ನ್ಯಾಷನಲ್‌ ಸ್ಟಾರ್‌ ಯಶ್‌ ನಟನೆಯ ‘ಟಾಕ್ಸಿಕ್‌’ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಜ.8ರಂದು ಯಶ್‌ ಹುಟ್ಟುಹಬ್ಬದ ಹಿನ್ನೆಲೆ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಡುತ್ತಾರೆ ಎಂದು ಫ್ಯಾನ್ಸ್ ನಿರೀಕ್ಷಿಸಿದ್ದರು. ಅದು ನಿಜವಾಗಿದೆ.  

ನ್ಯಾಷನಲ್‌ ಸ್ಟಾರ್‌ ಯಶ್‌ ನಟನೆಯ ‘ಟಾಕ್ಸಿಕ್‌’ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಜ.8ರಂದು ಯಶ್‌ ಹುಟ್ಟುಹಬ್ಬದ ಹಿನ್ನೆಲೆ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಡುತ್ತಾರೆ ಎಂದು ಫ್ಯಾನ್ಸ್ ನಿರೀಕ್ಷಿಸಿದ್ದರು. ಅದು ನಿಜವಾಗಿದೆ. ಸಿನಿಮಾದ ನಿರ್ಮಾಣ ಸಂಸ್ಥೆ ‘ಕೆವಿಎನ್ ಪ್ರೊಡಕ್ಷನ್ಸ್’ ಈ ಬಗ್ಗೆ ಅಪ್​ಡೇಟ್ ಕೊಟ್ಟಿದೆ. ಸದ್ಯ ಚಿತ್ರದ ಪೋಸ್ಟರ್ ಸಖತ್ ಗಮನ ಸೆಳೆಯುತ್ತಿದೆ. ರಾಕಿಂಗ್ ಸ್ಟಾರ್ ಬರ್ತ್​ಡೇ ಪ್ರಯುಕ್ತ ಜನವರಿ 8ರ ಬೆಳಿಗ್ಗೆ 10.25ಕ್ಕೆ ಸಿನಿಮಾದ ತುಣುಕನ್ನು ರಿಲೀಸ್ ಮಾಡೋದಾಗಿ ಹೇಳಿದ್ದಾರೆ. ಇನ್ನು ರಿಲೀಸ್ ಆಗಿರೋ ಪೋಸ್ಟರ್​​ನಲ್ಲಿ ಯಶ್ ಅವರು ರೆಟ್ರೋ ಸ್ಟೈಲ್ ಕಾರಿನ ಪಕ್ಕ ನಿಂತಿದ್ದಾರೆ. ಅವರ ಬಾಯಲ್ಲಿ ಸಿಗರೇಟ್ ಇದೆ. ತಲೆಗೆ ಹ್ಯಾಟ್ ಧರಿಸಿದ್ದಾರೆ. ಇದು ಅವರ ಗೆಟಪ್​ ಎಂದು ಹೇಳಲಾಗುತ್ತಿದೆ. ಸದ್ಯ ಈ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.​

ಬರ್ತ್‌ಡೇ ಆಚರಣೆ ಮಾಡಲ್ಲ: ಇನ್ನೂ ಜ.8ರಂದು ಬೆಂಗಳೂರಿನಲ್ಲಿ ಇರುವುದಿಲ್ಲ ಬರ್ತ್‌ಡೇ ಆಚರಣೆ ಮಾಡಲ್ಲ ಎಂದು ಫ್ಯಾನ್ಸ್‌ ಯಶ್‌ ಈಗಾಗಲೇ ಮಾಹಿತಿ ನೀಡಿದ್ದಾರೆ. ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ, ನಿಮ್ಮ ಅಭಿಮಾನದ ಅಪ್ಪುಗೆ ಮತ್ತೊಂದು ವರ್ಷವನ್ನು ಸಾರ್ಥಕಗೊಳಿಸಿದೆ. ಹೊಸ ವರ್ಷ ಹೊಸ ಭರವಸೆಗಳೊಂದಿಗೆ ನಗುನಗುತ್ತಾ ಬದುಕೋಣ. ಬದುಕನ್ನು ಮೆರಗುಗೊಳಿಸುವಂತಹ ಹೊಸ ಯೋಜನೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ ಎಂದು ಯಶ್ ಈ ಹಿಂದೆ ಬರೆದುಕೊಂಡಿದ್ದರು.


