ಮೇಘನಾ ರಾಜ್ ಅವರು ಮತ್ತು ಅವರ ಪತಿ ಚಿರಂಜೀವಿ ಸರ್ಜಾ ಅಭಿಮಾನಿ ಬಳಗ ಈಗ ಪುಟ್ಟ ಜೂನಿಯರ್ ಚಿರುನನ್ನು ನೋಡಲು ಸಂಭ್ರಮಿಸುತ್ತಾರೆ. ಚಿರಂಜೀವಿ ಮತ್ತು ಅವರ ಮಗ ಜೂನಿಯರ್ ಚಿರು ಒಳಗೊಂಡ ಚಿತ್ರವೊಂದನ್ನು ನಟಿ ಶೇರ್ ಮಾಡಿದ್ದಾರೆ.

ಏಪ್ರಿಲ್ 21 ರಂದು ಅವರು ಅಭಿಮಾನಿಯೊಬ್ಬರು ರಚಿಸಿದ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಇದರಲ್ಲಿ ಚಿರಂಜೀವಿ ಸರ್ಜಾ, ಮೇಘನಾ ರಾಜ್ ಮತ್ತು ಜೂನಿಯರ್ ಚಿರು ಪರಿಪೂರ್ಣ ಕುಟುಂಬವಾಗಿರುವಂತೆ ಚಿತ್ರದಲ್ಲಿದೆ. ಚಿರಂಜೀವಿ ಸರ್ಜಾ ಅವರು ಜೂನ್ 7, 2020 ರಂದು ಹೃದಯಾಘಾತದಿಂದ ನಿಧನರಾದರು.

ನಿಹಾರಿಕಾರ ಲೇಟೆಸ್ಟ್ ಪೋಸ್ಟ್ ನೋಡಿ ಮೇಘನಾಗೆ ನಗು ತಡೆಯೋಕಾಗ್ತಿಲ್ಲ

ಚಿರಂಜೀವಿ ಸರ್ಜಾ ನಿಧನರಾದಾಗಿನಿಂದ, ಅವರ ಅಭಿಮಾನಿಗಳು ತಮ್ಮ ಚಿತ್ರ, ಡ್ರಾಯಿಂಗ್ ಮೂಲಕ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡುತ್ತಿರುತ್ತಾರೆ. ಕಲಾಕೃತಿಮೂರು ಜನರ ರೇಖಾಚಿತ್ರವಾಗಿದೆ. ಮೇಘನಾ ಅದನ್ನು ತುಂಬಾ ಇಷ್ಟಪಟ್ಟರು, ಅದನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.