ಅಭಿಮಾನಿಗಳಿಗೆ ಹತ್ತಿರವಾಗಲು ಬರ್ತಿದೆ ಅರ್‌ ಚಂದ್ರು ಸಿನಿಮಾ. ಅಮೇಜಾನ್ ಪ್ರೈಮ್‌ನಲ್ಲಿ ಕಬ್ಜ.... 

ಆರ್‌.ಚಂದ್ರು ನಿರ್ಮಾಣ ಮತ್ತು ನಿರ್ದೇಶನದ, ಉಪೇಂದ್ರ, ಸುದೀಪ್‌ ನಟನೆಯ ‘ಕಬ್ಜ’ ಚಿತ್ರ ಏ.14ರಿಂದ ಅಮೆಜಾನ್‌ ಪ್ರೈಮ್‌ನಲ್ಲಿ ಪ್ರಸಾರವಾಗಲಿದೆ. ಮಾ.17ರಂದು 4000ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಕಬ್ಜ ಬಿಡುಗಡೆಯಾಗಿತ್ತು. ಹಲವು ವರ್ಷಗಳ ನಂತರ ಉಪೇಂದ್ರ ತೆರೆ ಮೇಲೆ ಮನೋರಂಜನೆ ನೀಡಿ 100 ಕೋಟಿ ಕಲೆಕ್ಷನ್ ಮಾಡಿ ಬಾಕ್ಸ್‌ ಆಫೀಸ್‌ ಸುಲ್ತಾನಾ ಆಗೋ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಆದರೆ ರಿಲೀಸ್‌ ಆದ ಒಂದೇ ತಿಂಗಳಿಗೆ ಓಟಿಟಿಗೆ ಬರುವ ಮೂಲಕ ಇನ್ನಷ್ಟು ಸಿನಿ ಪ್ರೇಮಿಗಳ ಮನಸ್ಸು ಗೆಲ್ಲುವುದಕ್ಕೆ ಮುಂದಾಗಿದ್ದಾರೆ. ಕಬ್ಜ ಮೊದಲನೇ ಭಾಗದ ಅಂತ್ಯದಲ್ಲಿ ಶಿವರಾಜ್‌ಕುಮಾರ್‌ ಕಾಣಿಸಿಕೊಂಡು ಎರಡನೇ ಭಾಗ ಬರಲಿದೆ ಎಂಬ ಸೂಚನೆ ನೀಡಿದ್ದರು. ಎರಡನೇ ಭಾಗ ಯಾವಾಗ ಆರಂಭವಾಗುತ್ತದೆ ಎಂಬುದು ಸದ್ಯದ ಕುತೂಹಲ.

ಆ ಮೂಲಕ ‘ಕೆಜಿಎಫ್‌ 2’, ‘ಕಾಂತಾರ’ ಚಿತ್ರಗಳ ನಂತರ ಕನ್ನಡದ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾ ಶತ ಕೋಟಿ ಗಳಿಕೆಯ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರ ವಾಗಲಿದೆ. ಸಿನಿಮಾ ಯಶಸ್ಸು ಕಾಣುತ್ತಿರುವ ಹೊತ್ತಿನಲ್ಲಿ ಚಿತ್ರದ ನಿರ್ದೇಶಕ ಆರ್‌ ಚಂದ್ರು ಮತ್ತು ಅವರ ತಂಡ ಮಾಧ್ಯಮಗಳ ಮುಂದೆ ಬಂದ ಚಿತ್ರತಂಡ ಯಶಸ್ಸಿನ ಕುರಿತು ಹೇಳಿಕೊಂಡಿತು.

