Asianet Suvarna News Asianet Suvarna News

ನಟನೆ ಬಿಟ್ಟು 30 ವರ್ಷವಾಯ್ತು: ಎಲ್ರೂ ಈಗ್ಲೂ ಸ್ವಾಮಿ ಅಂತನೇ ಕರೀತಾರೆ ಎಂದ ಮಂಜುನಾಥ್‌

ನಟನೆ ಬಿಟ್ಟು 30 ವರ್ಷವಾಯ್ತು: ಎಲ್ರೂ ಈಗ್ಲೂ ಸ್ವಾಮಿ ಅಂತನೇ ಇಂದಿಗೂ ಕರೀತಾರೆ ಎಂದು ನೆನಪಿಸಿಕೊಂಡಿದ್ದಾರೆ ಮಾಸ್ಟರ್‌ ಮಂಜುನಾಥ್‌ 
 

Quit acting three decades ago but people still remember me as Swami says Manjunath Nayaker suc
Author
First Published Dec 16, 2023, 5:15 PM IST

ಮಂಜುನಾಥ್‌ ನಾಯ್ಕರ್‌ ಎಂದರೆ ಹೆಚ್ಚಿನವರಿಗೆ ತಿಳಿಯಲಿಕ್ಕಿಲ್ಲ. ಆದರೆ ಮಾಸ್ಟರ್‌ ಮಂಜುನಾಥ್‌ ಎಂದರೆ ಎಲ್ಲರ ಕಣ್ಣೆದುರು ಬರುವುದು ಅದೇ ಮುದ್ದು ಪುಟಾಣಿಯ ಮುಖ.  ಬಾಲ ನಟನಾಗಿ ಮನೆಮನೆ ಮಾತಾಗಿದ್ದ ಮಾಸ್ಟರ್‌ ಮಂಜುನಾಥ್‌ ಈಗ ನಟನೆ ಬಿಟ್ಟು ಮೂವತ್ತು ವರ್ಷಗಳೇ ಆಗಿ ಹೋಗಿವೆ. ಆದರೆ ಮಾಸ್ಟರ್‌ ಮಂಜುನಾಥ್‌ ಎಂದಾಕ್ಷಣ ಎಲ್ಲರ ಕಣ್ಣ ಮುಂದೆ ಬರುವುದು  `ಮಾಲ್ಗುಡಿ ಡೇಸ್' ನ ಸ್ವಾಮಿ ಪಾತ್ರಧಾರಿ. ಇದರಲ್ಲಿನ ಅವರ ಅದ್ಭುತ ಅಭಿನಯಕ್ಕೆ ಮನಸೋಲದವರೇ ಇಲ್ಲವೆನ್ನಬಹುದೇನೋ. ಈ ಪಾತ್ರದ ಮೂಲಕ ರಾಷ್ಟ್ರವ್ಯಾಪಿ ಪ್ರಸಿದ್ಧಿ ಪಡೆದವರು ಮಂಜುನಾಥ್. ಮಾಲ್ಗುಡಿ ಡೇಸ್‌ ಹಲವು ಭಾಷೆಗಳಲ್ಲಿ ಡಬ್ಬಿಂಗ್‌ ಕೂಡ ಆಗಿತ್ತು. ಅದೇ ರೀತಿ ಮಂಜುನಾಥ್‌ ಅವರು ಕೂಡ ಕನ್ನಡದಲ್ಲಿ ಮಾತ್ರವಲ್ಲದೇ ಹಿಂದಿ, ತೆಲುಗು ಭಾಷೆಗಳಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಇಂಗ್ಲಿಷ್‌ ಮತ್ತು ಕಾಶ್ಮೀರಿ ಭಾಷೆಯ ಕೆಲ ಚಿತ್ರಗಳಲ್ಲಿಯೂ ನಟಿಸಿದ್ದಾರೆ.

ಆದರೆ ಎಷ್ಟೇ ಚಿತ್ರಗಳಲ್ಲಿ ನಟಿಸಿದರೂ ಸ್ವಾಮಿ ಎಂದಾಕ್ಷಣ ಎಲ್ಲರ ಕಣ್ಣಮುಂದೆ ಹಾದುಹೋಗುವುದು ಮಾಸ್ಟರ್‌ ಮಂಜುನಾಥ್‌ ಅವರ ನಟನೆ. ಈ ಕುರಿತು ಇ ಟೈಮ್ಸ್‌ ಜೊತೆ ಮಾಸ್ಟರ್‌ ಮಂಜುನಾಥ್‌ ಮಾತನಾಡಿದ್ದಾರೆ. ಇತ್ತೀಚೆಗೆ ಅಹಮದಾಬಾದ್‌ಗೆ ಆಗಮಿಸಿದ್ದ ಅವರು, ಬಾಲನಟನಾಗಿ ಸುಮಾರು 68 ಚಿತ್ರಗಳಲ್ಲಿ ನಟಿಸಿದ್ದೇನೆ.  26 ಕಿರುತೆರೆ ಸೀರಿಯಲ್‌ಗಳಲ್ಲಿ ನಟಿಸಿದ್ದೇನೆ, 3 ಕಿರುತೆರೆ ಸೀರಿಯಲ್ ಮತ್ತು 5 ಟೆಲಿ ಫಿಲ್ಮ್ಸ ನಿರ್ದೇಶಿಸಿದ್ದೇನೆ.  `ಸ್ವಾಮಿ' ಇಂಗ್ಲಿಷ್ ಚಲನಚಿತ್ರಕ್ಕೆ ಆರು ಅಂತರಾಷ್ಟ್ರೀಯ ಮತ್ತು ಒಂದು ರಾಷ್ಟ್ರ ಪ್ರಶಸ್ತಿ ಬಂದಿವೆ. ಇದರ ಹೊರತಾಗಿಯೂ ತಮ್ಮನ್ನು ಎಲ್ಲರೂ ಮಾಲ್ಗುಡಿ ಡೇಸ್‌ನ ಸ್ವಾಮಿ ಎಂದೇ ಕರೆಯುತ್ತಾರೆ. 

