ನೀನಾಸಂ ಸತೀಶ್ ನಾಯಕ, ಹರಿಪ್ರಿಯಾ ನಾಯಕಿಯಾಗಿರುವ ವಿಜಯ ಪ್ರಸಾದ್ ನಿರ್ದೇಶನ ‘ಪೆಟ್ರೋಮ್ಯಾಕ್ಸ್- ಮನೆ ದೇವ್ರಾಣೆಗೂ ಅದಲ್ಲ’ ಚಿತ್ರದ ಚಿತ್ರೀಕರಣ ಮೈಸೂರು ಸುತ್ತಮುತ್ತ ನಡೆದು, ಕೇವಲ 36 ದಿನಗಳಲ್ಲಿ ಪೂರ್ಣಗೊಂಡಿದೆ.
ಪ್ರಮುಖ ಪಾತ್ರದಲ್ಲಿ ಕಾರುಣ್ಯ ರಾಮ್, ವಿಶೇಷ ಪಾತ್ರದಲ್ಲಿ ವಿಜಯಲಕ್ಷ್ಮಿ ಸಿಂಗ್ ನಟಿಸಿದ್ದಾರೆ. ಚಿತ್ರಮಂದಿರಗಳು ಸಂಪೂರ್ಣವಾಗಿ ತೆರೆದ ನಂತರ ನಂತರ ಸಿನಿಮಾ ತೆರೆ ಕಾಣಲಿದೆ. ನೀರ್ ದೋಸೆ ಸಿನಿಮಾದ ಮಾದರಿಯಲ್ಲಿಯೇ ಇಲ್ಲೂ ಹಾಸ್ಯ, ಗಾಢವಾದ ಕತೆಯನ್ನು ನಿರೀಕ್ಷೆ ಮಾಡಬಹುದು ಎನ್ನುತ್ತಾರೆ ನಿರ್ದೇಶಕ ವಿಜಯ ಪ್ರಸಾದ್.
ತೋತಾಪುರಿ ವರ್ಸಸ್ ಪೆಟ್ರೋಮ್ಯಾಕ್ಸ್, ಜಗ್ಗೇಶ್ ಬೈತಿರೋದು ಪ್ರೀತಿಯಿಂದ: ವಿಜಯ್ ಪ್ರಸಾದ್
ನನ್ನ ಸಿನಿಮಾ ನೋಡಿದವರು ಪ್ರತಿ ಬಾರಿ ‘ಡಬಲ್ ಮೀನಿಂಗ್’ ಅಂತಾರೆ. ಆದರೆ, ನಾನದನ್ನ ಚೇಷ್ಟೆ ಎನ್ನುತ್ತೇನೆ. ಮನರಂಜನೆಗೋಸ್ಕರ ಈ ಚೇಷ್ಟೆ ಇರುತ್ತೆ. ಎಲ್ಲಾ ವರ್ಗದವರನ್ನು ರೀಚ್ ಆಗಲು ಚೇಷ್ಟೆ ಹಾಗೂ ಗಾಢವಾದ ಕತೆ ಅವಶ್ಯಕ ಎಂದು ನಿರ್ದೇಶಕರು ಹೇಳಿಕೊಂಡರು.
ನಿರ್ದೇಶಕ ವಿಜಯ ಪ್ರಸಾದ್ ತೋತಾಪುರಿ, ಪರಿಮಳ ಲಾಡ್ಜ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಈ ನಡುವೆ ಮತ್ತೊಂದು ಸಿನಿಮಾ ಮಾಡುವ ಮನಸ್ಸು ಅವರಿಗೆ ಇರಲಿಲ್ಲ. ಆದರೆ, ಈ ಗ್ಯಾಪ್ ನಲ್ಲಿ ಮತ್ತೊಂದು ಚಿತ್ರ ಮಾಡೋಣ ಅಂತ ಸಲಹೆ ನೀಡಿದೆ. ಪ್ರಾರಂಭದಲ್ಲಿ ಆಗುವುದಿಲ್ಲ ಅಂದು ಅವರು ನಂತರ ಕೇವಲ 8ನೇ ದಿನದಲ್ಲಿ ’ಪೆಟ್ರೋ ಮ್ಯಾಕ್ಸ್’ ಸ್ಕ್ರಿಪ್ ರಚಿಸಿದರು. ಕೇವಲ 36 ದಿನಗಳಲ್ಲಿ ಚಿತ್ರದ ಚಿತ್ರೀಕರಣವನ್ನು ಸಹ ಪೂರ್ಣಗೊಳಿಸಿದರು ಎಂದು ನಟ ನೀನಾಸಂ ಸತೀಶ್ ಅವರಿಂದ ಶಹಬ್ಬಾಸ್ ಸಿಕ್ಕಿತು.
ಹೋಟೆಲ್‌ಗೆ ತೆರಳಿ ಸ್ಪೆಷಲ್ ಟೀ ತಯಾರಿಸಿದ ನಟ ಸತೀಶ್ ನೀನಾಸಂ ವಿಡಿಯೋ ವೈರಲ್!
ಸತೀಶ್ ಪಿಕ್ಚರ್ ಹೌಸ್, ಸ್ಟುಡಿಯೋ 18, ಪೆಟ್ರೋಮ್ಯಾಕ್ಸ್ ಪಿಕ್ಚರ್ಸ್ ಸಹಭಾಗಿತ್ವದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರದ ಕತೆ, ಚಿತ್ರಕತೆ, ನಿರ್ದೇಶನ ವಿಜಯ ಪ್ರಸಾದ್ ಅವರದ್ದು. ಸಂಗೀತ ನಿರ್ದೇಶನ ಅನೂಪ್ ಸೀಳಿನ್, ಕ್ಯಾಮರಾಮನ್ ನಿರಂಜನ್ ಬಾಬು. ಸಂಕಲನ ಸುರೇಶ್ ಅವರದ್ದು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 10, 2021, 4:33 PM IST