ಹೊಸ ವರ್ಷಕ್ಕೆ ಹೊಸ ಹುಡುಗನ ಜೊತೆ ಫಾರಿನ್​ನಲ್ಲಿ ನಿವೇದಿತಾ ಗೌಡ: ಮತಾಂತರಗೊಂಡ್ರಾ ಕೇಳ್ತಿರೋ ಫ್ಯಾನ್ಸ್​!

ನಿವೇದಿತಾ ಗೌಡ ಕ್ರಿಸ್​ಮಸ್​ ಆಚರಿಸುವ ಸಲುವಾಗಿ ನ್ಯೂಯಾರ್ಕ್​ಗೆ ಹೋಗಿದ್ದು, ಅಲ್ಲಿ ಯುವಕನೊಬ್ಬನ ಜೊತೆ ಆಕಾಶಬುಟ್ಟಿ ಹಾರಿಸಿದ್ದಾರೆ. ಏನಿದು ವಿಷ್ಯ?
 

Nivedita Gowda went to New York to celebrate Christmas with new boy video viral suc

ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ದಿನಕ್ಕೊದ್ದರಂತೆ ವಿಡಿಯೋ ಅಪ್​ಲೋಡ್​ ಮಾಡುತ್ತಲೇ ಹಲ್​ಚಲ್​ ಸೃಷ್ಟಿಸ್ತಿರೋ ಬೆಡಗಿ ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ. ಚಂದನ್​ ಶೆಟ್ಟಿ ಜೊತೆಗಿನ ದಾಂಪತ್ಯ ಜೀವನಕ್ಕೆ ಎಳನೀರು ಬಿಡುತ್ತಲೇ ಹಾಟೆಸ್ಟ್​ ಆಗಿ ಕಾಣಿಸಿಕೊಳ್ತಿರೋ ಬಾರ್ಬಿ ಡಾಲ್​ ಇದೀಗ ಹೊಸ ವರ್ಷಕ್ಕೆ ನ್ಯೂಯಾರ್ಕ್​ಗೆ ಹೋಗಿದ್ದಾರೆ. ಇದೀಗ ಯುವಕನೊಬ್ಬನ ಜೊತೆ ಆಕಾಶಬುಟ್ಟಿಯನ್ನು ಹಾರಿಬಿಟ್ಟಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಭಾರತದಲ್ಲಿ, ಆಕಾಶಬುಟ್ಟಿಯನ್ನು ಬಿಡುವಂತೆ ಕೆಲವು ಕಡೆಗಳಲ್ಲಿ ಹೊಸ ವರ್ಷದ ಸಂದರ್ಭದಲ್ಲಿ ಕೆಲವೊಂದು ವಿಷ್​ ಮಾಡಿ ಆಕಾಶಬುಟ್ಟಿಯನ್ನು ಹಾರಿ ಬಿಡಲಾಗುತ್ತದೆ. ಅದೇ ರೀತಿ, ನಿವೇದಿತಾ ಕೂಡ ಮಾಡಿದ್ದಾರೆ. ಅವರ ಜೊತೆ ಇರುವ ಯುವಕ ಕೂಡ ವಿಷ್​ ಮಾಡಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ಈ ವಿಡಿಯೋ ಅನ್ನು ಜೈ ಮದ್ದಳೇನ ಎನ್ನುವವರಿಗೆ ನಿವೇದಿತಾ ಟ್ಯಾಗ್​ ಮಾಡಿದ್ದು, ಇದು ಆ ಯುವಕನ ಪ್ರೊಫೈಲ್​ ಆಗಿದೆ. ಈ ಹೊಸ ಯುವಕನ ಜೊತೆ ಹೊಸ ವಿಷ್​ ಮಾಡಿರುವುದಾಗಿ ಕ್ಯಾಪ್ಷನ್​ ಮೂಲಕ ಕಂಡುಕೊಂಡಿರುವ ಅಭಿಮಾನಿಗಳು, ಆ ಯುವಕ ಯಾರು ಎಂದು ತಲೆಗೆ ಹುಳುಬಿಟ್ಟುಕೊಂಡಿದ್ದಾರೆ. ಇದಕ್ಕೆ ಥಹರೇವಾರಿ ಕಮೆಂಟ್ಸ್​ಗಳ ಸುರಿಮಳೆಯಾಗುತ್ತಿದೆ. ಈ ಹೊಸ ಹುಡುಗ ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಕ್ರಿಸ್​ಮಸ್​ ಆಚರಿಸುತ್ತಿರುವುದಾಗಿ ನಿವೇದಿತಾ ಹೇಳಿಕೊಂಡಿರುವ ಹಿನ್ನೆಲೆಯಲ್ಲಿ ಮತಾಂತರಗೊಂಡ್ರಾ ಎಂದು ನೆಟ್ಟಿಗರು ತಮಾಷೆ ಮಾಡ್ತಿದ್ದಾರೆ. ಇದಾಗಲೇ ಕ್ರಿಸ್​ಮಸ್​ನಲ್ಲಿ ವೈನ್​ ಹೀರುವ ಫೋಟೋ ಒಂದನ್ನು ಇವರು ಈಗಾಗಲೇ ಅಪ್​ಲೋಡ್​ಮಾಡಿದ್ದರು. ಇದೀಗ ಕ್ರಿಸ್​ಮಸ್​ ಆಚರಿಸಲು ವಿದೇಶಕ್ಕೆ ಹೋಗಿರುವ ಕಾರಣದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ್ರಾ ಎಂದು ಪ್ರಶ್ನಿಸುತ್ತಿದ್ದಾರೆ.

