ನಾವು ತಲೆ ಬಗ್ಗಿಸದೇ ಇದ್ದಿದ್ದರೆ ಆಸ್ಪತ್ರೆ ಸೇರಿಕೊಳ್ಳಬೇಕಿತ್ತು; ಯಾಕೆ ಹೀಗಂದಿದ್ರು ನಟ ಡಾ ವಿಷ್ಣುವರ್ಧನ್...!?
ನಟ ವಿಷ್ಣುವರ್ಧನ್ ಹಾಗೂ ನಟಿ ಭಾರತಿಯವರು 1975ರಲ್ಲಿ ಮದುವೆಯಾಗಿದ್ದಾರೆ. ಅವರಿಗೆ ಇಬ್ಬರು ದತ್ತುಪುತ್ರಿಯರು ಇದ್ದಾರೆ. ನಟ ವಿಷ್ಣುವರ್ಧನ್ ಅವರು 30 ಡಿಸೆಂಬರ್ 2009ರಂದು (30 December 2009)ನಿಧನ ಹೊಂದಿದ್ದಾರೆ...
ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಕಲಾವಿದರಲ್ಲಿ ಡಾ ವಿಷ್ಣುವರ್ಧನ್ (Dr Vishnuvardhan)ಸಹ ಒಬ್ಬರು. ಕನ್ನಡವನ್ನು ಮೀರಿಯೂ ಇಡೀ ಭಾರತದ ಲೆವಲ್‌ನಲ್ಲಿ ಅಂದಿನ ಕಾಲದಲ್ಲಿಯೇ ಮಿಂಚಿದ್ದ ನಟ ವಿಷ್ಣುವರ್ಧನ್ ವೃತ್ತಿಜೀವನದಲ್ಲಿ ಬಹಳಷ್ಟು ಮೇಲೇರಿ ಮೇರುನಟರೆಂದು ಗುರುತಿಸಿಕೊಂಡಿದ್ದರು. ಆದರೆ ವೈಯಕ್ತಿಕ ಜೀವನದಲ್ಲಿ ಅಷ್ಟೇ ನೊಂದು ಬೆಂದಿದ್ದರು ಈ ನಟ. ಇಂದು ವಿಷ್ಣುವರ್ಧನ್ ನಮ್ಮೊಂದಿಗೆ ಇಲ್ಲ, ಅವರನ್ನು ದಿವಂಗತ ನಟ ಎಂದೇ ಕರೆಯುತ್ತೇವೆ. ಆದರೆ ಬದುಕಿರುವಾಗ ಅವರೇ ಹೇಳಿರುವ ಕೆಲವೊಂದು ಮಾತುಗಳು ಆಗಾಗ ಕರುನಾಡ ತುಂಬಾ ಸುತ್ತಾಡುತ್ತಲೇ ಇರುತ್ತವೆ.
ಹೌದು ನಟ ವಿಷ್ಣುವರ್ಧನ್ ಒಮ್ಮೆ ಮಾತನಾಡುತ್ತ ತಮ್ಮ ಜೀವನದಲ್ಲಿ ನಡೆದಿದ್ದ ಹಳೆಯ ಘಟನೆಯೊಂದರ ಬಗ್ಗೆ ಮಾತನಾಡಿದ್ದರು. ತುಂಬಾ ನೋವಿನಿಂದ ಆ ಕಹಿ ಘಟನೆ ಬಗ್ಗೆ ಹೇಳಿಕೊಂಡಿದ್ದ ವಿಷ್ಣುವರ್ಧನ್ ಅವರು 'ನನ್ನ ಮದುವೆ ನಡೆದ ಬಳಿಕ ಅಲ್ಲಿ ನಾನು, ಭಾರತಿ ಮತ್ತು ಅಂಬರೀಷ್ ಮೂವರಿದ್ದೆವು. ಮದುವೆಗೆ ಬಹಳಷ್ಟು ಜನರು ಸೇರಿದ್ದರು. ಅವರೆಲ್ಲರಿಗೂ ನಮ್ಮನ್ನು ನೋಡಲು ಅವಕಾಶವಾಗಲೆಂದು ನಮ್ಮಿಬ್ಬರನ್ನು (ವಿಷ್ಣುವರ್ಧನ್-ಭಾರತಿ) ಸ್ವಲ್ಪ ಎತ್ತರದ ಸ್ಥಳದಲ್ಲಿ ಹತ್ತಿಸಿದರು. ನಾವು ನವ-ವಧುವರರು ಅತಿಥಿ-ಅತ್ಮೀಯರಿಗೆ ಖುಷಿಯಿಂದ ಕೈ ಬೀಸುತ್ತಿರಲು ಎಲ್ಲಿಂದಲೋ ಕಲ್ಲುಗಳು ನಮ್ಮ ತಲೆಯ ಬಳಿ ತೂರಿ ಬಂದವು.
