ಹಲವಾರು ಚಿತ್ರಗಳಲ್ಲಿ ನಟಿಸಿದ ಕಲಾವಿದರು ಬೇರೆ ಹಾಗೂ ಮಾತಿನ ಧ್ವನಿ ಬೇರೆಯೇ ಆಗಿರುತ್ತದೆ. ಇದು ಕನ್ನಡ ಸಿನಿಮಾಗಳಿಗೆ ಮಾತ್ರವಲ್ಲ, ಬಹುತೇಕ ಎಲ್ಲಾ ಭಾಷೆಗಳ ಚಿತ್ರರಂಗಗಳಲ್ಲಿ ಚಾಲ್ತಿಯಲ್ಲಿರುವ ವಿಷಯ. ಆದರೆ, ಯಾವ ನಟನಟಿಯರಿಗೆ ಧ್ವನಿ ಕೊಟ್ಟಿದ್ದು ಯಾರು ಎಂಬ ಸಂಗತಿ ಹಲವು ಪ್ರೇಕ್ಷಕರಿಗೆ ತಿಳಿದಿರುವುದಿಲ್ಲ. ಈ ಸ್ಟೋರಿ ನೋಡಿ..

ಕನ್ನಡದ ಈ ಸಿನಿಮಾ ನಟರಿಗೆ, ಯಾರಿಗೆ ಯಾರು?

ಸಿನಿಮಾಗಳಲ್ಲಿ ನಟನಟಿಯರು ತಮ್ಮ ಧ್ವನಿಯನ್ನೇ ಡಬ್ಬಿಂಗ್‌ ಮಾಡುವಾಗ ಬಳಸುತ್ತಾರೆ ಎಂದೇನಿಲ್ಲ ಎಂಬ ಸಂಗತಿ ಹಲವರಿಗೆ ಗೊತ್ತಿರಬಹುದು. ಬಹಳಷ್ಟು ನಟರು ಶೂಟಿಂಗ್ ಬಳಿಕ ಸ್ವತಃ ತಾವೇ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡುತ್ತಾರೆ. ಆದರೆ, ಹಲವು ಪರಭಾಷೆಗಳ ನಟರು ಹಾಗೂ ಕೆಲವೊಮ್ಮೆ ಸ್ವಭಾಷಾ ನಟರೂ ಕೂಡ ಬೇರೆಬೇರೆ ಅನಿವಾರ್ಯ ಕಾರಣಗಳಿಂದ ತಮ್ಮ ಪಾತ್ರಕ್ಕೆ ಬೇರೆಯವರಿಂದ ಧ್ವನಿ ಕೊಡಿಸುತ್ತಾರೆ.

ಸಿನಿಮಾಗಳಲ್ಲಿ ನಟ ಅಥವಾ ನಟಿಯರ ಪಾತ್ರಕ್ಕೆ ಅವರದೇ ಧ್ವನಿ ಮ್ಯಾಚ್ ಆಗುತ್ತಾ ಅಥವಾ ಬೇರೆಯವರಿಂದ ಮಾಡಿಸೋದು ಒಳ್ಳೆಯದಾ ಅಂತ ಸಾಕಷ್ಟು ಬಾರಿ ಆಯಾ ಚಿತ್ರದ ನಿರ್ದೇಶಕರು ನಿರ್ಧಾರ ಮಾಡುತ್ತಾರೆ. ಕೆಲವೊಂದು ಪಾತ್ರಕ್ಕೆ ನಿರ್ಧಿಷ್ಟ ಕ್ವಾಲಿಟಿಯ ಧ್ವನಿ, ರಫ್ ಅಥವಾ ಸಾಫ್ಟ್, ಅಥವಾ ಕೆಲವೊಮ್ಮೆ ವಿಭಿನ್ನ ರೀತಿಯ ಅಗತ್ಯತೆ ಇರುವ ಕಾರಣಕ್ಕೆ ಸಾಕಷ್ಟು ಸಿನಿಮಾಗಳಲ್ಲಿ ನಟನಟಿಯರ ಪಾತ್ರದ ಸಂಭಾಷಣೆಗೆ ಡಬ್ಬಿಂಗ್ ಕಲಾವಿದರು ತಮ್ಮ ಧ್ವನಿ ನೀಡುವ ಮೂಲಕ ಆಯಾ ಪಾತ್ರಕ್ಕೆ ಜೀವ ತುಂಬಿರುತ್ತಾರೆ.

ಕಲಾವಿದರು ಬೇರೆ, ಧ್ವನಿ ಬೇರೆ

ಹಲವಾರು ಚಿತ್ರಗಳಲ್ಲಿ ನಟಿಸಿದ ಕಲಾವಿದರು ಬೇರೆ ಹಾಗೂ ಮಾತಿನ ಧ್ವನಿ ಬೇರೆಯೇ ಆಗಿರುತ್ತದೆ. ಇದು ಕನ್ನಡ ಸಿನಿಮಾಗಳಿಗೆ ಮಾತ್ರವಲ್ಲ, ಬಹುತೇಕ ಎಲ್ಲಾ ಭಾಷೆಗಳ ಚಿತ್ರರಂಗಗಳಲ್ಲಿ ಚಾಲ್ತಿಯಲ್ಲಿರುವ ವಿಷಯ. ಆದರೆ, ಯಾವ ನಟನಟಿಯರಿಗೆ ಧ್ವನಿ ಕೊಟ್ಟಿದ್ದು ಯಾರು ಎಂಬ ಸಂಗತಿ ಹಲವು ಪ್ರೇಕ್ಷಕರಿಗೆ ತಿಳಿದಿರುವುದಿಲ್ಲ. ಅದನ್ನು ತಿಳಿಸುವ ಪ್ರಯತ್ನದಲ್ಲಿ ಈ ಸ್ಟೋರಿಯಲ್ಲಿ ಕೆಲವು ನಟರು ಹಾಗೂ ಕಂಠದಾನ ಮಾಡಿರುವವರ ಹೆಸರುಗಳನ್ನು ಬರೆಯಲಾಗಿದೆ ನೋಡಿ..

