ಶಿವರಾಜ್‌ಕುಮಾರ್ ನಟನೆಯ ‘ವೇದ’ ಚಿತ್ರಕ್ಕೆ ನಟಿ ಶ್ವೇತಾ ಚಂಗಪ್ಪ ಜತೆಯಾಗಿದ್ದಾರೆ. ಗೀತಾ ಪಿಕ್ಚರ್ ಮೂಲಕ ಗೀತಾ ಶಿವರಾಜ್‌ಕುಮಾರ್ ನಿರ್ಮಿಸುತ್ತಿರುವ, ಶಿವಣ್ಣ ನಟನೆಯ 125ನೇ ಸಿನಿಮಾ ಇದಾಗಿದೆ.
ಸ್ಯಾಂಡಲ್‌ವುಡ್‌ನ ನಿರ್ಮಾಪಕರ ಪಾಲಿನ ಅಚ್ಚುಮೆಚ್ಚಿನ ನಟ ಹಾಗೂ ಅಭಿಮಾನಿಗಳ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ್ (Shivarajkumar) 'ಭಜರಂಗಿ 2' ಸಿನಿಮಾ ಸಕ್ಸಸ್ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮ್ಮದೇ ಹೋಂ ಬ್ಯಾನರ್‌ನಲ್ಲಿ ನಿರ್ಮಾಣ ಆಗುತ್ತಿರುವ 'ವೇದ' (Veda) ಸಿನಿಮಾದ ಚಿತ್ರೀಕರಣದಲ್ಲಿರೋ ಶಿವಣ್ಣನ ಈ ಚಿತ್ರಕ್ಕೆ ಹೊಸ ನಟಿಯ ಸೇರ್ಪಡೆಯಾಗಿದೆ. ಹೌದು! ಶಿವಣ್ಣ ನಟನೆಯ 125ನೇ ಸಿನಿಮಾ ‘ವೇದ’ ಚಿತ್ರಕ್ಕೆ ನಟಿ ಶ್ವೇತಾ ಚಂಗಪ್ಪ (Swetha Changappa) ಜತೆಯಾಗಿದ್ದು, ಚಿತ್ರದ ಪ್ರಮುಖ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ.
ಹರ್ಷ ನನ್ನ ಆತ್ಮೀಯ ಗೆಳೆಯ. ಅವರು 'ವೇದ' ಚಿತ್ರದ ಪಾತ್ರದ ಬಗ್ಗೆ ಹಾಗೂ ಪಾತ್ರಕ್ಕೆ ನಾನು ಸರಿಯಾಗಿ ಹೊಂದುತ್ತೇನೆ ಎಂದು ಹೇಳಿದಾಗ ಒಪ್ಪಿಕೊಂಡೆ ಎಂದು ಶ್ವೇತಾ ಚಂಗಪ್ಪ ತಿಳಿಸಿದ್ದಾರೆ. ಮೊದಲ ಬಾರಿಗೆ ಶಿವಣ್ಣನ ಜೊತೆ ಶ್ವೇತಾ ಚಂಗಪ್ಪ ತೆರೆ ಹಂಚಿಕೊಳ್ಳುತ್ತಿದ್ದು, ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಕ್ತಾಯ ಆಗಿದೆ. ಇದೀಗ ಶ್ರೀರಂಗಪಟ್ಟಣ ಸಮೀಪದ ಹಳ್ಳಿಯಲ್ಲಿ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಶಿವಣ್ಣ ಮತ್ತು ನಿರ್ದೇಶಕ ಎ.ಹರ್ಷ (Director A Harsha) ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ನಾಲ್ಕನೇ ಸಿನಿಮಾ ಇದು. ಶಿವಣ್ಣ, ವೇದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕಾರಣ ಚಿತ್ರಕ್ಕೆ ಅದೇ ಹೆಸರಿಡಲಾಗಿದೆ.
Shiva Rajkumar: ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ಕರುನಾಡ ಚಕ್ರವರ್ತಿ ಸಿನಿಮಾ
1960ರ ಸಮಯದಲ್ಲಿ ನಡೆಯುವ ಕಥೆ ಇದಾಗಿದ್ದು, ಶಿವಣ್ಣ ವಯಸ್ಸಾದವರ (Shivanna aged look) ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರಂತೆ. ಇದೇ ಮೊದಲು ಈ ಲುಕ್ ಪ್ರಯತ್ನ ಮಾಡುತ್ತಿರುವುದು ಹಾಗೇ ಲುಕ್ ಪೂರ್ತಿ ಬೇರೆ ಥರ ಇರಲಿದೆ ಎಂದು ನಿರ್ದೇಶಕರು ಹೇಳಿದ್ದಾರೆ. ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಶಿವರಾಜ್‌ಕುಮಾರ್‌ಗೆ ಜೋಡಿಯಾಗಿ ಮೊದಲ ಬಾರಿಗೆ ಪಾವನಾ ಗೌಡ (Paavana Gowda) ಕಾಣಿಸಿಕೊಳ್ಳುತ್ತಿದ್ದಾರೆ. ಪಾವನಾ ಪಾತ್ರ ಹೇಗಿರಲಿದೆ? ಪಾತ್ರದ ಹೆಸರು ಏನು ಎಂಬುದರ ಬಗ್ಗೆ ಮಾಹಿತಿ ರಿವೀಲ್ ಆಗಿಲ್ಲವಾದರೂ ನಾಯಕಿ ಆಗಿರುವುದನ್ನು ಮಾತ್ರ ಖಚಿತ ಪಡಿಸಿದ್ದಾರೆ. 
