ಚಿತ್ರರಂಗ ಮತ್ತೆ ತನ್ನ ವೇಗವನ್ನು ಪಡೆಯುವ ಸೂಚನೆ ಸಿಗುತ್ತಿದೆ. ಈಗಾಗಲೇ ಸುದೀಪ್‌ ನಟನೆಯ ‘ಫ್ಯಾಂಟಮ್‌’ ಚಿತ್ರೀಕರಣ ಹೈದರಾಬಾದ್‌ನಲ್ಲಿ ಶುರುವಾಗಿದೆ. ಅದರ ಬೆನ್ನಲ್ಲೇ ಆ.10ರಿಂದ ಶಿವಣ್ಣ ನಟನೆಯ ‘ಭಜರಂಗಿ 2’ ಮತ್ತು ಆ.16ರ ನಂತರ ಯಶ್‌ ನಟನೆಯ ‘ಕೆಜಿಎಫ್‌ 2’ ಮತ್ತು ಧ್ರುವ ಸರ್ಜಾ ಅಭಿನಯದ ‘ಪೊಗರು’ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಈ ಸಿನಿಮಾಗಳ ಶೂಟಿಂಗ್‌ ಆರಂಭವಾಗುತ್ತಿದ್ದಂತೆ ಮತ್ತೊಂದಷ್ಟುಸಿನಿಮಾಗಳು ಚಿತ್ರೀಕರಣಕ್ಕೆ ಹೊರಡುವ ಸೂಚನೆಗಳಿವೆ.

ಆ.10ರಿಂದ ಭಜರಂಗಿ 2 ಶೂಟಿಂಗ್‌

ಹರ್ಷ ನಿರ್ದೇಶಿಸಿರುವ, ಜಯಣ್ಣ ನಿರ್ಮಾಣದ ‘ಭಜರಂಗಿ 2’ ಚಿತ್ರಕ್ಕೆ ಕೇವಲ 12 ದಿನಗಳು ಮಾತ್ರ ಚಿತ್ರೀಕರಣ ಬಾಕಿ ಇದೆ. ಇದರಲ್ಲಿ ಶಿವರಾಜ್‌ ಕುಮಾರ್‌ ಪಾತ್ರದ ಚಿತ್ರೀಕರಣ 6 ದಿನ ಮಾತ್ರ ಬಾಕಿ ಇದೆ. ಹೀಗಾಗಿ ಕೆಲವೇ ದಿನಗಳ ಚಿತ್ರೀಕರಣ ಉಳಿದಿದ್ದು, ಆ.10ರಿಂದ ಶೂಟಿಂಗ್‌ ಮಾಡಲು ಚಿತ್ರತಂಡ ನಿರ್ಧರಿಸಿದೆ.

ರಾಣಾ ದಗ್ಗುಬಾಟಿ, ಮಿಹೀಕಾ ಬಜಾಜ್ ಅರಿಶಿನ ಶಾಸ್ತ್ರದ ಫೋಟೋಗಳು

ತಮ್ಮ ನಿರ್ದೇಶನದ ಚಿತ್ರ ಶೂಟಿಂಗ್‌ಗೆ ತೆರಳುತ್ತಿರುವ ಹೊತ್ತಿನಲ್ಲಿ ನಿರ್ದೇಶಕ ಹರ್ಷ ಹೇಳಿದ್ದಿಷ್ಟು, ‘ಮೋಹನ್‌ ಬಿ ಕೆರೆ ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದೇವೆ. ಕಡಿಮೆ ದಿನಗಳ ಶೂಟಿಂಗ್‌ ಇರುವ ಕಾರಣ ಕಡಿಮೆ ಕಾರ್ಮಿಕರು ಸೆಟ್‌ನಲ್ಲಿ ಇರಲಿದ್ದಾರೆ. ಎಲ್ಲಾ ರೀತಿಯ ಆರೋಗ್ಯ ತಪಸಾಣೆಯ ನಂತರ ಸೆಟ್‌ಗೆ ಪ್ರವೇಶ ಮಾಡಲಾಗುವುದು. ಈಗಾಗಲೇ ಶೂಟಿಂಗ್‌ ಮಾಡಿಕೊಳ್ಳುತ್ತಿರುವ ಚಿತ್ರಗಳನ್ನೇ ಮುಂದಿಟ್ಟುಕೊಂಡು ನಾವು ಕೂಡ ಅವರ ರೀತಿಯಲ್ಲೇ ಪೂರ್ವ ತಯಾರಿ ಮಾಡಿಕೊಂಡೇ ಶೂಟಿಂಗ್‌ ಮಾಡಲಿದ್ದೇವೆ. ಇದಕ್ಕೆ ಶಿವಣ್ಣ ಕೂಡ ಒಪ್ಪಿಗೆ ಕೊಟ್ಟಿದ್ದಾರೆ’ ಎನ್ನುತ್ತಾರೆ.

