ಅಗಲಿದ ಸ್ಯಾಂಡಲ್‌ವುಡ್ (Sandalwood) ನಟನಿಗೆ ಪ್ರಧಾನಿ ಮೋದಿ(Modi) ಸಂತಾಪ ತಮಿಳುನಾಡು(Tamilnadu), ಕೇರಳ(Kerala) ಸಿಎಂ ಕಂಬನಿ ಕನ್ನಡದ ಪವರ್‌ಸ್ಟಾರ್‌(Powerstar) ಅಗಲಿಕೆಗೆ ಮಿಡಿದ ಗಣ್ಯರು

ಸ್ಯಾಂಡಲ್‌ವುಡ್ ನಟ ಪುನೀತ್ ರಾಜ್ ಕುಮಾರ್(Puneeth Rajkumar) ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಟನ ಅಗಲಿಕೆ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಟ್ವೀಟ್ ಮಾಡಿದ್ದರು. ಅದೇ ರೀತಿ ನೆರೆ ರಾಜ್ಯ ತಮಿಳುನಾಡು ಹಾಗೂ ಕೇರಳದ(Kerala) ಸಿಎಂ ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್(Modi Tweet) ಮಾಡಿದ್ದಾರೆ. ವಿಧಿಯ ಕ್ರೂರ ತಿರುವು ನಮ್ಮಿಂದ ಒಬ್ಬ ಪ್ರತಿಭಾವಂತ ನಟ ಪುನೀತ್ ರಾಜ್‌ಕುಮಾರ್ ಅವರನ್ನು ಕಿತ್ತುಕೊಂಡಿದೆ. ಇದು ಸಾಯುವ ವಯಸ್ಸಾಗಿರಲಿಲ್ಲ. ಮುಂಬರುವ ಪೀಳಿಗೆಗಳು ಅವರ ಕೃತಿಗಳು ಮತ್ತು ಅದ್ಭುತ ವ್ಯಕ್ತಿತ್ವಕ್ಕಾಗಿ ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

Scroll to load tweet…

Puneeth Rajkumar Death: ಹಾಡಿನಿಂದ ಬರ್ತಿದ್ದ ಹಣವೆಲ್ಲ ದಾನಕ್ಕೆ ಬಳಸ್ತಿದ್ದ ಅಪ್ಪು

ನಟ ಪುನೀತ್ ರಾಜ್‌ಕುಮಾರ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಕನ್ನಡ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರು. ಅವರ ಕುಟುಂಬಕ್ಕೆ ಸಂತಾಪಗಳು ಎಂದು ಕೇರಳ ಸಿಎಂ ಪಿಣರಾಯ್ ವಿಜಯನ್(Pinarayi Vijayan) ಟ್ವೀಟ್ ಮಾಡಿದ್ದಾರೆ.

Scroll to load tweet…

ಕನ್ನಡದ ನಟ ದಿವಂಗತ ಡಾ. ರಾಜ್‌ಕುಮಾರ್ ಅವರ ಪುತ್ರರೂ ಆಗಿರುವ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಹಠಾತ್ ನಿಧನದ ಬಗ್ಗೆ ಕೇಳಿ ತೀವ್ರ ಆಘಾತ ಮತ್ತು ದಿಗ್ಭ್ರಮೆಯಾಗಿದೆ. ನಮ್ಮ ಎರಡೂ ಕುಟುಂಬಗಳು ಹಲವು ದಶಕಗಳಿಂದ ಸೌಹಾರ್ದಯುತ ಬಾಂಧವ್ಯವನ್ನು ಹಂಚಿಕೊಂಡಿವೆ. ಹೀಗಾಗಿ ವೈಯಕ್ತಿಕವಾಗಿ ನನಗೆ ನಷ್ಟವಾಗಿದೆ ಎಂದು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ (MK Stalin) ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

