Asianet Suvarna News Asianet Suvarna News

Vijayanand 5 ಭಾಷೆಯಲ್ಲಿ ಟ್ರೈಲರ್ ಬಿಡುಗಡೆ; ಅಸಾಧ್ಯವನ್ನು ಸಾಧ್ಯ ಮಾಡುವ ವ್ಯಕ್ತಿ ಎಂದು ಸಿಎಂ ಬೊಮ್ಮಾಯಿ

5 ಭಾಷೆಯಲ್ಲಿ ವಿಜಯಾನಂದ ಟ್ರೇರ್ಲ ಬಿಡುಗಡೆ.  ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿಎಂ ಬೊಮ್ಮಾಯಿ 'ಅಸಾಧ್ಯವನ್ನು ಸಾಧ್ಯ ಮಾಡುವ ವ್ಯಕ್ತಿಯೇ ವಿಜಯ ಸಂಕೇಶ್ವರ' ಎಂದಿದ್ದಾರೆ.

Vijayanand trailer release Kannada biopic Vijay Sankeshwar vcs
Author
First Published Nov 21, 2022, 9:18 AM IST

ವಿಜಯ ಸಂಕೇಶ್ವರ ಅವರನ್ನು ನಾನು ಮೊದಲು ನೋಡಿದ್ದು 1985. ಆಗ ತಾನೇ ಅವರು ಉದ್ಯಮ ಆರಂಭಿಸಿದ್ದರು. ಅವತ್ತಿನಿಂದ ಇವತ್ತಿನವರೆಗೂ ಒಳ್ಳೆಯ ಸಂಬಂಧ ಇದೆ. ಅವರು ಹಸಿವಿನ ಮನುಷ್ಯ. ಅವರಿಗೆ ಗೆಲುವಿನ ಹಸಿವು ಇದೆ. ಸಂಕೇಶ್ವರ ವೆಂಚರ್‌ ಅಲ್ಲ ಅಡ್ವೆಂಚರ್‌ ಮಾಡ್ತಾರೆ. ಎಲ್ಲಿ ಹೋಗಬೇಡ ಅಂತಾರೋ ಅಲ್ಲೇ ಹೋಗ್ತಾರೆ. ಹೆಚ್ಚು ರಿಸ್‌್ಕ ಎಲ್ಲಿದೆಯೋ ಅದನ್ನೇ ಮಾಡುತ್ತಾರೆ. ಅವರು ಅಸಾಧ್ಯವನ್ನು ಸಾಧ್ಯ ಮಾಡುವ ವ್ಯಕ್ತಿ. ಈಗ ಸಿನೆಮಾ ಕ್ಷೇತ್ರಕ್ಕೆ ಬಂದಿದ್ದಾರೆ. ಅದರಲ್ಲೂ ಲಾಭ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ವಿಜಯ ಸಂಕೇಶ್ವರ ಅವರ ಜೀವನ ಚರಿತ್ರೆ ಆಧರಿಸಿದ ‘ವಿಜಯಾನಂದ’ ಚಿತ್ರದ ಟ್ರೇಲರ್‌ ಬಿಡುಗಡೆ ವೇಳೆ ಈ ಮಾತು ಹೇಳಿದರು. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಒಂದೇ ದಿನದಲ್ಲಿ ಸುಮಾರು 40 ಲಕ್ಷ ವೀಕ್ಷಣೆ ಕಂಡಿದೆ. ಡಿ.9ರಂದು ಐದು ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