ಆ.16ರ ನಂತರ ಕೆಜಿಎಫ್‌ 2 ಶೂಟಿಂಗ್‌

ಯಶ್‌ ನಟನೆಯ ಕೆಜಿಎಫ್‌ 2 ಚಿತ್ರಕ್ಕೂ ಇದೇ ತಿಂಗಳಿನಿಂದ ಚಿತ್ರೀಕರಣ ಶುರುವಾಗಲಿದೆ. ನಿರ್ದೇಶಕ ಪ್ರಶಾಂತ್‌ ನೀಲ್‌ ಹೇಳಿಕೊಂಡಿರುವಂತೆ ಆ.16ರ ನಂತರ ಕೆಜಿಎಫ್‌ 2 ಚಿತ್ರಕ್ಕೆ ಶೂಟಿಂಗ್‌ ನಡೆಯಲಿದೆ. ಒಟ್ಟು 25 ದಿನಗಳ ಕಾಲ ಚಿತ್ರೀಕರಣ ಬಾಕಿ ಇದ್ದು, ಬಹುತೇಕ ಚಿತ್ರೀಕರಣ ಬೆಂಗಳೂರು ಮತ್ತು ನಗರದ ಹೊರ ವಲಯದಲ್ಲಿ ನಡೆಯುವ ಸಾಧ್ಯತೆಗಳು ಇವೆ. ಸಾಹಸ ದೃಶ್ಯಗಳನ್ನು ಮಿನರ್ವ ಮಿಲ್‌ನಲ್ಲಿ ಚಿತ್ರೀಕರಿಸಲು ಚಿತ್ರತಂಡ ಪ್ಲಾನ್‌ ಮಾಡಿಕೊಂಡಿದೆ.

ಮಿಲನ ಪ್ರಕಾಶ್‌ ನಿರ್ದೇಶನದ ಚಿತ್ರದಲ್ಲಿ ದರ್ಶನ್‌ ದ್ವಿಪಾತ್ರ!

ಮೊದಲ ಹಂತವಾಗಿ 15 ದಿನಗಳ ಕಾಲ ಚಿತ್ರೀಕರಣ ಮಾಡಿ ಬ್ರೇಕ್‌ ನೀಡಲಾಗುತ್ತದೆ. ನಂತರ ಎರಡನೇ ಹಂತದಲ್ಲಿ 10 ದಿನಗಳ ಕಾಲ ಚಿತ್ರೀಕರಣ ಮಾಡುವ ಉದ್ದೇಶ ನಿರ್ದೇಶಕರದ್ದು. ಚಿತ್ರದ ಮುಖ್ಯ ಕಲಾವಿದರ ಹೊರತಾಗಿ, ಚಿತ್ರಕ್ಕೆ ಕೆಲಸ ಮಾಡುವ ಎಲ್ಲ ತಂತ್ರಜ್ಞರನ್ನು ಚಿತ್ರೀಕರಣ ಮುಗಿಯುವ ತನಕ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲು ವ್ಯವಸ್ಥೆ ಮಾಡುವುದು ಸೇರಿದಂತೆ ಹಲವು ರೀತಿಯ ಸುರಕ್ಷತೆ ಕ್ರಮಗಳ ಬಗ್ಗೆ ಚಿತ್ರತಂಡ ಯೋಚನೆ ಮಾಡುತ್ತಿದೆ. ಎರಡು ಹಂತದಲ್ಲಿ ಚಿತ್ರೀಕರಣ ಮುಗಿಯುವ ತನಕ ಚಿತ್ರಕ್ಕೆ ಕೆಲಸ ಮಾಡುವವರು ಯಾರು ಹೊರಗೆ ಹೋಗುವಂತಿಲ್ಲ ಎನ್ನುವ ಷರತ್ತಿನೊಂದಿಗೆ ಶೂಟಿಂಗ್‌ ತಂಡವನ್ನು ರೂಪಿಸಲಾಗುತ್ತಿದೆ. ನಟ ಯಶ್‌, ನಾಯಕಿ ಶ್ರೀನಿಧಿ ಶೆಟ್ಟಿಸೇರಿದಂತೆ ಬೇರೆ ಯಾರಲ್ಲ ಕಲಾವಿದರು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