ಹಾಗಿದ್ದರೆ ಕನ್ನಡದ ಈ ಕೆಲವು ನಟರು ಹಾಗೂ ಪರಭಾಷೆಯ ಕೆಲವು ನಟರಿಗೆ ಕಂಠದಾನ ಮಾಡಿರುವವರು ಯಾರು ಎಂಬ ಲಿಸ್ಟ್ ಇಲ್ಲಿದೆ ನೋಡಿ..

ರಾಜೇಶ್ ಕೃಷ್ಣನ್- ನಟ ಧ್ಯಾನ್ ಅವರಿಗೆ 'ನನ್ನ ಪ್ರೀತಿಯ ಹುಡುಗಿ, ಮೊನಾಲಿಸಾ ಹಾಗೂ ಅಮೃತಧಾರೆ ಸಿನಿಮಾಗಳಿಗೆ ಕನ್ನಡದ ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಧ್ವನಿ ನೀಡಿದ್ದಾರೆ.

ಶ್ರೀನಿವಾಸ್ ಪ್ರಭು-ರವಿಚಂದ್ರನ್ ನಟನೆಯ 20ಕ್ಕೂ ಹೆಚ್ಚು ಸಿನಿಮಾಗಳಿಗೆ ನಟ, ಕಲಾವಿದ ಶ್ರೀನಿವಾಸ್ ಪ್ರಭು ಅವರು ಧ್ವನಿ ನೀಡಿದ್ದಾರೆ.

ರಾಜೇಶ್ ರಾಮಚಂದ್ರ- ನಟ ರಘುವೀರ್ ಅವರ ಬಹುತೇಕ ಎಲ್ಲಾ ಸಿನಿಮಾಗಳಿಗೆ ಧ್ವನಿ ನೀಡಿದವರು ರಾಜೇಶ್ ರಾಮಚಂದ್ರ.

ತರುಣ್- ನಟ ತರುಣ್ ನಟನೆಯ ಬಹುತೇಕ ಸಿನಿಮಾಗಳಿಗೆ ಧ್ವನಿ ನೀಡಿದವರು ನಟ ದಿಲೀಪ್ ರಾಜ್.

ಚೇತನ್ (ಅಹಿಂಸಾ)- 'ಆ ದಿನಗಳು' ಖ್ಯಾತಿಯ ನಟ ಚೇತನ್ ಅವರ ಬಹಳಷ್ಟು ಸಿನಿಮಾಗಳಿಗೆ ಧ್ವನಿ ನೀಡಿದವರು ದಿಲೀಪ್ ರಾಜ್.

'ಶ್' ಚಿತ್ರದ ನಟ ಕುಮಾರ್ ಗೋವಿಂದ್

ಕುಮಾರ್ ಗೋವಿಂದ್- 'ಶ್' ಚಿತ್ರದ ನಟ ಕುಮಾರ್ ಗೋವಿಂದ್ ಅವರ ಸಿನಿಮಾಗಳಿಗೆ ಧ್ವನಿ ನೀಡಿದವರು ಖ್ಯಾತ ಕಂಠದಾನ ಕಲಾವಿದ ಸುದರ್ಶನ್. ಈ ಸುದರ್ಶನ್ ಅವರು ಅನಂತ್‌ ನಾಗ್ ಹಾಗೂ ಸಾಯಿಕುಮಾರ್ ಅವರ ಹಲವು ಸಿನಿಮಾಗಳಿಗೆ ಕೂಡ ಧ್ವನಿ ನೀಡಿದ್ದಾರೆ.

ಒಟ್ಟಿನಲ್ಲಿ, ತೆರೆಯ ಮೇಲೆ ಪ್ರೇಕ್ಷಕರು ನೋಡುವ ಸಿನಿಮಾದಲ್ಲಿ ಅವರಿಗೆ ಗೊತ್ತಿಲ್ಲದ ಹಲವಾರು ಸಂಗತಿಗಳು ಇರುತ್ತವೆ. ಇನ್ನೂ ಹೆಚ್ಚಿನ ಸಂಗತಿಗಳನ್ನು ನಮ್ಮ ರೀಡರ್ಸ್‌ಗೆ ಕೊಡುವ ಪ್ರಯತ್ನ ನಮ್ಮಿಂದ ನಿರಂತರವಾಗಿ ಸಾಗುತ್ತಲೇ ಇರುತ್ತದೆ. ದಿವಂಗತ ಮಹಾನ್ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರೂ ಕೂಡ ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ಹಲವಾರೂ ಸೂಪರ್ ಸ್ಟಾರ್ ನಟರಿಗೆ ಧ್ವನಿ ನೀಡಿದ್ದಾರೆ.