Asianet Suvarna News Asianet Suvarna News

ರತಿ ಅಂತ ಹೆಂಡ್ತಿ ಇದ್ರು ಕೋತಿಯಂಥ ಗೆಳತಿ ಯಾಕೆ ಬೇಕು: ದರ್ಶನ್‌ಗೆ ಉಮಾಪತಿ ಟಾಂಗ್‌!

darshan Thoogudeepa Wife ದರ್ಶನ್‌ಗೆ ರತಿಯಂಥ ಹೆಂಡ್ತಿ ಇದ್ದಾಳೆ, ಹಾಗಿದ್ದರೂ ಕೋತಿಯಂಥ ಗೆಳತಿ ಯಾಕೆ ಬೇಕು ಎಂದು ನಿರ್ಮಾಪಕ ಉಮಾಪತಿ ಗೌಡ, ಕೊಲೆ ಆರೋಪದಲ್ಲಿ ಜೈಲು ಪಾಲಾಗಿರುವ ನಟನಿಗೆ ಪ್ರಶ್ನೆ ಮಾಡಿದ್ದಾರೆ.

Umapathi Gowda on kannada actor darshan Thoogudeepa and His Wife san
Author
First Published Jun 18, 2024, 3:09 PM IST

ಬೆಂಗಳೂರು (ಜೂ.18): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ವಿರುದ್ಧ ಮೊದಲಿನಿಂದಲೂ ಕಿಡಿಕಾರುತ್ತಲೇ ಬಂದಿರುವ ನಿರ್ಮಾಪಕ ಉಮಾಪತಿ ಗೌಡ ಮತ್ತೊಮ್ಮೆ, ನಟನ ವಿರುದ್ಧ ಟೀಕೆ ಮಾಡಿದ್ದಾರೆ. ಅವರು ಮಾಡಿದ ಪಾಪ ಕರ್ಮಗಳು ಅವರನ್ನೇ ಕಿತ್ತು ತಿನ್ನುತ್ತಿದೆ ಎಂದು ಹೇಳಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಉಮಾಪತಿ ಗೌಡ, ದರ್ಶನ್ ಅವರಿಂದ ದೂರಾಗಿದ್ದು ಒಳ್ಳೆಯದ್ದೇ ಆಯಿತು. ಭಗವಂತ ನನ್ನನ್ನು ಕಾಪಾಡಿದ. ವ್ಯಕ್ತಿ ಬೆಳೆಯಬೇಕಾದ್ರೆ, ಗುರು ಮತ್ತು ಗುರಿ ಇರಬೇಕು. ಅವರಿಬ್ಬರೂ ಇಲ್ಲ ಅಂದ್ರೆ ಈ ರೀತಿ ಆಗುತ್ತದೆ. ಕೋಟಿ ಕಾರು ಇದ್ಯಾವುದು ಲೆಕ್ಕಕ್ಕೆ ಬರೋದಿಲ್ಲ, ಲಕ್ಷ ಬೆಲೆ ಬಾಳೋ ಬಟ್ಟೆ ಹಾಕಿ ದೇಹದಲ್ಲಿ ರೋಗ ಇದ್ರೆ ಏನು ಪ್ರಯೋಜನ. ದರ್ಶನ್ ಗೆ ಸ್ವಲ್ಪ ಕೋಪ ಜಾಸ್ತಿ ಎಂದು ಉಮಾಪತಿ ಗೌಡ ಹೇಳಿದ್ದಾರೆ.