Kabza Review ಅದ್ದೂರಿ ಚಿತ್ರಿಕೆ ಅಗಾಧ ಕಥನ

ಈ ಸಂದರ್ಭದಲ್ಲಿ ಚಿತ್ರದ ವಿತರಕ ಮೋಹನ್‌ ಮಾತನಾಡಿ, ‘ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುವುದೇ ಕಷ್ಟವಾಗಿದೆ. ರಾಜ್ಯದಲ್ಲಿ ಬಹುತೇಕ ಚಿತ್ರಮಂದಿರಗಳು ಮುಂಚ್ಚುತ್ತಿವೆ. ಇಂಥ ಹೊತ್ತಿನಲ್ಲಿ ಬಂದ ‘ಕಬ್ಜ’ ಸಿನಿಮಾ ಮೂಲಕ ಚಿತ್ರಮಂದಿರಗಳು ಉಸಿರಾಡುವಂತೆ ಆಗಿದೆ. ಥಿಯೇಟರ್‌ ಮಾಲೀಕರೇ ಮುಂದೆ ಬಂದು ಸಿನಿಮಾ ಕೇಳಿ ತೆಗೆದುಕೊಂಡು ಹೋಗುತ್ತಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ. ರಾಜ್ಯದಲ್ಲೇ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡಿದ್ದೇವೆ. ಉಪೇಂದ್ರ ಅವರ ಎಲ್ಲ ಚಿತ್ರಗಳನ್ನು ನಾವೇ ಬಿಡುಗಡೆ ಮಾಡಿರುವುದು. ಎಲ್ಲವೂ ಒಳ್ಳೆಯ ಗಳಿಕೆ ಮಾಡಿವೆ. ‘ಕಬ್ಜ’ ಮಾತ್ರ ಆ ಎಲ್ಲ ಚಿತ್ರಗಳಿಗಿಂತ ಹೆಚ್ಚು ಗಳಿಕೆ ಮಾಡಿದೆ. ಈ ವರ್ಷದ ಬ್ಲಾಕ್‌ ಬಾಸ್ಟರ್‌ ಹಿಟ್‌ ಸಿನಿಮಾ ಇದು’ ಎಂದರು. ಚಿತ್ರದಲ್ಲಿ ಮಸೂದ್‌ ಪಾತ್ರ ಮಾಡಿರುವ ನೀನಾಸಂ ಅಶ್ವತ್‌್ಥ, ಖಲೀದ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಾಮರಾಜ್‌ ಅವರು ಮಾತನಾಡಿ, ‘ರಿಯಲ್‌ ಹೀರೋ ಉಪೇಂದ್ರ ಅವರ ಚಿತ್ರದಲ್ಲಿ ನಟಿಸಿದ್ದು ಅದೃಷ್ಟ. ಹಳ್ಳಿಯಿಂದ ಬಂದ ಒಬ್ಬ ನಿರ್ದೇಶಕ ಪ್ಯಾನ್‌ ಇಂಡಿಯಾ ಸಿನಿಮಾ ಮಾಡಿದ್ದು ಮಾತ್ರವಲ್ಲ, ಗೆದ್ದಿದ್ದಾರೆ. ಇಡೀ ಚಿತ್ರತಂಡವನ್ನು ಅವರ ಹಳ್ಳಿಗೆ ಕರೆದುಕೊಂಡು ಹೋಗಿದ್ದಾರೆ. ಇದು ನಿರ್ದೇಶಕರಿಗೆ ಇರುವ ತಾಕತ್ತು. ಇಂಥ ಚಿತ್ರಗಳು ಮತ್ತಷ್ಟುದೊಡ್ಡ ಮಟ್ಟದಲ್ಲಿ ಗೆಲ್ಲಬೇಕು’ ಎಂದು ಶುಭ ಕೋರಿದರು.

ನಾಯಕಿಯರ ಪಕ್ಕ ನಿಂತುಕೊಳ್ಳಲು ನಾಚಿಕೊಂಡ ಆರ್‌ ಚಂದ್ರು; Last Bench ಬಾಯ್ಸ್‌ ರೀತಿ ಕಾಲೆಳೆದ ಉಪ್ಪಿ-ಕಿಚ್ಚ

ಕತಾರ್‌ನಲ್ಲಿ ‘ಕಬ್ಜ’ ಸಿನಿಮಾ ತೆರೆಕಂಡು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಅಲ್ಲಿನ ಕನ್ನಡಿಗರು ಚಿತ್ರವನ್ನು ನೋಡಿ ಮೆಚ್ಚಿಕೊಂಡು ಯಶಸ್ಸಿನ ಸಂಭ್ರಮ ಮಾಡಿದ್ದಾರೆ. ದೋಹ ಕತಾರ್‌ನಲ್ಲಿರು ಕರ್ನಾಟಕ ಸಂಘ ಹಾಗೂ ಕೋರ್ಸಿಸ್‌ ಕನ್ನಡ ಮೂವೀಸ್‌ ಸಂಯೋಗದೊಂದಿಗೆ ಕತಾರ್‌ನಲ್ಲಿ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ಕತಾರ್‌ನಲ್ಲಿ 11ಕ್ಕಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ಯಶಸ್ಸಿಯಾಗಿ ಪ್ರದರ್ಶನ ಕಾಣುತ್ತಿರುವ ಮೊಟ್ಟಮೊದಲ ಕನ್ನಡ ಸಿನಿಮಾ ‘ಕಬ್ಜ’ ಎನ್ನಲಾಗುತ್ತಿದೆ. ಈ ವಿಶೇಷ ಪ್ರದರ್ಶವನ್ನು ಕರ್ನಾಟಕ ಸಂಘ ಕತಾರ್‌ ಅಧ್ಯಕ್ಷ ಮಹೇಶ್‌ ಗೌಡ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು, ಪ್ರಭುರಾಜ್‌ ಅವರು ಏರ್ಪಡಿಸಿದ್ದರು.