Asianet Suvarna News Asianet Suvarna News

ವಿಷ್ಣುವರ್ಧನ್​ ಸ್ಮಾರಕ ನಿರ್ಮಾಣ: ಹೋರಾಟಕ್ಕೆ ಬೆಂಬಲ ಸೂಚಿಸಿ ಸುದೀಪ್​, ಧನಂಜಯ್​ ಹೇಳಿದ್ದೇನು?

ನಟ ವಿಷ್ಣುವರ್ಧನ್​ ಅವರ ಸ್ಮಾರಕವನ್ನು ಬೆಂಗಳೂರಿನಲ್ಲಿ ನಿರ್ಮಿಸಬೇಕು ಎಂದು ಅಭಿಮಾನಿಗಳು ನಡೆಸುತ್ತಿರುವ ಹೋರಾಟಕ್ಕೆ ಸುದೀಪ್​ ಹಾಗೂ ಡಾಲಿ ಧನಂಜಯ್​ ಸಾಥ್​ ನೀಡಿದ್ದಾರೆ.
 

Vishnuvardhan Memorial Sudeep and Dolly Dhananjay supported the fans protest suc
Author
First Published Dec 17, 2023, 12:21 PM IST

'ಸಾಹಸ ಸಿಂಹ' ಡಾ. ವಿಷ್ಣುವರ್ಧನ್‌ ಅವರು ಎಲ್ಲರನ್ನೂ ಬಿಟ್ಟು ಅಗಲಿ ಇದೇ 30ರಂದು 14 ವರ್ಷ ಆಗಿದೆ. 2009ರ ಡಿಸೆಂಬರ್​ 30ರಂದು ವಿಷ್ಣವರ್ಧನ್​ ಅವರು ನಿಧನರಾದಾಗಿನಿಂದಲೂ ಅವರ ಸ್ಮಾರಕಕ್ಕೆ ಅಭಿಮಾನ್‌ ಸ್ಟುಡಿಯೋದಲ್ಲಿ ಭೂಮಿ ಒದಗಿಸುವಂತೆ ಅಭಿಮಾನಿಗಳು ಆಗ್ರಹಿಸುತ್ತಲೇ ಬಂದಿದ್ದರೂ, ಆ ವಿಷಯವಿನ್ನೂ ಬಗೆಹರಿಯಲೇ ಇಲ್ಲ. ಮೈಸೂರಿನಲ್ಲಿ  ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಆಗಿದ್ದರೂ  ಬೆಂಗಳೂರಿನಲ್ಲಿ ಇದುವರೆಗೆ ಆಗದೇ ಇರುವುದು ಅಭಿಮಾನಿಗಳಿಗೆ ನೋವು ತಂದಿದೆ.  ಮೈಸೂರಿನ ಉದ್ದೂರು ಗೇಟ್ ಬಳಿಯ ಹಾಲಾಳು ಗ್ರಾಮದಲ್ಲಿ 5 ಎಕರೆ ಜಾಗದಲ್ಲಿ 11 ಕೋಟಿ ರೂ. ವೆಚ್ಚದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಿದೆ. ಇದೇ ಇವರ್ಷ ಜನವರಿ 29ರಂದು ಸ್ಮಾರಕ ಲೋಕಾರ್ಪಣೆ ಆಗಿತ್ತು. 

ಆದರೆ ಬೆಂಗಳೂರಿನಲ್ಲಿ ಅವರನ್ನು ಸಮಾಧಿ ಮಾಡಿದ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಆಗಬೇಕು ಎನ್ನುವುದು ಅಸಂಖ್ಯ ಅಭಿಮಾನಿಗಳ ಹಾರೈಕೆ. ಇದೇ ಕಾರಣಕ್ಕೆ  ಅಭಿಮಾನಿಗಳು ಬೆಂಗಳೂರಿನ  ಫ್ರೀಡಂ ಪಾರ್ಕ್‌ನಲ್ಲಿ  ಅನಿರ್ದಿಷ್ಟಾವಧಿ ಕಾಲ ಧರಣಿ ನಡೆಸಲು ತೀರ್ಮಾನಿಸಿದ್ದಾರೆ. ಡಾ.ವಿಷ್ಣು ಸೇನಾ ಸಮಿತಿಯು ವೀರಕಪುತ್ರ ಶ್ರೀನಿವಾಸ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಅಭಿಮಾನಿಗಳು ಈ ಹೋರಾಟಕ್ಕೆ ಕೈ ಜೋಡಿಸುತ್ತಿದ್ದಾರೆ. ಈ ಹೋರಾಟಕ್ಕೆ ಇದಾಗಲೆ ಕೆಲವು ನಟರು ಕೈಜೋಡಿಸಿದ್ದಾರೆ. ನಟ 'ಕಿಚ್ಚ' ಸುದೀಪ್ ಅವರು ನಿನ್ನೆ ರಾತ್ರಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಎಕ್ಸ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. 

