Asianet Suvarna News

ಕೊರೋನಾ ವಾರಿಯರ್ಸ್‌ಗೆ ಗೌರವ ಸೂಚಿಸುವ ಕಿರುಚಿತ್ರ 'ದಿ ಡಾರ್ಕ್ ಸ್ಟ್ರೆಡ್'

ಕೊರೋನಾ ವಾರಿಯರ್ಸ್‌ಗೆ ಗೌರವ ಸೂಚಿಸುವ ಮತ್ತು ಅವರ ಶ್ರಮವನ್ನು ಮೆಚ್ಚಿಕೊಳ್ಳುವ ನಿಟ್ಟಿನಲ್ಲಿ ಹೆಬ್ಬುಲಿ ಸಿನಿಮಾ ನಿರ್ಮಾಪಕ, ಓಗರ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಘುನಾಥ್‌ ಅವರ ಪುತ್ರ ವಾಗ್ಮಿ ಆರ್‌ ಯಜುರ್ವೇದಿ ಒಂದು ಕಿರುಚಿತ್ರ ರೂಪಿಸಿದ್ದಾರೆ. 

The dark stride short movie for corona warriors
Author
Bengaluru, First Published May 6, 2020, 4:44 PM IST
  • Facebook
  • Twitter
  • Whatsapp

ಕೊರೋನಾ ವಾರಿಯರ್ಸ್‌ಗೆ ಗೌರವ ಸೂಚಿಸುವ ಮತ್ತು ಅವರ ಶ್ರಮವನ್ನು ಮೆಚ್ಚಿಕೊಳ್ಳುವ ನಿಟ್ಟಿನಲ್ಲಿ ಹೆಬ್ಬುಲಿ ಸಿನಿಮಾ ನಿರ್ಮಾಪಕ, ಓಗರ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಘುನಾಥ್‌ ಅವರ ಪುತ್ರ ವಾಗ್ಮಿ ಆರ್‌ ಯಜುರ್ವೇದಿ ಒಂದು ಕಿರುಚಿತ್ರ ರೂಪಿಸಿದ್ದಾರೆ. ಈ ಅಪರೂಪದ ಕಿರುಚಿತ್ರದಲ್ಲಿ ಅವರು ನಟಿಸಿದ್ದೇ ಅಲ್ಲದೆ ನಿರ್ದೇಶನವೂ ಮಾಡಿದ್ದಾರೆ. ಆ ಮೂಲಕ ಕೊರೋನಾ ವಿರುದ್ಧದ ಜಾಗೃತಿಗೆ ಹೊಸ ದಾರಿ ತೋರಿದ್ದಾರೆ. ಈ ಕಿರು ಚಿತ್ರದ ಹೆಸರು ದ ಡಾರ್ಕ್ ಸ್ಟ್ರೆಡ್. 

ಎರಡೇ ಪಾತ್ರಗಳನ್ನು ಇಟ್ಟುಕೊಂಡು ಅತ್ಯಂತ ಪರಿಣಾಮಕಾರಿಯಾಗಿ ಈ ಕಿರುಚಿತ್ರವನ್ನು ವಾಗ್ಮಿ ಆರ್‌ ಯಜುರ್ವೇದಿ ನಿರ್ದೇಶನ ಮಾಡಿದ್ದಾರೆ. ಬಾವಲಿ ಹಾಗೂ ಜೋಕರ್‌ ಹೆಸರಿನ ಎರಡು ಕಾಲ್ಪನಿಕಾ ಪಾತ್ರಗಳೇ ಈ ಕಿರುಚಿತ್ರದ ಮುಖ್ಯ ಆಕರ್ಷಣೆ. ಸದ್ಯದ ಕೊರೋನಾ ಸಂಕಷ್ಟಗಳನ್ನು ಮನಮುಟ್ಟುವಂತೆ ಕಿರುಚಿತ್ರದಲ್ಲಿ ಕಟ್ಟಿಕೊಡಲಾಗಿದೆ.

ಸರಕಾರಿ ಅನುಮತಿಸಿದರೂ ಒಪ್ಪದ ಸಂಘ, ಸೀರಿಯಲ್ ಶೂಟಿಂಗ್ ಸದ್ಯಕ್ಕಿಲ್ಲ

ಎಸ್‌ಆರ್‌ವಿ ರಘುನಾಥ್‌ ಅರ್ಪಿಸುವ ಈ ಕಿರುಚಿತ್ರ ವಿಆರ್‌ವೈ ಮೂವೀಸ್‌ ಪ್ರೊಡಕ್ಷನ್‌ ಜತೆ ಸಿಎಸ್‌ಜೆ ಆಟ್ಸ್‌ರ್‍ ಸಹಯೋಗದೊಂದಿಗೆ ನಿರ್ಮಾಣ ಮಾಡಲಾಗಿದೆ. ಚಿಂತನ್‌ ಮತ್ತು ವಾಗ್ಮಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಕಲ್ಪನೆ, ನಿರ್ದೇಶನ, ಸಿನಿಮಾಟೋಗ್ರಫಿ, ಸಂಕಲನ, ಸಂಗೀತ ವಾಗ್ಮಿ ಆರ್‌ ಯಜುರ್ವೇದಿ ಅವರದ್ದು. ಕಥೆ, ಚಿತ್ರಕಥೆ ಚಿಂತನ್‌ ಎಸ್‌ ಜೋಯಿಸ್‌ ಬರೆದಿದ್ದರೆ, ವಾಣಿಶ್ರೀ ಕಾರ್ಯಕಾರಿ ನಿರ್ಮಾಪಕರಾಗುವ ಜತೆಗೆ ಮೇಕಪ್‌ ಹಾಗೂ ಕಾಸ್ಟ್ಯೂಮ್‌ ಕೂಡ ಮಾಡಿದ್ದಾರೆ. ಇಂಗ್ಲಿಷ್‌ನಲ್ಲಿ ತಯಾರಾಗಿರುವ ಈ ಕಿರುಚಿತ್ರ್ನ ವಿಆರ್‌ವೈ ಎಂಟರ್‌ಟೇನ್‌ಮೆಂಟ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆ ಆಗಿದೆ.

Follow Us:
Download App:
  • android
  • ios