Vijayanand trailer release Kannada biopic Vijay Sankeshwar vcs

ಅವರ ಸಮಯಪ್ರಜ್ಞೆ ಅಮೋಘ. ಯಾವುದು ಆಗುವುದಿಲ್ಲವೋ ಅದಕ್ಕೆ ನೇರವಾಗಿ ಇಲ್ಲ ಎನ್ನುವ ಸ್ವಭಾವ ಇದೆ. ಅವರ ಬದುಕನ್ನು ಹತ್ತಿರದಿಂದ ನೋಡಿದ್ದೇನೆ. ಅವರ ಕಥೆ ಮ್ಯಾನೇಜ್‌ ಮೆಂಟ್‌ಇನ್ಸಿಸ್ಟೂಟ್ಯೂಟ್‌ಗೆ ಪಾಠ ಆಗಬೇಕು ಎಂದು ಸಿಎಂ ಹೇಳಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಆರೋಗ್ಯ ಸಚಿವ ಡಾ. ಕೆ ಸುಧಾಕರ್‌, ‘ವಿ ಅಂದ್ರೆ ವಿಜಯ. ವಿಜಯ ಸಂಕೇಶ್ವರ ಅವರು ಏನೇ ಆರಂಭಿಸಿದರೂ ಗೆಲುವು ಸಾಧಿಸುತ್ತಾರೆ. ಈ ಸಿನಿಮಾವನ್ನು ಎಲ್ಲರೂ ಇಷ್ಟಪಡುತ್ತಾರೆ’ ಎಂದರು. ವಿಆರ್‌ಎಲ… ಮೂವೀಸ್‌ ಸಂಸ್ಥೆ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ. ನಿರ್ಮಾಪಕ ಆನಂದ ಸಂಕೇಶ್ವರ, ‘ಪ್ರತಿಯೊಬ್ಬ ಮಗನ ಹೀರೋ ತಂದೆಯೇ ಆಗಿರುತ್ತಾರೆ. ನನ್ನ ಹೀರೋ ನನ್ನ ತಂದೆ. ಬಹಳ ಶ್ರಮದಿಂದ ಉದ್ಯಮ ಕಟ್ಟಿದ್ದಾರೆ. ನಮ್ಮ ಸಂಸ್ಥೆಯಿಂದ ಮುಂದೆಯೂ ಸಿನಿಮಾ ಮಾಡುತ್ತೇವೆ’ ಎಂದರು. ನಾಯಕ ನಟ ನಿಹಾಲ…, ‘ಮೂರು ವರ್ಷದ ಶ್ರಮ ಇದೆ. ಬದುಕು ಬದಲಿಸುವ ಸ್ಫೂರ್ತಿ ಪಡೆಯುವ ಕಾರಣಕ್ಕೆ ಈ ಸಿನೆಮಾ ಎಲ್ಲರೂ ನೋಡಬೇಕು’ ಎಂದು ಹೇಳಿದರು. ನಿರ್ದೇಶಕಿ ರಿಷಿಕಾ ಶರ್ಮಾ, ‘ನನಗೆ ಇದೊಂದು ದೊಡ್ಡ ಅವಕಾಶ ಅಥವಾ ಆಶೀರ್ವಾದ. ಇದು ಕನ್ನಡದ ಮೊದಲ ಅಧಿಕೃತ ಬಯೋಪಿಕ್‌. ಈ ಸಿನೆಮಾ ವಿಜಯ ಸಂಕೇಶ್ವರ ಅವರ ಬದುಕಿನ ಹೈಲೈಟ್ಸ್‌’ ಎಂದು ಹೇಳಿದರು.

ವಿಜಯ ಸಂಕೇಶ್ವರ ಹೇಳಿದ ಮಾತುಗಳು

- ತಂದೆಯಿಂದ ಕಲಿತಿದ್ದುದನ್ನು ನಾನು ಪಾಲಿಸಿದೆ. ನನ್ನ ಮಗ ಕೂಡ ಅದೇ ಕಲಿಕೆ ಪಾಲಿಸುತ್ತಿದ್ದಾನೆ. ಅವನ ವಯಸ್ಸಲ್ಲಿ ನಾನು ಅವನಿಗೆ ತರಬೇತಿ ಕೊಡಲು ಶುರು ಮಾಡಿದ್ದೆ. ಈಗಿನ ಪೋಷಕರಿಗೆ ಅದನ್ನೇ ಹೇಳುತ್ತೇನೆ. ಪೋಷಕರು ಬದುಕಿನ ಎಲ್ಲ ಆಯಾಮಗಳನ್ನು ಮಕ್ಕಳಿಗೆ 4-5ನೇ ವಯಸ್ಸಿಗೆ ಕಲಿಸಬೇಕು. ಸಣ್ಣ ಸಣ್ಣ ಕೆಲಸಗಳನ್ನು ಮಾಡಿಸಬೇಕು. 10-15ನೇ ವಯಸ್ಸಲ್ಲಿ ಬ್ಯುಸಿನೆಸ್‌ ಶುರು ಮಾಡಿಸಬೇಕು. ಮಕ್ಕಳನ್ನು ಬ್ಯುಸಿ ಆಗಿ ಇಡಬೇಕು. ಒಂದು ನಿಮಿಷದ ಮತ್ತು ಒಂದು ರೂಪಾಯಿ ಮಹತ್ವ ಅವರಿಗೆ ಗೊತ್ತಿರಬೇಕು.

Vijayanand Movie: ಡಿ. 9ರಂದು 'ವಿಜಯಾನಂದ' ರಿಲೀಸ್: ಇದು ಕನ್ನಡದ ಮೊದಲ ಬಯೋಪಿಕ್ ಸಿನಿಮಾ

- ಉದ್ಯಮ ಆರಂಭಿಸಿದಾಗ ಸಾಕಷ್ಟುಟೀಕೆ ಬಂತು. ಅದೇ ಟಾನಿಕ್‌ ಥರ ಭಾವಿಸಿ ಮುಂದೆ ಬಂದೇ. ಅದೇ ಥರ ಸವಾಲು ಎದುರಿಸಲು ಮಕ್ಕಳಿಗೆ ಕಲಿಸಬೇಕು. ಒಂದು ನಿಮಿಷವೂ ವ್ಯರ್ಥ ಮಾಡಬಾರದು. ನಾನಂತೂ ಬದುಕಿನ ಕೊನೆಯ ಕ್ಷಣದವರೆಗೂ ನಿವೃತ್ತನಾಗುವುದಿಲ್ಲ.

