ಮಮ್ಮಿ ಖ್ಯಾತಿಯ ಲೋಹಿತ್ ನಿರ್ದೇಶನದ ಸಿನಿಮಾ| ಹಾರರ್ ಕಥೆ ಬಗ್ಗೆ ಪುಷ್ಕರ್ ಏನು ಹೇಳಿದ್ದಾರೆ?
ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದಾರೆ. ಪ್ರಿಯಾಂಕ ಉಪೇಂದ್ರ ನಟನೆಯಲ್ಲಿ ‘ಮಮ್ಮಿ’ ಹಾಗೂ ‘ದೇವಕಿ’ ಚಿತ್ರಗಳನ್ನು ನಿರ್ದೇಶಿಸಿ ಯಶಸ್ಸು ಕಂಡಿದ್ದ ಲೋಹಿತ್ ನಿರ್ದೇಶನದ ಸಿನಿಮಾ ಇದು. ಹೆಸರು ‘ಬ್ರಹ್ಮರಾಕ್ಷಸ’.
ಸಿನಿಮಾ ವಿತರಣೆ ಆರಂಭಿಸಿದ ಪುಷ್ಕರ್!
ಲೋಹಿತ್ ಮೂರನೆಯ ಚಿತ್ರವೂ ಹಾರರ್ ನೆರಳಿನಲ್ಲೇ ಮೂಡಿ ಬರುತ್ತಿದೆ. ಹಾರರ್ ಕತೆಯನ್ನು ಒಳಗೊಂಡಿದ್ದು, ತಮ್ಮ ಈ ಹಿಂದಿನ ಚಿತ್ರಗಳಂತೆ ಈ ಚಿತ್ರ ಕೂಡ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎನ್ನುವ ನಂಬಿಕೆ ನಿರ್ದೇಶಕರದ್ದು. ಇಲ್ಲಿವರೆಗೂ ಬೇರೆ ಬೇರೆ ರೀತಿಯ ಚಿತ್ರಗಳನ್ನು ನಿರ್ಮಿಸುತ್ತ ಬಂದಿರುವ ಪುಷ್ಕರ್ ಈಗ ಹಾರರ್ ಚಿತ್ರಕ್ಕೂ ಕೈ ಹಾಕಿದ್ದಾರೆ. ಇದು ಅವರ ನಿರ್ಮಾಣದ ಸಂಸ್ಥೆಗೆ ಹೊಸ ಜಾನರ್ ಚಿತ್ರವಂತೆ.
ವಿಭಿನ್ನ ಬರ್ತಡೇ ಗಿಫ್ಟ್ ಸ್ವೀಕರಿಸಿದ ಆರೋಹಿ ನಾರಾಯಣ್; ಇಷ್ಟೊಂದು ರೊಮ್ಯಾಂಟಿಕ್ಕಾ?
‘ಕತೆ ಚೆನ್ನಾಗಿತ್ತು. ಜತೆಗೆ ಈಗಿನ ಕಾಲಕ್ಕೆ ತಕ್ಕಂತೆ ವಿಭಿನ್ನವಾಗಿ ಕಟ್ಟಿಕೊಡಬಹುದಾದ ಸಿನಿಮಾ. ಈ ಕಾರಣಕ್ಕೆ ಚಿತ್ರದ ನಿರ್ಮಾಣಕ್ಕೆ ಮುಂದಾಗಿದ್ದೇನೆ’ ಎಂದು ಪುಷ್ಕರ್ ಮಲ್ಲಿಕಾರ್ಜುನಯ್ಯ ತಿಳಿಸುತ್ತಾರೆ. ಸೆಪ್ಟಂಬರ್ ತಿಂಗಳಿನಿಂದಲೇ ಚಿತ್ರೀಕರಣ ಶುರುವಾಗಲಿದೆ.
ಯಾವ ಚಿತ್ರಗಳ ಚಿತ್ರೀಕರಣ ಆರಂಭವಾಗಲಿವೆ?:ಇಲ್ಲಿದೆ ಲಿಸ್ಟ್?
"