ಸಾಯಿಕುಮಾರ್ ಜತೆ 'ಸತ್ಯ ಸನ್ ಆಫ್ ಹರಿಶ್ಚಂದ್ರ'ನಾಗಿ ಮಿಂಚಲಿದ್ದಾರೆ ನಿರೂಪ್ ಭಂಡಾರಿ
ತಕ್ಷಣವೇ ನಮ್ಮಿಬ್ಬರನ್ನೂ ಅಲ್ಲಿಂದ ಹೊರಗೆ ಕಳುಹಿಸುವ ವ್ಯವಸ್ಥೆ ಮಾಡಲಾಯಿತು. ಆದರೆ ಜನರ ಮಧ್ಯೆ ಇದ್ದ ನಾವು ಹೊರಗೆ ಹೋಗಲು ಸುಮಾರು ಹದಿನೈದು ನಿಮಿಷಗಳೇ ಹಿಡಿದವು. ಅಷ್ಟರಲ್ಲಿ ಕಿಡಿಗೇಡಿಗಳು ಕಲ್ಲು ತೂರುತ್ತಲೇ ಇದ್ದರು. ಭಾರತಿಗೆ ಮತ್ತು ನನಗೆ ಕಲ್ಲುಗಳು ತಲೆಗೆ ತಾಗಬಾರದೆಂದು ನಾವು ತಲೆಯನ್ನು ಬಗ್ಗಿಸಿ ಹಿಡಿದುಕೊಂಡಿದ್ದೆವು.
'ನಾನು ನಿಜವಾಗಿಯೂ ಶ್ರೀಮಂತೆನಾ; ಅದೆಂಥಾ ಮಾತು ಹೇಳಿದ್ರು ನೋಡಿ ನಟಿ ಪ್ರಿಯಾಂಕಾ ಚೋಪ್ರಾ..!
ಮದುವೆ ಮಂಟಪದಿಂದ ಅಪರಾಧಿಗಳಂತೆ ಅಂದು ನಾವು ಹೊರಗೆ ಓಡಿಹೋದ ಕ್ಷಣವನ್ನು ನಾನೆಂದಿಗೂ ಮರೆಯಲಾರೆ. ನಮ್ಮ ತಲೆಯನ್ನು ಬಗ್ಗಿಸದೇ ಹಾಗೆ ನಡೆದಿದ್ದರೆ ಅಂದು ಕಲ್ಲುಗಳು ನಮ್ಮ ತೆಲೆಗೆ ಬಡಿದು ನಾವು ಆಸ್ಪತ್ರೆ ಸೇರಿಕೊಳ್ಳುವುದು ಗ್ಯಾರಂಟಿ ಎಂಬಂತಾಗಿತ್ತು' ಎಂದಿದ್ದರು ನಟ ವಿಷ್ಣುವರ್ಧನ್.
ದುರಂತ ಕಥೆಯಾಗಿರುವ ಸಮಂತಾ ಅದೆಂಥಾ ಮಾತು ಹೇಳಿದ್ರು; ಅಯ್ಯೋ ಪಾಪ ಅಂತಿದಾರೆ ಫ್ಯಾನ್ಸ್!
ಅಂದಹಾಗೆ ನಟ ವಿಷ್ಣುವರ್ಧನ್ ಹಾಗೂ ನಟಿ ಭಾರತಿಯವರು 1975ರಲ್ಲಿ ಮದುವೆಯಾಗಿದ್ದಾರೆ. ಅವರಿಗೆ ಇಬ್ಬರು ದತ್ತುಪುತ್ರಿಯರು ಇದ್ದಾರೆ. ನಟ ಅನಿರುದ್ಧ್ ಅವರು ವಿಷ್ಣುವರ್ಧನ್ ಅಳಿಯಂದಿರಲ್ಲಿ ಒಬ್ಬರು.ನಟ ವಿಷ್ಣುವರ್ಧನ್ ಅವರು 30 ಡಿಸೆಂಬರ್ 2009ರಂದು (30 December 2009)ನಿಧನ ಹೊಂದಿದ್ದಾರೆ. ಅವರ ನಿಧನದಿಂದ ಕನ್ನಡ ಚಿತ್ರರಂಗ ಮೇರು ನಟರೊಬ್ಬರನ್ನು ಕಳೆದುಕೊಂಡಂತಾಗಿದೆ.