'ನಾನು ನಿಜವಾಗಿಯೂ ಶ್ರೀಮಂತೆನಾ; ಅದೆಂಥಾ ಮಾತು ಹೇಳಿದ್ರು ನೋಡಿ ನಟಿ ಪ್ರಿಯಾಂಕಾ ಚೋಪ್ರಾ..!

ನನ್ನಬದುಕು ನನ್ನದಾದರೂ ಅದರಿಂದ ನನಗೆ ಮಾತ್ರವಲ್ಲ, ನನ್ನ ಸುತ್ತಲೂ ಇರುವವರಿಗೆ ಅನುಕೂಲಕರವಾಗಿರಬೇಕು. ನನಗೆ ಮಾತ್ರ ಉಪಯೋಗ ಆಗುವಂತೆ ಇದ್ದರೆ ನನ್ನ ಮನಸ್ಸಿಗೆ ಅದು ಇಷ್ಟವಾಗುವುದಿಲ್ಲ, ಅಂತಹ ಕೆಲಸದಿಂದ ನನಗೆ ಹಿಂಸೆಯಾಗುತ್ತದೆ' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. 

I am really not an actor before makeup and after removing colors on my face says actress Priyanka chopra srb

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಬಹಳಷ್ಟು ಸಂದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಮದುವೆ ಬಳಿಕ ಪ್ರಿಯಾಂಕಾ ಅಮೆರಿಕಾ ಹೋಗಿ ಗಂಡ ನಿಕ್ ಜೊನಾಸ್ ಜತೆ ಸೆಟ್ಲ್ ಆದ ಬಳಿಕ ಹಾಲಿವುಡ್ ಮಾಧ್ಯಮಗಳು ಅವರ ಇಂಟರ್‌ವ್ಯೂಗಳನ್ನು ಮಾಡುತ್ತಿದ್ದಾರೆ. ಅದರಲ್ಲಿ ನಟಿ ಪ್ರಿಯಾಂಕಾ ಅವರು ಬಹಳಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಅವರ ಕೆಲವು ಮಾತುಗಳು ಫ್ಯಾನ್ಸ್‌ಗಳಿಗೆ ಮಾತ್ರವಲ್ಲ, ಬಹುತೇಕ ಎಲ್ಲರಿಗೂ ಸ್ಪೂರ್ತಿ ನೀಡುವಂಥವು. 

ಸಂದರ್ಶನವೊಂದರಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ 'ನಾನು ಬೆಳಿಗ್ಗೆ ಎದ್ದು ಹಲ್ಲುಜ್ಜುವ ಮೊದಲು ಚಾಯ್ ಕುಡಿಯುವಾಗ ನಾನು ಯಾರು ಎಂಬುದು ನನಗೆ ಅರಿವಾಗುತ್ತದೆ, ಆಗಬೇಕು. ಏಳು ಜನರು ನನ್ನ ಮುಖಕ್ಕೆ ಮೇಕಪ್‌ ಮುಗಿಸಿ, ನಾನು ಹೊರಗೆ ಅಥವಾ ಯಾವುದೋ ಶೂಟ್‌ನಲ್ಲಿ ಇರುವಾಗ ನನ್ನ ಸುತ್ತಲೂ ನೂರಾರು ಜನರು ಸುತ್ತುತ್ತಿರುವಾಗ ನಾನು ಯಾರೆಂಬುದು ಮುಖ್ಯವಲ್ಲ. ಅದು ನಿಜವಾಗಿಯೂ ನಾನಾಗಿರುವುದಿಲ್ಲ. ನಾನು ಬೆಳಿಗ್ಗೆ ಎದ್ದ ತಕ್ಷಣ, ಮೇಕಪ್‌ ಮಾಡಿಕೊಳ್ಳುವ ಮೊದಲು ಹಾಗೂ ಮಲಗುವ ಸ್ವಲ್ಪ ಕಾಲದ ಮೊದಲು ಮೇಕಪ್ ತೆಗೆದಾಗಲೇ ನಿಜವಾದ ನಾನು ಇರುತ್ತೇನೆ. 

