ತರುಣ್‌ ಸುಧೀರ್‌ ನಿರ್ದೇಶನದ ‘ರಾಬರ್ಟ್‌’ ಚಿತ್ರದಲ್ಲೂ ಡಬಲ್‌ ಶೇಡ್‌ ಇರುವ ಪಾತ್ರದಲ್ಲಿ ದರ್ಶನ್‌ ಅವರು ಕಾಣಿಸಿಕೊಂಡಿದ್ದಾರೆ ಎಂಬುದು ಚಿತ್ರದ ಟೀಸರ್‌ ಹಾಗೂ ಲುಕ್‌ಗಳು ಬಿಟ್ಟು ಕೊಡುತ್ತಿರುವ ಗುಟ್ಟು. ಇದರ ಹೊರತಾಗಿ ಪಕ್ಕಾ ದ್ವಿಪಾತ್ರ ಎನ್ನುವಂತೆ ಇತ್ತೀಚೆಗೆ ಯಾವ ಸ್ಟಾರ್‌ ಹೀರೋಗಳ ಸಿನಿಮಾಗಳು ಬಂದಿಲ್ಲ. ಆದರೆ, ಮಿಲನ ಪ್ರಕಾಶ್‌ ಚಿತ್ರದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದ್ವಿಪಾತ್ರ ಮಾಡಲಿದ್ದಾರೆ ಎನ್ನುವುದು ಸದ್ಯದ ಹಾಟ್‌ ಟಾಪಿಕ್‌.

'ರಾಬರ್ಟ್‌' ರಿಲೀಸ್‌ಗೂ ಮುನ್ನವೇ ಮತ್ತೊಂದು ಸ್ಕ್ರಿಪ್ಟ್‌ ರೆಡಿ; ಡಿ-ಬಾಸ್‌ ಫ್ಯಾನ್ಸ್ ಹ್ಯಾಪಿ!

ಈಗಾಗಲೇ ಕತೆಯ ಒಂದು ಸಾಲು ಒಪ್ಪಿಕೊಂಡಿದ್ದು, ತುಂಬಾ ವರ್ಷಗಳ ನಂತರ ಸ್ಟಾರ್‌ ಹೀರೋ ದ್ವಿಪಾತ್ರ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಹಾಗೊಂದು ವೇಳೆ ದರ್ಶನ್‌ ದ್ವಿಪಾತ್ರ ಮಾಡಿ ಗೆದ್ದರೆ ಹಳೆಯ ಟ್ರೆಂಡ್‌ ಮತ್ತೊಮ್ಮೆ ಹೊಸದಾಗಿ ಚಾಲ್ತಿಗೆ ಬರಲಿದೆ. ಅದರ ಕ್ರೆಡಿಟ್‌ ಮಿಲನ ಪ್ರಕಾಶ್‌ ಹಾಗೂ ನಾಯಕ ನಟ ದರ್ಶನ್‌ ಅವರ ಜೋಡಿಗೆ ಸೇರುತ್ತದೆ. ಆದರೂ ಈ ಕುರಿತು ಚಿತ್ರದ ನಿರ್ದೇಶಕ ಹಾಗೂ ನಟ ಯಾವುದೇ ಮಾಹಿತಿಯನ್ನು ಬಿಟ್ಟು ಕೊಡುತ್ತಿಲ್ಲ.

ಹೋಟೆಲ್‌ ಬಿಲ್‌ ಕೊಡೋಕೆ ಹೇಳಿದ ಸಿದ್ಧಾರ್ಥ್ ಮಲ್ಯ; ಈ ಕಾರಣಕ್ಕೆ ಬ್ರೇಕಪ್ ಮಾಡಿಕೊಂಡ್ರಾ ದೀಪಿಕಾ?

"