ನಟ ದರ್ಶನ್ ವಿರುದ್ಧ ಮತ್ತೆ ಸಿಡಿದ ಉಮಾಪತಿಗೌಡ; ದೇಹ ತೂಕವಿದ್ದರೆ ಸಾಲದು, ಮಾತು ತೂಕವಿರಬೇಕು!
ನಟ ದರ್ಶನ್ ವಿರುದ್ಧ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಅವರು ಪುನಃ ವಾಗ್ದಾಳಿ ನಡೆಸಿದ್ದಾರೆ. ದೇಹ ತೂಕವಿದ್ದರೆ ಸಾಲದು, ಮಾತು ಕೂಡ ತೂಕವಾಗಿರಬೇಕು ಎಂದು ಹೇಳಿದ್ದಾರೆ.
ಬೆಂಗಳೂರು (ಫೆ.23): ಎಲ್ಲರಿಗೂ ಸಮಸ್ಯೆಗಳು ಬರುತ್ತವೆ ಸಾರ್.. ಅದನ್ನು ಹ್ಯಾಂಡಲ್ ಮಾಡುವ ರೀತಿ ಗೊತ್ತಿರಬೇಕು. ಸಮಾಜದಲ್ಲಿ ತೂಕವಿರುವ ವ್ಯಕ್ತಿ ಘನತೆಯಿಂದ ನಡೆದುಕೊಳ್ಳಬೇಕು. ನಾ ಆವಾಗಲೇ ಹೇಳಿದಂತೆ ದೇಹ ತೂಕವಿದ್ದರೆ ಸಾಲದು, ಮಾತು ಕೂಡ ತೂಕವಿರಬೇಕು ಎಂದು ನಟ ದರ್ಶನ್ ವಿರುದ್ಧ ನಿರ್ಮಾಪಕ ಉಮಾಪತಿಗೌಡ ಕಿಡಿಕಾರಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಲು ಬಂದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ನಿರ್ಮಾಪಕ ಉಮಾಪತಿಗೌಡ ಅವರು, ನಮ್ಮ ಕ್ಷೇತ್ರದ ವಿಚಾರವಾಗಿ ಉಪಮುಖ್ಯಮಂತ್ರಿ ಅವರನ್ನು ಭೇಟಿಗೆ ಆಗಮಿಸಿದ್ದೆನು. ನಮ್ಮ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಮತ್ತು ರಸ್ತೆ ಬಗ್ಗೆ ಚರ್ಚೆ ಮಾಡಬೇಕಿದೆ. ಕೇವಲ ರಾಜಕೀಯ ಚರ್ಚೆಗೆ ಬಂದಿದ್ದೀರಾ ಎಂದಿದಕ್ಕೆ, ತಮ್ಮಗೆಲ್ಲ ಗೊತ್ತಿದೆ ಅಲ್ವಾ ಮತ್ತೆ ಹೇಳಬೇಕಾ.. ಸಾಹೇಬರು ಬುದ್ದಿ ಹೇಳೊದಾದ್ರೆ ಹೇಳ್ತಾರೆ ಅಷ್ಟೇ ಎಂದು ತಿಳಿಸಿದರು.