ಅಷ್ಟಕ್ಕೂ, ಸಿನಿಮಾಗಳಲ್ಲಿ ನಟಿಸದಿದ್ದರೂ, ಧಾರಾಳ ದೇಹ ಪ್ರದರ್ಶನ ಮಾಡಿಕೊಂಡಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಡುತ್ತಲೇ ಫೇಮಸ್​ ಆಗ್ತಿರೋ ನಟಿಯರು ಒಂದಿಷ್ಟು ಮಂದಿಯ ಪೈಕಿ ನಿವೇದಿತಾ ಕೂಡ ಒಬ್ಬರಾಗಿದ್ದಾರೆ.  ಅಂಗಾಂಗಗಳ ಪ್ರದರ್ಶನ ಹೆಚ್ಚಾದಷ್ಟೂ ಅವರಿಗೆ ಡಿಮಾಂಡ್​ ಜಾಸ್ತಿಯಾಗ್ತಿರೋದು ಈಗಿನ ಟ್ರೆಂಡ್​. ಮೊಬೈಲ್​ ಅನ್ನು ಸೆಲ್ಫೀ ಮೋಡ್​ನಲ್ಲಿ ಸೊಟ್ಟ ಮೂತಿ ಮಾಡುವುದು, ಅತ್ತ-ಇತ್ತ ತಲೆಯಾಡಿವುದು... ಇಷ್ಟೇ ಸಾಕು ಫೇಮಸ್​ ಆಗಲು. ಇಂಥವರ ವಿಡಿಯೋಗಳೇ ಸಾಕಷ್ಟು ಶೇರ್ ಆಗುತ್ತವೆ. ಟ್ರೋಲ್​ ಮಾಡುವುದಕ್ಕಾಗಿಯೇ ಒಂದಿಷ್ಟು ಜನ ಇಂಥ ನಟಿಯರ ವಿಡಿಯೋ ಕಾಯುತ್ತಲೇ ಇರುತ್ತಾರೆ. ಅವರು ಟ್ರೋಲ್​  ಮಾಡಿ ಖುಷಿ ಪಟ್ಟುಕೊಂಡರೆ, ದೇಹ ಪ್ರದರ್ಶನ ಧಾರಾಳವಾಗಿ ಮಾಡುವ ನಟಿಯರೂ ಫುಲ್​ ಖುಷ್​. ಒಟ್ಟಿನಲ್ಲಿ ಪ್ರಚಾರ ಬೇಕು ಅಷ್ಟೇ, ಪಾಸಿಟಿವ್​, ನೆಗೆಟಿವ್​ ಅದೆಲ್ಲಾ ಯಾರಿಗೆ ಬೇಕು ಎನ್ನುವ ಜಾಯಮಾನ ಇವರದ್ದು. ಇದೇ ಸಾಲಿಗೆ ಸೇರಿದ ನಟಿ ನಿವೇದಿತಾ ಎನ್ನುವುದು ಎಲ್ಲರಿಗೂ ತಿಳಿದಿರೋ ಸತ್ಯನೇ. 