- ನಾನು ಬದುಕಲ್ಲಿ ಸಿಕ್ಕಾಪಟ್ಟೆಜನರನ್ನು ನೋಡಿದ್ದೇನೆ. ಪಾಠ ಕಲಿತಿದ್ದೇನೆ. ಹಾಗಾಗಿ ಜನರನ್ನು ಬಹಳ ಬೇಗ ಅರ್ಥ ಮಾಡಿ ಕೊಳ್ಳುತ್ತೇನೆ. ರಿಷಿಕಾ ಶರ್ಮಾ ಬಯೋಪಿಕ್‌ ಮಾಡುತ್ತೇನೆ ಎಂದು ಬಂದಾಗ ಅವರ ಜೊತೆ ಮಾತನಾಡಿದೆ. ಈ ಹುಡುಗಿ ಬುದ್ಧಿವಂತೆ, ಶ್ರಮ ಪಡುತ್ತಾಳೆ ಅಂತ ಗೊತ್ತಾಯಿತು. ಹಾಗಾಗಿ ಒಂದು ಅವಕಾಶ ಕೊಡೋಣ ಅಂತ ಅಂದುಕೊಂಡೆ. ನಾವು ಹಿರಿಯರು ಕಿರಿಯರನ್ನು ಪ್ರೋತ್ಸಾಹಿಸುವ, ಆಶೀರ್ವದಿಸುವ ಕೆಲಸ ಮಾಡಬೇಕು

- 30 ಗಂಟೆ ಕಥೆ ನನ್ನ ಕಥೆ ಹೇಳಿದೆ. ಆಮೇಲೆ ಆಕೆ ಸ್ಕಿ್ರಪ್‌್ಟಬರೆದರು. ನಿಹಾಲ… ಜೊತೆ ಮಾತುಕತೆ ಆಯಿತು. ಕೊನೆಗೆ ಆ ದಿನ ರಾತ್ರಿ 11 ಗಂಟೆಗೆ ಈ ಬಯೋಪಿಕ್‌ ಮಾಡಲು ನಿರ್ಧರಿಸಿದೆ. ಮಗನಿಗೆ ನಿರ್ಮಾಣ ಮಾಡುತ್ತೀಯ ಎಂದು ಕೇಳಿದೆ. ಅವರು ಎಸ್‌ ಎಂದರು. ಒಂದು ಸಿನೆಮಾ ಮಾಡುವುದಾದರೆ ಮಾಡಬೇಡ, ಚಿತ್ರರಂಗಕ್ಕೆ ಬರುವುದಾದರೆ ತುಂಬಾ ಸಿನೆಮಾ ಮಾಡಬೇಕು. ಒಳ್ಳೊಳ್ಳೆ ಸಿನೆಮಾ ಕೊಡಬೇಕು ಎಂದು ಹೇಳಿದ್ದೆ. ಅವನು ಒಪ್ಪಿಕೊಂಡಿದ್ದಾನೆ. ನಮ್ಮ ನಿರ್ಮಾಣದ ಮೊದಲ ಸಿನಿಮಾ ಆಗಿ ನನ್ನ ಬಯೋಪಿಕ್‌ ಬರುತ್ತಿದೆ.

 

Vijay Sankeshwar ಡಿ.9ಕ್ಕೆ 5 ಭಾಷೆಗಳಲ್ಲಿ 1 ಸಾವಿರ ಚಿತ್ರಮಂದಿರಗಳಲ್ಲಿ ವಿಜಯಾನಂದ ತೆರೆಗೆ

- ನಾಳೆ ಬಗ್ಗೆ ಮಾತ್ರ ಯೋಚಿಸಬೇಕು. ಹಾಗಂತ ನಿನ್ನೆಯನ್ನು ನಾನು ಮರೆತಿಲ್ಲ. ಮರೆಯಲ್ಲ. ಮರೆಯಬಾರದು. ಬೇರು, ಸಂಬಂಧ, ಸ್ನೇಹ ಯಾವುದೂ ಮರೆಯಬಾರದು. ನನ್ನ ಗೆಲುವು ನನ್ನೊಬ್ಬನದು ಅಲ್ಲ. ಎಷ್ಟೋ ಮಂದಿ ಸೇರಿ ನನ್ನ ಇಲ್ಲಿ ಕರೆತಂದಿದ್ದಾರೆ.

- ಸಿನೆಮಾ ಚೆನ್ನಾಗಿ ಮೂಡಿ ಬಂದಿದೆ. ಅನಂತ್‌ ನಾಗ್‌ ಅವರು ನನ್ನ ತಂದೆಯವರ ಪಾತ್ರವನ್ನು ಜೀವಿಸಿದ್ದಾರೆ. ರಿಷಿಕಾ ಮತ್ತು ತಂಡ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ.

Follow Us:
Download App:
  • android
  • ios