Asianet Suvarna News Asianet Suvarna News

ದುರಂತ ಕಥೆಯಾಗಿರುವ ಸಮಂತಾ ಅದೆಂಥಾ ಮಾತು ಹೇಳಿದ್ರು; ಅಯ್ಯೋ ಪಾಪ ಅಂತಿದಾರೆ ಫ್ಯಾನ್ಸ್!

ನಟಿ ಸಮಂತಾ ಅವರು ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ನಟಿಸಲು ಅವರಿಂದ ಸಾಧ್ಯವೂ ಇಲ್ಲ. ಅವರ ಆರೋಗ್ಯ ಹದಗೆಟ್ಟಿದೆ. ಮೈಯೋಸಿಟಿಸ್ ಖಾಯಿಲೆ ಬಂದರೆ ಅದು ಅದೆಷ್ಟು ನೋವು ಕೊಡುತ್ತದೆ, ದೇಹವನ್ನು ಅಕ್ಷರಶಃ ಹಿಂಡುತ್ತದೆ ಎಂಬುದು ಅನುಭವಿಸಿದವರಿಗೇ ಗೊತ್ತು.

I have no control over my life now says actress Samantha Ruth Prabhu srb
Author
First Published Feb 7, 2024, 3:13 PM IST

ನಟಿ ಸಮಂತಾ ನೋವಿನಲ್ಲಿ ಕೆಲವು ಮಾತನಾಡಿದ್ದಾರೆ. ಅವರು ಮೈಯೋಸಿಟಿಸ್ (myositis) ಖಾಯಿಲೆಯಿಂದ ಬಳಲುತ್ತಿರುವುದು ಬಹುತೇಕ ಎಲ್ಲರಿಗೂ ಗೊತ್ತೇ ಇದೆ. ಅವರು ಆ ಖಾಯಿಲೆ ಸಂಬಂಧ ಅಮೆರಿಕಾದಲ್ಲಿ ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಿದ್ದಾರೆ. ಹಲವು ತಿಂಗಳುಗಳಿಂದ ಅಮೆರಿಕಾದಲ್ಲಿದ್ದು ಮೆಡಿಕೇಶನ್‌ನಲ್ಲಿ ಜೀವಿಸುತ್ತಿರುವ ನಟಿ ಸಮಂತಾಗೆ ಜೀವನ ಹಲವು ಪಾಠಗಳನ್ನು ಕಲಿಸಿದೆ ಎನ್ನಬಹುದು. ಏಕೆಂದರೆ, ಅವರಾಡುವ ಇತ್ತೀಚಿನ ಮಾತುಗಳು ಅವರ ಮನದಾಳದಲ್ಲಿ ಏನಿದೆ ಎಂಬುದನ್ನು ಹೊರಜಗತ್ತಿಗೆ ಅನಾವರಣ ಮಾಡುತ್ತಿದೆ. 

ಹೌದು, ನಟಿ ಸಮಂತಾ (Samantha Ruth Prabhu) ಅನಾರೋಗ್ಯಕ್ಕೆ ಒಳಗಾಗಿ ತುಂಬಾ ಬೇಸರದಲ್ಲಿದ್ದಾರೆ. ಆದರೆ ಅವರು ಈಗ ಮೊದಲಿಗಿಂತ ಸಾಕಷ್ಟು ಪ್ರಬುದ್ದರೂ ಆಗಿದ್ದಾರೆ ಎನ್ನಬಹುದು.ನಟಿ ಸಮಂತಾ (Samantha) ಸಂದರ್ಶನದಲ್ಲಿ ಆಡಿರುವ ಮಾತುಗಳೇ ಅದಕ್ಕೆ ಸಾಕ್ಷಿ. ಹಾಗಿದ್ದರೆ ನಟಿ ಸಮಂತಾ ಏನು ಹೇಳಿದ್ದಾರೆ ನೋಡಿ, 'ನಾನು ಈ ಮೊದಲು ತುಂಬಾ ಪರ್ಫೆಕ್ಷನ್ ನಿರೀಕ್ಷೆ ಮಾಡುತ್ತಿದ್ದೆ. ಅಂದರೆ, ನಾನೊಬ್ಬಳು ನಟಿಯಾಗಿ ನನ್ನ ಕೆಲಸದಲ್ಲಿ ನಾನು 100% ಪಕ್ಕಾ ಆಗಿರಬೇಕೆಂದು ಬಯಸುತ್ತಿದ್ದೆ. ನಾನು ನನ್ನ ಪ್ರತಿಯೊಂದು ಕ್ರಿಯೆಯನ್ನು ಕೂಡ ತುಂಬಾ ಸೂಕ್ಷವಾಗಿ ಮಾಡುತ್ತಿದ್ದೆ. ನನ್ನ ಕೆಲಸವನ್ನು ಪ್ರತಿಯೊಬ್ಬರೂ ಗಮನಿಸಬೇಕು, ಇಷ್ಟಪಡಬೇಕು ಎಂದುಕೊಳ್ಳುತ್ತಿದ್ದೆ. 

