ನಟಿ ನಿಶ್ವಿಕಾ ನಾಯ್ಡು, ಸಾಮಾಜಿಕ ಜಾಲತಾಣದ ಟ್ರೋಲ್‌ಗಳ ಬಗ್ಗೆ ಮಾತನಾಡಿದ್ದಾರೆ. ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ ವಿಡಿಯೋ ವೈರಲ್ ಆದಾಗ, ಟ್ರೋಲ್‌ಗಳನ್ನು ಹೇಗೆ ನಿಭಾಯಿಸಬೇಕೆಂದು ತಿಳಿಯದೆ ಕಂಗಾಲಾಗಿದ್ದೆ ಎಂದಿದ್ದಾರೆ. ತಾಯಿಯ ಬೆಂಬಲದಿಂದ ಧೈರ್ಯ ತಂದುಕೊಂಡೆ. ಟ್ರೋಲ್‌ ಮಾಡುವವರಿಗೆ ಪ್ರತಿಕ್ರಿಯಿಸದೆ, ನಮ್ಮ ದೌರ್ಬಲ್ಯವನ್ನು ನಾವೇ ಹೇಳಿಕೊಂಡರೆ ಟ್ರೋಲ್‌ ಮಾಡುವವರಿಗೆ ಅವಕಾಶ ಸಿಗುವುದಿಲ್ಲ ಎಂದು ನಿಶ್ವಿಕಾ ಅಭಿಪ್ರಾಯಪಟ್ಟಿದ್ದಾರೆ.

ಅಮ್ಮ ಐ ಲವ್ ಯು, ವಾಸು ನಾನು ಪಕ್ಕಾ ಕಮರ್ಷಿಯಲ್, ಪಡ್ಡೆ ಹುಲಿ, ಜೆಂಟಲ್ ಮ್ಯಾನ್, ರಾಮಾರ್ಜುನ, ಗಾಳಿಪಟ 2 ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿಶ್ವಿಕಾ ನಾಯ್ಡು ಈಗ ಸೋಷಿಯಲ್ ಮೀಡಿಯಾ ಟ್ರೋಲ್‌ ಬಗ್ಗೆ ಚರ್ಚಿಸಿದ್ದಾರೆ.

'ಒಂದು ಸಮಯದಲ್ಲಿ ನನ್ನ ಫ್ರೆಂಡ್ ಜೊತೆ ಪಾರ್ಟಿ ಮಾಡುತ್ತಿರುವ ವಿಡಿಯೋವನ್ನು ಅಪ್ಲೋಡ್ ಮಾಡಿದೆ. ಅಲ್ಲಿವರೆಗೂ ನಾನು ಯಾವ ವಿಡಿಯೋ ಅಪ್ಲೋಡ್ ಮಾಡಿರಲಿಲ್ಲ ಆದರೆ ಅದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆ ಸಮಯದಲ್ಲಿ ಟ್ರೋಲ್ ಹೇಗೆ ಹ್ಯಾಂಡಲ್ ಮಾಡಬೇಕು ಎಂದು ಗೊತ್ತಾಗಲಿಲ್ಲ ....ಅಯ್ಯೋ ನಾನು ಮನೆಯಿಂದ ಹೊರಗಡೆ ಹೋಗುವುದಿಲ್ಲ ಜನರಿಗೆ ಕಾಣಿಸಿಕೊಳ್ಳುವುದಿಲ್ಲ ಅನ್ನೋ ಮೈಂಡ್‌ಸೆಟ್‌ಗೆ ಬಂದು ಬಿಟ್ಟೆ. ಆ ಸಮಯದಲ್ಲಿ ಸಪೋರ್ಟ್ ಆಗಿ ನಿಂತಿದ್ದು ನನ್ನ ತಾಯಿ. ನಿನ್ನ ತಾಯಿಯಾಗಿ ನನಗೆ ಸಮಸ್ಯೆ ಇಲ್ಲ ನನ್ನ ಅಕ್ಕ ತಂಗಿ ಅಂತ ಯಾರಿಗೂ ತಲೆ ಕೆಡಿಸಿಕೊಳ್ಳುತ್ತಿಲ್ಲ ನೀನು ಯಾಕೆ ಈ ರೀತಿ ಇದ್ಯಾ ಎನ್ನುತ್ತಿದ್ದರು. ನೀನು ಮನೆಯಲ್ಲಿ ಕುಳಿತುಕೊಂಡಿದ್ದರೂ ಜನರು ತಪ್ಪು ಎನ್ನುತ್ತಾರೆ ನೀನು ಎಂಜಾಯ್ ಮಾಡಿದ್ದರೂ ತಪ್ಪು ಎನ್ನುತ್ತಾರೆ. ದೇವರಿಗೂ ತಪ್ಪು ನೀನು ಎನ್ನುವ ಜನರು ಇರುವಾಗ ನಾನು ಸರಿ ನಾನು ಈ ರೀತಿ ಇರುವುದು ನನ್ನನ್ನು ನಂಬಿ ಎಂದು ಯಾಕೆ ಹೇಳಬೇಕು?' ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ನಿಶ್ವಿಕಾ ಮಾತನಾಡಿದ್ದಾರೆ. 

