Asianet Suvarna News Asianet Suvarna News

ವಿನಯ್‌ ರಾಜ್‌ಕುಮಾರ್‌ 'ಪೆಪೆ' ಚಿತ್ರದಲ್ಲಿ ಜೇನುಕುರುಬರ ಹಾಡು: ಸಿನಿರಸಿಕರು ಥ್ರಿಲ್

ಜೇನು ಕುರುಬ ಸಮುದಾಯದ ಆಚಾರ ವಿಚಾರ ತೆರೆದಿಡುವ ಗೀತೆ ಇದಾಗಿದ್ದು, ಗಿರಿಜನ ಸಮಗ್ರ ಅಭಿವೃದ್ದಿ ಕಲಾ ಸಂಸ್ಥೆ ಹಾಗೂ ಜೆ.ಜಿ.ಕುಮಾರ ಹಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ಮಾಡಿದ್ದಾರೆ. 

vinay rajkumar starrer pepe film song out kannada entartainment news gvd
Author
First Published Aug 9, 2024, 8:46 PM IST | Last Updated Aug 9, 2024, 8:46 PM IST

ಜೇನು ಕುರುಬ ಸಮುದಾಯದ ಆಚಾರ ವಿಚಾರ ತೆರೆದಿಡುವ ಗೀತೆ ಇದಾಗಿದ್ದು, ಗಿರಿಜನ ಸಮಗ್ರ ಅಭಿವೃದ್ದಿ ಕಲಾ ಸಂಸ್ಥೆ ಹಾಗೂ ಜೆ.ಜಿ.ಕುಮಾರ ಹಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಶ್ರೀಲೇಶ್ ಎಸ್ ನಾಯರ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಉದಯ್ ಶಂಕರ್. ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ನಿರ್ಮಾಣ ಮಾಡಿದ್ದಾರೆ. ಕಾಜಲ್‌ ಕುಂದರ್‌, ಮಯೂರ್‌ ಪಟೇಲ್‌, ಯಶ್‌ ಶೆಟ್ಟಿ, ಬಲರಾಜ್‌ವಾಡಿ, ಮೇದಿನಿ ಕೆಳಮನೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಆರಂಭದಿಂದ ಒಂದೇ ರೀತಿ ಸಿನಿಮಾಗಳಿಗೆ ಮೊರೆ ಹೋಗದೇ ಪ್ರತಿ ಸಿನಿಮಾದಲ್ಲೂ ವಿಭಿನ್ನತೆ ಕಾಪಾಡಿಕೊಂಡು ಬರ್ತಿರುವ ವಿನಯ್ ರಾಜ್ ಕುಮಾರ್ ಚಿತ್ರದಲ್ಲಿ ಗ್ಯಾಂಗ್ ಲೀಡರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಟೀಸರ್, ಪೋಸ್ಟರ್ ಝಲಕ್ ನಲ್ಲಿ ವಿನಯ್ ಕಂಡು ದೊಡ್ಮನೆ ಅಭಿಮಾನಿಗಳು, ಸಿನಿರಸಿಕರು ಥ್ರಿಲ್ ಆಗಿದ್ದು, ಚಿತ್ರದ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪೆಪೆ ಪಕ್ಕಾ ಮಾಸ್ ಸಿನಿಮಾವಾಗಿದೆ. 

ಪೊಲೀಸ್ ಸಿಬ್ಬಂದಿಗಳ ಬದುಕಿನ ಕತೆ 'ಲಾಫಿಂಗ್ ಬುದ್ಧ': ಕಾಂತಾರದ ರಿಷಬ್‌ ಶೆಟ್ರು ಹೇಳಿದ್ದೇನು?

ಮಲೆನಾಡಿನ ಗ್ಯಾಂಗ್‌ಸ್ಟರ್ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಈಗಾಗಲೇ ರಿಲೀಸ್ ಆಗಿರುವ ಟೀಸರ್ ನಲ್ಲಿ ವಿನಯ್ ರಾಜ್ ಕುಮಾರ್ ರಕ್ತಸಿಕ್ತವಾಗಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದರು. ವಿನಯ್ ಮಾಸ್ ಲುಕ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಚಿತ್ರದಲ್ಲಿ ಮೆದಿನಿ ಕೆಳಮನಿ, ಯಶ್ ಶೆಟ್ಟಿ, ಕಾಜಲ್ ಕುಂದರ್, ಅರುಣಾ ಬಾಲರಾಜ್, ನವೀನ್ ಡಿ ಪಡಿಲ್, ಬಾಲಾ ರಾಜ್ವಾಡಿ ಒಳಗೊಂಡ ತಾರಾಬಳಗವಿದೆ.

Latest Videos
Follow Us:
Download App:
  • android
  • ios