Asianet Suvarna News Asianet Suvarna News

ದೇಹದಲ್ಲಿ ತೂಕ ಇದ್ರೆ ಸಾಲದು, ಮಾತಿನಲ್ಲಿ ತೂಕ ಇರಬೇಕು: ನಟ ದರ್ಶನ್ ಗೆ ನಿರ್ಮಾಪಕ ಉಮಾಪತಿ ಟಾಂಗ್

ನೋಡಿ ಸರ್, ಅವರೆಲ್ಲ ಹೊಟ್ಟೆ ತುಂಬಿದವರು, ನಾವು ಹಸಿದವರು. ಸಮಸ್ಯೆಗಳು ಎಲ್ಲಕಡೆ ಇರುತ್ತವೆ. ಆದರೆ ಅದನ್ನ ಹ್ಯಾಂಡಲ್ ಮಾಡುವ ರೀತಿ ಗೊತ್ತಿರಬೇಕು. ಸಮಾಜದಲ್ಲಿ ತೂಕವಿರುವ ವ್ಯಕ್ತಿ ಘನತೆಯಿಂದ ನಡೆದುಕೊಳ್ಳಬೇಕು ದರ್ಶನ್ ಪದಬಳಕೆ ವಿಚಾರಕ್ಕೆ ನಿರ್ಮಾಪಕ ಉಮಾಪತಿ ಪ್ರತಿಕ್ರಿಯಿಸಿದ್ದು ಹೀಗೆ

Producer Umapati reaction about actor Darshan controversy statement at bengaluru rav
Author
First Published Feb 24, 2024, 9:04 AM IST

ಬೆಂಗಳೂರು (ಫೆ.24): ಕಳೆದ ವರ್ಷಾಂತ್ಯದಲ್ಲಿ ಬಿಡುಗಡೆಯಾಗಿ 50 ದಿನ ಥಿಯೇಟರ್ ನಲ್ಲಿ ಪ್ರದರ್ಶನ ಕಂಡು ಯಶಸ್ಸು ಗಳಿಸಿರುವ ‘ಕಾಟೇರ’ (Kaatera) ಸಿನಿಮಾದ ಕತೆ ಮತ್ತು ಟೈಟಲ್ ತಾವು ಮಾಡಿಸಿದ್ದು ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಹೇಳಿಕೆಗೆ ನಟ ದರ್ಶನ್ ನೀಡಿದ್ದ 'ಅಯ್ಯೋ ತಗಡೇ..' ತಿರುಗೇಟಿನಿಂದ ಹುಟ್ಟಿಕೊಂಡಿರೋ ವಿವಾದ ಇಲ್ಲಿಗೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಹೋದಲ್ಲಿ ಬಂದಲ್ಲಿ ಇಬ್ಬರೂ ತಿರುಗೇಟು ನೀಡುತ್ತಲೇ ಇದ್ದಾರೆ.

ಇದೀಗ ಮತ್ತೆ ನಿರ್ಮಾಪಕ ಉಮಾಪತಿ ದರ್ಶನ ಹೇಳಿಕೆ ಪ್ರತಿಕ್ರಿಯಿಸಿದ್ದಾರೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ ಭೇಟಿಗೆ ಆಗಮಿಸಿದ್ದ ವೇಳೆ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಉಮಾಪತಿ, ಕ್ಷೇತ್ರದ ವಿಚಾರವಾಗಿ ಚರ್ಚಿಸಲು ಡಿಸಿಎಂ ಭೇಟಿಗೆ ಆಗಮಿಸಿದ್ದೇನೆ. ಕ್ಷೇತ್ರದಲ್ಲಿ ನೀರಿನ ಸಮಸ್ಯೆ, ರಸ್ತೆ ಬಗ್ಗೆ ಚರ್ಚೆಗಾಗಿ ಆಗಮಿಸಿದ್ದೆ ಎಂದಿದ್ದಾರೆ. ಇದೇ ವೇಳೆ 'ರಾಜಕೀಯ ಚರ್ಚೆಗೆ ಬಂದಿದ್ದೀರಾ?' ಎಂಬ ಪ್ರಶ್ನೆಗೆ 'ತಮಗೆಲ್ಲ ಗೊತ್ತಿದೆ ಸಾಹೇಬರು ಬುದ್ಧಿ ಹೇಳೋದಾದರೆ ಹೇಳ್ತಾರೆ ಅಷ್ಟೇ ಎಂದರು.

