ಹಿರಿಯ ನಟಿ ತಾರಾ ಅನುರಾಧಾ ಅವರು ತಮ್ಮ ಕಾಲದಲ್ಲಿ ನಟಿಯರು ಎದುರಿಸುತ್ತಿದ್ದ ಸವಾಲುಗಳನ್ನು ಹಂಚಿಕೊಂಡಿದ್ದಾರೆ. ತಾವು ಬುರ್ಖಾ ಧರಿಸಿ ಚಿತ್ರಮಂದಿರಕ್ಕೆ ಹೋಗುತ್ತಿದ್ದ ಘಟನೆಯನ್ನು ನೆನಪಿಸಿಕೊಂಡ ಅವರು, ಇಂದಿನ ಡಿಜಿಟಲ್ ಯುಗದಲ್ಲಿ ಪ್ರಚಾರ ಸುಲಭವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಡಿಜಿಟಲ್​ ಯುಗವಾಗಿರುವ ಇಂದು ನೋಡನೋಡುತ್ತಿದ್ದಂತೆಯೇ ಎಲ್ಲಾ ಕ್ಷೇತ್ರಗಳಲ್ಲಿಯೂ ಕ್ರಾಂತಿಯಾಗಿಬಿಟ್ಟಿದೆ. ಅದರಲ್ಲಿಯೂ ಬಣ್ಣದ ಲೋಕದಲ್ಲಿ ಪವಾಡವೇ ಸೃಷ್ಟಿಯಾಗಿ ಹೋಗಿದೆ. ಬ್ಲ್ಯಾಕ್​ ಆ್ಯಂಡ್​ ವೈಟ್​ ಯುಗದಿಂದ ಹಿಡಿದು ಬಣ್ಣದ ಸಿನಿಮಾ ಬಂದ ಹಲವು ದಶಕ ಕಳೆದಿವೆ. ಆದರೆ ಅದರ ಬಳಿಕ ಸಿನಿಮಾ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿ ಮಾತ್ರ ಸಿಕ್ಕಾಪಟ್ಟೆ. ಡಿಜಿಟಲ್​ ಯುಗದ ಜೊತೆ ಜೊತೆಗೇನೇ ಸೋಷಿಯಲ್​ ಮೀಡಿಯಾ ಕ್ರಾಂತಿಯಿಂದಾಗಿಯೂ ಇಂದು ಸಿನಿಮಾ ತಾರೆಯರಿಗೆ ಇನ್ನಿಲ್ಲದ ಪ್ರಚಾರ ಸಿಗುತ್ತಿದೆ. ಮಾಧ್ಯಮಗಳ ಮೂಲಕ ಅವರು ಹೈಲೈಟ್​ ಆಗುತ್ತಿದ್ದಾರೆ. ತಮ್ಮ ಚಿತ್ರದ ಪ್ರಮೋಷನ್​ ಮಾಡುವುದು ಅವರಿಗೆ ಸುಲಭವಾಗಿದೆ.

Add Asianetnews Kannada as a Preferred SourcegooglePreferred

ಬುರ್ಖಾ ಹಾಕಿಕೊಂಡು ಹೋಗ್ತಿದ್ವಿ

ಆದರೆ ಹಿಂದೆ ಹಾಗಿರಲಿಲ್ಲ. ಇದೀಗ ಅದರ ಬಗ್ಗೆನೇ ಮಾತನಾಡಿರುವ ಹಿರಿಯ ನಟಿ ತಾರಾ ಅನುರಾಧಾ ಅವರು, ಹೇಗೆ ಕಾಲ ಬದಲಾಯಿತು ಎನ್ನುವ ಬಗ್ಗೆ ಮಾತನಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಾರಾ ಅವರು ಇಂದು ಸಿನಿಮಾ ತಾರೆಯರಿಗೆ ತುಂಬಾ ಸುಲಭದಲ್ಲಿ ಪಬ್ಲಿಸಿಟಿ ಸಿಗುತ್ತಿದೆ. ಸಿನಿಮಾ ನೋಡಲು ಖುದ್ದು ನಟ,ನಟಿಯರು ಆರಾಮವಾಗಿ ಹೋಗುತ್ತಾರೆ. ಡಾನ್ಸ್​ ಮಾಡುತ್ತಾ ಹೋಗುತ್ತಾರೆ. ಆದರೆ ನಾವು ಸಿನಿಮಾ ಮಾಡುವಾಗ ಹೀಗೆ ಇರಲಿಲ್ಲ. ಯಾರು ನೋಡಿ ಬಿಡುತ್ತಾರೋ, ಯಾರು ನಮ್ಮನ್ನು ಗುರುತಿಸುತ್ತಾರೋ ಎಂದು ಬುರ್ಖಾ ಹಾಕಿಕೊಂಡು ಹೋಗ್ತಾ ಇದ್ವಿ. ನಾನು ಹಲವು ಬಾರಿ ಬುರ್ಖಾ ಹಾಕಿಕೊಂಡೇ ಸಿನಿಮಾ ನೋಡಲು ಹೋಗಿದ್ದಿದೆ. ಎಲ್ಲೋ ಒಂದು ಕಡೆ ಯಾರ ಕಣ್ಣಿಗೂ ಕಾಣದಂತೆ ಕುಳಿತುಕೊಂಡು ಸಿನಿಮಾ ವೀಕ್ಷಣೆ ಮಾಡುತ್ತಿದ್ವಿ. ಆದರೆ ಈಗ ಕಾಲ ಬದಲಾಗಿದೆ ಎಂದಿದ್ದಾರೆ.