ನಟನೆ ಬಿಟ್ಟು 30 ವರ್ಷವಾಯ್ತು: ಎಲ್ರೂ ಈಗ್ಲೂ ಸ್ವಾಮಿ ಅಂತನೇ ಕರೀತಾರೆ ಎಂದ ಮಂಜುನಾಥ್‌

  
 ಡಾ.ವಿಷ್ಣು ಅಪ್ಪಾಜಿ ಸ್ಮಾರಕ ಕುರಿತು ನನ್ನದು ಅಂದು -ಇಂದು ಒಂದೇ ನಿಲುವು. ಮೈಸೂರಿನಲ್ಲಿ ಸ್ಮಾರಕವಾದರೂ, ಅಂತ್ಯ ಸಂಸ್ಕಾರಗೊಂಡ ಸ್ಥಳದಲ್ಲಿಯೂ ಪುಣ್ಯಭೂಮಿ ಆಗಬೇಕು. ಈ ವಿಷಯವಾಗಿ ಅಭಿಮಾನಿ ಸಂಘಗಳ ಹೋರಾಟಕ್ಕೆ ನನ್ನ ಬೆಂಬಲವಿದೆ. ನಾನೂ ನಿಮ್ಮಲ್ಲೊಬ್ಬ ಎಂದು ಭಾವಿಸಿ ನೀವು ಮುನ್ನಡೆಯಿರಿ. ನನ್ನಿಂದಾಗುವ ಎಲ್ಲವನ್ನೂ ಪುಣ್ಯಭೂಮಿಗಾಗಿ ಮಾಡುವೆ ಎಂದು ಟ್ವೀಟ್​ ಮೂಲಕ ಸುದೀಪ್​ ಹೇಳಿದ್ದಾರೆ. 
 
ಇದೇ ವೇಳೆ, ನಟ ಡಾಲಿ ಧನಂಜಯ್​ ಅವರೂ ಹೋರಾಟಕ್ಕೆ ಬೆಂಬಲ ಸೂಚಿಸಿ ಟ್ವೀಟ್​ ಮಾಡಿದ್ದಾರೆ. "ಕನ್ನಡ ಚಿತ್ರರಂಗದ ಮೇರು ನಟರು, ಹಿರಿಯಣ್ಣರಲ್ಲಿ ಒಬ್ಬರಾದ ಡಾ ವಿಷ್ಣು ಸರ್ ಪುಣ್ಯಭೂಮಿಗೆ ರಾಜಧಾನಿಯಲ್ಲಿ ಅಂಗೈಯಗಲ ಜಾಗವಿಲ್ಲವೆಂಬುದು ಯಾಕೋ ಅರಗಿಸಿಕೊಳ್ಳಲಾಗುತ್ತಿಲ್ಲ. ಸರ್ಕಾರ ಕೂಡಲೇ ಡಾ ವಿಷ್ಣು ಸರ್ ಪುಣ್ಯಭೂಮಿ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸುವೆ. ಅವರ ಅಭಿಮಾನಿಗಳ ಹೋರಾಟದಲ್ಲಿ ನಾನೂ ಇದ್ದೇನೆ. ಈ ವಿಷಯ ಬೇಗ ಸುಖಾಂತ್ಯ ಕಾಣಲಿ" ಎಂದು ಬರೆದಿದ್ದಾರೆ. 

ಆಫರ್‌ ಬಂತು ಅಂದ್ಲು: ಆಮೇಲೆ ಗೊತ್ತಾಯ್ತು ಅದು ಸಿನಿಮಾದಲ್ಲ, ಮದ್ವೆದಾಗಿತ್ತು: ಆ ದಿನ ನೆನೆದ ನಟಿ ಅಪೇಕ್ಷಾ ಅಮ್ಮ

Follow Us:
Download App:
  • android
  • ios