ಅಯ್ಯೋ ತಗಡೇ...ಯಾಕೆ ಬಂದು ಬಂದು ಗುಮ್ಮಿಸಿಕೊಳ್ಳುತ್ತೀಯಾ?; ಉಮಾಪತಿ ಶ್ರೀನಿವಾಸ್‌ಗೆ ಟಾಂಗ್ ಕೊಟ್ಟ ದರ್ಶನ್

ಕಾಟೇರ ಟೈಟಲ್ ಕೊಟ್ಟಿದ್ದು ಯಾರು ಅನ್ನೋ ಗೊಂದಲದಲ್ಲಿ ಇರುವ ಸಿನಿ ರಸಿಕರಿಗೆ 50ನೇ ದಿನದ ಸಂಭ್ರಮಾಚರಣೆಯಲ್ಲಿ ದರ್ಶನ್ ಕ್ಲಾರಿಟಿ ಕೊಟ್ಟಿದ್ದಾರೆ.

Kannada actor Darshan gives clarification to producer Umapathy about Kaatera title vcs

ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣ, ತರುಣ್ ಸುದೀರ್‌ ನಿರ್ದೇಶನದಲ್ಲಿ ಮೂಡಿ ಬಂದಿರುವ ಕಾಟೇರ ಸಿನಿಮಾ 50ನೇ ದಿನದ ಸಂಭ್ರಮ ಆಚರಣೆ ಮಾಡುತ್ತಿದೆ. ನಟ ದರ್ಶನ್‌ ಗೆ ಕನಸಿನ ರಾಣಿ ಮಾಲಾಶ್ರೀ ಪುತ್ರಿ ನಾಯಕಿಯಾಗಿ ಮಿಂಚಿದ್ದಾರೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಕಾಟೇರ ಸದ್ದು ಜೋರಾಗಿದೆ. ಆದರೆ ಈ ನಡುವೆ ಕಾಟೇರ ಟೈಟಲ್ ಕೊಟ್ಟಿದ್ದು ಯಾರು ಅನ್ನೋ ಗೊಂದಲವಿತ್ತು. ಕಾಟೇರ ಟೈಟಲ್ ಕೊಟ್ಟಿದ್ದು ನಾನೇ ಎಂದು ಹೇಳಿಕೆ ನೀಡಿರುವ ಉಮಾಪತಿ ಶ್ರೀನಿವಾಸ್‌ರವರಿಗೆ ದರ್ಶನ್ ಕ್ಲಾರಿಟಿ ನೀಡಿದ್ದಾರೆ. 

'ಕೆಲವರು ಹೇಳಿದರು ಕಥೆ ನಾನು ಮಾಡಿಸಿದೆ ಟೈಟಲ್ ನಾನು ಕೊಟ್ಟೆ ಅಂತ. ಅಯ್ಯೋ ತಗಡೇ. ನಿನಗೆ ರಾಬರ್ಟ್‌ ಕಥೆ ಕೊಟ್ಟಿದ್ದೇ ನಾವು. ಯಾವತ್ತೂ ಕೊಟ್ಟಿದ್ದು ಮಾಡಿದ್ದು ಹೇಳಬಾರದು. ಭಗವಂತ...ಈಗಾಗಲೆ ಒಂದು ಸಲ ಸಿಗಾಕೊಂಡು ಬಾಯಿಂದ ಹೇಳಿಸಿಕೊಂಡು ಬುದ್ಧಿ ಕಲಿತಿಲ್ಲ ಅಂದ್ರೆ ನಾವು ಏನ್ ಹೇಳೋಣ. ಇಂಥ ಹಳ್ಳೆ ಕಥೆಯನ್ನು ಯಾಕಪ್ಪಾ ಬಿಟ್ಟೆ ನೀನು?ನೀನು ಮಾಡಿಸಿ ಅಂದ್ಮೇಲೆ ಯಾಕೆ ಕಥೆ ಬಿಟ್ಟೆ? ನಿನ್ನ ಜಡ್ಜ್‌ಮೆಂಟ್ ಅಷ್ಟು ಚೆನ್ನಾಗಿದೆ ಅಂದ್ಮೇಲೆ ಸಿನಿಮಾ ಮಾಡ್ಬೋದಿತ್ತು ಅಲ್ವಾ? ಟೈಟಲ್ ನಾನು ಕೊಟ್ಟೆನಾ?......ಟೈಟಲ್ ಇಟ್ಟಿದ್ದೇ ನಾನು. ಅದಕ್ಕೊಂದು ಕ್ಲಾರಿಟಿ ಕೊಡುತ್ತೀನಿ. ಎಲ್ಲಾ ಆಧಾರ ಇಟ್ಟುಕೊಂಡು ಮಾತನಾಡಬೇಕು ಏಕೆಂದರೆ ನಾವು ಸುಳ್ಳು ಹೇಳುತ್ತಿದ್ದೀವಿ ಅಂತಾರೆ ಆಮೇಲೆ' ಎಂದು ದರ್ಶನ್ ಹೇಳುತ್ತಾ ವೇದಿಕೆ ಮೇಲೆ ಮಹೇಶ್‌ರನ್ನು ಕರೆಸಿದರು.