Scroll to load tweet…

Puneeth Rajkumar Death ನಮ್ಮನ್ನು ಅಗಲಿದ ಪ್ರೀತಿಯ ರಾಜಕುಮಾರ

ಕನ್ನಡ ನಾಡಿನ ಜನಪ್ರಿಯ ನಟ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನ ಜನತೆ ಹಾಗೂ ಚಿತ್ರರಂಗಕ್ಕೆ ಅತಿದೊಡ್ಡ ನಷ್ಟ. ಅವರ ನಿಧನದಿಂದ ಚಿತ್ರರಂಗ ಅಪೂರ್ವ ನಟನನ್ನು ಕಳೆದುಕೊಂಡಿದೆ. ಅವರ ಅಭಿಮಾನಿ ಬಳಗ, ಕುಟುಂಬ ವರ್ಗಕ್ಕೆ ಈ ನೋವು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಸಚಿವ ರಾಜೀವ್‌ ಚಂದ್ರಶೇಖರ್(Rajeev Chandrashekhar) ಟ್ವಿಟ್ ಮಾಡಿದ್ದಾರೆ.

Scroll to load tweet…

ಕನ್ನಡದ ಖ್ಯಾತ ನಟ ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ನಿಧನದಿಂದ ನೋವಾಗಿದೆ. ಬಾಲ ಕಲಾವಿದನಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ಅಪೂರ್ವ ನಟ, ಹಿನ್ನೆಲೆ ಗಾಯಕ, ಟಿವಿ ನಿರೂಪಕ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡರು. ವಾಸ್ತವವಾಗಿ, ಅವರು ಅನೇಕ ಪ್ರತಿಭೆಗಳ ವ್ಯಕ್ತಿಯಾಗಿದ್ದರು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವೀಟ್ ಮಾಡಿದ್ದಾರೆ.

Scroll to load tweet…

ಸ್ಯಾಂಡಲ್‌ವುಡ್(Sandalwood) ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಂದ (Heart attack) ನಿಧನರಾಗಿದ್ದಾರೆ(Death). 46 ವರ್ಷದ ನಟ ತಮ್ಮ ಮನೆಯಲ್ಲಿ ಜಿಮ್(Gym) ಮಾಡುತ್ತಿದ್ದ ವೇಳೆ ಕುಸಿದು ಬಿದ್ದಿದ್ದರು. ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ(Vikram Hospital) ದಾಖಲಿಸಿ ಚಿಕಿತ್ಸೆ(Treatment) ನೀಡಲಾಗುತ್ತಿತ್ತು.

Puneeth Rajkumar death ಸ್ಯಾಂಡಲ್‌ವುಡ್ ಪವರ್ ಸ್ಟಾರ್ ನಿಧನಕ್ಕೆ ಗಣ್ಯರ ಸಂತಾಪ

ಮನೆಯಲ್ಲಿಯೇ ನಟ ಜಿಮ್ ಮಾಡುತ್ತಿದ್ದ ವೇಳೆ ಹೃದಯಾಘಾತವಾಗಿ ಕುಸಿದುಬಿದ್ದಿದ್ದಾರೆ. ನಟನನ್ನು ಆಪ್ತರು ಬೆಂಗಳೂರಿನ(bengaluru) ವಿಕ್ರಂ ಆಸ್ಪತ್ರೆಗೆ ದಾಖಲಿಸಿದ್ದರು. ನಟ ಶಿವರಾಜ್ ಕುಮಾರ್ ಅವರು ಭಜರಂಗಿ 2(Bhajarangi 2) ಸಿನಿಮಾ ರಿಲೀಸ್ ಹಿನ್ನೆಲೆ ಥಿಯೇಟರ್‌ನಲ್ಲಿದ್ದರು. ಅಲ್ಲಿಂದ ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರೂ ಪುನೀತ್ ಸಾವಿಗೆ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ಕನ್ನಡ ನಟ ಪುನೀತ್ ರಾಜ್‌ಕುಮಾರ್ ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಬೇಗ ಹೊರಟು ಹೋದರು ಎಂದು ಅವರು ಟ್ವೀಟಿಸಿದ್ದಾರೆ.

Scroll to load tweet…