ನಟ ದರ್ಶನ್ ಸುತ್ತಿಕೊಂಡ್ತು ಹೊಸ ವಿವಾದ; ನಿರ್ಮಾಪಕ ಉಮಾಪತಿ ವಿರುದ್ಧ ಬಳಸಿದ ಪದಕ್ಕೆ ಆಕ್ಷೇಪ
ನಟ ದರ್ಶನ್ ಅವರು ಬಳಕೆ ಮಾಡಿದ ತಗಡು ಎಂಬ ಪದದ ಬಗ್ಗೆ ಮಾತನಾಡಿದ ಉಮಾಪತಿಗೌಡ, ಅದು ತಪ್ಪು ಸರ್. ಸಮಸ್ಯೆಗಳು ಎಲ್ಲಕಡೆ ಬರುತ್ತವೆ. ಬಟ್ ಅದನ್ನ ಹ್ಯಾಂಡಲ್ ಮಾಡುವ ರೀತಿ ಗೊತ್ತಿರಬೇಕು. ಸಮಾಜದಲ್ಲಿ ತೂಕವಿರುವ ವ್ಯಕ್ತಿ ಘನತೆಯಿಂದ ನಡೆದುಕೊಳ್ಳಬೇಕು. ನಾ ಅವಗಲೇ ಹೇಳಿದ್ದೇನೆ.. ದೇಹ ತೂಕ ವಿದ್ದರೆ ಸಾಲದು ಮಾತು ತೂಕವಿರಬೇಕು. ನಾ ತಪ್ಪು ಮಾಡುದ್ರು ತಪ್ಪೇ, ಯಾರು ತಪ್ಪು ಮಾಡಿದ್ರು ತಪ್ಪೇ. ನಾವೆಲ್ಲ ಸಿನಿಮಾ ಮುಖಾಂತರ ಮೆಸೆಜ್ ಕೊಡಬೇಕು. ಈ ಕಂಟ್ರಾವರ್ಸಿಯಿಂದ ಮೆಸೆಜ್ ಕೊಡುವಂತದ್ದೇನು ಇಲ್ಲ ಎಂದು ಹೇಳಿದರು.
ಇನ್ನು ನಟ ದರ್ಶನ್ ವಿರುದ್ಧ ಮಹಿಳೆಯರು ಪ್ರತಿಭಟನೆ ನಡೆಸಿದ ವಿಚಾರವಾಗಿ ಮಾತನಾಡಿ, ನಾನು ಕೂಡ ಅದನ್ನ ನೋಡಿದೆ. ಮಹಿಳೆಯರಿಗೆ ತೊಂದರೆ ಆಗುವ ರೀತಿಯಲ್ಲಿ ಏನೋ ಮಾತನಾಡಿದ್ದಾರಂತೆ, ಹೀಗಾಗಿ ಪ್ರತಿಭಟನೆ ಮಾಡಿದ್ದಾರೆ. ಯಾಕೆ ಈ ವಿವಾದವಾಯ್ತು ಎಂಬ ಬಗ್ಗೆ ನಮ್ಗೆ ಏನು ಗೊತ್ತಿಲ್ಲ ಸರ್. ಎಲ್ಲಾ ಹೊಟ್ಟೆ ತುಂಬಿದವರು, ನಾವು ಹಸಿದವರು. ಆ ರೀತಿ ಪದ ಬಳಕೆ ತಪ್ಪು. ನಾವೆಲ್ಲ ಯಾವುದೋ ಮೂಲೆಯಲ್ಲಿ ಕೆಲಸ ಮಾಡಿಕೊಂಡು ಇದ್ದೇವೆ ಎಂದು ಪುನಃ ನಟ ದರ್ಶನ್‌ಗೆ ಮಾತಿನ ಮೂಲಕವೇ ತಿವಿದಿದ್ದಾರೆ.
ಅಯ್ಯೋ ತಗಡೇ...ಯಾಕೆ ಬಂದು ಬಂದು ಗುಮ್ಮಿಸಿಕೊಳ್ಳುತ್ತೀಯಾ?; ಉಮಾಪತಿ ಶ್ರೀನಿವಾಸ್‌ಗೆ ಟಾಂಗ್ ಕೊಟ್ಟ ದರ್ಶನ್
ನಿರ್ಮಾಪಕರೇ ದೇವರು ಎಂದು ಟ್ವಿಟ್ ಮಾಡಿದ ವಿಚಾರದ ಬಗ್ಗೆ ಮಾತನಾಡಿ, ಇದು ಅವರು ಹಾಕಿದ ಆಲದ ಮರ ಅಲ್ವಾ.? ಸಿನಿಮಾ ಮಾಡೋದಾದ್ರೆ ದೊಡ್ಡಮನೆಗೆ ಬಂದು ಮಾಡಿ. ಅದರಲ್ಲಿ ಒಂದು ತೂಕವಿರುತ್ತೆ ಅಂತ ಹೇಳುತ್ತಿದ್ದರು. ಬಟ್ ನಮ್ಗೆ ಈಗ ಅನುಭವವಾಗ್ತಿದೆ ಎಂದು ನಿರ್ಮಾಪಕ ಉಮಾಪತಿಗೌಡ ಹೇಳಿದರು.