ಫೋನೇ ಬಳಸದ ಸೂಪರ್​ಸ್ಟಾರ್​ ಅಜಿತ್​ 15 ಕೆಜಿ ತೂಕ ಕಳೆದುಕೊಂಡ ಇಂಟರೆಸ್ಟಿಂಗ್​ ಸ್ಟೋರಿ ಇಲ್ಲಿದೆ...

ನಟನೆಯಿಂದ ದೂರವಾಗಿ ಮೂರು ದಶಕ ಕಳೆದರೂ ಇಂದಿಗೂ ಜನ ನನ್ನನ್ನು ಅದೇ ಪಾತ್ರದಲ್ಲಿ ಕಣ್ತುಂಬಿಸಿಕೊಳ್ಳುತ್ತಾರೆ ಎಂದಿದ್ದಾರೆ. ಅಂದಹಾಗೆ  ಮಂಜುನಾಥ್ ಅವರು,  ಅಹಮದಾಬಾದ್ ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ (AICFF) ಪಾಲ್ಗೊಳ್ಳಲು ಅಹಮದಾಬಾದ್‌ಗೆ ಬಂದಿದ್ದರು. ಆಗ ಈ ವಿಷಯ ಶೇರ್‌ ಮಾಡಿಕೊಂಡಿದ್ದಾರೆ. ಇಂದಿಗೂ ತಮ್ಮನ್ನು ಎಲ್ಲರೂ ಸ್ವಾಮಿ ಎಂದೇ ಹೇಳುತ್ತಿದ್ದಾರೆ ಎಂದಿದ್ದಾರೆ. 

ಇನ್ನು ಮಾಸ್ಟರ್‌ ಮಂಜುನಾಥ್‌ ಅವರ ಕುರಿತು ಹೇಳುವುದಾದರೆ, ಇವರು, ಮೈಸೂರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.  ಸಿನಿಮಾಟೋಗ್ರಫಿಯಲ್ಲಿ ಡಿಪ್ಲೋಮಾ ಮಾಡಿದ್ದಾರೆ.  ಶಂಕರನಾಗ್ ಜೊತೆ `ನೋಡಿ ಸ್ವಾಮಿ ನಾವಿರೋದು ಹೀಗೆ',ಸಾಂಗ್ಲಿಯಾನ (ಭಾಗ 1 ಮತ್ತು 2) ರಲ್ಲಿ ನಟಿಸಿದ್ದಾರೆ. ಅಮಿತಾಭ್‌ ಬಚ್ಚನ್ ಅವರ `ಅಗ್ನಿಪಥ' ಚಿತ್ರದಲ್ಲಿ ಬಾಲ ಅಮಿತಾಭ್‌ ಪಾತ್ರದಲ್ಲಿ ಮಿಂಚಿದ್ದರು. ತಮ್ಮ 19 ನೆ ವಯಸ್ಸಿನಲ್ಲಿ ಚಿತ್ರರಂಗಕ್ಕೆ ವಿದಾಯ ಹೇಳಿ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿದರು. ಕೆಲಕಾಲ ಬೆಂಗಳೂರು ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್‌ನಲ್ಲಿ (NICE) ಪಬ್ಲಿಕ್ ರಿಲೇಷನ್ ಆಫಿಸರ್ ಆಗಿ ಕೆಲಸ ಮಾಡಿದ ಮಂಜುನಾಥ್ ಸದ್ಯ ತಮ್ಮದೇ ಒಂದು ಸ್ವಂತ ಪಿಆರ್ ಕನ್ಸಲ್ಟೆನ್ಸಿ ಕಂಪೆನಿ ನೆಡೆಸುತ್ತಿದ್ದಾರೆ.   ಕ್ರೀಡಾಪಟು ಸ್ವರ್ಣರೇಖಾ ಎಂಬುವವರನ್ನು ಇವರು ವಿವಾಹವಾಗಿದ್ದಾರೆ.
10 ಕೋಟಿ ಆಫರ್​ ರಿಜೆಕ್ಟ್​ ಮಾಡಿದ ಅಲ್ಲು ಅರ್ಜುನ್​: ಇನ್ನಾದ್ರೂ ಬುದ್ಧಿ ಕಲೀರಿ ಅಂತ ಉಳಿದವರಿಗೆ ಫ್ಯಾನ್ಸ್​ ಕ್ಲಾಸ್​!

Follow Us:
Download App:
  • android
  • ios