ನಿರೀಕ್ಷೆ ಹೆಚ್ಚಿಸುತ್ತಿದೆ 'ಪೆಟ್ರೋಮ್ಯಾಕ್ಸ್' ಚಿತ್ರ ತಂಡ. ಡಬ್ಬಿಂಗ್ ಮುಗಿಸುತ್ತಾ ಫ್ಯಾಮಿಲಿ ಫೋಟೋ ರಿವೀಲ್ ಮಾಡಿದ ಟೀಮ್.

ನಿರ್ದೇಶಕ ವಿಜಯ್‌ ಪ್ರಸಾದ್‌ ಹಾಗೂ ಸತೀಶ್‌ ನೀನಾಸಂ ಕಾಂಬಿನೇಷನ್‌ನ ‘ಪೆಟ್ರೋಮ್ಯಾಕ್ಸ್‌’ ಚಿತ್ರದ ಡಬ್ಬಿಂಗ್‌ ಮುಗಿದಿದೆ. ವಿಡಿಯೋ ಹಾಗೂ ಫೋಟೋ ಹಂಚಿಕೊಳ್ಳುವ ಮೂಲಕ ಚಿತ್ರದ ಬಗ್ಗೆ ಸತೀಶ್ ಅಪ್ಡೇಟ್ ನೀಡುತ್ತಲೇ ಇರುತ್ತಾರೆ.

Add Asianetnews Kannada as a Preferred SourcegooglePreferred

'ನಾಲ್ಕು ಜನ ಅನಾಥರು, ಜೊತೆಗೆ ಮೈಸೂರು, ಮೀನಾಕ್ಷಿಯ ತವರೂರು. ನೀವು ಕಂಡಿರದ, ಕಾಣದ ಕಥೆ 'ಪೆಟ್ರೋಮ್ಯಾಕ್ಸ್' ಎಂದು ಸತೀಶ್ ನೀನಾಸಂ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದು ಕೊಂಡಿದ್ದಾರೆ. ‘ನಗಿಸುತ್ತಲೇ ಒಂದು ಒಳ್ಳೆಯ ವಿಷಯ ಹೇಳಬೇಕು ಎಂಬುವುದು ನನ್ನ ಉದ್ದೇಶ. ಆ ನಿಟ್ಟಿನಲ್ಲಿ ಪೆಟ್ರೋಮ್ಯಾಕ್ಸ್‌ ಚಿತ್ರವನ್ನು ಕುಟುಂಬ ಸಮೇತರಾಗಿ ನೋಡಬಹುದು ಎನ್ನುವ ಭರವಸೆ ಕೊಡುತ್ತೇನೆ. ಸದ್ಯದಲ್ಲೇ ಟೀಸರ್‌ ಬಿಡುಗಡೆ ಮಾಡಲಿದ್ದೇವೆ. ನೀನಾಸಂ ಸತೀಶ್‌ ಹಾಗೂ ಹರಿಪ್ರಿಯಾ ಸೇರಿದಂತೆ ಎಲ್ಲ ಪಾತ್ರಧಾರಿಗಳು ಕತೆಗೆ ಸಂಪೂರ್ಣವಾಗಿ ನ್ಯಾಯ ಒದಗಿಸಿದ್ದಾರೆ,’ ಎನ್ನುತ್ತಾರೆ ನಿರ್ದೇಶಕ ವಿಜಯ್‌ ಪ್ರಸಾದ್‌.

36 ದಿನದಲ್ಲಿ 'ಪೆಟ್ರೋಮ್ಯಾಕ್ಸ್' ಶೂಟಿಂಗ್ ಮುಗೀತು!

ಪೆಟ್ರೋಮ್ಯಾಕ್ಸ್ ಓಟಿಟಿ ಬಿಡುಗಡೆಗೆ ಎಂದೇ ರೆಡಿ ಮಾಡಿರುವ ಸಿನಿಮಾ ಎಂದು ಈ ಹಿಂದೆ ವಿಜಯ್ ಪ್ರಸಾದ್ ಸಂದರ್ಶನದಲ್ಲಿ ಹೇಳಿದ್ದರು. 'ತೋತಾಪುರಿ' ಹಾಗೂ 'ಪೆಟ್ರೋಮ್ಯಾಕ್ಸ್' ನಂತರ 'ಪರಿಮಳ ಲಾಡ್ಜ್' ಬಾಗಿಲು ತೆಗೆಯಲು ರೆಡಿ ಆಗಿದ್ದಾರೆ. 'ಪೆಟ್ರೋಮ್ಯಾಕ್ಸ್ ಚಿತ್ರದಲ್ಲಿ ಭಾವನಾತ್ಮಕ ವಿಷಯ ಇದೆ. ಹಾಗಂತ ನಾನು ಬರೆದ 'ಸಿಲ್ಲಿ ಲಲ್ಲಿ' ಧಾರಾವಾಹಿ ಮರು ಜನ್ಮ ಅಂದು ಕೊಳ್ಳಬೇಡಿ. ಚಿತ್ರಕ್ಕೆ ಯಾರೂ ನಿರ್ಮಾಪಕರು ಬರಲಿಲ್ಲ ಅಂತ ನಾವೇ ನಿರ್ಮಾಪಕರು ಆಗಿದ್ದಲ್ಲ. ನಮಗೆ ದುಡಿಮೆಯ ಅಗತ್ಯವಿದೆ ಅಂತ ಸಿನಿಮಾ ಶುರು ಮಾಡಿದ್ದು. ಈ ರೀತಿ ಸಾಕಷ್ಟು ಸಣ್ಣ ಪುಟ್ಟ ಕತೆಗಳು ನನ್ನ ಬಳಿ ಇವೆ,' ಎಂದು ವಿಜಯ್ ಹೇಳಿದ್ದರು.

View post on Instagram