'ಇದು ಎಮೋಷನ್, ಆ್ಯಕ್ಷನ್, ಡ್ರಾಮಾ ಫಿಲ್ಮ್ (Drama Film). ಕಾಮಿಡಿಯೂ ಜೋರಾಗಿದೆ. ಪಕ್ಕಾ ಫ್ಯಾಮಿಲಿ ಸಿನಿಮಾ (Family Movie) ಇದು. ಶಿವಣ್ಣ ಇದರಲ್ಲಿ ಡಬಲ್ ಆ್ಯಕ್ಷಿಂಗ್ (Double acting) ಮಾಡುತ್ತಿಲ್ಲ. ಎರಡು ಶೇಡ್‌ನ ಲುಕ್ ಇದೆ. ಈಗ ರಿಲೀಸ್ ಮಾಡಿರುವ ಪೋಸ್ಟರ್‌ನಲ್ಲಿರುವ ಲುಕ್ ಒಂದು ರೀತಿಯಾದರೆ, ಯಂಗ್ ಲುಕ್‌ನಲ್ಲಿ ಕಾಣಿಸಿಕೊಳ್ಳುವುದು ಇನ್ನೊಂದು ರೀತಿ. ಯುವಕನ ಲುಕ್‌ನಲ್ಲಿ ಬೇರೆ ಥರ ಕಾಣಿಸುತ್ತಾರೆ. ಏಕ್‌ದಂ ಖಡಕ್ ಆಗಿರುತ್ತಾರೆ. ಥ್ರಿಲ್ಲಿಂಗ್ ಆ್ಯಕ್ಷನ್ (Thriller Action) ದೃಶ್ಯಗಳಿರುತ್ತವೆ,' ಎಂದು ನಿರ್ದೆಶಕ ಹರ್ಷ ಅವರು ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದಾರೆ.
Shiva Rajkumar: 'ರಣರಂಗ' ಚಿತ್ರಕ್ಕೆ ಸಂತೋಷ್ ಆನಂದ್‌ರಾಮ್ ಆಕ್ಷನ್ ಕಟ್
'1960ರಲ್ಲಿ ಕಾಣ ಸಿಗುತ್ತಿದ್ದ ಹಳ್ಳಿಗಳು ಈಗ ಬದಲಾಗಿವೆ. ಹಾಗಾಗಿ ಸೆಟ್‌ನಲ್ಲೇ ಪೂರ್ತಿ ಚಿತ್ರೀಕರಣ ಮಾಡುತ್ತಿದ್ದೇವೆ. ಎಲ್ಲವಕ್ಕೂ ಸೆಟ್ ಹಾಕ ಬೇಕಿರುವುದರಿಂದ ನಿರಂತರವಾಗಿ ಚಿತ್ರೀಕರಣ ಮಾಡಲು ಸಾಧ್ಯವಿಲ್ಲ. ಕಲಾವಿದರ ಮೇಕಪ್ ಲುಕ್ (Makeup Look) ಎಲ್ಲವಕ್ಕೂ ಬಹಳ ಸಮಯ ತೆಗದುಕೊಳ್ಳುತ್ತಿದೆ. ಶಿವಣ್ಣನ 125ನೇ ಸಿನಿಮಾ ಇದು ಅನ್ನುವುದು ವಿಶೇಷ . 125ನೇ ಸಿನಿಮಾ ಅನ್ನೋದು ನನ್ನ ತಲೆಯಲ್ಲಿಲ್ಲ. ಯೂನಿವರ್ಸಲ್ (Universal Film) ಆಗಿರೋ ಸಿನಿಮಾ ಮಾಡಬೇಕು. ಇಂದು ಜನರ ಅಭಿರುಚಿ ಬೇರೆ ಬೇರೆ ಬಗೆ ಇರುತ್ತವೆ. ಎಲ್ಲರನ್ನೂ ಶೇ. 100ರಷ್ಟು ಮೆಚ್ಚಿಸುವುದು ಕಷ್ಟದ ಕೆಲಸ. ಒಬ್ಬೊಬ್ಬರ ಅಭಿರುಚಿ ಒಂದೊಂದು ರೀತಿ ಇರುತ್ತದೆ,' ಎಂದು ಹರ್ಷ ಮಾತನಾಡಿದ್ದಾರೆ.
