಥ ಅಷ್ಟೇ ಎಂದರು.

ನಾನಂತೂ ಸನ್ನಿ ಲಿಯೋನ್​ ಈ ಚಿತ್ರದಲ್ಲಿ ಇದ್ದಾರೆ ಎಂದು ಎಲ್ಲಿಯೂ ಹೇಳಲೇ ಇಲ್ಲ. ಎಲ್ಲವೂ ನಿಮ್ಮದೇ ಕಲ್ಪನೆ. ನಮ್ಮ ಚಿತ್ರತಂಡ ಕೂಡ ಆ ಬಗ್ಗೆ ಹೇಳಲೇ ಇಲ್ಲ. ಬರಿ ಯಾರ್ಯಾರೋ ಸುದ್ದಿ ಮಾಡ್ತಿರೋದು ಅಷ್ಟೇ. ಸನ್ನಿ ಲಿಯೋನ್​ ಇದ್ದಾರೆ ಎಂದು ಹೇಳಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ. ಈ ಮಾತು ಕೇಳಿ ನೆಟ್ಟಿಗರು ಕಣ್​ ಕಣ್​ ಬಿಡುತ್ತಾರೆ. ಹಾಗಿದ್ದರೆ ಸನ್ನಿ ಲಿಯೋನ್​ ಸೃಷ್ಟಿಯಾಗಿದ್ದು ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.

ಹೊಸ ವರ್ಷಕ್ಕೆ ಹೊಸ ಹುಡುಗನ ಜೊತೆ ಫಾರಿನ್​ನಲ್ಲಿ ನಿವೇದಿತಾ ಗೌಡ: ಮತಾಂತರಗೊಂಡ್ರಾ ಕೇಳ್ತಿರೋ ಫ್ಯಾನ್ಸ್​!

Latest Videos
Follow Us:
Download App:
  • android
  • ios