ಆದರೆ, ಇಂದು ನಾನು ನನ್ನ ಜೀವನದ ಮೇಲೆ ನನ್ನ ಕಂಟ್ರೋಲ್ ಕಳೆದುಕೊಂಡಿದ್ದೇನೆ. ನಾನು ಸಿಕ್ ಆದಮೇಲೆ ನನ್ನ ಜೀವನದಲ್ಲಿ ನನಗೆ ಯಾವುದೇ ಕಂಟ್ರೋಲ್ ಇಲ್ಲ. ಕೆಲವೊಮ್ಮೆ ದಪ್ಪಗಾಗುತ್ತೇನೆ, ಕೆಲವೊಮ್ಮೆ ಸಣ್ಣಗಾಗುತ್ತೇನೆ. ತುಂಬಾ ವೇಳೆ ನನ್ನ ದೇಹ ನೋವಿನಿಂದ ಕೂಡಿರುತ್ತದೆ. ನನ್ನ ದೇಹದಲ್ಲಿ ಪಿನ್ ನೀಡಲ್ ನೋವು ಬರುತ್ತಲೇ ಇರುತ್ತದೆ. ಕಣ್ಣು ಮಂಜಾಗುತ್ತದೆ, ತಲೆ ತಿರುಗುತ್ತದೆ, ಈಗ ಇರುವಂತೆ ಮುಂದಿನ ಹತ್ತು ನಿಮಿಷದ ಬಳಿಕ ಇರಲಾಗುವುದಿಲ್ಲ. ಸ್ಕಿನ್ ಬದಲಾಗುತ್ತದೆ, ಮುಖ ಊದಿಕೊಳ್ಳುತ್ತದೆ. ನಾನು ಮಂದಿನ ಕ್ಷಣ ಹೇಗಿರುತ್ತೇನೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ' ಎಂದಿದ್ದಾರೆ ನಟಿ ಸಮಂತಾ. 

'ನಾನು ನಿಜವಾಗಿಯೂ ಶ್ರೀಮಂತೆನಾ; ಅದೆಂಥಾ ಮಾತು ಹೇಳಿದ್ರು ನೋಡಿ ನಟಿ ಪ್ರಿಯಾಂಕಾ ಚೋಪ್ರಾ..!

ಅಂದಹಾಗೆ, ನಟಿ ಸಮಂತಾ ಅವರು ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ನಟಿಸಲು ಅವರಿಂದ ಸಾಧ್ಯವೂ ಇಲ್ಲ. ಅವರ ಆರೋಗ್ಯ ಹದಗೆಟ್ಟಿದೆ. ಮೈಯೋಸಿಟಿಸ್ ಖಾಯಿಲೆ ಬಂದರೆ ಅದು ಅದೆಷ್ಟು ನೋವು ಕೊಡುತ್ತದೆ, ದೇಹವನ್ನು ಅಕ್ಷರಶಃ ಹಿಂಡುತ್ತದೆ ಎಂಬುದು ಅನುಭವಿಸಿದವರಿಗೇ ಗೊತ್ತು. ಒಬ್ಬರು ನಟಿಯಾಗಿ ಅವರು ಅದೆಷ್ಟು ಕಷ್ಟ ಅನುಭವಿಸುತ್ತಿರಬಹುದು ಎಂಬುದನ್ನು ಊಹಿಸಲೂ ಅಸಾಧ್ಯ. 

ಮದುವೆಯಾಗಿ ಅಮೆರಿಕಾಗೆ ಹೋಗಿದ್ದ ನಟಿ ಹೇಮಾ ಡಿವೋರ್ಸ್‌ ಪಡೆದು ಭಾರತಕ್ಕೆ ವಾಪಸ್ ಬಂದಿದ್ದು ಯಾಕೆ..!?

ಏಕೆಂದರೆ, ಅವರನ್ನು ಜಗತ್ತು ಗಮನಿಸುತ್ತಲೇ ಇರುತ್ತದೆ. ಅವರಿಂದ ಸಾಕಷ್ಟು ನಿರೀಕ್ಷಿಸುತ್ತಲೇ ಇರುತ್ತದೆ. ಆದ್ದರಿಂದ ಒಬ್ಬರು ಕಲಾವಿದೆಯಾಗಿ ಅವರ ಅನಾರೋಗ್ಯ ಅವರಿಗೆ ದೊಡ್ಡ ಶಾಫವಾಗಿದೆ. ಅನಾರೋಗ್ಯ ಎಲ್ಲರಿಗೂ ಯಾರಿಗೂ ವರವಲ್ಲ ಶಾಫವೇ ಆಗಿದೆ. ಆದರೆ, ನಟಿ ಸಮಂತಾ ಸದ್ಯಕ್ಕೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರ ಮಾತನ್ನು ಕೇಳುತ್ತಿದ್ದರೆ ಅಯ್ಯೋ ಪಾಪ ಎನಿಸದೇ ಇರದು. 

ನಟ ಮೈಕೆಲ್ ಮಧು ಆಕಸ್ಮಿಕ ಸಾವಿನ ಬಳಿಕ ಕುಟುಂಬ ಎದುರಿಸಿದ್ದು ಅದೆಂಥಾ ಆರೋಪ...!?

Follow Us:
Download App:
  • android
  • ios