ರತಿ ಅಂತ ಹೆಂಡ್ತಿ ಇದ್ರು ಕೋತಿಯಂತ ಗೆಳತಿ ಯಾಕೆ ಬೇಕು. ನಾನು ದರ್ಶನ್ ವಿರುದ್ಧ ಅಂದು ಮಾತನಾಡದೇ ಇದ್ದಿದ್ದರೆ ನನಗೆ ಗೌರವ ಇರುತ್ತಿರಲಿಲ್ಲ. ದರ್ಶನ್ ಗೆ ಯಾರ ಸಹವಾಸನೋ ಗೊತ್ತಿಲ್ಲ ಇಂದು ಹೀಗಾಗಿದ್ದಾರೆ. ಅವರು ಮಾಡಿರೋದು ಅಪರಾಧ. ಕಾನೂನಿನಲ್ಲಿ ಏನಾಗುತ್ತೋ ಆಗಲಿ. ಕೊಲೆ ಗಡುಕರು ಅನ್ನೋ ಹುಳ ಸೇರಿಕೊಂಡಿದೆ. ರೇಣುಕಾ ಸ್ವಾಮಿ ಕುಟುಂಬದ ಜತೆ ನಾನು ನಿಲ್ಲುತ್ತೇನೆ. ಈ ಪ್ರಕರಣದಲ್ಲಿ ಬಚಾವ್ ಆಗಲು ಪ್ರಭಾವಿ ರಾಜಕಾರಣಿಗಳ ಬೆಂಬಲ ಆಗುತ್ತಿದೆ.. ದರ್ಶನ್ ರಿಂದ ಇದುವರೆಗೂ ಶೋಷಣೆಗೆ ಒಳಗಾದವರು ಇದ್ದಾರೆ. ಅವರು ಈ ಕೊಲೆಗೆ ಕಾರಣ ಯಾಕಂದ್ರೆ ದರ್ಶನ್ ರನ್ನ ಸಹಿಸಿಕೊಂಡು ಬಂದಿರೋದು ತಪ್ಪು. ಇದನ್ನ ವಿರೋಧಿಸಬೇಕು. ದರ್ಶನ್ ಬ್ಯಾನ್ ಮಾಡೋದು ಸರಿನೋ ತಪ್ಪೋ ಗೊತ್ತಿಲ್ಲ. ಮಾಡಿರೋ ಕರ್ಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತಪ್ಪು ಮಾಡಿದರೆ ಶಿಕ್ಷೆ ಆಗಲೇ ಬೇಕು ಎಂದು ಹೇಳಿದ್ದಾರೆ.ದರ್ಶನ್‌ಗೆ ಎರಡು ಮುಖ ಇರೋದು ನಿಜ: ತನಗೆ ಎರಡು ಮುಖವಿದೆ ಎಂದು ದರ್ಶನ್‌ ಹೇಳಿರುವ ಮಾತಿಗೂ ಪ್ರತಿಕ್ರಿಯೆ ನೀಡಿದ ಉಮಾಪತಿ, 'ದರ್ಶನ್ ಎರಡು ಮುಖ ಏನು ಅಂತ ಗೊತ್ತಾಗಿದೆ. ಮೈಸೂರಲ್ಲಿ ನನ್ನ ಮೇಲೆ ಗನ್ ಇಟ್ಟಿದ್ದರು. ನನ್ನನ್ನು ಶೂಟ್‌ ಮಾಡೋಕೆ ಪ್ರಯತ್ನ ಮಾಡಿದ್ರು. ನಾನು ಅದನ್ನ ಸೀರಿಯಸ್‌ ಆಗಿ ತಗೋಂಡಿಲ್ಲ ಸುಮ್ಮನೆ ತೋರಿಸಿದ್ದು ಅಂತ ಸುಮ್ಮನಾದೆ. ಕಂಪ್ಲೇಟ್ ಕೊಡೋಕು ಹೋಗಲಿಲ್ಲ ಅಚಾನಕ್ಕಾಗಿ ಮಾಡಿದ್ದಾರೆ ಅಂತ ಸುಮ್ಮನಾದೆ. ನನ್ನ ಮೇಲೆ ಹೊಡೆಯೋಕೆ ಬಾಂಬೆ ರವಿಯನ್ನ ಭೇಟಿ ಮಾಡಿದ್ದರು. ಈ ವಿಚಾರವನ್ನ ಬಾಂಬೆ ರವಿ ನನಗೆ ಕಾಲ್ ಮಾಡಿ ತಿಳಿಸಿದ್ದರು.  ಲಕ್ನೋದಲ್ಲಿ ದರ್ಶನ್ ಮಾಡಿದ ಗಲಾಟೆಯಿಂದ ವ್ಯಕ್ತಿಯೊಬ್ಬ ಸಾಯಬೇಕಿತ್ತು. ಲಕ್ನೋದಲ್ಲೇ ನನಗೂ ಹೊಡೆಯೋಕೆ ಬಂದಿದ್ದರು. ಮರು ದಿನ ಬೆಳಗ್ಗೆ ಬಂದು ಮನೆಗೆ ಕರೆದು ಊಟ ಹಾಕಿ ಸಾರಿ ಕೇಳಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ದೇಹದಲ್ಲಿ ತೂಕ ಇದ್ರೆ ಸಾಲದು, ಮಾತಿನಲ್ಲಿ ತೂಕ ಇರಬೇಕು: ನಟ ದರ್ಶನ್ ಗೆ ನಿರ್ಮಾಪಕ ಉಮಾಪತಿ ಟಾಂಗ್

ಎಣ್ಣೆ ಏಟಲ್ಲಿ ಸಾಕಷ್ಟು ಗಲಾಟೆ ಆಗಿವೆ. ಎಣ್ಣೆ ಕೊಡಿಸಿದ್ದು ಕಡಿಮೆ ಆಯ್ತು ಅಂತ ರಾಬರ್ಟ್ ಸಿನಿಮಾ ಬಿಡುಗಡೆಗೆ ತೊಂದರೆ ಮಾಡಿದ್ದರು. ರೇಣುಕಾ ಸ್ವಾಮಿ ಕೊಲೆ ಮಾಡಿದವರಿಗೆ ಶಿಕ್ಷೆ ಆಗಬೇಕು. ದರ್ಶನ್ ಜತೆ ಗಲಾಟೆ ಆದಾಗ ನನ್ನ ಮಗಳು ಬಂದು ನನ್ನ ಅಪ್ಪಿ ಅತ್ತಿದ್ದಳು. ನನ್ನ ಅಮ್ಮ ದೇವರ ಮೇಲೆ ಎಲ್ಲವನ್ನೂ ಬಿಡು ಅಂಥ ಹೇಳಿದ್ದರು. ಇವತ್ತು ಸ್ಥಿತಿ ಹೀಗಾಗಿದೆ ಎಂದು ಉಮಾಪತಿ ಗೌಡ ಹೇಳಿದ್ದಾರೆ.

ಅಯ್ಯೋ ತಗಡೇ...ಯಾಕೆ ಬಂದು ಬಂದು ಗುಮ್ಮಿಸಿಕೊಳ್ಳುತ್ತೀಯಾ?; ಉಮಾಪತಿ ಶ್ರೀನಿವಾಸ್‌ಗೆ ಟಾಂಗ್ ಕೊಟ್ಟ ದರ್ಶನ್

Latest Videos
Follow Us:
Download App:
  • android
  • ios