ಆ.16ರಿಂದ ಪೊಗರು ಸಾಂಗ್‌ ಹಂಗಾಮ

ಧ್ರುವ ಸರ್ಜಾ ನಟನೆಯ, ನಂದಕಿಶೋರ್‌ ನಿರ್ದೇಶನದ ‘ಪೊಗರು’ ಚಿತ್ರ ಕೂಡ ಆ.16ರ ನಂತರ ಶೂಟಿಂಗ್‌ ಮೈದಾನಕ್ಕಿಳಿಯುತ್ತಿದೆ. ಒಂದು ಹಾಡಿನ ಜತೆಗೆ ಒಂದಿಷ್ಟುಮಾತಿನ ಭಾಗದ ಚಿತ್ರೀಕರಣ ಬಾಕಿ ಉಳಿದಿಕೊಂಡಿದೆ. ಹೀಗಾಗಿ ಆ.16ರ ನಂತರ ಚಿತ್ರೀಕರಣಕ್ಕೆ ತೆರಳುವುದಕ್ಕೆ ಚಿತ್ರತಂಡ ಪ್ಲಾನ್‌ ಮಾಡಿಕೊಂಡಿದೆ.

ಪುಷ್ಕರ್‌ ನಿರ್ಮಾಣದ ಹೊಸ ಸಿನಿಮಾ 'ಬ್ರಹ್ಮರಾಕ್ಷಸ'!

ಶೂಟಿಂಗ್‌ ಮಾಡಿಕೊಳ್ಳಬೇಕಿರುವ ಈ ಹಾಡನ್ನು ಬೆಂಗಳೂರಿನಲ್ಲಿ ಶೂಟಿಂಗ್‌ ಮಾಡುವ ಪ್ಲಾನ್‌ ಮಾಡಿಕೊಂಡಿದೆ. ಏಳು ದಿನಗಳ ಕಾಲ ಬೆಂಗಳೂರಿನ ಮಿನರ್ವ ಮಿಲ್‌, ವೈಟ್‌ಫೀಲ್ಡ್‌ನ ರೈಲ್ವೇ ಯಾರ್ಡ್‌ ಮುಂತಾದ ಏಳು ಲೊಕೇಶನ್‌ಗಳಲ್ಲಿ ಈ ಹಾಡಿನ ಚಿತ್ರೀಕರಣ ಮಾಡಲಾಗುವುದು.

‘ನಾವು ಮೊದಲು ಯೋಜನೆ ಹಾಕಿಕೊಂಡಂತೆ ಮೂರೂವರೆ ಸಾವಿರ ಜೂನಿಯರ್‌ ಆರ್ಟಿಸ್ಟ್‌ಗಳನ್ನು ಇಟ್ಟುಕೊಂಡು ಈ ಹಾಡಿನ ಶೂಟಿಂಗ್‌ ಮಾಡಬೇಕಿತ್ತು. ಆದರೆ, ಈಗ ಅದು ಸಾಧ್ಯವಿಲ್ಲ. ಹೀಗಾಗಿ ಯಾವ ರೀತಿ ಹಾಡಿನ ಚಿತ್ರೀಕರಣ ಮಾಡಬೇಕು ಎಂಬುದು ಆ.16ರ ನಂತರ ಸಿದ್ಧತೆ ಮಾಡಿಕೊಳ್ಳುತ್ತೇವೆ’ ಎನ್ನುತ್ತಾರೆ ನಿರ್ಮಾಪಕ ಗಂಗಾಧರ್‌.