ಯಾರಿಗೆ ಏನು ಧಕ್ಕಬೇಕೋ ಧಕ್ಕುತ್ತೆ, ಕಾಟೇರ ಟೈಟಲ್ ಆಂಡ್ ಕಥೆ ಬರೆಸಿದ್ದು ನಾನೇ: ಉಮಾಪತಿ ಶ್ರೀನಿವಾಸ್

'ಮದಗಜ ಟೈಟಲ್‌ ರಾಮೂರ್ತಿ ಸರ್ ಬಳಿ ಇತ್ತು. ಅದನ್ನು ತೆಗೆದುಕೊಳ್ಳುವಾಗ ಕಾಟೇರ ಟೈಟಲ್‌ನ ಉಮಾಪತಿ ಸರ್‌ ಕೊಟ್ರು. ಮದಗಜ ಟೈಟಲ್‌ನ ಬಾಸ್ ಹೇಳಿದ ತಕ್ಷನ್ ರಾಮೂರ್ತಿ ಸರ್ ಕೊಟ್ರು. ಥ್ಯಾಂಕ್‌ ಯು ರಾಮೂರ್ತಿ ಸರ್.... ಮಹೇಶ್' ಎಂದು ನಿರ್ದೇಶಕ ಮಹೇಶ್ ಹೇಳಿದ್ದಾರೆ. 

'ಮೊದಲು ಟೈಟಲ್‌ನ ನನ್ನ ಬ್ಯಾನರ್‌ನಲ್ಲಿ ರಿಜಿಸ್ಟರ್‌ ಮಾಡಿಸಲು ಹೇಳಿದರು ಆದರೆ ನಮ್ಮ ಬ್ಯಾನರ್‌ನಲ್ಲಿ ಜಾಗ ಇಲ್ಲದ ಕಾರಣ ಅದೂ ನಮ್ಮ ಬ್ಯಾನರ್ ಅಲ್ಲಿ ರಿಜಿಸ್ಟರ್ ಮಾಡಿಸು ಎಂದರು. ಆದರೆ ಟೈಟಲ್ ಕೊಟ್ಟಿದ್ದು ನೀವೇ.' ಎಂದು ಕಾಟೇರ ನಿರ್ದೇಶಕ ತರುಣ್ ಸುಧೀರ್ ಹೇಳಿದ್ದಾರೆ. 

'ಯಾಕಪ್ಪಾ ಬಂದು ಬಂದು ನಮ್ಮ ಕೈಯಲ್ಲಿ ಗುಮ್ಮಿಸಿಕೊಳ್ಳುತ್ತೀಯಾ? ಗುಮ್ಮಿಸಿಕೊಳ್ಳಬೇಡ. ಎಲ್ಲೋ ಇದ್ಯಾ ಚೆನ್ನಾಗಿದ್ಯಾ ಅಲ್ಲೇ ಇದ್ದು ಬಿಡು. ತಪ್ಪು ಅದು. ಇಷ್ಟೇ ಕ್ಲಾರಿಫೈ ಮಾಡಿದ್ದು' ಎಂದಿದ್ದಾರೆ ದರ್ಶನ್.

Latest Videos
Follow Us:
Download App:
  • android
  • ios