ಬೀಚ್​ನಲ್ಲಿರೋ ನಿವೇದಿತಾ ಗೌಡ ವಿಡಿಯೋ ವೈರಲ್​! ಪೂನಂ ಪಾಂಡೆಗೆ ಹೋಲಿಕೆ ಮಾಡೋದಾ ನೆಟ್ಟಿಗರು?

ಇದೀಗ ಬಿಗ್‌ಬಾಸ್‌ ಖ್ಯಾತಿಯ ನಟಿ ನಿವೇದಿತಾ ಗೌಡ ಕೂಡ ಡಿವೋರ್ಸ್​ ಬಳಿಕ ಇದೇ ಹಾದಿ ಹಿಡಿದಿದ್ದಾರೆ ಎಂಬುದು ಅವರ ಅಭಿಮಾನಿಗಳ ಮಾತು.  ಬಳಕುವ ಬಳ್ಳಿಯಂತಿರೋ ನಿವೇದಿತಾ, ಎದೆಗೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡ್ರಾ ಎಂದು ಪ್ರತಿಬಾರಿಯೂ ಅವರಿಗೆ ಕಮೆಂಟ್ಸ್​ಗಳ ಸುರಿಮಳೆಯೇ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಟಿ ಧಾರಾಳವಾಗಿ ದೇಹ ಪ್ರದರ್ಶನ ಮಾಡುತ್ತಲೇ ರೀಲ್ಸ್​ ಮಾಡುತ್ತಿರುವ ಕಾರಣ, ತೀರಾ ಕೆಟ್ಟದಾಗಿರೋ ಕಮೆಂಟ್ಸ್​ ಜಾಸ್ತಿಯಾಗುತ್ತಿವೆ. ಇದೇ ಕಾರಣಕ್ಕೆ ಚಂದನ್​ ಶೆಟ್ಟಿ ಡಿವೋರ್ಸ್​ ಪಡೆದುಕೊಂಡದ್ದು, ರೀಲ್ಸ್ ಮಾಡುವುದಕ್ಕಾಗಿಯೇ ವಿಚ್ಛೇದನ ಪಡೆದ ಮೊದಲ ಮಹಿಳೆ... ಹೀಗೆ ಏನೇನೋ ಕಮೆಂಟ್ಸ್​ ಮಾಡಿ ನಿವೇದಿತಾರ ತೇಜೋವಧೆ ಮಾಡಲಾಗುತ್ತಿದೆ. ನಿವೇದಿತಾ ಅವರು ಎಷ್ಟೇ ಒಳ್ಳೆಯ ರೀಲ್ಸ್​  ಮಾಡಿದರೂ, ಗೊಂಬೆಯಂತೆ ಕಾಣಿಸುವ ವಿಡಿಯೋ ಶೇರ್​ ಮಾಡಿದರೂ ಒಂದಿಲ್ಲೊಂದು ಕ್ಯಾತೆ ತೆಗೆಯುತ್ತಲೇ ಇದ್ದಾರೆ.  ಅದರಲ್ಲಿಯೂ ವಿಚ್ಛೇದನದ ಬಳಿಕ  ನಿವೇದಿತಾ ಗೌಡ ಅವರು ಇತ್ತೀಚಿನ ದಿನಗಳಲ್ಲಿ ಸಕತ್​ ಹಾಟ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಿನಿ, ಮಿಡಿ ಎಲ್ಲಾ ಬಿಟ್ಟು ಬ್ಯಾಕ್‌ಲೆಸ್‌ ಮಟ್ಟಿಗೂ ಬಂದು ನಿಂತಿದ್ದಾರೆ.   

ಮತ್ತೊಂದು ಹಾಟ್​ ವಿಡಿಯೋ ಹರಿಬಿಟ್ಟ ನಿವೇದಿತಾ ಗೌಡ: ಕಮೆಂಟಿಗರ ಸುರಕ್ಷತೆಗೆ 'ಹಿತ ರಕ್ಷಣಾ ವೇದಿಕೆ' ಶುರು!

Latest Videos
Follow Us:
Download App:
  • android
  • ios