ಹಾಲಿವುಡ್‌ನ ಪ್ರತಿಷ್ಠಿತ ಸ್ಟುಡಿಯೋ ಜೊತೆ ಯಶ್‌ ಮಾತುಕತೆ: ದೊಡ್ಡ ಗುರಿ ಇಟ್ಟುಕೊಳ್ಳುವುದರಲ್ಲಿ ಯಶ್ ಸದಾ ಮುಂದು. ಇದೀಗ ಅವರು ಹಾಲಿವುಡ್‌ ಕಡೆ ಗುರಿ ಇಟ್ಟಿದ್ದಾರೆ. ‘ಪ್ಯಾನ್‌ ವರ್ಲ್ಡ್‌’ ಸಿನಿಮಾ ಕನಸು ಹೊತ್ತಿರುವ ಯಶ್‌ ತಮ್ಮ ‘ಟಾಕ್ಸಿಕ್‌’ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಅದಕ್ಕಾಗಿ ಜನಪ್ರಿಯ ಹಾಲಿವುಡ್‌ ನಿರ್ಮಾಣ ಹಾಗೂ ವಿತರಣಾ ಸಂಸ್ಥೆ 20 ಸೆಂಚುರಿ ಫಾಕ್ಸ್‌ ಸ್ಟುಡಿಯೋ ಜೊತೆ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಬಂದಿದೆ.‘20 ಸೆಂಚುರಿ ಫಾಕ್ಸ್‌ ಸ್ಟುಡಿಯೋ ಜೊತೆಗೆ ಯಶ್‌ ಚರ್ಚೆ ನಡೆಸಿದ್ದು ನಿಜ. 

Scroll to load tweet…

ಟಾಕ್ಸಿಕ್ ವರ್ಲ್ಡ್​ವೈಡ್ ರಿಲೀಸ್ ಮಾಡೋದಕ್ಕೆ ಯಶ್ ಸಜ್ಜು: 20th ಸೆಂಚುರಿ ಸ್ಟುಡಿಯೋ ಜೊತೆ ಕೈ ಜೋಡಿಸಿದ ರಾಕಿ

ಅದಿನ್ನೂ ಆರಂಭಿಕ ಹಂತದಲ್ಲಿದೆ. ಆದರೆ ‘ಟಾಕ್ಸಿಕ್’ ಅನ್ನು ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವ ಯೋಚನೆ ಇದೆ. ಟಾಕ್ಸಿಕ್‌ನ ಕಥೆಯ ನಿರೂಪಣಾ ಮಾದರಿ ಮತ್ತು ದೃಶ್ಯ ವೈಭವ ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಕಾಣುತ್ತದೆ ಎಂಬ ಲೆಕ್ಕಾಚಾರ ಯಶ್‌ ಅವರದು. ಹೀಗಾಗಿ ಜಾಗತಿಕ ಮಟ್ಟದ ಹೆಸರಾಂತ ವಿತರಣಾ ಸಂಸ್ಥೆಗಳ ಜೊತೆ ಪಾಲುದಾರಿಕೆಯ ಸಾಧ್ಯತೆಗಳ ಕುರಿತು ಚರ್ಚಿಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ. ಗೀತು ಮೋಹನ್‌ದಾಸ್‌ ನಿರ್ದೇಶನದ ‘ಟಾಕ್ಸಿಕ್‌’ ಸಿನಿಮಾವನ್ನು ವೆಂಕಟ್‌ ನಾರಾಯಣ್‌ ನಿರ್ಮಾಣ ಮಾಡುತ್ತಿದ್ದಾರೆ.