ಅಯ್ಯೋ ತಗಡೇ...ಯಾಕೆ ಬಂದು ಬಂದು ಗುಮ್ಮಿಸಿಕೊಳ್ಳುತ್ತೀಯಾ?; ಉಮಾಪತಿ ಶ್ರೀನಿವಾಸ್‌ಗೆ ಟಾಂಗ್ ಕೊಟ್ಟ ದರ್ಶನ್

ನಟ ದರ್ಶನ್ ಆ ರೀತಿ ಪದಬಳಕೆ ಮಾಡಿದ್ದು ಸರಿನಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಮಾಪತಿ, ನೋಡಿ ಸರ್, ಅವರೆಲ್ಲ ಹೊಟ್ಟೆ ತುಂಬಿದವರು, ನಾವು ಹಸಿದವರು. ಸಮಸ್ಯೆಗಳು ಎಲ್ಲಕಡೆ ಇರುತ್ತವೆ. ಆದರೆ ಅದನ್ನ ಹ್ಯಾಂಡಲ್ ಮಾಡುವ ರೀತಿ ಗೊತ್ತಿರಬೇಕು. ಸಮಾಜದಲ್ಲಿ ತೂಕವಿರುವ ವ್ಯಕ್ತಿ ಘನತೆಯಿಂದ ನಡೆದುಕೊಳ್ಳಬೇಕು. ನಾನು ಹಿಂದೆನೇ ಹೇಳಿದ್ದೇನೆ, ದೇಹ ತೂಕವಿದ್ದರೆ ಸಾಲದು, ಮಾತಿನಲ್ಲಿ ತೂಕವಿರಬೇಕು ಎಂದು. ನಾ ತಪ್ಪು ಮಾಡುದ್ರು ತಪ್ಪೇ, ಯಾರೇ ತಪ್ಪು ಮಾಡಿದ್ರು ಅದು ತಪ್ಪೇ. ನಾವೆಲ್ಲ ಸಿನಿಮಾ ಮುಖಾಂತರ ಮೆಸೆಜ್ ಕೊಡಬೇಕು.ಈ ಕಂಟ್ರಾವರ್ಸಿಯಿಂದ ಮೆಸೆಜ್ ಕೊಡುವಂತದ್ದೇನೂ ಇಲ್ಲ ಎಂದರು.

ಯಾರಿಗೆ ಏನು ಧಕ್ಕಬೇಕೋ ಧಕ್ಕುತ್ತೆ, ಕಾಟೇರ ಟೈಟಲ್ ಆಂಡ್ ಕಥೆ ಬರೆಸಿದ್ದು ನಾನೇ: ಉಮಾಪತಿ ಶ್ರೀನಿವಾಸ್

ಇನ್ನು ದರ್ಶನ್ ವಿರುದ್ಧ ಮಹಿಳೆಯರು ಪ್ರತಿಭಟನೆ ನಡೆಸಿರುವ ವಿಚಾರ ಸಂಬಂಧ ಮಾತನಾಡಿದ ಉಮಾಪತಿ, ಅದನ್ನ ನಾನೂ ನೋಡಿದೆ. ಮಹಿಳೆಯರಿಗೆ ತೊಂದರೆ ಆಗುವ ರೀತಿಯಲ್ಲಿ ಏನೋ ಮಾತನಾಡಿದ್ದಾರಂತೆ, ಹೀಗಾಗಿ ಪ್ರತಿಭಟನೆ ಮಾಡಿದ್ದಾರೆ ಎಂದರು.

Follow Us:
Download App:
  • android
  • ios