ಕತ್ತಲಿನಲ್ಲಿ ಚಿತ್ರ

ಆಗೆಲ್ಲಾ ಕತ್ತಲಿನಲ್ಲಿ ಚಿತ್ರವನ್ನು ರೆಡಿಮಾಡಬೇಕಿತ್ತು. ಬಳಿಕ ಬೆಳ್ಳಿಪರದೆಯ ಮೇಲೆ ಬೆಳಕಿನಲ್ಲಿ ಅದನ್ನು ಪ್ರದರ್ಶಿಸುತ್ತಾ ಇದ್ದರು.ಆದರೆ ಈಗ ಹಾಗಲ್ಲ. ಡಿಜಿಟಲ್​ ಯುಗ ಆಗಿರುವ ಕಾರಣ, ಬೆಳಕಿನಲ್ಲಿಯೇ ಅವೆಲ್ಲಾ ಆಗುತ್ತದೆ. ಅದೇನೇ ಇದ್ದರೂ ಈ ರೀತಿಯ ಪ್ರದರ್ಶನ ಮಾಡಿಕೊಂಡು ಹೋಗುವುದು ಸರಿಯೇ, ತಪ್ಪೇ ಎನ್ನುವುದು ನನಗೆ ತಿಳಿಯುತ್ತಿಲ್ಲ. ಆಗೆಲ್ಲಾ ಕುತೂಹಲ ಮೆಂಟೇನ್​ ಮಾಡುತ್ತಿದ್ವಿ. ಆದರೆ ಈಗ ಎಲ್ಲ ಬದಲಾಗಿದೆ. ಯಾವುದು ತಪ್ಪು, ಯಾವುದು ಸರಿ ಎನ್ನುವುದನ್ನು ಹೇಳಲು ಆಗುವುದಿಲ್ಲ. ಆಗಿನ ಕಾಲದ ಸಿನಿಮಾಗಳು ಅದೇ ರೀತಿಯಲ್ಲಿಯೇ ತುಂಬಾ ಹಿಟ್​ ಆಗುತ್ತಿದ್ದುದು ಉಂಟು ಎಂದು ನಟಿ ಹೇಳಿದ್ದಾರೆ.

ಎಲ್ರ ಕಾಲೆಳಿಯತ್ತೆ ಕಾಲ

ತಾವು ನಟಿಸಿರುವ ಎಲ್ರ ಕಾಲೆಳಿಯತ್ತೆ ಕಾಲ ಚಿತ್ರದ ಈವೆಂಟ್ ವೇಳೆ ತಾರಾ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದರು. ನಟಿ ಅರ್ಚನಾ ಕೊಟ್ಟಿಗೆ ಕೂಡ ತಾರಾ ಅವರೊಟ್ಟಿಗೆ ಅಭಿನಯಿಸಿದ್ದಾರೆ. ನಟಿ ತಾರಾ ಸಿನಿಮಾ ಬಗ್ಗೆ ಹೇಳುತ್ತಾ, ನಟಿ ಅರ್ಚನಾ ಕೊಟ್ಟಿಗೆಯನ್ನ ತಮ್ಮದೇ ರೀತಿಯಲ್ಲಿಯೇ ವರ್ಣಿಸಿದರು. ಕಮಲದಂತಹ ಕಣ್ಣುಗಳು ಇಲ್ಲ, ದಾಳಿಂಬೆಯಂತಹ ಹಲ್ಲುಗಳೂ ಇಲ್ಲ. ಜೀರೋ ಫಿಗರ್ ಮೊದಲೇ ಇಲ್ಲ. ಇವೆಲ್ಲ ಇಲ್ಲದೇನೆ ಅರ್ಚನಾ, ಸ್ಪೆಷಲ್ ಆಗಿಯೇ ಇದ್ದಾರೆ ಎಂದರು.