Asianet Suvarna News Asianet Suvarna News

ಚೌಡೇಶ್ವರಿ ಜಾತ್ರಾ ಮಹೋತ್ಸವಕ್ಕೆ ಬಡ ಮಕ್ಕಳ ಆಶಾಕಿರಣ ಸನ್ನಿ ಲಿಯೋನ್ ಅಭಿಮಾನಿಗಳಿಂದ ಸ್ವಾಗತ ಸುಸ್ವಾತ..

ಚೌಡೇಶ್ವರಿ ಜಾತ್ರಾ ಮಹೋತ್ಸವಕ್ಕೆ ಬಡ ಮಕ್ಕಳ ಆಶಾಕಿರಣ ಸನ್ನಿ ಲಿಯೋನ್ ಅಭಿಮಾನಿಗಳಿಂದ ಸ್ವಾಗತ ಕೋರಿದ ಬ್ಯಾನರ್ ವೈರಲ್ ಆಗಿದೆ. 

sunny leone fans invit to Sri Chowdeshwari Jatra Mahotsav in Ranebennur, banner goes viral sgk
Author
First Published Jan 11, 2023, 1:43 PM IST

ಬಾಲಿವುಡ್ ಹಾಟ್ ನಟಿ ಸನ್ನಿ ಲಿಯೋನ್ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಪಡ್ಡೆ ಯುವಕರ ಹಾಟ್ ಫೇವರಿಟ್ ಈ ಸನ್ನಿ. ಸನ್ನಿ ಹೆಸರಲ್ಲೇ ಅದೇನೋ ಚಮತ್ಕಾರವಿದೆ ಅನಿಸುತ್ತೆ. ವಿಶ್ವದ ಮೂಲೆ ಮೂಲೆಗಳಲ್ಲೂ ಸನ್ನಿ ಲಿಯೋನ್ ಅಭಿಮಾನಿಗಳಿದ್ದಾರೆ. ಸನ್ನಿಯನ್ನು ಆರಾಧಿಸುತ್ತಾರೆ, ಪೂಜಿಸುತ್ತಾರೆ. ಪೋಸ್ಟರ್, ಪ್ಲೆಕ್ಸ್, ಬ್ಯಾನರ್‌ಗಳನ್ನು ಹಾಕಿ ಅಭಿಮಾನ ವ್ಯಕ್ತಪಡಿಸುತ್ತಾರೆ. ಕರ್ನಾಟಕದಲ್ಲೂ ಸನ್ನಿ ಲಿಯೋನ್ ಅವರಿಗೆ ಆಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಆಗಾಗ ಕನ್ನಡ ಅಭಿಮಾನಿಗಳು ಸಹ ವಿಶೇಷ ರೀತಿಯಲ್ಲಿ ಅಭಿಮಾನ ವ್ಯಕ್ತಪಡಿಸುತ್ತಿರುತ್ತಾರೆ. ಹಳ್ಳಿ ಯುವಕರು ತೋಟ, ಗದ್ದೆಗಳಲ್ಲಿ ನೆಚ್ಚಿನ ನಟಿ ಸನ್ನಿ ಲಿಯೋನ್ ಫ್ಲೆಕ್ಸ್ ಮತ್ತು ಬ್ಯಾನರ್ ಹಾಕಿ ಪ್ರೀತಿ ವ್ಯಕ್ತಪಡಿಸುತ್ತಾರೆ. 

ಇದೀಗ ಅಭಿಮಾನಿಗಳು ಚೌಡೇಶ್ವರಿ ಜಾತ್ರಾ ಮಹೋತ್ಸವಕ್ಕೆ ಸ್ವಾಗತ ಎಂದು ಬ್ಯಾನರ್ ಮಾಡಿಸಿ ಹಾಕಿರುವುದು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ. ಅಷ್ಟಕ್ಕೂ ಈ ಹೀಗೆ ಸನ್ನಿ ಫ್ಲೆಕ್ಸ್ ಹಾಕಿದ್ದು ರಾಣೇಬೆನ್ನೂರಿನಲ್ಲಿ. ರಾಣೇಬೆನ್ನೂರಿನಲ್ಲಿ ಚೌಡೇಶ್ವರಿ ಜಾತ್ರಾ ಮಹೋತ್ಸವ ಪ್ರಾರಂಭವಾಗುತ್ತಿದೆ. ಜಾತ್ರೆಗೆ ಅಭಿಮಾನಿಗಳು ವಿಶೇಷ ರೀತಿ ಸ್ವಾಗತ ಕೋರುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ವೈರಲ್ ಆಗಿರುವ ಬ್ಯಾನರ್‌ನಲ್ಲಿ ಸನ್ನಿ ಲಿಯೋನ್ ಕೈ ಮುಗಿದು ನಿಂತಿರುವ ಫೋಟೋ ಜೊತೆಗೆ ಅಭಿಮಾನಿಗಳು ಕಾಣಿಕೊಂಡಿದ್ದಾರೆ. ಬ್ಯಾನರ್ ನಲ್ಲಿ ಫೋಟೋ ಜೊತೆಗೆ 'ಚೌಡೇಶ್ವರಿ ಜಾತ್ರಾ ಮಹೋತ್ಸವಕ್ಕೆ ಸರ್ವರಿಗೂ ಸ್ವಾಗತ. ಬಡ ಮಕ್ಕಳ ಆಶಾಕಿರಣ ಸನ್ನಿಲಿಯೋನ್ ಅಭಿಮಾನಿಗಳು ರಾಣೇಬೆನ್ನೂರು' ಎಂದು ಬರೆದುಕೊಂಡಿದ್ದಾರೆ. 