ರೌಡಿ-ಕುಡುಕರನ್ನು ಸಾಯಿಸುವ ಕಥಾಹಂದರದ ಹೊಸಬರ 'ಕಲಿ ಕುಡುಕರು' ಟ್ರೈಲರ್ ಲಾಂಚ್

ಬೇರೆಯವರ ವಿಷಯದಲ್ಲಿ ನಾನು ಏನೂ ಹೇಳಲಾರೆ. ಆದರೆ, ನನ್ನ ವಿಷಯದಲ್ಲಿ ಮಾತ್ರ ನನ್ನ ಮೇಲಿನ ಹೇಳಿಕೆ ನಿಜ. ನನಗೆ ಇವನ್ನೆಲ್ಲ ಹೇಳಲು ಯಾವುದೇ ಅಳುಕಿಲ್ಲ. ಕಾರಣ ನಟನೆ ನನ್ನ ಕೆಲಸ, ಅದೇ ನಾನಲ್ಲ ಎಂಬ ಅರಿವು ನನಗಿದೆ. ನನ್ನ ಕೆಲಸವನ್ನು ನಾನು ಬೇರೆಯವರಿಗೆ ಇಷ್ಟವಾಗುವಂತೆ ಮಾಡಬೇಕು, ಅದು ನನ್ನ ಕರ್ತವ್ಯ. ನಾನು ಕೆಲಸವನ್ನು ನನಗಾಗಿಯೇ ಮಾಡುತ್ತೇನೆ, ಆದರೆ ಅದಕ್ಕಾಗಿ ನನಗೆ ಪೇಮೆಂಟ್ ಕೊಡಲಾಗುತ್ತದೆ. ಅವರು ಹೇಳಿದಂತೆ ನನ್ನಿಂದ ಸಾಧ್ಯವಾದಷ್ಟು ಚೆನ್ನಾಗಿ ನಾನು ನನ್ನ ಕೆಲಸವನ್ನು ಮಾಡಬೇಕು. ಅದನ್ನು ನಾನು ಯಾವತ್ತೂ ಮಾಡಿಕೊಂಡು ಬಂದಿದ್ದೇನೆ. 

ಮದುವೆಯಾಗಿ ಅಮೆರಿಕಾಗೆ ಹೋಗಿದ್ದ ನಟಿ ಹೇಮಾ ಡಿವೋರ್ಸ್‌ ಪಡೆದು ಭಾರತಕ್ಕೆ ವಾಪಸ್ ಬಂದಿದ್ದು ಯಾಕೆ..!?

ನನ್ನಬದುಕು ನನ್ನದಾದರೂ ಅದರಿಂದ ನನಗೆ ಮಾತ್ರವಲ್ಲ, ನನ್ನ ಸುತ್ತಲೂ ಇರುವವರಿಗೆ ಅನುಕೂಲಕರವಾಗಿರಬೇಕು. ನನಗೆ ಮಾತ್ರ ಉಪಯೋಗ ಆಗುವಂತೆ ಇದ್ದರೆ ನನ್ನ ಮನಸ್ಸಿಗೆ ಅದು ಇಷ್ಟವಾಗುವುದಿಲ್ಲ, ಅಂತಹ ಕೆಲಸದಿಂದ ನನಗೆ ಹಿಂಸೆಯಾಗುತ್ತದೆ' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. ಒಟ್ಟಿನಲ್ಲಿ, ನಟಿ ಪ್ರಿಯಾಂಕಾ ಅಡಿರುವ ಮಾತುಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಬಹಳಷ್ಟು ಜನರು ಇಷ್ಟಪಟ್ಟು ಕಾಮೆಂಟ್ ಮಾಡಿದ್ದಾರೆ. ಬಾಲಿವುಡ್‌ನಲ್ಲಿ ಮಾತ್ರವಲ್ಲದೇ ಹಾಲಿವುಡ್‌ನಲ್ಲಿ ಕೂಡ ಮಿಂಚುತ್ತಿರುವುದು ಅವರ ಅಭಿಮಾನಿಗಳಿಗೆ ತುಂಬಾ ಖುಷಿ ನೀಡುತ್ತಿದೆ ಎನ್ನಬಹುದು.

ಪೃಥ್ವಿ ಅಂಬಾರ್ - ಮಿಲನಾ ನಾಗರಾಜ್ 'For REGN' ಡ್ಯುಯೇಟ್ ಸಾಂಗ್ ನೋಡಿ ಡಾರ್ಲಿಂಗ್ ಕೃಷ್ಣ ಫಿದಾ!

Latest Videos
Follow Us:
Download App:
  • android
  • ios