Asianet Suvarna News Asianet Suvarna News

ಕೊರೋನಾ ಸಂಕಷ್ಟ: ಸ್ಯಾಂಡಲ್‌ವುಡ್ ಸ್ಟಾರ್ ನಟರಿಗೊಂದು ಬಹಿರಂಗ ಪತ್ರ

ಕರ್ನಾಟಕದಲ್ಲಿ ಕೊರೋನಾ ಅಟ್ಟಹಾಸ ಮಿತಿ ಮೀರಿದೆ. ಈ ಸಂದರ್ಭ ಸ್ಟಾರ್ ನಟರು, ಸ್ಯಾಂಡಲ್‌ವುಡ್ ಸೂಪರ್ ಹೀರೋಗಳೇನು ಮಾಡಬಹುದು ? ಇಲ್ಲಿದೆ ನೋಡಿ ಒಂದು ಬಹಿರಂಗ ಪತ್ರ

Veerakaputra M Srinivasa writes a open letter to sandalwood star heroes about helping their fans on this pandemic time dpl
Author
Bangalore, First Published Apr 22, 2021, 4:42 PM IST

ಕರ್ನಾಟಕದಲ್ಲಿ ಕೊರೋನಾ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆಯೂ ಅಪಾಯಕಾರಿಯಾಗಿ ಏರಿಕೆಯಾಗುತ್ತಿದ್ದರೆ, ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಇಳಿಮುಖವಾಗುತ್ತಿದೆ.

ಸಿನಿ ಇಂಡಸ್ಟ್ರಿಗೆ ಇದು ದೊಡ್ಡ ಹೊಡೆತ. ಆದರೆ ಕೋಟಿ ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಪಡೆಯೋ, ಹಿಟ್ ಸಿನಿಮಾ ಮಾಡೋ ಸ್ಟಾರ್ ನಟರು ಈಗೇನು ಮಾಡಬಹುದು ? ತಮ್ಮ ಮೇಲೆ ಅಪಾರ ಅಭಿಮಾನ ಹೊಂದಿರೋ ಅಭಿಮಾನಿ ಜನಕ್ಕೆ ಕೊರೋನಾದಿಂದ ಬಳಲುತ್ತಿರುವಾಗ ಹೇಗೆ ನೆರವಾಗುಬಹುದು ?

ಚಿರು ಫ್ಯಾಮಿಲಿ ಫೋಟೋ ಚಿತ್ರ ಬಿಡಿಸಿದ ಫ್ಯಾನ್..! ಹೀಗಿತ್ತು ಮೇಘನಾ ರಿಯಾಕ್ಷನ್

ವೀರಕಪುತ್ರ ಎಂ ಶ್ರೀನಿವಾಸ ಎಂಬವರು ಈ ಸಂಬಂಧ ಒಂದು ವಿವರವಾದ ಪೋಸ್ಟ್ ಹಾಕಿದ್ದಾರೆ. ಫೇಸ್‌ಬುಕ್ ಮೂಲಕ ಇವರು ಶೇರ್ ಮಾಡಿರುವ ಚಿಂತನೆಗಳು ಇದೀಗ ವೈರಲ್ ಆಗಿದೆ.

ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದ ಸಾಧಕರು ನೀವು. ತಾಯಿ ಪ್ರೀತಿ ನಂತರ ಅಭಿಮಾನಿಗಳ ಪ್ರೀತಿಯೇ ಅತ್ಯಂತ ಶ್ರೇಷ್ಠವಾದದ್ದು ಎಂಬುದು ನನ್ನ ನಂಬಿಕೆ. ನೀವು ಎಂದೂ ಅವರನ್ನು ನೋಡಲ್ಲ, ನೋಡಿದ್ರೂ ಮಾತನಾಡಿಸಲ್ಲ. ಮಾತನಾಡಿಸಿದ್ರೂ ನಿಮಗೆ ಆ ವ್ಯಕ್ತಿ ಅದರಾಚೆ ನೆನಪಿರಲ್ಲ. ಆದರೂ ಆ ಅಭಿಮಾನಿ ನಿಮ್ಮನ್ನು ಅವನ ಜೀವನದ ಆರಾಧ್ಯದೈವವನ್ನಾಗಿಸಿಕೊಳ್ತಾನೆ. ಜೀವನವಿಡೀ ನಿಮ್ಮನ್ನೇ ಧ್ಯಾನಿಸುತ್ತಾನೆ! ನಿಮ್ಮ ಬಗ್ಗೆ ಎಳ್ಳಷ್ಟು ಅಪಪ್ರಚಾರವಾದ್ರೂ ಹಿಂದೆ ಮುಂದೆ ಯೋಚಿಸ್ದೆ ನಿಮ್ಮ ಪರವಾಗಿ ನಿಂತುಬಿಡ್ತಾನೆ. ನಿಮಗೆ ಕಿಂಚಿತ್ತು ತೊಂದ್ರೆಯಾದ್ರೂ ನೊಂದು ಹೋಗ್ತಾನೆ..  ಅಂತಹ ಅಭಿಮಾನಿ ಇವತ್ತು ಕಷ್ಟದಲ್ಲಿದ್ದಾನೆ.. ಎಂದು ಆರಂಭವಾಗೋ ಪೋಸ್ಟ್‌ನಲ್ಲಿ ಬಹಳಷ್ಟು ಪ್ರಾಕ್ಟಿಕಲ್ ವಿಚಾರಗಳನ್ನು ಬರೆಯಲಾಗಿದೆ.

ಕರ್ನಾಟಕದಲ್ಲಿ ಬುಧವಾರ 23558 ಕೊರೋನಾ ಪಾಸಿಟಿವ್ ಕೇಸುಗಳು ಪತ್ತೆಯಾಗಿದ್ದು, 116 ಮಂದಿ ಸಾವನ್ನಪ್ಪಿದ್ದಾರೆ. 6412 ಜನರು ಕೊರೋನಾದಿಂದ ಗುಣಮುಖರಾಗಿದ್ದಾರೆ.

Follow Us:
Download App:
  • android
  • ios