ಜಾತ್ರೆಗೆ ಸನ್ನಿ ಲಿಯೋನ್ ಅಭಿಮಾನಿ ಬಳಗದಿಂದ ಸ್ವಾಗತ ಸುಸ್ವಾಗತ

ಮಾಜಿ ನೀಲಿತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ಅಂದರೆ ಮೂಗು ಮುರಿದುಕೊಳ್ಳುವವರೆ ಜಾಸ್ತಿ. ನೀಲಿತಾರೆ ಆಗಿದ್ದರು ಎನ್ನುವ ಕಾರಣಕ್ಕಾಗಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ತಾವು ಸನ್ನಿಲಿಯೋನ್ ಅಭಿಮಾನಿ ಎಂದು ಹೇಳಿಕೊಳ್ಳು ಹಿಂದೇಟು ಹಾಕುತ್ತಾರೆ. ಆದರೆ ಕರ್ನಾಟಕದಲ್ಲಿ ಸಾಕಷ್ಟು ಅಭಿಮಾನಿಗಳಿದ್ದು ಬಹಿರಂಗವಾಗಿಯೇ ಸನ್ನಿ ಮೇಲೆ ಅಭಿಮಾನಿ ಹೊರಹಾಕುತ್ತಾರೆ. ಅಭಿಮಾನಿ ಅಂತ ಹೇಳಿಕೊಳ್ಳುವುದು ಅಷ್ಟೇ ಅಲ್ಲದೇ ಫ್ಲೆಕ್ಸ್, ಬ್ಯಾನರ್‌ಗಳ ಮೂಲಕ ಅಭಿಮಾನಿ ತೋರಿಸುತ್ತಾರೆ. 

ಹಾವೇರಿಯ ಜಾತ್ರೆಗೆ ಸ್ವಾಗತ ಕೋರಿದ ಸನ್ನಿ ಲಿಯೋನ್ ಅಭಿಮಾನಿಗಳು!

 
ಕೊಪ್ಪಳ ಜಾತ್ರೆಯಲ್ಲೂ ಗಮನ ಸೆಳೆದ ಸಿನ್ನಿ ಅಭಿಮಾನಿಗಳು 

ಕಳೆದ ವರ್ಷ ಕೊಪ್ಪಳದಲ್ಲಿ ನಡೆದ ಜಾತ್ರೆಯಲ್ಲೂ ಸನ್ನಿ ಅಭಿಮಾನಿಗಳು ಗಮನ ಸೆಳೆದಿದ್ದರು. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಅತ್ಯಂತ ಕಟ್ಟಕಡೆಯ ಗ್ರಾಮ ಹಾಬಲಕಟ್ಟಿ ಗ್ರಾಮ. ಆ ಗ್ರಾಮದಲ್ಲಿ ಶರಣಬಸವೇಶ್ವರ ಜಾತ್ರೆ ಏರ್ಪಡಿಸಲಾಗಿತ್ತು. ಆಗ ಹಲವಾರು ಜನ ಜಾತ್ರೆಗೆ ಶುಭಾಶಯ ಕೋರಿ ಫ್ಲೇಕ್ಸ್ ಗಳನ್ನು ಹಾಕಿದ್ದರು. ಆ ಫ್ಲೇಕ್ಸ್ ಗಳ ಪೈಕಿ ಹೆಚ್ಚು ಗಮನಸೆಳೆದದ್ದು ಸನ್ನಿ ಲಿಯೋನ್ ಅಭಿಮಾನಿಗಳು ಹಾಕಿದ್ದ ಫ್ಲೇಕ್ಸ್. ಹಾಬಲಕಟ್ಟಿ ಗ್ರಾಮದಲ್ಲಿ ಸನ್ನಿ ಲಿಯೋನ್ ಅಭಿಮಾನಿಗಳಿದ್ದು, ಇವರೆಲ್ಲರೂ ತಮ್ಮನ್ನು ತಾವು ಸನ್ನಿ ಲಿಯೋನ್ ಬಾಯ್ಸ್ ಎಂದು ಕರೆದುಕೊಳ್ಳುತ್ತಾರೆ. ಹೀಗಾಗಿ ಇವರೆಲ್ಲರೂ ಸೇರಿಕೊಂಡು ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಾಬಲಕಟ್ಟಿ ಗ್ರಾಮದ ಸನ್ನಿ ಲೊಯೋನ್ ಬಾಯ್ಸ್ ಕಡೆಯಿಂದ ಸರ್ವರಿಗೂ ಸುಸ್ವಾಗತ ಎಂದು ಫ್ಲೇಕ್ಸ್ ಹಾಕಿ ಎಲ್ಲರ ಗಮನ ಸೆಳೆದಿದ್ದರು. 

Follow Us:
Download App:
  • android
  • ios