ನೀಲಿ ಸೀರೆಗೆ ವಜ್ರದ ಡಾಬು ಮತ್ತು ಸರ ಧರಿಸಿದ 'ಪುಟ್ಟ ಗೌರಿ' ಸಾನ್ಯಾ ಅಯ್ಯರ್

'ಕೆಲವರಿಗೆ ಒಂದೊಂದು ವಿಚಾರಕ್ಕೆ ತುಂಬಾ ಸೆನ್ಸಿಟಿವ್ ಆಗಿರುತ್ತಾರೆ. ಒಂದು ಸಣ್ಣ ನರ ಎಳೆದರೆ ಹೇಗೆ ಕೋಪ ಬರಿಸುವುದು ಎಂದು ಕಾಯುತ್ತಿರುತ್ತಾರೆ. ಯಾವುದೇ ಕಾಮೆಂಟ್‌ಗೆ ನಾವು ಪ್ರತಿಕ್ರಿಯೆ ನೀಡಬಾರದು. ಸುಮ್ಮನೆ ನೋಡಬೇಕು ಸುಮ್ಮನೆ ಇರಬೇಕು. ನನಗೆ ಇರುವ ಇನ್‌ಸೆಕ್ಯೂರಿಟಿಯನ್ನು ನಾನೇ ಹಂಚಿಕೊಂಡು ಬಿಡುತ್ತೀನಿ ಆಗ ಮತ್ತೊಬ್ಬರು ಕಾಮೆಂಟ್ ಮಾಡಲು ಅವಕಾಶ ಕೊಡುವುದಿಲ್ಲ. ನಮ್ಮ ವೀಕ್‌ನೆಸ್‌ ಹುಡುಕು ರೇಗಿಸುತ್ತಾರೆ ಅದರ ಬದಲು ನಾವೇ ಹೇಳಿಕೊಂಡು ಬಿಟ್ಟರೆ ಒಳ್ಳೆಯದು' ಎಂದು ನಿಶ್ವಿಕಾ ಹೇಳಿದ್ದಾರೆ.

ಲೆಫ್ಟ್‌ ಇಂಡಿಕೇಟರ್ ಹಾಕಿ ರೈಟ್‌ಗೆ ಹೋಗುವವಳು ಅನ್ಕೊಂಡಿದ್ದಾರೆ; ದೀಪಿಕಾ ದಾಸ್‌ ಸ್ಪೀಡ್‌ಗೆ ಪತಿ ಹೆದರಿ ಬಿಟ್ರಾ?

'ಸಾಮಾನ್ಯವಾಗಿ ನಾನು ಎಲ್ಲರಂತೆ ಸದಾ ಸಂಪರ್ಕದಲ್ಲಿ ಇರುವುದಿಲ್ಲ. ಅದರ ಮೇಲೆ ನನಗೆ ನಂಬಿಕೆ ಕೂಡ ಇದೆ. ಜನರನ್ನು ಸುಮ್ಮನೆ ಭೇಟಿ ಮಾಡುವುದು ಸಮಯ ವ್ಯರ್ಥ ಆದರೆ ಅವಕಾಶ ಇದ್ದಾಗ ಹೋಗಿ ಭೇಟಿ ಮಾಡಿಲ್ಲ ಅಂದ್ರೆ ನಮ್ಮ ತಪ್ಪು. ಇದುವರೆಗೂ ಸಿನಿಮಾ ಹೊರತಾಗಿ ನಾನು ಯಾವುದೇ ಸಂದರ್ಶನಗಳನ್ನು ನೀಡಿಲ್ಲ. ಕಣ್ಣು ಮುಂದೆ ಕಾಣಿಸಿಕೊಳ್ಳುವುದು ಎಷ್ಟು ಮುಖ್ಯ ಎಂದು ಈಗ ನನಗೆ ಅರ್ಥವಾಗುತ್ತಿದೆ. ಈಗ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರೂ ಶೇರ್ ಮಾಡುತ್ತಿರುವುದನ್ನು ನೋಡಿದರೆ ಎಷ್ಟು ಕಷ್ಟ ಪಟ್ಟು ಶೇರ್ ಮಾಡುತ್ತಿದ್ದಾರೆ ಎಂದು ತಿಳಿಯುತ್ತದೆ' ಎಂದಿದ್ದಾರೆ ನಿಶ್ವಿಕಾ. 

ಬೇರೆ ಭಾಷೆಗೆ ಹೋಗುತ್ತಿದ್ದಂತೆ ಬ್ಲೌಸ್‌ ಸೈಜ್‌ ಚಿಕ್ಕದಾಗುತ್ತಿದೆ; ನಭಾ ನಟೇಶ್‌ ಕಾಲೆಳೆದ ಫ್ಯಾನ್ಸ್

YouTube video player